Site icon Vistara News

IND vs SA: ಭಾರತ-ದಕ್ಷಿಣ ಆಫ್ರಿಕಾ ಟಿ20 ಪಂದ್ಯಕ್ಕೆ ಮಳೆ ಅಡ್ಡಿ; ಪಂದ್ಯ ವಿಳಂಬ

South Africa vs India 1

ಡರ್ಬಾನ್​: ದಕ್ಷಿಣ ಆಫ್ರಿಕಾ(IND vs SA) ಮತ್ತು ಭಾರತ ನಡುವಣ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದು ಟಾಸ್​(Toss delayed due to rain) ಮತ್ತು ಪಂದ್ಯ ಆರಂಭ ವಿಳಂಬಗೊಳ್ಳಲಿದೆ. ಸದ್ಯಕ್ಕೆ ಡರ್ಬಾನ್​ನಲ್ಲಿ ಭಾರಿ ಮಳೆಯಾಗುತ್ತಿದೆ ಎಂದು ತಿಳಿದುಬಂದಿದೆ. ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್​ ಹಿನ್ನಲೆ ಇತ್ತಂಡಗಳಿಗೂ ಈ ಸರಣಿ ಪ್ರಮುಖವಾಗಿದೆ.

ಕವರ್​ನಿಂದ ಮುಚ್ಚಿದ ಮೈದಾನ

ಸದ್ಯ ಡರ್ಬಾನ್​ನ ಕಿಂಗ್ಸ್‌ಮೀಡ್ ಮೈದಾನವನ್ನು ಕವರ್​ನಿಂದ ಸಂಪೂರ್ಣವಾಗಿ ಮುಚ್ಚಲಾಗಿದೆ. ಆಟಗಾರರೆಲ್ಲ ಡ್ರೆಸಿಂಗ್​ ರೂಮ್​ನಲ್ಲಿ ಮಳೆ ಯಾವಾಗ ಬಿಡುತ್ತದೆ ಎಂದು ಕಾದು ಕುಳಿತಿದ್ದಾರೆ. ಇದು ಐಸಿಸಿ ಅಡಿಯಲ್ಲಿ ನಡೆಯುವ ಟೂರ್ನಿಯಾದ ಕಾರಣ ನಿಗದಿತ ಸಮಯಕ್ಕೆ ಮಳೆ ನಿಂತು ಆಟ ಪ್ರಾರಂಭವಾಗದಿದ್ದರೆ ಪಂದ್ಯವನ್ನು ರದ್ದು ಎಂದು ಘೋಷಿಸಲಾಗುತ್ತದೆ.

ಟಿ20 ಮುಖಾಮುಖಿ

ಭಾರತ ಮತ್ತು ದಕ್ಷಿಣ ಆಫ್ರಿಕಾ ಇದುವರೆಗೆ 24 ಟಿ20 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿದ್ದು, ಭಾರತವು 13 ಪಂದ್ಯಗಳನ್ನು ಗೆದ್ದಿದೆ. ದಕ್ಷಿಣ ಆಫ್ರಿಕಾ 10 ಪಂದ್ಯಗಳಲ್ಲಿ ಗೆಲುವು ಕಂಡಿದೆ. ಒಂದು ಪಂದ್ಯವು ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ದಕ್ಷಿಣ ಆಫ್ರಿಕಾದಲ್ಲಿ, ‘ಮೆನ್ ಇನ್ ಬ್ಲೂ’ ಏಳು ಪಂದ್ಯಗಳನ್ನು ಆಡಿ ಐದರಲ್ಲಿ ಗೆದ್ದಿದ್ದರೆ, ಆತಿಥೇಯರು ಎರಡರಲ್ಲಿ ಗೆದ್ದಿದ್ದಾರೆ. ಬಲಾಬಲದ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿದೆ.

