ಮೆಲ್ಬೋರ್ನ್: ಪಂದ್ಯ ಆರಂಭದಿಂದ ಅಂತಿಮ ಕ್ಷಣದವರೆಗೂ ವಿಜಯಲಕ್ಷ್ಮೀ ಪಾಕಿಸ್ತಾನದ(IND VS PAK) ಕೈಯಲ್ಲಿತ್ತು. ಅದರಂತೆ ಎಲ್ಲ ಆನ್‌ಲೈನ್ ಸಮೀಕ್ಷೆಗಳು ಪಾಕ್ ಪರವಾಗಿಯೇ ಇತ್ತು. ಭಾರತ ಗೆಲುವಿನ ಪ್ರತಿಶತ ಕೇವಲ ಶೇ.15ರಷ್ಟು ಎಂದು ಕ್ರಿಕೆಟ್ ಸಮೀಕ್ಷೆ ಹೇಳಿತ್ತು. ಆದರೆ ಅಂತಿಮ ಎರಡು ಓವರ್‌ನಲ್ಲಿ ಪಂದ್ಯದಲ್ಲಿ ಪಂದ್ಯದ ಗತಿಯೇ ಬದಲಾಗಿ ಭಾರತ ಗೆಲುವು ಸಾಧಿಸಿತು. ಜತೆಗೆ ಎಲ್ಲ ಕ್ರಿಕೆಟ್ ಸಮೀಕ್ಷೆಯನ್ನು ಹುಸಿಗೊಳಿಸಿತು. ಇದೇ ವೇಳೆ ಇನಿಂಗ್ಸ್‌ನ ಕೊನೇ ಎರಡು ಓವರ್‌ಗಳನ್ನು ಎಸೆದ ಬೌಲರ್‌ಗಳಾದ ಹ್ಯಾರಿಸ್ ರವೂಫ್ ಹಾಗೂ ಮೊಹಮ್ಮದ್ ನವಾಜ್ ಪಾಕಿಸ್ತಾನದ ಅಭಿಮಾನಿಗಳ ಪಾಲಿಗೆ ವಿಲನ್ ಎನಿಸಿಕೊಂಡರು.
ಅಂತಿಮ ಎರಡು ಓವರ್‌ನಲ್ಲಿ 31 ರನ್ ಸವಾಲು
18 ಓವರ್ ಮುಕ್ತಾಯಕ್ಕೆ ಭಾರತ ತಂಡ 4 ವಿಕೆಟ್‌ಗೆ 129 ರನ್ ಗಳಿಸಿತ್ತು. ಉಳಿದ 2 ಓವರ್‌ಗಳಲ್ಲಿ ಗೆಲುವಿಗೆ 31 ರನ್ ಗಳಿಸುವ ಸವಾಲು ಭಾರತದ ಮುಂದಿತ್ತು. ಅದಾಗಲೇ ಸ್ಲೋ ಬೌಲಿಂಗ್ ಮೂಲಕ ಉತ್ತಮ ಸ್ಪೆಲ್ ನಡೆಸಿ ಯಶಸ್ಸು ಕಂಡ ಹ್ಯಾರಿಸ್ ರವೂಫ್ ಬೌಲಿಂಗ್ ನಡೆಸಲು ಮುಂದಾದರು. ಮೊದಲ ಎರಡು ಎಸೆತದಲ್ಲಿ ಸಿಂಗಲ್ಸ್ ರನ್ ದಾಖಲಾಯಿತು. ಮೂರನೇ ಎಸೆತ ಡಾಟ್ ಬಾಲ್. ಮುಂದಿನ ಎಸೆತದಲ್ಲಿ ಪಾಂಡ್ಯ ಒಂದು ರನ್ ಗಳಿಸಿದರು. ಈ ವೇಳೆ ಭಾರತದ ಗೆಲುವಿಗೆ 8 ಎಸೆತದಲ್ಲಿ 28 ರನ್ ಗಳಿಸಬೇಕಿತ್ತು. ಸ್ಟ್ರೈಕ್‌ನಲ್ಲಿದ್ದ ಕೊಹ್ಲಿ, ರವೂಫವವ ಅವರ 5ನೇ ಮತ್ತು ಅಂತಿಮ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ಗೆಲುವಿನ ಭರವಸೆ ಮೂಡಿಸಿದರು. ಅಂತಿಮ ಓವರ್‌ನಲ್ಲಿ 16 ರನ್ ಗಳಿಸಬೇಕಿತ್ತು.
