Site icon Vistara News

IND vs PAK: ಮತ್ತೊಮ್ಮೆ ಭಾರತ-ಪಾಕ್​ ಹೈವೋಲ್ಟೇಜ್​ ಪಂದ್ಯ; ಈ ಬಾರಿ ಅಭಿಮಾನಿಗಳಿಗಿಲ್ಲ ನಿರಾಸೆ

IND vs PAK: Let Team India beat the Pakistan team

ಕೊಲಂಬೊ: ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಏಷ್ಯಾಕಪ್​ನ(Asia Cup 2023) ಮೊದಲ ಪಂದ್ಯ ಮಳೆಯಿಂದ ರದ್ದಾದ ಕಾರಣ ಈ ಪಂದ್ಯವನ್ನು ಕಣ್ತುಂಬಿಕೊಳ್ಳಲಾಗದ ಬೇಸರದಲ್ಲಿದ್ದ ಉಭಯ ದೇಶಗಳ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಲಭಿಸಿದೆ. ಇತ್ತಂಡಗಳ ಮಧ್ಯೆ ಮತ್ತೊಂದು ಪಂದ್ಯ ನಡೆಯಲಿದೆ. ಸೆಪ್ಟೆಂಬರ್​ 10ರಂದು ನಡೆಯುವ ಸೂಪರ್​-4 ಸುತ್ತಿನ (Pakistan vs India Super Fours Match)ಪಂದ್ಯದಲ್ಲಿ ಸೆಣಸಾಡಲಿದೆ. ಈ ಪಂದ್ಯಕ್ಕೆ ಮಳೆ ಸಾಧ್ಯತೆ ಕಡಿಮೆ ಇರುವ ಕಾರಣ ಪಂದ್ಯ ಸಂಪೂರ್ಣವಾಗಿ ನಡೆಯಲಿದೆ.

ಸೆಪ್ಟೆಂಬರ್​ 2ರಂದು ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಲೀಗ್​ ಹಂತದ ಮೊದಲ ಪಂದ್ಯ ಪದೇಪದೆ ಮಳೆಯಿಂದ ಸ್ಥಗಿತಗೊಂಡಿತ್ತು. ಆದರೂ ಭಾರತತಬ್ಬ ಮೊದಲ ಇನಿಂಗ್ಸ್​ ಪೂರ್ತಿಗೊಳಿಸಿತ್ತು. ಆದರೆ ಪಾಕಿಸ್ತಾನ ಬ್ಯಾಟಿಂಗ್​ ಇನಿಂಗ್ಸ್​ ವೇಳೆ ಸುರಿದ ಜೋರು ಮಳೆ ಬಳಿಕ ಬಿಡುವು ನೀಡಲೇ ಇಲ್ಲ. ಹೀಗಾಗಿ ಪಂದ್ಯವನ್ನು ರದ್ದುಗೊಳಿಸಿ ಎರಡೂ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗಿತ್ತು. ಈ ಪಂದ್ಯವನ್ನು ನೋಡಲು ಬಂದಿದ್ದ ಉಭಯ ದೇಶಗಳ ಅಭಿಮಾನಿಗಳು ನಿರಾಸೆಯಾಗಿದ್ದರು. ಈ ಬಾರಿ ನಿರಾಸೆಯಾಗುವ ಸಾಧ್ಯತೆ ಕಡಿಮೆ.

ಪಂದ್ಯ ಸ್ಥಳಾಂತರ

ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಸೂಪರ್ ಫೋರ್ ಸುತ್ತಿನ ಕನಿಷ್ಠ ಐದು ಪಂದ್ಯಗಳನ್ನು ಈಗ ಶ್ರೀಲಂಕಾದ ಒಣ ಪ್ರದೇಶವಾದ ಹೊಸ ಸ್ಥಳದಲ್ಲಿ ಆಡಿಸುವ ಸಾಧ್ಯತೆಗಳಿವೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಹೊಸ ಬೆಳವಣಿಗೆಗಳ ಬಗ್ಗೆ ಮಾತನಾಡುವುದಾದರೆ, ಸಂಭಾವ್ಯ ಹೊಸ ಸ್ಥಳವು ಶ್ರೀಲಂಕಾದ ಹಂಬಂಟೋಟದಲ್ಲಿರುವ ಮಹಿಂದಾ ರಾಜಪಕ್ಸೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಪಂದ್ಯಾವಳಿಯ ನಾಕೌಟ್ ಹಂತಕ್ಕೆ ತಂಡಗಳನ್ನು ನಿರ್ಧರಿಸಲು ಈ ಪಂದ್ಯಗಳು ಪ್ರಮುಖವಾಗಿರುವುದರಿಂದ, ಎಸಿಸಿ ಮತ್ತು ಶ್ರೀಲಂಕಾ ಮಂಡಳಿಯು ಪ್ರಮುಖ ಪಂದ್ಯಗಳು ಮಳೆಯಲ್ಲಿ ಕೊಚ್ಚಿಹೋಗದಂತೆ ಬ್ಯಾಕಪ್ ಯೋಜನೆಯನ್ನು ಹೊಂದಲು ಯೋಚಿಸಿದೆ. ಆದ್ದರಿಂದ, ಮುಂಬರುವ ದಿನಗಳಲ್ಲಿ ಏಷ್ಯಾ ಕಪ್ ಪಂದ್ಯಗಳ ಭವಿಷ್ಯವನ್ನು ನಿರ್ಧರಿಸುವಲ್ಲಿ ಹಂಬಂಟೋಟ ನಿರ್ಣಾಯಕ ಪಾತ್ರವಹಿಸಲಿದೆ.

ಇದನ್ನೂ ಓದಿ Asia Cup 2023 : ಏಷ್ಯಾ ಕಪ್​ನ 5​ ಪಂದ್ಯಗಳು ಏಕಾಏಕಿ ಬೇರೆ ಕಡೆಗೆ ಶಿಫ್ಟ್; ಎಲ್ಲಿಗೆ, ಯಾಕೆ?

ಭಾರತ ತಂಡ

ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್‌ ಬುಮ್ರಾ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಶಮಿ, ಇಶಾನ್‌ ಕಿಶನ್‌, ಶಾರ್ದೂಲ್‌ ಠಾಕೂರ್‌, ಅಕ್ಸರ್‌ ಪಟೇಲ್‌, ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ, ಪ್ರಸಿದ್ಧ್‌ ಕೃಷ್ಣ, ಸಂಜು ಸ್ಯಾಮ್ಸನ್‌ (ಮೀಸಲು ಆಟಗಾರ).

ಪಾಕಿಸ್ತಾನ ತಂಡ

ಬಾಬರ್ ಅಜಂ (ನಾಯಕ), ಶಾದಾಬ್ ಖಾನ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಖರ್ ಜಮಾನ್, ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಸೌದ್ ಶಕೀಲ್ (ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಮಾತ್ರ) ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹ್ಯಾರಿಸ್ ರಾವುಫ್​, ನಸೀಮ್ ಶಾ, ಶಾಹೀನ್ ಅಫ್ರಿದಿ, ತಯ್ಯಬ್ ತಾಹಿರ್, ಮೊಹಮ್ಮದ್ ಹ್ಯಾರಿಸ್, ಫಹೀಮ್ ಅಶ್ರಫ್, ಮೊಹಮ್ಮದ್ ವಾಸಿಮ್.

Exit mobile version