ಜೊಹಾನ್ಸ್ಬರ್ಗ್: ನಂಬುಗೆಯ ಬ್ಯಾಟರ್ಗಳೆಲ್ಲ ಬಡಬಡಣೆ ವಿಕೆಟ್ ಕೈಚೆಲ್ಲಿದಾಗ ತಂಡಕ್ಕಾಗಿ ಟೊಂಕ ಕಟ್ಟಿ ನಿಂತ ಕೆ.ಎಲ್ ರಾಹುಲ್(101) ಅಮೋಘ ಶತಕ ಬಾರಿಸಿ ಭಾರತ ತಂಡಕ್ಕೆ ಆಸರೆಯಾದರು. ಅವರ ಈ ಬ್ಯಾಟಿಂಗ್ ಸಾಹಸದಿಂದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 245 ರನ್ ಬಾರಿಸಿದೆ.
8 ವಿಕೆಟ್ ಕಳೆದುಕೊಂಡು 208 ಗಳಿಸಿದ್ದಲ್ಲಿಂದ ಎರಡನೇ ದಿನದಾಟ ಆರಂಭಿಸಿದ ಭಾರತ 245 ರನ್ ಗಳಿಸಿ ಆಲೌಟ್ ಆಯಿತು. 70 ರನ್ ಗಳಿಸಿದ್ದ ರಾಹುಲ್(KL Rahul) ದ್ವಿತೀಯ ದಿನದಾಟದಲ್ಲಿ 31 ರನ್ ಬಾರಿಸಿ ಶತಕ ಪೂರ್ತಿಗೊಳಿಸಿದರು. ಸಿರಾಜ್ 5 ರನ್ ಗಳಿಸಿದರೂ ರಾಹುಲ್ಗೆ ಮತ್ತೊಂದು ತುದಿಯಲ್ಲಿ ಉತ್ತಮ ಸ್ಟ್ಯಾಂಡ್ ನೀಡಿದರು. ಅವರು 22 ಎಸೆತಗಳನ್ನು ಎದುರಿಸಿ ನಿಂತರು.
A magnificent CENTURY for @klrahul 👏👏
— BCCI (@BCCI) December 27, 2023
He's stood rock solid for #TeamIndia as he brings up his 8th Test 💯
His second Test century in South Africa.#SAvIND pic.twitter.com/lQhNuUmRHi
ದ್ವಿತೀಯ ದಿನದಾಟದಲ್ಲಿ ಬಿರುಸಿನ ಆಟಕ್ಕೆ ಒತ್ತು ಕೊಟ್ಟ ರಾಹುಲ್ ಶತತ ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು. ದ್ವಿತೀಯ ದಿನದಾಟದಲ್ಲಿ 2 ಸಿಕ್ಸರ್ ಮತ್ತು 4 ಬೌಂಡರಿ ಬಾರಿಸಿದರು. ಅದರಲ್ಲೂ ಸಿಕ್ಸರ್ ಮೂಲಕವೇ ಶತಕ ಪೂರ್ತಿಗೊಳಿಸಿದರು. ಇದು ಅವರ 8ನೇ ಟೆಸ್ಟ್ ಶತಕವಾಗಿದೆ. ಅಲ್ಲದೆ ಸೆಂಚುರಿಯನ್ನಲ್ಲಿ 2ನೇ ಶತಕ. 2021ರಲ್ಲಿಯೂ ರಾಹುಲ್ ಇಲ್ಲಿ ಶತಕ ಬಾರಿಸಿದ್ದರು. ಆದರೆ ಆ ಪಂದ್ಯದಲ್ಲಿ ಆರಂಭಿಕನಾಗಿ ಅವರು ಈ ಸಾಧನೆ ಮಾಡಿದ್ದರು. 123 ರನ್ ಬಾರಿಸಿದ್ದರು.
ಇದನ್ನೂ ಓದಿ IND vs SA: ಕುಸಿದ ಭಾರತ ತಂಡಕ್ಕೆ ಆಸರೆಯಾದ ಕನ್ನಡಿಗ ಕೆಎಲ್ ರಾಹುಲ್
ದಾಖಲೆ ಬರೆದ ರಾಹುಲ್
ಸೆಂಚುರಿಯನ್ನಲ್ಲಿ ಪ್ರವಾಸಿ ತಂಡದ ಆಟಗಾರನೊಬ್ಬ ಸತತವಾಗಿ ಶತಕ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆಗೆ ರಾಹುಲ್ ಪಾತ್ರವಾಗಿದ್ದಾರೆ. ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಒಟ್ಟು 14 ಬೌಂಡರಿ ಮತ್ತು 4 ಸೊಗಸಾದ ಸಿಕ್ಸರ್ ನೆರವಿನಿಂದ 101 ರನ್ ಗಳಿಸಿ ಬರ್ಗರ್ಗೆ ವಿಕೆಟ್ ಒಪ್ಪಿಸಿದರು. ಅವರು ನಿಂತು ಆಡದೇ ಹೋಗಿದ್ದರೆ ಭಾರತ 150 ರನ್ಗಳಿಸುವುದು ಕೂಡ ಕಷ್ಟವಾಗುತ್ತಿತ್ತು. ತಂಡದ ಬಹುಪಾಲು ಮೊತ್ತ ರಾಹುಲ್ ಅವರದ್ದೇ ಆಗಿತ್ತು.
