Site icon Vistara News

IND vs PAK : ‘ಗೆಲುವಿಗೆ ಮೊದಲೇ ಸಂಭ್ರಮಿಸಬೇಡಿ, ವಿಶ್ವ ಕಪ್​ನಲ್ಲಿ ನಮ್ದೇ ಹವಾ’; ಪಾಕಿಸ್ತಾನಕ್ಕೆ ತಿರುಗೇಟು ಕೊಟ್ಟ ಭಾರತದ ಅಭಿಮಾನಿಗಳು

IND vs PAK

ಬೆಂಗಳೂರು: ಐಸಿಸಿ ಪುರುಷರ ಟಿ20 ವಿಶ್ವಕಪ್ 2024 ರ 19 ನೇ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು (IND vs PAK ) ಸೋಲಿಸಿದೆ. ಆ ಬಳಿಕ ಟ್ವಿಟರ್​​ನಲ್ಲಿ ಭಾರತ ತಂಡದ ಅಭಿಮಾನಿಗಳು ನಾನಾ ರೀತಿ ಪ್ರತಿಕ್ರಿಯಿಸಿದ್ದಾರೆ. ಒಂದು ಹಂತದಲ್ಲಿ ಭಾರತ ಸೋಲಿನ ದವಡೆಗೆ ಸಿಲುಕಿತ್ತು. ಬಳಿಕ ಎದ್ದು ಬಂದು ತಿರುಗೇಟು ಕೊಟ್ಟಿತು. ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಅಭಿಮಾನಿಗಳು , ‘ಮೊದಲೇ ಸಂಭ್ರಮಿಸಬೇಡಿ. ತಿರುಗೇಟು ಕೊಡುವುದು ಗ್ಯಾರಂಟಿ’ ಎಂದು ಬರೆದುಕೊಂಡಿದ್ದಾರೆ. ನ್ಯೂಯಾರ್ಕ್​​ನ ನಸ್ಸೌ ಕೌಂಟಿ ಇಂಟರ್​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ(Rohit Sharma) ನೇತೃತ್ವದ ತಂಡವು 6 ರನ್​ಗಳಿಂದ ಜಯಗಳಿಸಿತ್ತು.

ಟಾಸ್ ಗೆದ್ದ ಪಾಕಿಸ್ತಾನ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವಿರಾಟ್ ಕೊಹ್ಲಿ (4) ಮತ್ತು ರೋಹಿತ್ ಶರ್ಮಾ (13) ಇಬ್ಬರೂ ಬೇಗನೆ ಪೆವಿಲಿಯನ್​ಗೆ ಮರಳಿದ್ದರಿಂದ ಭಾರತವು ಬಯಸಿದ ರೀತಿಯ ಆರಂಭ ದೊರೆಯಲಿಲ್ಲ. ಕ್ರಮಾಂಕದಲ್ಲಿ ಬಡ್ತಿ ಪಡೆದ ಅಕ್ಷರ್ ಪಟೇಲ್ (20) ತಮ್ಮ ತಂಡಕ್ಕಾಗಿ ಉತ್ತಮ ಆಟವನ್ನು ಆಡಿದರೂ ಮುಂದುವರಿಯಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ (42) ಆಕ್ರಮಣಕಾರಿಯಾಗಿ ಆಡಿದರು. ಹೆಚ್ಚಿನ ಒತ್ತಡದ ಪಂದ್ಯದಲ್ಲಿ ತಂಡದ ಪರ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡರು. ಆದರೆ ಅವರೂ ಹಾದಿಯು ಮೊಟಕಾಯಿತು.

ರಿಷಭ್ ಪಂತ್ ಔಟಾದ ನಂತರ ತಂಡದ ರನ್ ಗಳಿಕೆ ಭಾರತದ ಹಾದಿಯಲ್ಲಿ ಸಾಗಲಿಲ್ಲ. 3 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿದ್ದ ಭಾರತ 19 ಓವರ್ ಗಳಲ್ಲಿ 119 ರನ್ ಗಳಿಗೆ ಆಲೌಟ್ ಆಯಿತು. ಪಾಕಿಸ್ತಾನದ ವೇಗಿಗಳು ಅದ್ಭುತವಾಗಿ ಬೌಲಿಂಗ್ ಮಾಡಿದರು. ಭಾರತದ ಪರ ಹ್ಯಾರಿಸ್ ರವೂಫ್ ಹಾಗೂ ನಸೀಮ್ ಶಾ ತಲಾ 3 ವಿಕೆಟ್ ಕಿತ್ತರೆ, ಮೊಹಮ್ಮದ್ ಅಮೀರ್ 1 ವಿಕೆಟ್ ಪಡೆದರು.

