Site icon Vistara News

Ind vs Sa T20 | ಸತತ 4 ನೇ ಬಾರಿ ಟಾಸ್‌ ಗೆದ್ದ ದ.ಆಫ್ರಿಕಾ, ಮಹತ್ವದ ಪಂದ್ಯದಲ್ಲಿ ಮೊದಲು ಭಾರತದ ಬ್ಯಾಟಿಂಗ್‌

india vs sa toss

ನವ ದೆಹಲಿ: Ind vs Sa T20 | ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಪಂದ್ಯದಲ್ಲಿ ಸತತ ನಾಲ್ಕನೇ ಬಾರಿ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿದೆ. ಐದು ಪಂದ್ಯಗಳ ಸರಣಿಯಲ್ಲಿ ಈಗಾಗಲೇ ದಕ್ಷಿಣ ಆಫ್ರಿಕಾ 2 ಪಂದ್ಯಗಳನ್ನು ಗೆದ್ದು ೨-೧ ರಿಂದ ಮುನ್ನಡೆ ಸಾಧಿಸಿದೆ. ಈವರೆಗೆ ಒಂದೇ ಪಂದ್ಯವನ್ನು ಗೆದ್ದಿರುವ ಭಾರತಕ್ಕೆ ಸರಣಿಯನ್ನು ಜೀವಂತವಾಗಿರಸಲು ಈ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿದ್ದು ಹಿಂದಿನ ಪಂದ್ಯಗಳಲ್ಲಿ ಆಡಿದ ಬಳಗವನ್ನೇ ನಾಯಕ ರಿಷಬ್‌ ಪಂತ್‌ ಉಳಿಸಿಕೊಂಡಿದ್ದಾರೆ.

ಕಳೆದ ಪಂದ್ಯವನ್ನು ಗೆದ್ದರುವ ಭರವಸೆ ಹಾಗೂ ಆತ್ಮವಿಶ್ವಾಸ ಈ ಪಂದ್ಯದಲ್ಲಿ ಭಾರತಕ್ಕೆ ಪೂರಕವಾಗಬಹುದು. ಇಂದಿನ ಪಂದ್ಯವನ್ನು ಗೆದ್ದು ಸರಣಿಯನ್ನು ಸಮಬಲಗೊಳಿಸಬೇಕೆಂದು ಭಾರತ ತಂಡವು ಸಜ್ಜಾಗಿದೆ. ಅಲ್ಲದೆ, ಕಳೆದ ಪಂದ್ಯದಲ್ಲಿ ಬೌಲರ್‌ಗಳು ಅದ್ಭುತವಾಗಿ ಎಸೆದ ಬಾಲ್‌ಗಳಿಗೆ ದಕ್ಷಿಣ ಆಫ್ರಿಕ ತಂಡದ ವಿಕೆಟ್‌ಗಳು ಪಟಪಟನೆ ಪತನಗೊಂಡಿದ್ದವು. ಇಂದೂ ಅದೇ ರೀತಿಯ ಬೌಲಿಂಗ್‌ನ ನಿರೀಕ್ಷೆಯಿದೆ. ಆದರೆ, ದಕ್ಷಿಣ ಆಫ್ರಿಕಾ ತಂಡದ ಪ್ರತಿಯೊಬ್ಬ ಆಟಗಾರರೂ ಒಳ್ಳೆಯ ಫಾರ್ಮ್‌ನಲಿದ್ದಾರೆ. ಭಾರತ ತಂಡ ಈ ಪಂದ್ಯದಲ್ಲಿ ಒಂದೇ ಒಂದು ಸಣ್ಣ ತಪ್ಪು ಮಾಡಿದರೂ ಸರಣಿ ಕೈತಪ್ಪಿಹೋಗುತ್ತದೆ.

ಭಾರತದ ಬ್ಯಾಟರ್‌ ಹಾಗೂ ಬೌಲರ್‌ಗಳ ಕಳೆದ ಪಂದ್ಯದ ಆಟವನ್ನು ಗಮನಿಸಿದಾಗ ಭಾರತ ಇಂದಿನ ಪಂದ್ಯದಲ್ಲಿಯೂ ಗೆಲ್ಲುವ ಭರವಸೆ ಮೂಡಿಸಿದೆ.