📸📸💯@klrahul 🙌🙌#SAvIND pic.twitter.com/lBEC4UisFa
— BCCI (@BCCI) December 27, 2023
ಜೊಹಾನ್ಸ್ಬರ್ಗ್ನ ಸೆಂಚುರಿಯನ್ನಲ್ಲಿ ಮಂಗಳವಾರ ಆರಂಭಗೊಂಡ ಈ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ಆರಂಭದಲ್ಲೇ ಆಘಾತ ಎದುರಿಸಿತ್ತು. ವಿಶ್ವಕಪ್ ಫೈನಲ್ ಸೋಲಿನ ಬಳಿಕ ಇದೇ ಮೊದಲ ಬಾರಿ ಆಡಲಿಳಿದ ನಾಯಕ ರೋಹಿತ್ ಶರ್ಮ(5) ಕೇವಲ ಒಂದು ಬೌಂಡರಿಗೆ ಸೀಮಿತರಾಗಿ ವಿಕೆಟ್ ಒಪ್ಪಿಸಿದ್ದರು. ಇದರ ಬೆನ್ನಲ್ಲೇ ದ್ವಿತೀಯ ವಿಕೆಟ್ಗೆ ಕ್ರೀಸ್ಗೆ ಬಂದ ಶುಭಮನ್ ಗಿಲ್ ಕೂಡ ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸಿಕೊಳ್ಳುವಲ್ಲಿ ವಿಫಲರಾದರು. 12 ಎಸೆತ ಎದುರಿಸಿ ಕೇವಲ 2 ರನ್ಗಳಿಸಿ ಔಟಾದರು.
ಬಡಬಡನೆ 4 ಬೌಂಡರಿ ಬಾರಿಸಿದ ಯುವ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಕೂಡ 17 ರನ್ಗೆ ಆಟ ಮುಗಿಸಿದರು. ತಂಡದ ಮೊತ್ತ 24 ಆಗುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡ ಭಾರತ ಆರಂಭಿಕ ಆಘಾತಕ್ಕೆ ಒಳಗಾಯಿತು. ಈ ವೇಳೆ ನಾಲ್ಕನೇ ವಿಕೆಟ್ಗೆ ಜತೆಯಾದ ಶ್ರೇಯಸ್ ಅಯ್ಯರ್ ಮತ್ತು ವಿರಾಟ್ ಕೊಹ್ಲಿ ಕೆಲ ಕಾಲ ತಾಳ್ಮೆಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದ್ದರು.
ಉತ್ತಮ ಬ್ಯಾಟಿಂಗ್ ನಡೆಸುವ ಮೂಲಕ ಭೋಜನ ವಿರಾಮದ ತನಕ ಬ್ಯಾಟಿಂಗ್ ಕಾಯ್ದುಕೊಂಡಿದ್ದ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಈ ವಿರಾಮದ ಬಳಿಕ ವಿಕೆಟ್ ಕೈಚೆಲ್ಲಿದರು. ಉಭಯ ಆಟಗಾರರ ಜತೆಯಾಟಕ್ಕೆ ರಬಾಡ ಬ್ರೇಕ್ ಹಾಕಿದರು. 31 ರನ್ ಗಳಿಸಿದ್ದ ಅಯ್ಯರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಕೊಹ್ಲಿ ಮತ್ತು ಅಯ್ಯರ್ 4ನೇ ವಿಕೆಟ್ಗೆ 68 ರನ್ ಜತೆಯಾಟ ನಡೆಸಿದರು. ಅಯ್ಯರ್ ಅವರ ವಿಕೆಟ್ ಬಿದ್ದು 15 ರನ್ ಅಂತರದಲ್ಲಿ ವಿರಾಟ್ ಕೊಹ್ಲಿಯ ವಿಕೆಟ್ ಕೂಡ ಬಿದ್ದಿತು. ಕೊಂಚ ಚೇತರಿಕೆ ಕಂಡಿದ್ದ ಭಾರತ ಮತ್ತೆ ಆಘಾತಕ್ಕೊಳಗಾಯಿತು. ವಿರಾಟ್ ಕೊಹ್ಲಿ 64 ಎಸೆತ ಎದುರಿಸಿ 5 ಬೌಂಡರಿ ನರೆವಿನಿಂದ 38 ರನ್ ಗಳಿಸಿದರು.