Site icon Vistara News

IND vs SA: ಅಜೇಯ ಭಾರತಕ್ಕೆ ಬಲಿಷ್ಠ ದಕ್ಷಿಣ ಆಫ್ರಿಕಾ ಸವಾಲು

India vs South Africa, 37th Match

ಕೋಲ್ಕೊತಾ: ಈಗಾಗಕೇ ಸೆಮಿಫೈನಲ್​ ಪ್ರವೇಶಿಸಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಭಾನುವಾರದ ವಿಶ್ವಕಪ್​ ಲೀಗ್​ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಇತ್ತಂಡಗಳ ಈ ಕಾದಾಟಕ್ಕೆ ಕೋಲ್ಕೊತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂ ಅಣಿಯಾಗಿದೆ.

ಹೈವೋಲ್ಟೇಜ್​ ನಿರೀಕ್ಷೆ

ಈ ಬಾರಿಯ ವಿಶ್ವಕಪ್​ನ ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿರುವ ಮತ್ತು ಕಪ್​ ಗೆಲ್ಲುವ ನೆಚ್ಚಿನ ತಂಡಗಳಾಗಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಪಂದ್ಯವನ್ನು ಕ್ರಿಕೆಟ್​ ಅಭಿಮಾನಿಗಳು ಹೈವೋಲ್ಟೇಜ್​ ಎಂದು ನಿರೀಕ್ಷೆ ಮಾಡಿದ್ದಾರೆ. ಏಕೆಂದರೆ ಇತ್ತಂತಗಳು ಕೂಡ ಎಲ್ಲ ವಿಭಾಗದಲ್ಲಿಯೂ ಸಮರ್ಥವಾಗಿದೆ. ಅದರಲ್ಲೂ ದಕ್ಷಿಣ ಆಫ್ರಿಕಾ ಆಡಿದ 7 ಪಂದ್ಯಗಳ ಪೈಕಿ ಮೊದಲು ಬ್ಯಾಟಿಂಗ್​ ನಡೆಸಿದ 5 ಪಂದ್ಯಗಳಲ್ಲಿ 350 ಪ್ಲಸ್​ ರನ್​ ಪೇರಿಸಿದೆ. ಬೌಲಿಂಗ್​ ಕೂಡ ಬಲಿಷ್ಠವಾಗಿದೆ. ದಕ್ಷಿಣ ಆಫ್ರಿಕಾ ಸೋಲು ಕಂಡದ್ದು ಮಾತ್ರ ದುರ್ಬಲ ನೆದರ್ಲೆಂಡ್ಸ್​ ವಿರುದ್ಧ. ಅದು ಕೂಡ ಮಳೆ ಪೀಡಿತ ಪಂದ್ಯದಲ್ಲಿ.

ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ದ ಹರಿಣ ಪಡೆ

2011ರ ವಿಶ್ವಕಪ್​ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಒಂದೇ ಗುಂಪಿನಲ್ಲಿ ಆಡಿತ್ತು. ಆಗಲು ಕೂಡ ಭಾರತ ಅಜೇಯ ಗೆಲುವಿನೊಂದಿಗೆ ಮುನ್ನುಗಿತ್ತು. ಈ ಓಟಕ್ಕೆ ಬ್ರೇಕ್ ಹಾಕಿದ್ದು ದಕ್ಷಿಣ ಆಫ್ರಿಕಾವೇ ಎಂಬುದನ್ನು ಮರೆಯುವಂತಿಲ್ಲ. ಈ ಬಾರಿಯೂ ಭಾರತ ಇದುವರೆಗೆ ಅಜೇಯ ಸಾಧನೆ ಕಾಯ್ದುಕೊಂಡು ಬಂದಿದೆ. ಭಾನುವಾರ ಸೋಲು ಕಂಡರೆ ಅಂದಿನ ಲೆಕ್ಕಾಚಾರ ಮತ್ತೆ ಮರುಕಳಿಸಿದಂತಾಗುತ್ತದೆ.

ಇದನ್ನೂ ಓದಿ ಭಾರತ-ದಕ್ಷಿಣ ಆಫ್ರಿಕಾ ವಿಶ್ವಕಪ್ ದಾಖಲೆ, ಪಿಚ್​ ರಿಪೋರ್ಟ್, ಸಂಭಾವ್ಯ ತಂಡ ಹೇಗಿದೆ?

ಕೊಹ್ಲಿಗೆ ವಿಶೇಷ ಪಂದ್ಯ

ವಿರಾಟ್​ ಕೊಹ್ಲಿಗೆ(Virat Kohli) ಈ ಪಂದ್ಯ ಅತ್ಯಂತ ವಿಶೇಷವಾಗಿದೆ. ಏಕೆಂದರೆ ಕೊಹ್ಲಿ(Virat Kohli birthday) ಅವರ 35ನೇ ಜನ್ಮದಿನಾಚರಣೆ. ಸದ್ಯ 48 ಏಕದಿನ ಶತಕ ಬಾರಿಸಿರುವ ಕೊಹ್ಲಿ ತಮ್ಮ ಜನ್ಮದಿದಂದೇ ಶತಕ ಬಾರಿಸಿ ಸಚಿನ್​ ತೆಂಡೂಲ್ಕರ್​ ಅವರ ಸರ್ವಾಕಾಲಿಕ 49 ಶತಕದ ದಾಖಲೆಯನ್ನು ಸರಿಗಟ್ಟಲಿ ಎನ್ನುವುದು ಕೊಹ್ಲಿ ಅಭಿಮಾನಿಗಳ ಆಶಯವಾಶವಾಗಿದೆ.

