Site icon Vistara News

IND vs SA: ಬೌನ್ಸಿ ಪಿಚ್​ನಲ್ಲಿ ಹರಿಣಗಳ ಸವಾಲು ಮೆಟ್ಟಿ ನಿಂತಿತೇ ಯಂಗ್​ ಇಂಡಿಯಾ?

TeamIndia

ಡರ್ಬಾನ್​: ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್​ಗಾಗಿ ಸಿದ್ಧತೆ ಆರಂಭಿಸಿದ ಪ್ರವಾಸಿ ಯಂಗ್​ ಟೀಮ್​ ಇಂಡಿಯಾ(young team india) ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20(IND vs SA) ಸರಣಿಯ ಮೊದಲ(South Africa vs India, 1st T20) ಪಂದ್ಯವನ್ನಾಡಲು ಸಜ್ಜಾಗಿ ನಿಂತಿದೆ. ಭಾನುವಾರ ನಡೆಯುವ ಈ ಪಂದ್ಯದಲ್ಲಿ ಸೂರ್ಯಕುಮಾರ್​ ಯಾದವ್​ ಸಾರಥ್ಯದ ಭಾರತ ತಂಡ ಕಣಕ್ಕಿಳಿಯಲಿದೆ.

ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಈಗಾಗಲೇ ಏಕದಿನ ಚಾಂಪಿಯನ್​ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 4-1 ಅಂತರದಿಂದ ಮಣಿಸಿರುವ ಯಂಗ್​ ಇಂಡಿಯಾ ಹರಣಿಗಳ ನಾಡಲ್ಲೂ ಇದೇ ಜೋಶ್​ ತೋರುವ ವಿಶ್ವಾಸದಲ್ಲಿದ್ದಾರೆ. ಅಲ್ಲದೆ ಟಿ20 ಶ್ರೇಯಾಂಕದ ನಂ.1 ಬ್ಯಾಟರ್​ ಮತ್ತು ಬೌಲರ್​ ಭಾರತ ತಂಡದಲ್ಲಿರುದರಿಂದ ಈ ತಂಡದ ಮೇಲೆ ನಿರೀಕ್ಷೆಯೊಂದನ್ನು ಮಾಡಬಹುದು.

ತವರಿನಲ್ಲಿ ಭಾರತ ಬಲಿಷ್ಠ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಇದೀಗ ತವರಿನಿಂದ ಹೊರಗಡೆ ವಿದೇಶಿ ನೆಲದಲ್ಲಿ ಸೂರ್ಯಕುಮಾರ್​ ಯಾದವ್​ ಸಾರಥ್ಯದ ಯುವ ಪಡೆ ಹೇಗೆ ಪ್ರದರ್ಶನ ತೋರಲಿದೆ ಎನ್ನುವುದು ಈ ಸರಣಿಯ ಕುತೂಹಲ. ಏಕೆಂದರೆ ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್​ ಕೂಡ ವಿದೇಶಿ ನೆಲದಲ್ಲೇ ನಡೆಯಲಿದೆ. ಹೀಗಾಗಿ ಭಾರತಕ್ಕೆ ಈ ಸರಣಿ ಮಹತ್ವದ್ದಾಗಿದೆ. ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್​, ರಿಂಕು ಸಿಂಗ್​, ರವಿ ಬಿಷ್ಣೋಯಿ, ಮುಕೇಶ್​ ಕುಮಾರ್​, ಜಿತೇಶ್​ ಶರ್ಮ ಇವರೆಲ್ಲ ಕ್ಲಿಕ್​ ಈ ಸರಣಿಯಲ್ಲಿ ಕ್ಲಿಕ್​ ಆದರೆ ವಿಶ್ವಕಪ್​ ತಂಡದಲ್ಲಿ ಸ್ಥಾನವೊಂದನ್ನು ಭದ್ರಪಡಿಸಿಕೊಳ್ಳಲಿದ್ದಾರೆ.

