Site icon Vistara News

IND vs SA: ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್​ ಇತಿಹಾಸ, ಪಿಚ್​ ರಿಪೋರ್ಟ್​ ಹೇಗಿದೆ?

SuperSport Park, Centurion

ಜೊಹಾನ್ಸ್​ಬರ್ಗ್​ ಭಾರತ ಮತ್ತು ದಕ್ಷಿಣ ಆಫ್ರಿಕಾ(IND vs SA) ನಡುವಣ 2 ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಪಂದ್ಯ ನಾಳೆ(ಮಂಗಳವಾರ) ಸೆಂಚುರಿಯನ್​ನಲ್ಲಿ(SuperSport Park, Centurion) ಆರಂಭಗೊಳ್ಳಲಿದೆ. ಕ್ರಿಸ್​ಮಸ್​ನ ಮರುದಿನ ನಡೆಯುವ ಈ ಪಂದ್ಯವನ್ನು ಬಾಕ್ಸಿಂಗ್​ ಡೇ ಟೆಸ್ಟ್​ ಎಂದು ಕರೆಯಲಾಗುತ್ತದೆ. ಈ ಪಂದ್ಯದ ಪಿಚ್​ ರಿಪೋರ್ಟ್​, ಸಂಭಾವ್ಯ ತಂಡ ಮತ್ತು ಮುಖಾಮುಖಿಯ ಸಂಪೂರ್ಣ ವರದಿ ಇಲ್ಲಿದೆ.

ಪಿಚ್​ ರಿಪೋರ್ಟ್​

ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್ ಕೆಂಪು-ಬಾಲ್ ಕ್ರಿಕೆಟ್‌ನಲ್ಲಿ ವೇಗದ ಬೌಲರ್‌ಗಳಿಗೆ ಉತ್ತಮ ಪ್ರಮಾಣದ ಸಹಾಯವನ್ನು ನೀಡುತ್ತದೆ. ಪಂದ್ಯದ ಮೊದಲ ದಿನವಂತೂ ವೇಗಿಗಳು ಇಲ್ಲಿ ಸಂಪೂರ್ಣ ಹಿಡಿತ ಸಾಧಿಸುವುದರಲ್ಲಿ ಅನುಮಾನವೇ ಬೇಡ ಎಂದು ಪಿಚ್ ಕ್ಯುರೇಟರ್ ಈಗಾಗಲೇ ತಿಳಿಸಿದ್ದಾರೆ. ಹೀಗಾಗಿ ಟಾಸ್​ ಗೆದ್ದ ತಂಡ ಬೌಲಿಂಗ್​ ಆಯ್ಕೆ ಮಾಡಿಕೊಂಡರೆ ಉತ್ತಮ. ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಬೌಲರ್‌ಗಳಿಗೆ ಈ ಪಿಚ್​ ಹೆಚ್ಚು ನೆರವು ನೀಡಲಿದೆ, ಬೌನ್ಸ್ ಮತ್ತು ಸೀಮ್​ನಿಂದ ಕೂಡಿರಲಿದೆ ಎಂದು ಹೇಳಿದ್ದಾರೆ.

ಮಳೆಯ ಎಚ್ಚರಿಕೆ

ಇತ್ತಂಡಗಳ ನಡುವಣ ಈ ಮೊದಲ ಟೆಸ್ಟ್​ ಪಂದ್ಯಕ್ಕೆ ಮಳೆ ಅಡಚಣೆಯ ಭೀತಿ ಕಾಡಿದೆ. ಪಂದ್ಯದ ಮೊದಲ ದಿನದಾಟಕ್ಕೆ ಶೇ. 96ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. 2ನೇ ದಿನಕ್ಕೆ ಮಳೆ ಭೀತಿ ಶೇ. 25ಕ್ಕೆ ತಗ್ಗಲಿದೆ. 3ನೇ ದಿನದಾಟದಲ್ಲಿ ಬೆಳಗ್ಗಿನ ಅವಧಿಗೆ ಮಾತ್ರ ಮಳೆ ಭೀತಿ ಇದೆ. 4 ಮತ್ತು 5ನೇ ದಿನದಾಟಗಳಲ್ಲಿ ಮಳೆ ಕಾಡುವ ಭೀತಿ ಏರಿಕೆ ಕಂಡು ಶೇ. 60ರಷ್ಟು ಇರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಒಟ್ಟಾರೆ ಪಂದ್ಯ ಸಂಪೂರ್ಣವಾಗಿ 5 ದಿನಗಳ ಕಾಲ ನಡೆಯುವು ಕಷ್ಟ ಸಾಧ್ಯ ಎನ್ನಲಾಗಿದೆ.

