ಬೆಂಗಳೂರು: ಪಾಕಿಸ್ತಾನ(IND vs PAK) ಎಂದರೆ ಅಂತರ ಕಾಯ್ದುಕೊಳ್ಳುವ ಭಾರತೀಯರು ಇದೀಗ ಪಾಕಿಸ್ತಾನದ ಹೆಸರನ್ನೇ ತನ್ನ ಜೆರ್ಸಿಯಲ್ಲಿ(team india jersey) ಹಾಕುವ ಮೂಲಕ ಆಡಲಿದ್ದಾರೆ. ಇದೇ ಆಗಸ್ಟ್ 30 ರಿಂದ ಆರಂಭಗೊಳ್ಳಲಿರುವ ಏಷ್ಯಾ ಕಪ್ನಲ್ಲಿ(asia cup 2023) ಟೀಮ್ ಇಂಡಿಯಾ ಪಾಕ್ ಹೆಸರಿನೊಂದಿಗೆ ಕಣಕ್ಕಿಳಿಯಲಿದೆ.
ಪಾಕ್ ಹಸರು ಬರಲು ಕಾರಣವೇನು?
ಭಾರತ ಕ್ರಿಕೆಟ್ ತಂಡದ ಜೆರ್ಸಿಯಲ್ಲಿ ಪಾಕಿಸ್ತಾನದ ಹೆಸರು ಬರಲು ಪ್ರಮುಖ ಕಾರಣವೂ ಇದೆ. ಏಕೆಂದರೆ ಈ ಟೂರ್ನಿಯ ಆತಿಥ್ಯ ವಹಿಸಿಕೊಂಡಿರುವುದು ಪಾಕಿಸ್ತಾನ. ಹೀಗಾಗಿ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ ದೇಶದ ಜೆರ್ಸಿಯಲ್ಲಿ ಪಾಕಿಸ್ತಾನದ ಹೆಸರು ಇರುತ್ತದೆ. ಹೀಗಾಗಿ ಅಚ್ಚರಿ ಪಡುವ ಅಗತ್ಯವಿಲ್ಲ. ಯಾವುದೇ ಮಹತ್ವದ ಟೂರ್ನಿ ನಡೆದರೂ ಅದರ ಆತಿಥ್ಯ ವಹಿಸಿಕೊಂಡ ದೇಶದ ಹೆಸರು ಪಾಲ್ಗೊಳ್ಳುವ ಎಲ್ಲ ದೇಶಗಳ ತಂಡ ಜೆರ್ಸಿ ಮೇಲೆ ಮುದ್ರಿತವಾಗಿರುತ್ತದೆ.
ಪಾಕ್ ಜೆರ್ಸಿಯಲ್ಲಿಯೂ ಕಾಣಿಸಲಿದೆ ಭಾರತದ ಹೆಸರು
ಅಕ್ಟೋಬರ್ 5ರಿಂದ ನವೆಂಬರ್ 19ರ ತನ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡವೂ ಕೂಡ ತನ್ನ ಜೆರ್ಸಿಯಲ್ಲಿ ಭಾರತದ ಹೆಸರಿನೊಂದಿಗೆ ಆಡಲಿದೆ. ಇದಕ್ಕೆ ಕಾರಣ ಈ ಟೂರ್ನಿಯ ಆತಿಥ್ಯ ವಹಿಸಿಕೊಂಡಿರುವುದು ಭಾರತ. 1987 ರಲ್ಲಿ ಭಾರತ ಮತ್ತು ಪಾಕಿಸ್ತಾನ ಜಂಟಿಯಾಗಿ ವಿಶ್ವಕಪ್ ಆತಿಥ್ಯ ವಹಿಸಿಕೊಂಡಿತು.
