Site icon Vistara News

IND VS PAK: ಏಕದಿನ ವಿಶ್ವಕಪ್​; ತಟಸ್ಥ ತಾಣದಲ್ಲಿ ನಡೆಯಲಿದೆ ಪಾಕಿಸ್ತಾನದ ಪಂದ್ಯಗಳು!

IND VS PAK: ODI World Cup; Pakistan matches will be played at neutral ground

IND VS PAK: ODI World Cup; Pakistan matches will be played at neutral ground

ಕರಾಚಿ: ಈ ವರ್ಷ ಭಾರತದ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವ ಕಪ್​ ಟೂರ್ನಿಯಲ್ಲಿ(icc world cup 2023) ಪಾಕಿಸ್ತಾನ(IND VS PAK) ತಂಡವು ತನ್ನ ಪಂದ್ಯವನ್ನು ಭಾರತ ನೆಲದಲ್ಲಿ ಆಡುವುದಿಲ್ಲ ಎಂದು ವರದಿಯಾಗಿದೆ. ಪಾಕ್​ ತಂಡ ಈ ಪಂದ್ಯಗಳನ್ನು ಬಾಂಗ್ಲಾದೇಶದಲ್ಲಿ ಆಡಲಿದೆ ಎಂದು ತಿಳಿದುಬಂದಿದೆ.

ಸೆಪ್ಟೆಂಬರ್​ನಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಏಷ್ಯಾ ಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಪಂದ್ಯಗಳು ಪಾಕಿಸ್ತಾನದಿಂದ ದೂರವಿರುವ ತಟಸ್ಥ ಸ್ಥಳದಲ್ಲಿ ನಡೆಸಬೇಕು ಎಂದು ಬಿಸಿಸಿಐ ಪಟ್ಟು ಹಿಡಿದಿತ್ತು. ಇದೇ ಕಾರಣಕ್ಕೆ ಇದೀಗ ಪಾಕ್​ ಕ್ರಿಕೆಟ್​​ ಮಂಡಳಿಯೂ ಭಾರತದಲ್ಲಿ ನಡೆಯುವ ಏಕದಿನ ವಿಶ್ವ ಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಪಂದ್ಯಗಳು ಬಾಂಗ್ಲಾದೇಶದಲ್ಲಿ ನಡೆಸುವಂತೆ ಹಠಹಿಡಿದು ಕುಳಿತಿದೆ.

ಏಷ್ಯಾ ಕಪ್​ನ ಆತಿಥ್ಯ ಹಕ್ಕುಗಳ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜಗಳವಾಡುತ್ತಿದ್ದು, ಟೂರ್ನಿಗಾಗಿ ಪಾಕಿಸ್ತಾನಕ್ಕೆ ತೆರಳಲು ಭಾರತ ನಿರಾಕರಿಸಿತ್ತು. ಆದರೆ ಪಾಕಿಸ್ತಾನವು ಎಲ್ಲ ಪಂದ್ಯಗಳು ಪಾಕ್​ ನೆಲದಲ್ಲಿಯೇ ನಡೆಸುವಂತೆ ಪಟ್ಟು ಹಿಡಿತಿತ್ತು. ಕಳೆದ ವಾರ ದುಬೈಯಲ್ಲಿ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ ಸಭೆಯಲ್ಲಿ ಪಾಕಿಸ್ತಾನದ ಆತಿಥ್ಯದಲ್ಲೇ ಏಷ್ಯಾ ಕಪ್​ ನಡೆಸುವಂತೆ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಭಾರತದ ಪಂದ್ಯಗಳು ಮಾತ್ರ ಸಾಗರೋತ್ತರ ತಟಸ್ಥ ಸ್ಥಳದಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು.

ಇದನ್ನೂ ಓದಿ Asia Cup 2023 : ಪಾಕ್​​ನಲ್ಲೇ ಏಷ್ಯಾ ಕಪ್​; ಭಾರತ, ಪಾಕಿಸ್ತಾನ ಪಂದ್ಯ ತಟಸ್ಥ ತಾಣದಲ್ಲಿ

ಭಾರತದ ಪಂದ್ಯಗಳು ಯಾವ ಸ್ಥಳದಲ್ಲಿ ನಡೆಯಲಿದೆ ಎಂಬುದು ಇನ್ನೂ ಅಂತಿಮಗೊಳಿಸಲಾಗಿಲ್ಲ. ಯುಎಇ, ಓಮನ್, ಶ್ರೀಲಂಕಾ ಮತ್ತು ಇಂಗ್ಲೆಂಡ್ ಸಹ ಕನಿಷ್ಠ ಎರಡು ಭಾರತ-ಪಾಕಿಸ್ತಾನ ಸ್ಪರ್ಧೆಗಳು ಸೇರಿದಂತೆ ಐದು ಪಂದ್ಯಗಳನ್ನು ಆಯೋಜಿಸಲು ಸಂಭಾವ್ಯ ಸ್ಪರ್ಧಿಗಳಾಗಿವೆ ಎಂದು ಇಎಸ್ ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿತ್ತು.

ಸೇಡು ತೀರಿಸಲು ಮುಂದಾದ ಪಾಕ್ ಕ್ರಿಕೆಟ್​ ಮಂಡಳಿ

ಏಷ್ಯಾ ಕಪ್​ಗಾಗಿ ಪಾಕಿಸ್ತಾನಕ್ಕೆ ಭಾರತ ತಂಡ ಬರಲು ಒಪ್ಪದ ಕಾರಣ ಇದೀಗ ಪಾಕ್ ಕೂಡ ಭದ್ರತಾ ಕೊರತೆಯ ನೆಪವೊಡ್ಡಿ ಭಾರತದಲ್ಲಿ ನಡೆಯುವ ಏಕದಿನ ವಿಶ್ವ ಕಪ್​ ಟೂರ್ನಿಯಲ್ಲಿ ನಾವು ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದೆ. ಜತೆಗೆ ನಮ್ಮ ಪಂದ್ಯಗಳನ್ನು ತಟಸ್ಥ ತಾಣವಾದ ಬಾಂಗ್ಲಾದೇಶದಲ್ಲಿ ನಡೆಸುವಂತೆ ಬೇಡಿಕೆ ಇರಿಸಿದೆ. ಒಂದೊಮ್ಮೆ ಈ ಮನವಿಗೆ ಬಿಸಿಸಿಐ ಬಗ್ಗದೇ ಹೋದರೆ ನಾವು ವಿಶ್ವ ಕಪ್ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದೆ. ಸದ್ಯ ಪಾಕಿಸ್ತಾನದ ಈ ಬೇಡಿಕೆಗೆ ಬಿಸಿಸಿಐ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.

Exit mobile version