Site icon Vistara News

IND vs PAK : ಪಾಕಿಸ್ತಾನದ ಆಟಗಾರನಿಗೆ ಕಣ್ಣೀರು ಹಾಕಿಸಿದ ಭಾರತ ತಂಡ!

IND vs PAK

ಬೆಂಗಳೂರು: ನ್ಯೂಯಾರ್ಕ್​ನ ನಸ್ಸೌ ಕೌಂಟಿ ಇಂಟರ್​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವ ಕಪ್​ನ (T20 World Cup) ಭಾರತ ಮತ್ತು ಪಾಕಿಸ್ತಾನ (IND vs PAK) ನಡುವಿನ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು 6 ರನ್​​ಗಳಿಂದ ಸೋಲಿಸಿದೆ. ಟಾಸ್ ಗೆದ್ದ ಪಾಕಿಸ್ತಾನ ನಾಯಕ ಬಾಬರ್ ಅಜಮ್​ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಏರುಪೇರಿನ ಬ್ಯಾಟಿಂಗ್ ಬಳಿಕ ಮೆನ್ ಇನ್ ಬ್ಲೂ ತಂಡವು 18.3 ಓವರ್​ಗಳಲ್ಲಿ ಎಲ್ಲ ವಿಕೆಟ್​ ಕಳೆದುಕೊಂಡು 120 ರನ್ ಗಳ ಗುರಿಯನ್ನು ನೀಡಿತು. ಪ್ರತಿಯಾಗಿ ಆಡಿದ ಪಾಕಿಸ್ತಾನ 20 ಓವರ್​ಗಳಲ್ಲಿ 113 ರನ್​ಗಳಿಗೆ ಸೀಮಿತಗೊಂಡಿತು.

ಸೋಲಿನ ನಂತರ ಪಾಕಿಸ್ತಾನದ ಸ್ಟಾರ್ ಬೌಲರ್ ನಸೀಮ್ ಶಾ ಅಳುತ್ತಿರುವುದು ಕಂಡುಬಂತು. ಅವರು 8 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದರು. ಅವರು ತಂಡಕ್ಕೆ 4 ಎಸೆತಗಳಲ್ಲಿ 14 ರನ್​ಗಳ ಅಗತ್ಯವಿದ್ದಾಗ 2 ಬೌಂಡರಿಗಳನ್ನು ಹೊಡೆದರು. ಅಸಾಧ್ಯವಾದ ಗುರಿಯನ್ನು ಬೆನ್ನಟ್ಟುವಲ್ಲಿ ಧೈರ್ಯ ತೋರಿದ ಅವರಿಗೆ ಗೆಲುವು ಸಿಗದೇ ಹೋದಾಗ ಅಳು ಬಂತು. ಅವರು ಮೊದಲ ಇನ್ನಿಂಗ್ಸ್​​ನಲ್ಲಿ ಶಾ ತಮ್ಮ ನಾಲ್ಕು ಓವರ್​ಗಳಲ್ಲಿ 5.25 ಎಕಾನಮಿಯೊಂದಿಗೆ ಮೂರು ವಿಕೆಟ್​ಗಳನ್ನು ಪಡೆದಿದ್ದರು. ಹೀಗಾಗಿ ಅವರಿಗೆ ನಿರಾಸೆ ಎದುರಾಯಿತು. ಭಾರತ ವಿರುದ್ಧ ಸೋಲುವುದು ಅವಮಾನ ಎಂದುಕೊಂಡ ಅವರು ಮೈದಾನದಿಂದ ಮರಳುವ ವೇಳೆ ಕಣ್ಣೀರು ಸುರಿಸಿದರು.

ಭಾರತ ತಂಡ ಪಾಕಿಸ್ತಾನದ ಆಟಗಾರರಿಗೆ ಕಣ್ಣೀರು ಹಾಕಿಸುವುದು ಇದೇ ಮೊದಲಲ್ಲ. ಎರಡು ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳ ಪಂದ್ಯಗಳು ಅತ್ಯಂತ ರೋಚಕವಾಗಿಯೇ ಕೊನೆಗೊಳ್ಳುತ್ತದೆ. ಈ ಹಿಂದಿನ ಆವೃತ್ತಿಯಲ್ಲೂ ಇದೇ ಆಗಿತ್ತು. ಆಸ್ಟ್ರೇಲಿಯಾದ ಗಬ್ಬಾದಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅಜೇಯ 82 ರನ್ ಬಾರಿಸಿ ಭಾರತವನ್ನು ಗೆಲ್ಲಿಸಿದ್ದರು. ಆ ವೇಳೆಯೂ ಕಣ್ಣೀರು ಹಾಕುವುದು ಪಾಕಿಸ್ತಾನ ತಂಡದ ಆಟಗಾರರ ಸರದಿಯಾಗಿತ್ತು.

