Site icon Vistara News

IND vs SA: ಡೀನ್ ಎಲ್ಗರ್ ಶತಕ; ಮುನ್ನಡೆ ಕಾಯ್ದುಕೊಂಡ ದಕ್ಷಿಣ ಆಫ್ರಿಕಾ

Dean Elgar hit his 14th Test hundred

ಜೊಹಾನ್ಸ್​ಬರ್ಗ್​: ವಿದಾಯದ ಸರಣಿಯನ್ನಾಡುತ್ತಿರುವ ಡೀನ್​ ಎಲ್ಗರ್​(140*) ಬಾರಿಸಿದ ಅಜೇಯ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ(IND vs SA) ತಂಡ ಭಾರತ ವಿರುದ್ಧದ ಮೊದಲ ಟೆಸ್ಟ್​ನಲ್ಲಿ(South Africa vs India, 1st Test) 11 ರನ್​ಗಳ ಮುನ್ನಡೆ ಕಾಯ್ದುಕೊಂಡಿದೆ. ಸದ್ಯ ದಕ್ಷಿಣ ಆಫ್ರಿಕಾ 5 ವಿಕೆಟ್​ಗೆ 256 ರನ್​ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದೆ. ಇಂದು ಕೂಡ ಪಂದ್ಯ ನಿಗದಿತ ಸಮಯದವರೆಗೆ ನಡೆಯಲಿಲ್ಲ. ಮಂದ ಬೆಳಕಿನ ಕಾರಣ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಮೊದಲ ದಿನದ ಆಟಕ್ಕೆ ಮಳೆ ಅಡ್ಡಿಪಡಿಸಿತ್ತು.

8 ವಿಕೆಟ್​ ಕಳೆದುಕೊಂಡು 208 ಗಳಿಸಿದ್ದಲ್ಲಿಂದ ಎರಡನೇ ದಿನದಾಟ ಆರಂಭಿಸಿದ ಭಾರತ 245 ರನ್​ ಗಳಿಸಿ ಆಲೌಟ್​ ಆಯಿತು. 70 ರನ್​ ಗಳಿಸಿದ್ದ ರಾಹುಲ್(KL Rahul)​ ದ್ವಿತೀಯ ದಿನದಾಟದಲ್ಲಿ 31 ರನ್​ ಬಾರಿಸಿ ಶತಕ ಪೂರ್ತಿಗೊಳಿಸಿದರು. ಒಟ್ಟು 14 ಬೌಂಡರಿ ಮತ್ತು 4 ಸೊಗಸಾದ ಸಿಕ್ಸರ್​ ನೆರವಿನಿಂದ 101 ರನ್​ ಗಳಿಸಿ ಬರ್ಗರ್​ಗೆ ವಿಕೆಟ್​ ಒಪ್ಪಿಸಿದರು. ಸಿರಾಜ್​ 5 ರನ್​ ಗಳಿಸಿದರೂ ರಾಹುಲ್​ಗೆ ಮತ್ತೊಂದು ತುದಿಯಲ್ಲಿ ಉತ್ತಮ ಸ್ಟ್ಯಾಂಡ್​ ನೀಡಿದರು. ಅವರು 22 ಎಸೆತಗಳನ್ನು ಎದುರಿಸಿ ನಿಂತರು. ಅವರ ಈ ಸಾಥ್​ನಿಂದಾಗಿ ರಾಹುಲ್​ ಶತಕ ಪೂರ್ತಿಗೊಳಿಸಿದರು.

ಇದನ್ನೂ ಓದಿ IND vs SA: ರಾಹುಲ್ ಅಮೋಘ​ ಶತಕ; 245 ರನ್​ ಗಳಿಸಿದ ಭಾರತ

ಕಾಡಿದ ಎಲ್ಗರ್​

ಭಾರತ ನೀಡಿದ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾಕ್ಕೆ ಆಸರೆಯಾದದ್ದು ಡೀನ್​ ಎಲ್ಗರ್​. ಟೆಸ್ಟ್​ ಕ್ರಿಕೆಟ್​ಗೆ​ ತಕ್ಕ ಶೈಲಿಯ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ಅಜೇಯ ಶತಕ ಬಾರಿಸಿ ಭಾರತಕ್ಕೆ ಕಾಡಿದರು. ಇದು ಎಲ್ಗರ್ ಅವರ 1ನೇ ಟೆಸ್ಟ್​ ಶತಕವಾಗಿದೆ. ಆರಂಭಿಕ ವಿಕೆಟ್​ 11 ರನ್​ಗೆ ಬಿದ್ದರೂ ಕೂಡ ಎಲ್ಗರ್​ ಮತ್ತು ಡಿ ಜೋರ್ಜಿ ಸೇರಿಕೊಂಡು 93 ರನ್​ಗಳ ಜತೆಯಾಟ ನಡೆಸಿದರು. ಜೋರ್ಜಿ 28 ರನ್​ ಬಾರಿಸಿ ಬುಮ್ರಾಗೆ ವಿಕೆಟ್​ ಒಪ್ಪಿಸಿದರು.