ಸಿಕ್ಕ ಅವಕಾಶ ಬಳಿಸಿಕೊಳ್ಳಿ

ಈಗಾಗಲೇ ಬಿಸಿಸಿಐ ಆಯ್ಕೆ ಸಮಿತಿಯ ಇಬ್ಬರು ಅಧಿಕಾರಿಗಳನ್ನು ದಕ್ಷಿಣ ಆಫ್ರಿಕಾಗೆ ಕಳುಹಿಸಿದ್ದು ಆಟಗಾರರ ಎಲ್ಲ ಪ್ರದರ್ಶನದ ಬಗ್ಗೆ ಮಾಹಿತಿ ಸಂಗ್ರಹಿಸಲು ಸೂಚಿಸಿದೆ. ಹೀಗಾಗಿ ವಿಶ್ವಕಪ್​ನಲ್ಲಿ ಸ್ಥಾನ ಪಡೆಯಬೇಕಿದ್ದರೆ. ಯುವ ಆಟಗಾರರು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ. ವಿಶ್ವಕಪ್​ಗೂ ಮುನ್ನ ಐಪಿಎಲ್​ ಕೂಡ ನಡೆಯುದರಿಂದ ಇಲ್ಲಿಯೂ ಕೆಲ ಉದಯೋನ್ಮುಖ ಆಟಗಾರು ಬೆಳಕಿಗೆ ಬರುತ್ತಾರೆ. ಆದ್ದರಿಂದ ಈಗ ತಂಡದಲ್ಲಿ ಇದ್ದ ಆಟಗಾರರು ತಮ್ಮ ಶ್ರೇಷ್ಠ ಪ್ರದರ್ಶನ ತೋರಿ ಆಯ್ಕೆ ಸಮಿತಿಯ ಗಮನಸೆಳೆಯಬೇಕಿದೆ.

ದಕ್ಷಿಣ ಆಫ್ರಿಕಾ ಬಲಿಷ್ಠ ಪಡೆ

ಟಿ20ಯಲ್ಲಿ ಸ್ಫೋಟಕ ಬ್ಯಾಟಿಂಗ್​ ಮತ್ತು ಬೌಲಿಂಗ್​ ನಡೆಸಬಲ್ಲ ಅನುಭವಿ ಆಟಗಾರರನ್ನೇ ನೆಚ್ಚಿಕೊಂಡಿರುವ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಹೋಲಿಸಿದರೆ ಅತ್ಯಂತ ಬಲಿಷ್ಠವಾಗಿ ಗೋಚರಿಸಿದೆ. ಅಲ್ಲದೆ ತವರಿನ ಲಾಭವೂ ಕೂಡ ನೆರವಿಗೆ ಬರಲಿದೆ. ರೀಜಾ ಹೆಂಡ್ರಿಕ್ಸ್, ನಾಯಕ ಐಡೆನ್ ಮಾರ್ಕ್ರಾಮ್, ವಿಸ್ಫೋಟಕ ಬ್ಯಾಟರ್​ ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್ ಇವರೆಲ್ಲರನ್ನು ಕಟ್ಟಿ ಹಾಕುವುದು ಅಷ್ಟು ಸುಲಭದ ಮಾತಲ್ಲ. ಮೊಹಮ್ಮದ್​ ಸಿರಾಜ್​ ಮತ್ತು ರವೀಂದ್ರ ಜಡೇಜಾ ಮಾತ್ರ ಭಾರತ ತಂಡದಲ್ಲಿರುವ ಅನುಭವಿ ಬೌಲರ್​ಗಳು. ಇವರ ಜತೆ ಯುವ ಭಾರತೀಯ ಬೌಲರ್​ಗಳು ಶ್ರೇಷ್ಠ ಪ್ರದರ್ಶನ ತೋರಬೇಕಿದೆ.

ಇದನ್ನೂ ಓದಿ IND vs SA: ಭಾರತ-ದಕ್ಷಿಣ ಆಫ್ರಿಕಾ ಟಿ20 ಮುಖಾಮುಖಿ, ಪಿಚ್​ ರಿಪೋರ್ಟ್ ಹೇಗಿದೆ?

ಭಾರತದ ಬ್ಯಾಟಿಂಗ್​ ಬಲಿಷ್ಠ ಆದರೆ…

ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್​, ರಿಂಕು ಸಿಂಗ್​, ಋತುರಾಜ್​ ಗಾಯಕ್ವಾಡ್​, ಶ್ರೇಯಸ್​ ಅಯ್ಯರ್​ ಒಳಗೊಂಡ ಭಾರತೀಯ ಬ್ಯಾಟಿಂಗ್​ ಲೈನ್​ ಅಪ್​ ಬಲಿಷ್ಠವಾಗಿದೆ. ಆದರೆ ಇವರೆಲ್ಲ ಬೌನ್ಸ್​ ಪಿಚ್​ನಲ್ಲಿ ಆಡಲು ಸಮರ್ಥರಿದ್ದಾರೆಯೇ ಎನ್ನುವುದು ಪಶ್ನೆಯಾಗಿದೆ. ಈಗಾಗಕೇ ಕೋಚ್​ ರಾಹುಲ್​ ದ್ರಾವಿಡ್​ ಅವರು ಸರಣಿ ಆರಂಭಕ್ಕೂ ಮುನ್ನವೇ ಹುಲ್ಲು ಮಿಶ್ರಿತ ಪಿಚ್​ನಲ್ಲಿ ಬ್ಯಾಟಿಂಗ್​ ನಡೆಸುವುದು ನಮ್ಮ ತಂಡದ ಬ್ಯಾಟರ್​ಗಳಿಗೆ ಕಷ್ಟವಾಗಹುದು ಎಂದು ಹೇಳಿದ್ದರು.

Exit mobile version