ಗ್ಕೆಬರ್ಹಾ (ಸೇಂಟ್ ಜಾರ್ಜ್ ಪಾರ್ಕ್): ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟಿ20 ಪಂದ್ಯ ನಾಳೆ(ಮಂಗಳವಾರ ಡಿ.12) ನಡೆಯಲಿದೆ. ಮೊದಲ ಪಂದ್ಯದಂತೆ ಈ ಪಂದ್ಯಕ್ಕೂ ಮಳೆ ಭೀತಿ ಇದ್ದೇ ಇದೆ. ಪಂದ್ಯ ನಡೆಯಲಿ ಎನ್ನುವುದು ಇತ್ತಂಡಗಳ ಅಭಿಮಾನಿಗಳ ಬಯಕೆಯಾಗಿದೆ. ಇದಕ್ಕೆ ವರುಣ ದೇವ ಅನುವು ಮಾಡಿಕೊಡಲಿದ್ದಾನಾ ಎನ್ನುವುದು ಪಂದ್ಯದ ಕುತೂಹಲ.
ದಕ್ಷಿಣ ಆಫ್ರಿಕಾ ತಂಡದಲ್ಲಿ ಟಿ20 ಸ್ಪೆಷಲಿಸ್ಟ್‌ಗಳೆ ಕಾಣಿಸಿಕೊಂಡಿದ್ದಾರೆ. ಜತೆಗೆ ಅನುಭವಿಗಳ ಸಂಖ್ಯೆಯೂ ಸಾಕಷ್ಟಿದೆ. ನಾಯಕ ಐಡೆನ್ ಮಾರ್ಕ್ರಮ್, ಕ್ಲಾಸೆನ್, ಮಹಾರಾಜ್, ಮಿಲ್ಲರ್, ಶಮ್ಶಿ , ಹೆಂಡ್ರಿಕ್ಸ್, ಜಾನ್ಸೆನ್ ಅವರೆಲ್ಲ ಪ್ರಮುಖರು. ಇತ್ತೀಚೆಗೆ ಮುಕ್ತಾಯ ಕಂಡ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಇವರೆಲ್ಲ ಸ್ಫೋಟಕ ಆಟವಾಡಿದ್ದರು. ಹೀಗಾಗಿ ಇವರ ಫಾರ್ಮ್ ಕೂಡ ಉತ್ತಮವಾಗಿದೆ. ಜತೆಗೆ ತವರಿನ ಲಾಭ ಕೂಡ. ಆದರೆ ರಬಾಡ, ನೋರ್ಜೆ, ಎನ್‌ಗಿಡಿ ಮೊದಲಾದವರು ಈ ಸರಣಿಯಲ್ಲಿ ಆಡದಿರುವುದು ಯುವ ಟೀಮ್ ಇಂಡಿಯಾ ಪಾಲಿಗೊಂದು ಸಮಾಧಾನಕರ ಸಂಗತಿ.
ಆಡುವ ಬಳಗದ ಆಯ್ಕೆಯೇ ಜಟಿಲ
ಆಸ್ಟ್ರೇಲಿಯಾ ವಿರುದ್ಧದ ತವರಿನ ಟಿ20ಯಲ್ಲಿ ಮಿಂಚಿದ್ದ ಆಟಗಾರರು ಈ ಸರಣಿಯಲ್ಲಿ ಕಾಣಿಸಿಕೊಂಡಿದ್ದರೆ. ಆದರೆ ಶುಭಮನ್ ಗಿಲ್, ರವೀಂದ್ರ ಜಡೇಜ, ಮೊಹಮ್ಮದ್ ಸಿರಾಜ್ ಆಗಮನದಿಂದ ಆಡುವ ಬಳಗದ ಆಯ್ಕೆ ತುಸು ಜಟಿಲವಾಗಿದೆ. ಗಿಲ್ ಆಗಮನದಿಂದ ಗಾಯಕ್ವಾಡ್ಗೆ ಅವಕಾಶ ಕಷ್ಟ. ಬೌಲಿಂಗ್ನಲ್ಲಿ ಮುಕೇಶ್ ಬದಲು ಸಿರಾಜ್ ಆಡಬಹುದು.
A fun shoot for the two Captains with a local flavour 😃😃
— BCCI (@BCCI) December 9, 2023
Captain @surya_14kumar and Aiden Markram pose with the silverware ahead of the three match T20I series.#SAvIND pic.twitter.com/CsN3gMkilU
ಇದನ್ನೂ ಓದಿ IND vs SA: ದ್ವಿತೀಯ ಟಿ20 ಪಂದ್ಯದ ಹವಾಮಾನ ವರದಿ ಹೇಗಿದೆ?
ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಸೂರ್ಯಕುಮಾರ್, ರಿಂಕು ಸಿಂಗ್ ಮತ್ತು ಶ್ರೇಯಸ್ ಅಯ್ಯರ್ ಒಳಗೊಂಡ ಭಾರತೀಯ ಬ್ಯಾಟಿಂಗ್ ಲೈನ್ ಅಪ್ ಬಲಿಷ್ಠವಾಗಿದೆ. ಆದರೆ ಇವರೆಲ್ಲ ಬೌನ್ಸ್ ಪಿಚ್ನಲ್ಲಿ ಆಡಲು ಸಮರ್ಥರಿದ್ದಾರೆಯೇ ಎನ್ನುವುದು ಪಶ್ನೆಯಾಗಿದೆ.
ಪಿಚ್ ರಿಪೋರ್ಟ್
ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿನ ಪಿಚ್ ಮೇಲ್ಮೈ ಬ್ಯಾಟರ್‌ಗಳಿಗೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ, ಆಟ ಸಾಗುತ್ತಲೇ ಹೋದಾಗ ಸ್ಪಿನ್ನರ್‌ಗಳು ಸ್ವಲ್ಪ ಸಹಾಯವನ್ನು ಪಡೆಯಬಹುದು. ಇಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡಗಳೇ ಹೆಚ್ಚಾಗಿ ಗೆದ್ದಿದೆ. ಪಿಚ್ ತಿರುವು ಪಡೆಯುವ ಕಾರಣ ದ್ವಿತೀಯ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ನಡೆಸುವುದು ಕಷ್ಟಕರ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡುವುದು ಉತ್ತಮ.
Smiles ☺️
— BCCI (@BCCI) December 10, 2023
Cheers 👏
Banter 😉
How about that for a #SAvIND T20I series Trophy Unveiling! 🏆 👌#TeamIndia | @surya_14kumar pic.twitter.com/fxlVjIgT3U
ಸಂಭಾವ್ಯ ತಂಡ
ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ರವೀಂದ್ರ ಜಡೇಜ, ರವಿ ಬಿಷ್ಣೋಯಿ, ಆರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್. ದೀಪಕ್ ಚಹರ್.
ದಕ್ಷಿಣ ಆಫ್ರಿಕಾ: ಐಡನ್ ಮಾರ್ಕ್‌ರಮ್ (ನಾಯಕ), ರೀಝ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಆ್ಯಂಡಿಲ್ ಫೆಲುಕ್ವಾಯೊ, ತಬ್ರೇಜ್ ಶಮ್ಸಿ, ಟ್ರಿಸ್ಟನ್ ಸ್ಟಬ್ಸ್, ಲಿಝಾಡ್ ವಿಲಿಯಮ್ಸ್. ಓಟ್‌ನೀಲ್ ಬಾರ್ಟ್‌ಮ್ಯಾನ್.