ಪಾಕಿಸ್ತಾನ ವಿರುದ್ಧ ಬುಮ್ರಾ ಭರ್ಜರಿ ಪ್ರದರ್ಶನ

ಜಸ್ಪ್ರೀತ್ ಬುಮ್ರಾ ಭಾರತ ತಂಡಕ್ಕೆ ರಕ್ಷಕನಂತೆ ಆಡಿದರು. ಅವರು ಕೆಲವು ನಿರ್ಣಾಯಕ ವಿಕೆಟ್​ಗಳನ್ನು ಗಳಿಸಿದರು. ಇನ್ನಿಂಗ್ಸ್​ನ 19 ನೇ ಓವರ್​ನಲ್ಲಿ ಒಂದು ವಿಕೆಟ್ ಪಡೆದರು. ಅವರು ತಂಡಕ್ಕೆ ಅಗತ್ಯವಿದ್ದಾಗ ನಿಖರವಾಗಿ ಪ್ರದರ್ಶನ ನೀಡಿದರು ಮತ್ತು ಪಾಕಿಸ್ತಾನ ವಿರುದ್ಧದ ಸೋಲಿನಿಂದ ಭಾರತವನ್ನು ಕಾಪಾಡಿದರು.

ಇದನ್ನೂ ಓದಿ: IND vs PAK : ‘ಗೆಲುವಿಗೆ ಮೊದಲೇ ಸಂಭ್ರಮಿಸಬೇಡಿ, ವಿಶ್ವ ಕಪ್​ನಲ್ಲಿ ನಮ್ದೇ ಹವಾ’; ಪಾಕಿಸ್ತಾನಕ್ಕೆ ತಿರುಗೇಟು ಕೊಟ್ಟ ಭಾರತದ ಅಭಿಮಾನಿಗಳು

120 ರನ್​ಗಳ ಗುರಿ ಬೆನ್ನತ್ತಿದ ಪಾಕ್​​ ಹೀನಾಯ ಸೋಲಿಗೆ ಒಳಗಾಯಿತು. ಇದೇ ವೇಳೆ ಮೆನ್ ಇನ್ ಬ್ಲೂ ನಿಜವಾದ ವಿಜೇತರಂತೆ ಆಡಿತು. ಟಿ 20 ಐ ಇತಿಹಾಸದಲ್ಲಿ ಅತ್ಯಂತ ಕಡಿಮೆ ಸ್ಕೋರ್ ಅನ್ನು ರಕ್ಷಿಸಿತು. ಜಸ್ಪ್ರೀತ್ ಬುಮ್ರಾ ನಿಗದಿತ 4 ಓವರ್ಗಳಲ್ಲಿ 3.50 ಎಕಾನಮಿಯೊಂದಿಗೆ 3 ವಿಕೆಟ್ ಪಡೆದರು. ಆರಂಭಿಕ ವೇಗಿ ಭಾರತ ತಂಡವನ್ನು ನಿರಾಶಾದಾಯಕ ಸೋಲಿನಿಂದ ರಕ್ಷಿಸಿದರು.

ಮೆನ್ ಇನ್ ಗ್ರೀನ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಯಾರ್ಕರ್ ಕಿಂಗ್ ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಾಕಿಸ್ತಾನ ಎರಡನೇ ಇನ್ನಿಂಗ್ಸ್ ನಲ್ಲಿಯೂ ಕಠಿಣ ಆರಂಭ ನೀಡಿತು. ಆದರೆ ಭಾರತೀಯ ಬೌಲರ್​ಗಳು ಅವಕಾಶ ನೀಡಲಿಲ್ಲ.

ಟಾಸ್ ಗೆದ್ದ ಪಾಕಿಸ್ತಾನ ನಾಯಕ ಅಝಾಮ್ ಭಾರತವನ್ನು ಮೊದಲು ಬ್ಯಾಟಿಂಗ್​ಗೆ ಇಳಿಸಿದರು. ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಕ್ರಮವಾಗಿ 13 ಮತ್ತು 4 ರನ್​ಗಳಿಗೆ ಔಟ್ ಆದರು. ರಿಷಭ್ ಪಂತ್ ಮತ್ತು ಅಕ್ಷರ್ ಪಟೇಲ್ 39 ರನ್ಗಳ ಜೊತೆಯಾಟದ ಮೂಲಕ ಭಾರತದ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದರು. ನಾಸಿಮ್​ ಶಾ ಮತ್ತು ಹ್ಯಾರಿಸ್ ರವೂಫ್ ತಲಾ ಮೂರು ವಿಕೆಟ್ ಕಬಳಿಸುವ ಮೂಲಕ ಮಧ್ಯಮ ಮತ್ತು ಕೆಳ ಕ್ರಮಾಂಕ ಕುಸಿಯುವಂತೆ ಮಾಡಿದರು. ಆದರೆ ಪಂತ್​ 42 ರನ್ ಬಾರಿಸಿ ಸಹಾಯ ಮಾಡಿದರು. ಪ್ರತಿಯಾಗಿ ಆಡಿದ ಪಾ ಕಿಸ್ತಾನವು ಏಳು ಬ್ಯಾಟರ್​ಗಳನ್ನು ಕಳೆದುಕೊಂಡು ತಮ್ಮ ಸ್ಕೋರ್ ಕಾರ್ಡ್​ಗೆ ಕೇವಲ 113 ರನ್​​ ಸೇರಿಸಿತು.

Exit mobile version