ಕೇಪ್ ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಗೆಲ್ಲುವ ಮೂಲಕ ಭಾರತ ಸರಣಿಯನ್ನು ಡ್ರಾ ದಲ್ಲಿ ಅಂತ್ಯಗೊಳಿಸಿದೆ. ಜತೆಗೆ ಎರಡನೇ ಬಾರಿ ದಕ್ಷಿಣ ಆಫ್ರಿಕಾದಲ್ಲಿ ಸರಣಿ ಸೋಲು ಕಾಣದ ದಾಖಲೆ ಬರೆದಿದೆ. ಇದಕ್ಕೂ ಮುನ್ನ ಧೋನಿ ನಾಯಕತ್ವದಲ್ಲಿ 2010-11ರಲ್ಲಿ ಮೊದಲ ಬಾರಿ ಭಾರತ ಸರಣಿಯಲ್ಲಿ ಸಮಬಲದ ಗೌರವ ಕಂಡಿತ್ತು.
ಇಲ್ಲಿನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಬುಧವಾರ ಆರಂಭಗೊಂಡ ಈ ಟೆಸ್ಟ್ ಪಂದ್ಯ ಕೇವಲ ಎರಡನೇ ದಿನಕ್ಕೆ ಮುಕ್ತಾಯ ಕಂಡಿತು. ಗುರುವಾರ ಮೂರು ವಿಕೆಟ್ ನಷ್ಟಕ್ಕೆ 62 ರನ್ ಮತ್ತು 36 ಹಿನ್ನಡೆಯೊಂದಿಗೆ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ ಐಡೆನ್ ಮಾರ್ಕ್ರಮ್ ಅವರ ಶತಕದ ಸಾಹಸದಿಂದ 176 ರನ್ಗೆ ಆಲೌಟ್ ಆಯಿತು. 79 ರನ್ ಗೆಲುವಿನ ಗುರಿ ಪಡೆದ ಭಾರತ 3 ವಿಕೆಟ್ ನಷ್ಟಕ್ಕೆ 80 ರನ್ ಬಾರಿಸಿ 7 ವಿಕೆಟ್ ಗೆಲುವು ಸಾಧಿಸಿತು. ಈ ಮೂಲಕ ಸರಣಿಯನ್ನು ಡ್ರಾದೊಂದಿಗೆ ಮುಕ್ತಾಯಗೊಳಿಸಿತು. ಮೊದಲ ಪಂದ್ಯದಲ್ಲಿ ಇನಿಂಗ್ಸ್ ಸೋಲಿಗೆ ತುತ್ತಾಗಿತ್ತು.
🇮🇳👏 𝗔 𝗛𝗜𝗦𝗧𝗢𝗥𝗜𝗖 𝗪𝗜𝗡! Rohit Sharma's Team India stamps authority in Cape Town, rewriting history.
— The Bharat Army (@thebharatarmy) January 4, 2024
😉 In a notable feat, Rohit Sharma now stands alongside MS Dhoni as the second captain to secure a Test series draw in South Africa.
📷 Getty • #RohitSharma #ViratKohli… pic.twitter.com/FVU5byRe1N
ಜೀವದಾನ ಪಡೆದು ಶತಕ ಬಾರಿಸಿದ ಮಾರ್ಕ್ರಮ್
ದ್ವಿತೀಯ ದಿನದಾಟದಲ್ಲಿ ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಕೂಡ ಮಾರ್ಕ್ರಮ್ ಅವರು ಏಕಾಂಗಿಯಾಗಿ ನಿಂತು ತಂಡದ ಮೊತ್ತವನ್ನು ಹಿಗ್ಗಿಸುತ್ತಿದ್ದರು. ಇದೇ ವೇಳೆ ಬುಮ್ರಾ ಅವರ ಓವರ್ನಲ್ಲಿ ರಾಹುಲ್ ಸುಲಭ ಕ್ಯಾಚ್ ಕೈ ಚೆಲ್ಲುವ ಮೂಲಕ ಜೀವದಾನ ನೀಡಿದರು. ಇದರ ಲಾಭವೆತ್ತಿದ ಮಾರ್ಕ್ರಮ್ ಶತಕವನ್ನು ಬಾರಿಸಿ ಸಂಭ್ರಮಿಸಿದರು. ಭಾರತೀಯ ಬೌಲರ್ ಗಳನ್ನು ದಂಡಿಸಿದ ಮಾರ್ಕ್ರಮ್ 103 ಎಸೆತಗಳಲ್ಲಿ 106 ರನ್ ಗಳಿಸಿ ಸಿರಾಜ್ಗೆ ವಿಕೆಟ್ ಒಪ್ಪಿಸಿದರು. ಅವರ ಶತಕದ ಇನಿಂಗ್ಸ್ನಲ್ಲಿ 17 ಬೌಂಡರಿ ಮತ್ತು ಎರಡು ಸಿಕ್ಸರ್ ಸಿಡಿಯಿತು.