ಸೆಂಚುರಿಯನ್‌ ಟೆಸ್ಟ್​ ದಾಖಲೆ

ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್​ನಲ್ಲಿ ಇದುವರೆ 28 ಟೆಸ್ಟ್​ ಪಂದ್ಯಗಳು ನಡೆದಿವೆ. ಇದರಲ್ಲಿ 13 ಪಂದ್ಯಗಳು ಮೊದಲು ಬ್ಯಾಟಿಂಗ್​ ನಡೆಸಿದ ತಂಡ, 11 ಪಂದ್ಯಗಳು ಚೇಸಿಂಗ್​ ನಡಸಿದ ತಂಡ ಗೆಲುವು ಸಾಧಿಸಿದೆ. ಮದಲ ಇನಿಂಗ್ಸ್​ನ ಸರಾಸರಿ ಮೊತ್ತ 329. ದ್ವಿತೀಯ ಇನಿಂಗ್ಸ್​ನ ಸರಾಸರಿ ಮೊತ್ತ 316. ಇಲ್ಲಿ ದಾಖಲಾದ ಗರಿಷ್ಠ ಮೊತ್ತ 621/10. ಡಿಸೆಂಬರ್ 2020 ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಣ ಪಂದ್ಯದಲ್ಲಿ ದಾಖಲಾಗಿತ್ತು.

ಮುಖಾಮುಖಿ

ಭಾರತ ಮತ್ತು ದಕ್ಷಿಣ ಆಫ್ರಿಕಾ ಇದುವರೆಗೆ 42 ಟೆಸ್ಟ್​ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 15 ಪಂದ್ಯ, ದಕ್ಷಿಣ ಆಫ್ರಿಕಾ 17 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 10 ಪಂದ್ಯಗಳು ಡ್ರಾ ಗೊಂಡಿವೆ. ತವರಿನಲ್ಲಿ ಭಾರತ 10 ಪಂದ್ಯ ಗೆದ್ದರೆ, ದಕ್ಷಿಣ ಆಫ್ರಿಕಾ 12 ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದೆ. ಒಟ್ಟಾರೆಯಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಟೆಸ್ಟ್​ ದಾಖಲೆಗಳು ಅಷ್ಟು ಉತ್ತಮವಾಗಿಲ್ಲ.

ಇದನ್ನೂ ಓದಿ Boxing Day Test: ಬಾಕ್ಸಿಂಗ್​ ಡೇ ಟೆಸ್ಟ್​ ಎಂದರೇನು? ಇದರ ಮಹತ್ವವೇನು?

ಸಂಭಾವ್ಯ ತಂಡ

ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ (ವಿಕೆಟ್​ ಕೀಪರ್​), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಜಸ್​ಪ್ರೀತ್​ ಬುಮ್ರಾ (ಉಪನಾಯಕ), ಪ್ರಸಿದ್ಧ್ ಕೃಷ್ಣ.

ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ಜೆರಾಲ್ಡ್ ಕೋಟ್ಜಿ, ಡೀನ್ ಎಲ್ಗರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಲುಂಗಿ ಎನ್‌ಗಿಡಿ, ಕಗಿಸೊ ರಬಾಡ, ಕೈಲ್ ವೆರ್ರೆನ್ನೆ, ಡೇವಿಡ್ ಬೆಡಿಂಗ್‌ಹ್ಯಾಮ್, ನಾಂಡ್ರೆ ಬರ್ಗರ್.

Exit mobile version