ಮೊಹಮ್ಮದ್ ನವಾಜ್ ತಮ್ಮ ಸ್ಪೆಲ್‌ನ ಮೊದಲ ಮೂರು ಓವರ್‌ನಲ್ಲಿ 29 ರನ್ ಬಿಟ್ಟುಕೊಟ್ಟಿದ್ದರು. ಆದರೂ ನಾಯಕ ಬಾಬರ್ ಅಜಂ ಇವರ ಮೇಲೆ ನಂಬಿಕೆ ಇರಿಸಿ ಚೆಂಡು ಕೈಗೆ ನೀಡಿದರು. ಅದರಂತೆ ತಾನೆಸೆದ ಮೊದಲ ಎಸೆತದಲ್ಲೇ ಡೇಂಜರಸ್ ಪಾಂಡ್ಯ ವಿಕೆಟ್ ಕಿತ್ತರು. ಮುಂದಿನ ಎಸೆತದಲ್ಲಿ ದಿನೇಶ್ ಕಾರ್ತಿಕ್ ಒಂದು ರನ್ ಗಳಿಸಿದರು. ಮೂರನೇ ಎಸೆತದಲ್ಲಿ ಕೊಹ್ಲಿ ಎರಡು ರನ್ ಗಳಿಸಿದರು. ಮೂರನೇ ಎಸೆತದಲ್ಲಿ ನೋಬಾಲ್‌ಗೆ ಸಿಕ್ಸರ್ ಬಡಿದಟ್ಟಿದ ಕೊಹ್ಲಿ ಗೆಲುವನ್ನು ಭಾರತದ ಕಡೆಗೆ ತಿರುಗಿಸಿದರು. ಮುಂದಿನ ಎಸೆತ ವೈಡ್ ಆಗಿತ್ತು. ಫ್ರೀಹಿಟ್ ಎಸೆದಲ್ಲಿ ಕೊಹ್ಲಿ ಬೌಲ್ಡ್ ಆದರೂ ಮೂರು ರನ್ ಕಲೆಹಾಕಿದರು. ಆದರೆ 5ನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಸ್ಟಂಪ್ಡ್ ಆಗುವ ಮೂಲಕ ಪಂದ್ಯವನ್ನು ಮತ್ತಷ್ಟು ರೋಚಕತೆಗೆ ಕೊಂಡೊಯ್ಯುವಂತೆ ಮಾಡಿದರು.
ಅಂತಿಮವಾಗಿ ಒಂದು ಎಸೆತದಲ್ಲಿ ಭಾರತಕ್ಕೆ ಎರಡು ರನ್ ಗಳಿಸುವ ಸವಾಲು ಎದುರಾಯಿತು. ಈ ವೇಳೆ ಅನುಭವಿ ಆಟಗಾರ ಆರ್.ಅಶ್ವಿನ್ ಕ್ರೀಸ್‌ಗೆ ಬಂದರು. ಅಂತಿಮ ಎಸೆತವನ್ನು ವೈಡ್‌ಲೈನ್‌ನಲ್ಲಿ ಎಸೆದು ಅಶ್ವಿನ್ ಅವರನ್ನು ವಂಚಿಸುವ ಯತ್ನದಲ್ಲಿ ನವಾಜ್ ವಿಫಲರಾದರು. ಕೊನೆಗೆ ಒಂದು ಎಸೆತದಲ್ಲಿ ಒಂದು ರನ್ ಗಳಿಸುವ ಸವಾಲು ಭಾರತಕ್ಕೆ ಲಭಿಸಿತು. ಪಂದ್ಯ ವೀಕ್ಷಿಸುತ್ತಿದ್ದ ಎಲ್ಲ ಅಭಿಮಾನಿಗಳು ಎಂದು ಕ್ಷಣ ಉಸಿರುಗಟ್ಟಿದ ಸ್ಥಿತಿಯಲ್ಲಿದ್ದರು. ಆದರೆ ಅಶ್ವಿನ್ ಈ ಎಸೆತವನ್ನು ಸಿಂಗಲ್ ತೆಗೆದು ಭಾರತಕ್ಕೆ ಗೆಲುವು ತಂದು ಕೊಟ್ಟರು. ಇಲ್ಲಿಗೆ ಪಾಕ್ ಗೆಲುವಿನ ಕನಸ್ಸನ್ನು ನವಾಜ್ ಮತ್ತು ರವೂಫ್ ಕಸಿದುಕೊಂಡು ವಿಲನ್‌ಗಳಾದರು.
ಇದನ್ನೂ ಓದಿ | T20 World Cup | ಅಘಫಾನಿಸ್ತಾನ ಬಳಗದ ವಿರುದ್ಧ ಇಂಗ್ಲೆಂಡ್ ತಂಡಕ್ಕೆ 5 ವಿಕೆಟ್ ಭರ್ಜರಿ ಜಯ