ಪಿಚ್​ ರಿಪೋರ್ಟ್

ಡರ್ಬಾನ್​ನ ಕಿಂಗ್ಸ್‌ಮೀಡ್ ಪಿಚ್ ಮೈದಾನದಲ್ಲಿ ಆಡಿದ 18 ಪಂದ್ಯಗಳಲ್ಲಿ, ವೇಗದ ಬೌಲರ್‌ಗಳು 23.84 ಸರಾಸರಿಯಲ್ಲಿ 162 ವಿಕೆಟ್‌ಗಳನ್ನು ಪಡೆದರೆ, ಸ್ಪಿನ್ನರ್‌ಗಳು 18 ಪಂದ್ಯಗಳಲ್ಲಿ 26.80 ಸರಾಸರಿಯಲ್ಲಿ 42 ವಿಕೆಟ್‌ಗಳನ್ನು ಪಡೆದಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ತಂಡ ಒಂಬತ್ತು ಗೆಲುವು ಸಾಧಿಸಿದರೆ, ಎರಡನೇ ಬ್ಯಾಟಿಂಗ್ ನಡೆಸಿದ ತಂಡ ಎಂಟು ಗೆಲುವುಗಳನ್ನು ಸಾಧಿಸಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಡರ್ಬನ್‌ನಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 143 ಆಗಿದೆ.

ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಮೊದಲ ಬಾರಿ ಆಡಿದ ತಂಡವೆಂದರೆ ಅದು ಭಾರತ ಮತ್ತು ದಕ್ಷಿಣ ಆಫ್ರಿಕಾ. 2007ರಲ್ಲಿ ನಡೆದ ಚೊಚ್ಚಲ ಅಂತಾರಾಷ್ಟೀಯ ಟಿ20 ಪಂದ್ಯದಲ್ಲಿ ವೀರೇಂದ್ರ ಸೆಹವಾಗ್​ ಸಾರಥ್ಯದ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 82 ರನ್​ಗಳಿಂದ ಮಣಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ್ದ ಭಾರತ 6 ವಿಕೆಟ್​ಗೆ 169 ರನ್​ ಬಾರಿಸಿತ್ತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಕೇವಲ 87 ರನ್​ಗೆ ಸರ್ವಪತನ ಕಂಡಿತ್ತು.

ಸಿಕ್ಕ ಅವಕಾಶ ಬಳಿಸಿಕೊಳ್ಳಿ

ಈಗಾಗಲೇ ಬಿಸಿಸಿಐ ಆಯ್ಕೆ ಸಮಿತಿಯ ಇಬ್ಬರು ಅಧಿಕಾರಿಗಳನ್ನು ದಕ್ಷಿಣ ಆಫ್ರಿಕಾಗೆ ಕಳುಹಿಸಿದ್ದು ಆಟಗಾರರ ಎಲ್ಲ ಪ್ರದರ್ಶನದ ಬಗ್ಗೆ ಮಾಹಿತಿ ಸಂಗ್ರಹಿಸಲು ಸೂಚಿಸಿದೆ. ಹೀಗಾಗಿ ವಿಶ್ವಕಪ್​ನಲ್ಲಿ ಸ್ಥಾನ ಪಡೆಯಬೇಕಿದ್ದರೆ. ಯುವ ಆಟಗಾರರು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ. ವಿಶ್ವಕಪ್​ಗೂ ಮುನ್ನ ಐಪಿಎಲ್​ ಕೂಡ ನಡೆಯುದರಿಂದ ಇಲ್ಲಿಯೂ ಕೆಲ ಉದಯೋನ್ಮುಖ ಆಟಗಾರು ಬೆಳಕಿಗೆ ಬರುತ್ತಾರೆ. ಆದ್ದರಿಂದ ಈಗ ತಂಡದಲ್ಲಿ ಇದ್ದ ಆಟಗಾರರು ತಮ್ಮ ಶ್ರೇಷ್ಠ ಪ್ರದರ್ಶನ ತೋರಿ ಆಯ್ಕೆ ಸಮಿತಿಯ ಗಮನಸೆಳೆಯಬೇಕಿದೆ.

Exit mobile version