ಜೊಹಾನ್ಸ್ಬರ್ಗ್: ವರ್ಣ ಭೇದ ನೀತಿಯಿಂದಾಗಿ 1968 ರಿಂದ 1992ರ ವರೆಗಿನ ಅವಧಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳದಂತೆ ನಿಷೇಧ ಹೇರಲಾಗಿತ್ತು. ನಿಷೇಧ ಮುಗಿದ ಬಳಿಕ ಈ ದೇಶಕ್ಕೆ ಕ್ರಿಕೆಟ್ ಸರಣಿಯನ್ನಾಡಲು ಮೊದಲ ಬಾರಿ ಪ್ರವಾಸ ಮಾಡಿದ್ದು ಭಾರತ. ಇದೀಗ ಮತ್ತೆ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದು 2 ಟೆಸ್ಟ್ ಮತ್ತು ತಲಾ ಮೂರು ಏಕದಿನ ಮತ್ತು ಟಿ20 ಸರಣಿಯಲ್ಲಿ ಆಡಲಿದೆ. ಭಾನುವಾರ ನಡೆಯುವ ಟಿ20 ಪಂದ್ಯದ ಮೂಲಕ ಈ ಸರಣಿಗೆ ಚಾಲನೆ ಸಿಗಲಿದೆ.
ನಿಷೇಧ ಶಿಕ್ಷೆ ಮುಗಿದ ತಕ್ಷಣ ದಕ್ಷಿಣ ಆಫ್ರಿಕಾ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪುನರಾಗಮನ ಸಾರಿದ್ದೇ ಭಾರತದ ವಿರುದ್ಧ ಆಡುವ ಮೂಲಕ. “ಫ್ರೆಂಡ್‌ಶಿಪ್ ಸೀರೀಸ್” ಆಡುವ ಮೂಲಕ ದಕ್ಷಿಣ ಆಫ್ರಿಕಾವನ್ನು ಮತ್ತೆ ಕ್ರಿಕೆಟ್‌ನಲ್ಲಿ ಬೆಳೆಯುವಂತೆ ಮಾಡಿದ ಕೀರ್ತಿ ಭಾರತದ್ದು. ಇದೇ ವರ್ಷ ಅಂದರೆ 1992ರಲ್ಲಿ ನಡೆದ ವಿಶ್ವಕಪ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ತಂಡ ಅಮೋಘ ಪ್ರದರ್ಶನ ತೋರಿತು. ಆದರೆ ಸೆಮಿಫೈನಲ್ ಪಂದ್ಯದಲ್ಲಿ ತಲೆ ಬುಡವಿಲ್ಲದ. ಮೊದಲ ಬಾರಿಗೆ ಜಾರಿಗೆ ತಂಡ ಡಕ್ವರ್ತ್ ಮಳೆ ನಿಯದಿಂದಾಗಿ ದಕ್ಷಿಣ ಆಫ್ರಿಕಾ ತಂಡ ಗೆಲ್ಲುವ ಪಂದ್ಯವನ್ನು ಸೋಲು ಕಂಡಿತ್ತು.
ಅಂದು ಭಾರತ ಮೊಹಮದ್ ಅಜರುದ್ದೀನ್ ನೇತೃತ್ವದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. 17 ಸದಸ್ಯರ ತಂಡ ಇದಾಗಿತ್ತು. ಇದರಲ್ಲಿ 14 ಆಟಗಾರರು, ಕೋಚ್ ಅಜಿತ್ ವಾಡೇಕರ್, ಫಿಸಿಯೋ-ಕಮ್-ಟ್ರೇನರ್ ಅಲಿ ಇರಾನಿ ಅವರು ತಂಡದ ಸಿಬ್ಬಂದಿಗಳಾಗಿದ್ದರು 7 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಕೇವಲ 2 ಪಂದ್ಯ ಮಾತ್ರ ಗದ್ದು ಸರಣಿ ಸೋಲು ಕಂಡಿತ್ತು.
1968 ರಿಂದ 1992ರ ವರೆಗಿನ ಅವಧಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳದಂತೆ ಹೇರಲಾದ ನಿಷೇಧದ ಫಲವಾಗಿ ಆ ರಾಷ್ಟ್ರದ ತಾರಾ ಕ್ರಿಕೆಟಿಗರ ವೃತ್ತಿಜೀವನಕ್ಕೆ ಬಹುದೊಡ್ಡ ಹಾನಿ ಉಂಟಾದುದು ಸುಳ್ಳಲ್ಲ. ಈ ಎಲ್ಲ ಕ್ರಿಕೆಟಿಗರೂ ಬಿಳಿಯರೇ. ಇವರಲ್ಲಿ ಪೋಲಕ್ ಸಹೋದರರಾದ ಗ್ರೇಮ್ ಪೋಲಾಕ್ ಹಾಗೂ ಶಾನ್ ಪೋಲಾಕ್, ಬೇರಿ ರಿಚರ್ಡ್ಸ್, ಮೈಕ್ ಪ್ರೋಕ್ಟರ್, ಪ್ಯಾಟ್ ಪಿಮ್ ಕಾಕ್ಸ್, ಮಾರ್ಕ್ ಬೌಚರ್ ಹಾಗೂ ಜಾನಿ ವೈನ್ ಮುಂತಾದವರಿದ್ದರು.
ಇದನ್ನೂ ಓದಿ Team India : ಭವಿಷ್ಯದ ಪಾಂಡ್ಯ ಪತ್ತೆ; ಬ್ಯಾಟಿಂಗ್, ಬೌಲಿಂಗ್ನಲ್ಲಿ ಅಬ್ಬರಿಸಿದ ಯುವ ಆಟಗಾರ
1888ರಿಂದ 1994ರವರೆಗಿನ (106 ವರ್ಷಗಳ) ಅವಧಿಯಲ್ಲಿ ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡಗಳಲ್ಲಿ ಕೇವಲ ಶ್ವೇತವರ್ಣಿಯರೇ ಇದ್ದರು. ಮುಂದೆ ಈ ದೇಶದ ಕ್ರೀಡಾ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯಾಯಿತೆನ್ನಬಹುದು. 2016ರಲ್ಲಿ ದಕ್ಷಿಣ ಆಫ್ರಿಕಾ ಸರಕಾರದ ನಿರ್ದೇಶದನ್ವಯ ರಾಷ್ಟ್ರೀಯ ಮಟ್ಟದ ಪ್ರತಿಯೊಂದು ಕ್ರೀಡಾ ತಂಡದಲ್ಲೂ ಆರು ಮಂದಿ ಶ್ವೇತವರ್ಣೇತರರು ಇರತಕ್ಕದ್ದೆಂದು ಕ್ರಿಕೆಟ್ ಮಂಡಳಿ ನಿಗದಿ ಮಾಡಿತ್ತು. ಈ ಆರು ಮಂದಿಯ ಪೈಕಿ ಇಬ್ಬರು ಕೃಷ್ಣ ವರ್ಣೀಯರಿರಬೇಕೆಂದು ತೀರ್ಮಾನಿಸಲಾಗಿತ್ತು. ಭಾರತ ಪ್ರವಾಸದಲ್ಲಿ ದಕ್ಷಿಣ ಆಫ್ರಿಕಾದಲ್ಲಿನ ಈ ಬಾರಿಯ ಕ್ರಿಕೆಟ್ ತಂಡದಲ್ಲಿ ಭಾರತೀಯ ಮೂಲದ ಕ್ರಿಕೆಟಿಗರಾದ ಕೇಶವ್ ಮಹಾರಾಜ್ ಆಡುತ್ತಿದ್ದಾರೆ.