ಇತ್ತಂಡಗಳು ಬಲಿಷ್ಠ

ಉಭಯ ತಂಡಗಳ ಬಲಾಬಲವನ್ನು ತಕ್ಕಡಿಯಲ್ಲಿ ತೂಗಿದರೆ ಸಮಾನಾಗಿ ಕಾಣಸಿಗುತ್ತದೆ. ದಕ್ಷಿಣ ಆಫ್ರಿಕಾ ಪರ ಈಗಾಗಲೇ 4 ಶತಕ ಬಾರಿಸಿ ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿರುವ ಕ್ವಿಂಟನ್​ ಡಿ ಕಾಕ್​, 2 ಶತಕ ಬಾರಿಸಿದ ರಸ್ಸಿ ವಾನ್​ ಡರ್ ಡುಸ್ಸೆನ್, ಡೇವಿಡ್​ ಮಿಲ್ಲರ್​, ಐಡೆನ್​ ಮಾರ್ಕ್ರಮ್​ ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಬೌಲಿಂಗ್​ನಲ್ಲಿ ಮಾರಕ ಎಸೆತಗಳನ್ನು ಎಸೆಯುವ ಮಾರ್ಕೊ ಜಾನ್ಸೆನ್​, ಕಗಿಸೊ ರಬಾಡ, ಸ್ಪಿನ್ನರ್​ ಕೇಶವ್​ ಮಹಾರಾಜ್​ ಇವರೆಲ್ಲ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ.

ಇದನ್ನೂ ಓದಿ Virat Kohli: ಕೊಹ್ಲಿಯ 35ನೇ ಹುಟ್ಟುಹಬ್ಬಕ್ಕೆ ಸಕಲ ಸಿದ್ಧತೆ; ಏನೆಲ್ಲ ವಿಶೇಷತೆ?

​ಭಾರತ ಕೂಡ ಅತ್ಯಂತ ಸಮತೋಲಿತ ತಂಡವಾಗಿದೆ. ಆರಂಭಕಾರ ರೋಹಿತ್​ ಶರ್ಮ, ಶುಭಮನ್​ ಗಿಲ್​, ವಿರಾಟ್​ ಕೊಹ್ಲಿ, ಶ್ರೇಯಸ್ ಅಯ್ಯರ್​ ಮತ್ತು ಕೆ.ಎಲ್​ ರಾಹುಲ್​ ಇವರೆಲ್ಲ ಬ್ಯಾಟಿಂಗ್​ ಬಲವಾದರೆ, ಬೌಲಿಂಗ್​ನಲ್ಲಿ ಜಿದ್ದಿಗೆ ಬಿದ್ದವರಂತೆ ವಿಕೆಟ್​ ಕೀಳುವ ಮೊಹಮ್ಮದ್​ ಶಮಿ, ಸಿರಾಜ್​ ಜಸ್​ಪ್ರೀತ್​ ಬುಮ್ರಾ ಹೆಚ್ಚು ಅಪಾಯಕಾರಿ. ಅದರಲ್ಲೂ ಶಮಿ ಅವರಂತೂ ಪಂದ್ಯದಿಂದ ಪಂದ್ಯಕ್ಕೆ ಹೆಚ್ಚಿನ ವಿಕೆಟ್​ ಕೀಳುತ್ತಿದ್ದಾರೆ. ಸದ್ಯ ಆಡಿದ ಮೂರು ಪಂದ್ಯಗಳಲ್ಲಿ ಅವರು 14 ವಿಕೆಟ್​ ಉರುಳಿಸಿದ್ದಾರೆ.

ವಿಶ್ವಕಪ್​ ಮುಖಾಮುಖಿ

ಉಭಯ ತಂಡಗಳು ವಿಶ್ವಕಪ್​ ಟೂರ್ನಿಯಲ್ಲಿ ಬಲಾಬಲದಲ್ಲಿ ದಕ್ಷಿಣ ಆಫ್ರಿಕಾವೇ ಮುಂದಿದೆ. 5 ಬಾರಿ ಮುಖಾಮುಖಿಯಾಗಿ ಮೂರಲ್ಲಿ ಗೆಲುವು ಸಾಧಿಸಿದೆ. ಭಾರತ ಗೆದ್ದಿದ್ದು 2 ಪಂದ್ಯ ಮಾತ್ರ ಅದು ಕೂಡ ಇತ್ತೀಚಿನ ವಿಶ್ವಕಪ್​ ಟೂರ್ನಿಯಲ್ಲಿ. 2015 ಮತ್ತು ಕಳೆದ 2019ರ ವಿಶ್ವಕಪ್​ನಲ್ಲಿ. ಇದಕ್ಕೂ ಮುನ್ನ ಆಡಿದ ಮೂರೂ ಪಂದ್ಯಗಳಲ್ಲಿಯೂ ಭಾರತ ಹೀನಾಯ ಸೋಲು ಕಂಡಿತ್ತು. ಇತ್ತಂಡಗಳು ಮೊದಲ ವಿಶ್ವಕಪ್​ ಪಂದ್ಯ ಆಡಿದ್ದು 1992ರಲ್ಲಿ. ಈ ಪಂದ್ಯವನ್ನು ದಕ್ಷಿಣ ಆಫ್ರಿಕಾ 6 ವಿಕೆಟ್​ಗಳಿಂದ ಗೆದ್ದಿತ್ತು.

Exit mobile version