ಪಿಚ್‌ ಮಾಹಿತಿ:

ಇಂದಿನ ಪಂದ್ಯವು ರಾಜ್‌ಕೋಟ್‌ನ ಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಿಚ್‌ನ ತೇವಾಂಶ ಕಡಿಮೆ ಇರಲಿದೆ. ಇದು ಬ್ಯಾಟರ್‌ಗಳಿಗೆ ಪೂರಕವಾಗಲಿದೆ. ಭಾರತದ ಬೌಲಿಂಗ್‌ ಬಲ ಕಡಿಮೆ ಇರುವುದರಿಂದ ಮೊದಲು ಬೌಲಿಂಗ್‌ ಮಾಡುತ್ತಿರುವುದೇ ಉತ್ತಮ. ಈ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದವರು ಸರಾಸರಿ 183 ರನ್‌ ಗಳಿಸಿದ್ದಾರೆ. ಅಲ್ಲದೆ, ಚೇಸ್‌ ಮಾಡಿ ಗೆದ್ದ ಪ್ರಮಾಣ 60%ರಷ್ಟು ಇದೆ.

ತಂಡದ ವಿವರ:

ಕಳೆದ ಮೂರು ಪಂದ್ಯಗಳಲ್ಲಿ ಭಾರತದ ತಂಡದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಮೊದಲೆರಡ ಪಂದ್ಯಗಳಲ್ಲಿ ಸೋಲು ಕಂಡಿದ್ದರೂ ಅದೇ ತಂಡವು ಮೂರನೇ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಪಂದ್ಯದಲ್ಲಿಯೂ ಪಂತ್‌ ಪಡೆಯಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ. ಆದರೆ ದಕ್ಷಿಣ ಆಫ್ರಿಕ ತಂಡದಲ್ಲಿ ಮೂರು ಬದಲಾವಣೆ ಕಂಡುಬಂದಿದೆ. ಈ ಬಾರಿ, ಕ್ವಿಂಟನ್‌ ಡಿ ಕಾಕ್‌, ಮಾರ್ಕೋ ಜೆನ್ಸನ್‌ ಹಾಗೂ ಲುಂಗಿ ಎನ್‌ಗಿಡಿ ಆಡಲಿದ್ದಾರೆ.

ಭಾರತ: ಋತುರಾಜ್‌ ಗಾಯಕ್ವಾಡ್‌, ಇಶಾನ್‌ ಕಿಶನ್‌, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್(ನಾಯಕ, ವಿಕೆಟ್‌ ಕೀಪರ್), ಹಾರ್ದಿಕ್‌ ಪಾಂಡ್ಯ, ದಿನೇಶ್‌ ಕಾರ್ತಿಕ್‌, ಅಕ್ಷರ್‌ ಪಟೇಲ್‌, ಯುಜ್ವೇಂದ್ರ ಚಹಲ್‌, ಭುವನೇಶ್ವರ್‌ ಕುಮಾರ್‌, ಹರ್ಷಲ್‌ ಪಟೇಲ್‌, ಆವೇಶ್‌ ಖಾನ್‌.

ದಕ್ಷಿಣ ಆಫ್ರಿಕ: ಕ್ವಿಂಟನ್‌ ಡಿ ಕಾಕ್, ಟೆಂಬಾ ಬವುಮಾ(ನಾಯಕ), ರಸ್ಸಿ ವ್ಯಾನ್‌ ಡರ್‌ ಡಸ್ಸೆನ್‌, ಡೇವಿಡ್‌ ಮಿಲ್ಲರ್‌, ಹೆನ್ರಿಕ್‌ ಕ್ಲಾಸೀನ್, ಡ್ವೈನ್‌ ಪಿಟೋರಿಯಸ್‌, ಕೇಶವ್‌ ಮಹಾರಾಜ್‌, ಮಾರ್ಕೊ ಜಾನ್ಸೆನ್‌, ತಬ್ರಿಜ್‌ ಶಂಸಿ, ಅನ್ರಿಚ್‌ ನೊಕಿಯೆ, ಲುಂಗಿ ಎನ್‌ಗಿಡಿ.

ಇದನ್ನೂ ಓದಿ: Ind vs Sa t20 | 4 ಪಂದ್ಯಗಳಲ್ಲಿ ನಾಟೌಟ್‌ ಆಗಿದ್ದ ಮಿಲ್ಲರ್‌ ಔಟಾಗಿದ್ದೇ ಭಾರತದ ಗೆಲುವಿಗೆ ಕಾರಣವಾಯಿತೇ?

Exit mobile version