ಜೋರ್ಜಿ ವಿಕೆಟ್​ ಪತನದ ಬಳಿಕ ಬಂದ ಕೀಗನ್ ಪೀಟರ್ಸನ್ ಹೆಚ್ಚು ಹೊತ್ತು ಕ್ರೀಸ್​ ಆಕ್ರಮಿಸುವಲ್ಲಿ ವಿಫಲರಾದರು. ಕೇವಲ 2 ರನ್​ ಗಳಿಸಿ ಔಟಾದರು. ಆದರೆ ಡೇವಿಡ್ ಬೆಡಿಂಗ್ಹ್ಯಾಮ್ ಅರ್ಧಶತಕ ಬಾರಿಸಿ ಮತ್ತೆ ತಂಡದ ಚೇತರಿಕೆಗೆ ಕಾರಣರಾದರು. 7 ಬೌಂಡರಿ ಮತ್ತು 2 ಸಿಕ್ಸರ್​ ಬಾರಿಸಿ 56 ರನ್​ ಗಳಿಸಿದರು. ಆದರೆ ಎಲ್ಗರ್​ ವಿಕೆಟ್ ಕೀಳಲು ಸಾಧ್ಯವಾಗಿಲ್ಲ.

211 ಎಸೆತ ಎದುರಿಸಿ 23 ಬೌಂಡರಿ ನೆರವಿನಿಂದ ಅಜೇಯ 140 ರನ್​ ಬಾರಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ. ಸದ್ಯ ಅವರ ಬ್ಯಾಟಿಂಗ್​ ಪ್ರದರ್ಶನ ನೋಡುವಾಗ ದ್ವೀಶತಕ ಬಾರಿಸುವ ಮುನ್ಸೂಚನೆ ಇದೆ. ಭಾರತ ಪರ ಜಸ್​ಪ್ರೀತ್​ ಬುಮ್ರಾ ಮತ್ತು ಮೊಹಮ್ಮದ್​ ಸಿರಾಜ್​ ತಲಾ 2 ವಿಕೆಟ್​ ಕಿತ್ತರೆ, ಪದಾರ್ಪಣ ಟೆಸ್ಟ್ ಪಂದ್ಯ ಆಡುತ್ತಿರುವ ಪ್ರಸಿದ್ಧ್​ ಕೃಷ್ಣ ಒಂದು ವಿಕೆಟ್​ ಪಡೆದಿದ್ದಾರೆ.

ದಾಖಲೆ ಬರೆದ ರಾಹುಲ್​

ದ್ವಿತೀಯ ದಿನದಾಟದಲ್ಲಿ ಬಿರುಸಿನ ಆಟಕ್ಕೆ ಒತ್ತು ಕೊಟ್ಟ ರಾಹುಲ್​ ಶತತ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿದರು. ದ್ವಿತೀಯ ದಿನದಾಟದಲ್ಲಿ 2 ಸಿಕ್ಸರ್​ ಮತ್ತು 4 ಬೌಂಡರಿ ಬಾರಿಸಿದರು. ಅದರಲ್ಲೂ ಸಿಕ್ಸರ್​ ಮೂಲಕವೇ ಶತಕ ಪೂರ್ತಿಗೊಳಿಸಿದರು. ಇದು ಅವರ 8ನೇ ಟೆಸ್ಟ್​ ಶತಕವಾಗಿದೆ. ಸೆಂಚುರಿಯನ್​ ಮೈದಾನದಲ್ಲಿ ಸತತ 2 ಶತಕ ಬಾರಿಸಿದ ಮೊದಲ ವಿದೇಶಿ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾದರು. ರಾಹುಲ್ ಹೊರತುಪಡಿಸಿ ಸೆಂಚುರಿಯನ್​ನಲ್ಲಿ ಉಳಿದ ಯಾವುದೇ ವಿದೇಶಿ ಬ್ಯಾಟರ್‌ ಟೆಸ್ಟ್‌ನಲ್ಲಿ ಒಂದಕ್ಕಿಂತ ಹೆಚ್ಚು ಶತಕ ಬಾರಿಸಿಲ್ಲ. 2021ರಲ್ಲಿ ರಾಹುಲ್​ ಇಲ್ಲಿ ಆರಂಭಿಕನಾಗಿ ಕಣಕ್ಕಿಳಿದು 123 ರನ್​ ಬಾರಿಸಿದ್ದರು.

Exit mobile version