Site icon Vistara News

IND VS PAK | ಇಂಗ್ಲೆಂಡ್​ ವಿರುದ್ಧ ಭಾರತದ ಗೆಲುವಿಗೆ ಪಾಕಿಸ್ತಾನ​ ಕ್ರಿಕೆಟಿಗ ಶುಭಹಾರೈಕೆ

shoaib akhtar

ಲಾಹೋರ್​: ನ್ಯೂಜಿಲೆಂಡ್​ ವಿರುದ್ಧದ ಬುಧವಾರದ ಟಿ20 ವಿಶ್ವ ಕಪ್​ ಸೆಮಿಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ 7ವಿಕೆಟ್​ಗಳಿಂದ ಗೆದ್ದು ಫೈನಲ್​ ಪ್ರವೇಶಿಸಿದೆ. ಇದರ ಬೆನ್ನಲ್ಲೇ ಪಾಕ್​ ಮಾಜಿ ವೇಗಿ ಶೋಯೆಬ್​ ಅಖ್ತರ್​ ಇಂಗ್ಲೆಂಡ್​ ವಿರುದ್ಧ ಭಾರತ(IND VS PAK) ಗೆಲುವು ಸಾಧಿಸಿ ಫೈನಲ್​ ಪ್ರವೇಶಿಸಲಿ ಎಂದು ಶುಭಹಾರೈಕೆ ಮಾಡಿದ್ದಾರೆ.

ಟ್ವಿಟರ್​ನಲ್ಲಿ ವಿಡಿಯೊ ಮೂಲಕ ಮಾತನಾಡಿದ ಶೋಯೆಬ್ ಅಖ್ತರ್​, “ನಾವು ಮೆಲ್ಬೋರ್ನ್ ತಲುಪಿದ್ದೇವೆ. ಈಗ ನಾವು ನಿಮಗಾಗಿ ಕಾಯುತ್ತಿದ್ದೇವೆ. ನಿಮಗೆ ಶುಭ ಹಾರೈಸುತ್ತೇನೆ. ನೀವು ಮೆಲ್ಬೋರ್ನ್ ತಲುಪುತ್ತೀರಿ ಎಂದು ಭಾವಿಸುತ್ತೇನೆ. ಭಾರತ ಮತ್ತು ಪಾಕಿಸ್ತಾನ ಫೈನಲ್ ಆಡಬೇಕು. ಮತ್ತೊಮ್ಮೆ ಉಭಯ ತಂಡಗಳು ಪರಸ್ಪರ ಮುಖಾಮುಖಿಯಾಗುವುದನ್ನು ನೋಡಲು ಇಡೀ ಜಗತ್ತು ಕಾಯುತ್ತಿದೆ” ಎಂದು ಅಖ್ತರ್ ಹೇಳಿದ್ದಾರೆ.

2007ರ ಟಿ20 ವಿಶ್ವ ಕಪ್‌ನ ಚೊಚ್ಚಲ ಆವೃತ್ತಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಮಹೇಂದ್ರ ಸಿಂಗ್​ ಧೋನಿ ಸಾರಥ್ಯದಲ್ಲಿ ಭಾರತ ಆ ಪಂದ್ಯದಲ್ಲಿ 5 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಚಾಂಪಿಯನ್ ಆಗಿತ್ತು. ಇದೀಗ ಮತ್ತೆ ಭಾರತ ಮತ್ತು ಪಾಕಿಸ್ತಾನ ಫೈನಲ್​ ಮುಖಾಮುಖಿಯಾಗಲಿದೆಯಾ ಎನ್ನುವುದು ಗುರುವಾರದ ಫಲಿತಾಂಶದಿಂದ ನಿರ್ಧಾರವಾಗಲಿದೆ.

ಇದನ್ನೂ ಓದಿ | IND VS ENG | 35 ವರ್ಷಗಳ ಬಳಿಕ ಭಾರತ-ಇಂಗ್ಲೆಂಡ್​ ಮಧ್ಯೆ ಸೆಮಿಫೈನಲ್​ ಕಾದಾಟ

Exit mobile version