ಇದನ್ನೂ ಓದಿ Aaron Finch: ಕ್ರಿಕೆಟ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ ಹಾರ್ಡ್ ಹಿಟ್ಟರ್ ಆರೋನ್ ಫಿಂಚ್
ಡೇವಿಡ್ ಬೆಡಿಂಗ್ಹ್ಯಾಮ್ 11 ರನ್, ಕೈಲ್ ವೇರಿಯನ್ನೆ 9 ರನ್, ಜೆನ್ಸನ್ 11 ರನ್, ಕೇಶವ್ ಮಹಾರಾಜ್ ಮೂರು ರನ್ ಮತ್ತು ರಬಾಡಾ ಎರಡು ರನ್ ಗಳಿಸಿದರು. ಭಾರತದ ಪರ ಬಿಗು ದಾಳಿ ಸಂಘಟಿಸಿದ ಜಸ್ಪ್ರೀತ್ ಬುಮ್ರಾ 6, ಮುಖೇಶ್ ಕುಮಾರ್ 2, ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ ಒಂದು ವಿಕೆಟ್ ಪಡೆದರು. ಸಿರಾಜ್ ಮೊದಲ ಇನಿಂಗ್ಸ್ನಲ್ಲಿ 15 ರನ್ಗೆ 6 ವಿಕೆಟ್ ಕಿತ್ತು ಮಿಂಚಿದ್ದರು.
ಎಲ್ಗರ್ಗೆ ಸೋಲಿನ ವಿದಾಯ
ವಿದಾಯ ಪಂದ್ಯದವನ್ನು ಆಡಿದ ಡೀನ್ ಎಲ್ಗರ್ಗೆ ಸೋಲಿನ ವಿದಾಯ ದೊರಕಿದೆ. ಭಾರತ ಸರಣಿ ಆರಂಭಕ್ಕೂ ಮುನ್ನವೇ ಎಲ್ಗರ್ ತಮ್ಮ ಕ್ರಿಕೆಟ್ ನಿವೃತ್ತಿಯನ್ನು ಘೋಷಿಸಿದ್ದರು. ಮೊದಲ ಒಂದ್ಯದಲ್ಲಿ ಶತಕ ಬಾರಿಸಿದ್ದ ಅವರು ದ್ವಿತೀಯ ಪಂದ್ಯದಲ್ಲಿ ಬವುಮಾ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಆದರರೆ ಅವರಿಗೆ ಗೆಲುವಿನ ವಿದಾಯ ಮಾತ್ರ ಸಿಗಲಿಲ್ಲ.
79 ರನ್ ಚೇಸಿಂಗ್ ವೇಳೆ ಭಾರತ ಪರ ಯಶಸ್ವಿ ಜೈಸ್ವಾಲ್ ಬಿರುಸಿನ ಬ್ಯಾಟಿಂಗ್ ನಡೆಸಿ 6 ಬೌಂಡರಿ ನೆರವಿನಿಂದ 28 ರನ್ ಬಾರಿಸಿದರು. ಶುಭಮನ್ ಗಿಲ್ 10, ವಿರಾಟ್ ಕೊಹ್ಲಿ 12 ರನ್ಗೆ ವಿಕೆಟ್ ಕೈಚೆಲ್ಲಿದರು. 75 ರನ್ಗೆ ಮೂರು ವಿಕೆಟ್ ಬಿದ್ದು ಗೆಲುವಿಗೆ ಕೇವಲ 4 ರನ್ ಬೇಕಿದ್ದರೂ ಒಂದು ಕ್ಷಣ ಭಾರತೀಯ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಯಾಯಿತು. ಏಕೆಂದರೆ ಮೊದಲ ಇನಿಂಗ್ಸ್ನಲ್ಲಿ ಭಾರತ 153 ರನ್ಗೆ 4 ವಿಕೆಟ್ ಬಿದ್ದ ಬಳಿಕ ಒಂದೂ ರನ್ ಮಾಡದೆ 6 ವಿಕೆಟ್ ಕಳೆದುಕೊಂಡು ಆಲೌಟ್ ಆಗಿತ್ತು. ಹೀಗಾಗಿ ಅಭಿಮಾನಿಗಳಿಗೆ ಆತಂಕ ಉಂಟಾಗಿತ್ತು. ಆದರೆ ನಾಲ್ಕನೇ ವಿಕೆಟ್ಗೆ ಬಂದ ಶ್ರೇಯಸ್ ಅಯ್ಯರ್ ಬೌಂಡರಿ ಬಾರಿಸಿ ಭಾರತದ ಗೆಲುವನ್ನು ಸಾರಿದರು. ನಾಯಕ ರೋಹಿತ್ ಅಜೇಯ 17 ರನ್ ಬಾರಿಸಿದರು.