ಚೇಸ್​ ಮಾಡಲು ಹೊರಟ ಪಾಕ್​ ಪರ ನಾಯಕ ಬಾಬರ್ ಅಝಾಮ್ (13) ಬೇಗನೆ ವಿಕೆಟ್ ಕಳೆದುಕೊಂಡರೂ ಗುರಿ ಬೆನ್ನಟ್ಟಿದ ಪಾಕಿಸ್ತಾನ ಉತ್ತಮ ಆರಂಭ ಪಡೆಯಿತು. ಉಸ್ಮಾನ್ ಖಾನ್ (13) ಕೂಡ ಬೇಗ ಮರಳಿದರು. ಮೊಹಮ್ಮದ್ ರಿಜ್ವಾನ್ತಂ ಡವನ್ನು ಹಿಡಿದಿಟ್ಟುಕೊಂಡರು ಮತ್ತು ಅದ್ಭುತ ಇನ್ನಿಂಗ್ಸ್ ಆಡಿದರು. ಈ ವೇಳೆ ಪಾಕ್​ ಗೆಲ್ಲುವುದು ನಿಶ್ಚಿತ ಎಂಬ ವಿಶ್ಲೇಷಣೆಗಳು ಬಂದವು. ಆದರೆ ಆದರೆ ಅವರು ಔಟಾದ ನಂತರ ಪಾಕಿಸ್ತಾನದ ಅದೃಷ್ಟ ಕೈಕೊಟ್ಟಿತು. ಅವರು ತ್ವರಿತವಾಗಿ ವಿಕೆಟ್​ಗಳನ್ನು ಕಳೆದುಕೊಂಡರು. ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಹಿನ್ನಡೆಯ ಹಿಂದಿನ ಶಕ್ತಿಗಳು. ಇವರಿಬ್ಬರು ಮಧ್ಯಮ ಕ್ರಮಾಂಕದಲ್ಲಿ ಮೂರು ವಿಕೆಟ್ ಗಳನ್ನು ಪಡೆದು ಆಟವನ್ನು ಭಾರತದ ಪರವಾಗಿ ತಿರುಗಿಸಿದರು. ಕೊನೆಯಲ್ಲಿ ಅರ್ಶ್​ದೀಪ್​ ಸಿಂಗ್ ಭಾರತಕ್ಕೆ ಗೆಲುವು ತಂದುಕೊಟ್ಟರು.

ಟ್ವಿಟರ್​ನಲ್ಲಿ ಅಭಿಮಾನಿಗಳು ಸಂಭ್ರಮ

2024 ರ ಟಿ 20 ವಿಶ್ವಕಪ್​ನಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸುತ್ತಿದ್ದಂತೆ, ಟ್ವಿಟರ್​ನಲ್ಲಿ ಅಭಿಮಾನಿಗಳು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಅವರು ರೋಹಿತ್ ಶರ್ಮಾ ನೇತೃತ್ವದ ತಂಡವನ್ನು ಚೆಂಡಿನೊಂದಿಗೆ ನೀಡಿದ ಅಮೋಘ ಪ್ರದರ್ಶನಕ್ಕಾಗಿ ಶ್ಲಾಘಿಸಿದ್ದಾರೆ. ಪ್ರಮುಖವಾಗಿ ಜಸ್ಪ್ರೀತ್ ಬುಮ್ರಾ ಅವರ ಆಟಕ್ಕೆ ತಲೆಬಾಗಿದ್ದಾರೆ. ಭಾರತವನ್ನು ಸೋಲಿಸುವುದು ಪಾಕಿಸ್ತಾನಕ್ಕೆ ಅಷ್ಟೊಂದು ಸುಲಭವಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: IND vs PAK : ಸಿರಾಜ್​ ಚೆಂಡಿನ ಹೊಡೆತಕ್ಕೆ ಪಿಚ್​ನಲ್ಲೇ ಅಡ್ಡಡ್ಡ ಮಲಗಿದ​ ರಿಜ್ವಾನ್​; ಇಲ್ಲಿದೆ ವಿಡಿಯೊ

2007ರ ನಂತರದ ಟಿ20 ವಿಶ್ವ ಕಪ್​ನಲ್ಲಿ ಭಾರತ ಹಾಗೂ ಪಾಕಿಸ್ತಾನ 9 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಭಾರತ 8 ಬಾರಿ ಗೆದ್ದಿದ್ದರೆ ಪಾಕಿಸ್ತಾನ ಏಕೈಕ ಗೆಲುವು ದಾಖಲಿಸಿದರು. ಇನ್ನು ಆಸ್ಟ್ರೇಲಿಯಾದ ಗಬ್ಬಾದಲ್ಲಿ ನಡೆದ ಈ ಹಿಂದಿನ ಆವೃತ್ತಿಯ ವಿಶ್ವ ಕಪ್​ ಪಂದ್ಯವಲ್ಲೂ ವಿರಾಟ್​ ಕೊಹ್ಲಿ ಅಜೇಯ 82 ರನ್ ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು. ಈ ಪಂದ್ಯದಲ್ಲಿ ಪವರ್ ಪ್ಲೇ ಅವಧಿಯಲ್ಲಿ ಭಾರತ 4 ವಿಕೆಟ್​ ಕಳೆದುಕೊಂಡಾಗ ಸೋಲುತ್ತದೆ ಎಂದು ಅಂದುಕೊಂಡಿದ್ದರು. ಅದರೆ, ಭಾರತ ತಂಡ ತಿರುಗೇಟು ಕೊಟ್ಟಿತ್ತು. ವಿಜಯವನ್ನು ತನ್ನದಾಗಿಸಿಕೊಂಡಿತ್ತು.

Exit mobile version