ಡರ್ಬಾನ್: ಭಾರತ ಮತ್ತು ದಕ್ಷಿಣ ಆಫ್ರಿಕಾ(IND vs SA) ನಡುವಣ ಮೊದಲ ಟಿ20 ಪಂದ್ಯ ಇಂದು ಡರ್ಬಾನ್ನಲ್ಲಿ ನಡೆಯಲಿದೆ. ಸರಣಿಯ ಮೂಲ ವೇಳಾಪಟ್ಟಿಯ ಪ್ರಕಾರ ಈ ಪಂದ್ಯ ಭಾರತೀಯ ಕಾಲಮಾನ ರಾತ್ರಿ 9.30 ನಿಗದಿಯಾಗಿತ್ತು. ಇದೀಗ ಪರಿಷ್ಕೃತ ಸಮಯದ ಪ್ರಕಾರ ಈ ಪಂದ್ಯ ಸಂಜೆ 7.30ಕ್ಕೆ ಆರಂಭಗೊಳ್ಳಲಿದೆ.
ದಕ್ಷಿಣ ಆಫ್ರಿಕಾದಲ್ಲಿ ಈ ಪಂದ್ಯಗಳು ನಡೆಯುವ ಕಾರಣ ಅಲ್ಲಿನ ಕಾಲಮಾನಕ್ಕೂ ಭಾರತದ ಕಾಲಮಾನಕ್ಕೂ ವ್ಯತ್ಯಾಸ ಇರುವ ಕಾರಣ ಭಾರತದಲ್ಲಿ ಪಂದ್ಯ 9.30ಕ್ಕೆ ಆರಂಭಗೊಳ್ಳುತ್ತದೆ. ಪಂದ್ಯ ಮುಗಿಯುವಾಗ ಮಧ್ಯರಾತ್ರಿ ಆಗಿರುವುದರಿಂದ ವೀಕ್ಷಕರ ಸಂಖ್ಯೆ ಕಡಿಮೆಯಾಗುತ್ತದೆ. ಇದೇ ಕಾರಣಕ್ಕೆ ಬಿಸಿಸಿಐ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಸಲುವಾಗಿ ಈ ಪಂದ್ಯವನ್ನು ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಆರಂಭಿಸುವಂತೆ ಮಾಡಿದೆ. ದಕ್ಷಿಣ ಆಫ್ರಿಕಾದಲ್ಲಿ ಇದು ಹಗಲು-ರಾತ್ರಿ ಪಂದ್ಯವಾಗಲಿದೆ. ಹೆಚ್ಚಾಗಿ ಟಿ20 ಪಂದ್ಯಗಳು ರಾತ್ರಿಯ ವೇಳೆಯೇ ನಡೆಯುತ್ತದೆ. ದ್ವಿತೀಯ ಪಂದ್ಯ ಮೂರನೇ ಪಂದ್ಯ ರಾತ್ರಿ 8.30ಕ್ಕೆ ಆರಂಭಗೊಳ್ಳಲಿದೆ.
Smiles ☺️
— BCCI (@BCCI) December 10, 2023
Cheers 👏
Banter 😉
How about that for a #SAvIND T20I series Trophy Unveiling! 🏆 👌#TeamIndia | @surya_14kumar pic.twitter.com/fxlVjIgT3U
ಕಿಂಗ್ಸ್‌ಮೀಡ್ ಪಿಚ್ ರೆಕಾರ್ಡ್ ಹೇಗಿದೆ?
ಡರ್ಬಾನ್ನ ಕಿಂಗ್ಸ್‌ಮೀಡ್ ಪಿಚ್ ಮೈದಾನದಲ್ಲಿ ಆಡಿದ 18 ಪಂದ್ಯಗಳಲ್ಲಿ, ವೇಗದ ಬೌಲರ್‌ಗಳು 23.84 ಸರಾಸರಿಯಲ್ಲಿ 162 ವಿಕೆಟ್‌ಗಳನ್ನು ಪಡೆದರೆ, ಸ್ಪಿನ್ನರ್‌ಗಳು 18 ಪಂದ್ಯಗಳಲ್ಲಿ 26.80 ಸರಾಸರಿಯಲ್ಲಿ 42 ವಿಕೆಟ್‌ಗಳನ್ನು ಪಡೆದಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ತಂಡ ಒಂಬತ್ತು ಗೆಲುವು ಸಾಧಿಸಿದರೆ, ಎರಡನೇ ಬ್ಯಾಟಿಂಗ್ ನಡೆಸಿದ ತಂಡ ಎಂಟು ಗೆಲುವುಗಳನ್ನು ಸಾಧಿಸಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಡರ್ಬನ್‌ನಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 143 ಆಗಿದೆ.
ಟಿ20 ಮುಖಾಮುಖಿ
ಭಾರತ ಮತ್ತು ದಕ್ಷಿಣ ಆಫ್ರಿಕಾ ಇದುವರೆಗೆ 24 ಟಿ20 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿದ್ದು, ಭಾರತವು 13 ಪಂದ್ಯಗಳನ್ನು ಗೆದ್ದಿದೆ. ದಕ್ಷಿಣ ಆಫ್ರಿಕಾ 10 ಪಂದ್ಯಗಳಲ್ಲಿ ಗೆಲುವು ಕಂಡಿದೆ. ಒಂದು ಪಂದ್ಯವು ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ದಕ್ಷಿಣ ಆಫ್ರಿಕಾದಲ್ಲಿ, ‘ಮೆನ್ ಇನ್ ಬ್ಲೂ’ ಏಳು ಪಂದ್ಯಗಳನ್ನು ಆಡಿ ಐದರಲ್ಲಿ ಗೆದ್ದಿದ್ದರೆ, ಆತಿಥೇಯರು ಎರಡರಲ್ಲಿ ಗೆದ್ದಿದ್ದಾರೆ. ಬಲಾಬಲದ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿದೆ.
ಇದನ್ನೂ ಓದಿ IND vs SA: ಬೌನ್ಸಿ ಪಿಚ್ನಲ್ಲಿ ಹರಿಣಗಳ ಸವಾಲು ಮೆಟ್ಟಿ ನಿಂತಿತೇ ಯಂಗ್ ಇಂಡಿಯಾ?
A fun shoot for the two Captains with a local flavour 😃😃
— BCCI (@BCCI) December 9, 2023
Captain @surya_14kumar and Aiden Markram pose with the silverware ahead of the three match T20I series.#SAvIND pic.twitter.com/CsN3gMkilU
ಚೊಚ್ಚಲ ಟಿ20 ಪಂದ್ಯ ಆಡಿದ್ದೇ ಭಾರತ-ದಕ್ಷಿಣ ಆಫ್ರಿಕಾ…
ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಮೊದಲ ಬಾರಿ ಆಡಿದ ತಂಡವೆಂದರೆ ಅದು ಭಾರತ ಮತ್ತು ದಕ್ಷಿಣ ಆಫ್ರಿಕಾ. 2007ರಲ್ಲಿ ನಡೆದ ಚೊಚ್ಚಲ ಅಂತಾರಾಷ್ಟೀಯ ಟಿ20 ಪಂದ್ಯದಲ್ಲಿ ವೀರೇಂದ್ರ ಸೆಹವಾಗ್ ಸಾರಥ್ಯದ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 82 ರನ್ಗಳಿಂದ ಮಣಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ 6 ವಿಕೆಟ್ಗೆ 169 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಕೇವಲ 87 ರನ್ಗೆ ಸರ್ವಪತನ ಕಂಡಿತ್ತು.