ಇದನ್ನೂ ಓದಿ Asia Cup 2023: ಭಾರತಕ್ಕೆ ಸಡ್ಡು ಹೊಡೆಯಲು ಬಲಿಷ್ಠ ತಂಡ ಪ್ರಕಟಿಸಿದ ಪಾಕ್
ಒಂದು ಪಂದ್ಯ ಪಾಕ್ನಲ್ಲಿಯೂ ಆಡಲಿದೆ ಭಾರತ
ಭದ್ರತಾ ನಿಟ್ಟಿನಲ್ಲಿ ಭಾರತ ತಂಡ ಪಾಕ್ನಲ್ಲಿ ಏಷ್ಯಾ ಕಪ್ ಆಡಲು ನಿರಾಕರಿಸಿದ ಕಾರಣ ಈ ಟೂರ್ನಿ ಪಾಕ್ ಮತ್ತು ಲಂಕಾದಲ್ಲಿ ನಡೆಯುತ್ತಿದೆ. ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿದ್ದು ಉಳಿದ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಆದರೆ ಸೂಪರ್-4ನ ಒಂದು ಪಂದ್ಯ ಲಹೋರ್ನಲ್ಲಿ ನಡೆಯಲಿದೆ. ಇದು ಭಾರತಕ್ಕೆ ಚಿಂತೆಗೀಡು ಮಾಡಿದೆ. ಭಾರತ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಹೀಗಾಗಿ ಲೀಗ್ನಲ್ಲಿ ನಡೆಯುವ ಎಲ್ಲ ಪಂದ್ಯಗಳನ್ನು ಗೆದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದರೆ, ಆಗ ಸೂಪರ್ ಫೋರ್ ಹಂತದಲ್ಲಿ ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡವನ್ನು ಭಾರತ ಎದುರಿಸಬೇಕು. ಈ ಪಂದ್ಯ ಪಾಕ್ನ ಲಾಹೋರ್ನಲ್ಲಿ ನಡೆಯಲಿದೆ. ಸೆಪ್ಟೆಂಬರ್ 6ಕ್ಕೆ ಈ ಪಂದ್ಯ ನಡೆಯಲಿದೆ. ಒಂದೊಮ್ಮೆ ಭಾರತ ಲೀಗ್ನಲ್ಲಿ ಮೊದಲ ಸ್ಥಾನ ಪಡೆದರೆ ಪಾಕ್ನಲ್ಲಿ ಪಂದ್ಯ ಆಡಲಿದೆಯಾ ಎನ್ನುವುದು ಇದೀಗ ಎಲ್ಲರ ಕುತೂಹಲವಾಗಿದೆ.
ಗ್ರೂಪ್-1 ರಲ್ಲಿ ಭಾರತ-ಪಾಕಿಸ್ತಾನ
ಸಾಂಪ್ರದಾಯಿಕ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಗ್ರೂಪ್ 1ರಲ್ಲಿ ಸ್ಥಾನ ಪಡೆದಿದೆ. ಎರಡನೇ ಗುಂಪಿನಲ್ಲಿ ಶ್ರೀಲಂಕಾ, ಅಫಘಾನಿಸ್ತಾ ಮತ್ತು ಬಾಂಗ್ಲಾದೇಶ ತಂಡಗಳು ಸ್ಥಾನ ಪಡೆದಿವೆ. ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಪಡೆಯುವ ತಂಡ ಭಾರತ-ಪಾಕ್ ಜತೆಗೆ ಗ್ರೂಪ್ ಒಂದರಲ್ಲಿ ಸ್ಥಾನ ಪಡೆಯಲ್ಲಿದೆ. ಲೀಗ್ ಹಂತದಲ್ಲಿ ಒಟ್ಟು 6 ಪಂದ್ಯಗಳು ನಡೆಯಲಿದ್ದು, ಬಳಿಕ ಸೂಪರ್-4 ಸುತ್ತಿನ ಪಂದ್ಯಗಳನ್ನು ಆಡಲಾಗುತ್ತದೆ. ಫೈನಲ್ ಸೇರಿ ಒಟ್ಟು 13 ಪಂದ್ಯಗಳು ನಡೆಯಲಿವೆ. ಸೆಪ್ಟೆಂಬರ್‌ನಲ್ಲಿ ಈ ಕೂಟ ನಡೆಯಲಿದೆ.
ಮೂರು ಬಾರಿ ಮುಖಾಮುಖಿ ಸಾಧ್ಯತೆ
ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆಗಳಿವೆ. ಮೊದಲನೆಯದಾಗಿ ಉಭಯ ತಂಡಗಳ ನಡುವಿನ ಪೈಪೋಟಿ ಲೀಗ್ ಸುತ್ತಿನಲ್ಲಿ ನಡೆಯಲಿದೆ. ಇದಾದ ಬಳಿಕ ಸೂಪರ್-4 ಸುತ್ತಿನಲ್ಲೂ ಉಭಯ ತಂಡಗಳು ಸೆಣಸಬಹುದು. ಬಳಿಕ ಅಂಕಪಟ್ಟಿಯಲ್ಲಿ ಪಟ್ಟಿಯಲ್ಲಿ ಉಭಯ ತಂಡಗಳು ಅಗ್ರ ಎರಡು ಸ್ಥಾನ ಪಡೆದರೆ, ಎರಡೂ ತಂಡಗಳು ಫೈನಲ್ನಲ್ಲೂ ಹೋರಾಟ ನಡೆಸಲಿವೆ.