Site icon Vistara News

IND vs SL: ಭಾರತ-ಲಂಕಾ ಫೈನಲ್​ ಫೈಟ್​; ಉಭಯ ತಂಡಗಳ ಏಷ್ಯಾಕಪ್​ ಇತಿಹಾಸ ಬಲು ರೋಚಕ!

rohit sharma and dasun shanaka

ಕೊಲಂಬೊ: ಏಷ್ಯಾಕಪ್​ನ(Asia Cup 2023) ಫೈನಲ್(India vs Sri Lanka, Final) ಕ್ಲೈಮ್ಯಾಕ್ಸ್​ ಭಾನುವಾರ ನಡೆಯಲಿದೆ. ಇಲ್ಲಿ ಭಾರತ ಮತ್ತು ಶ್ರೀಲಂಕಾ(IND vs SL) ಪ್ರಶಸ್ತಿಗಾಗಿ ಸೆಣಸಾಡಲಿದೆ. ಇತ್ತಂಡಗಳ ಈ ಕದನಕ್ಕೆ ಕೊಲಂಬೊದ ಆರ್​. ಪ್ರೇಮದಾಸ(R.Premadasa Stadium, Colombo) ಕ್ರಿಕೆಟ್​ ಸ್ಟೇಡಿಯಂ ಅಣಿಯಾಗಿದೆ.

ಏಷ್ಯಾಕಪ್​ ಮುಖಾಮುಖಿ

ಭಾರತ ಮತ್ತು ಶ್ರೀಲಂಕಾ ಇದುವರೆಗೆ ಏಷ್ಯಾಕಪ್​ನಲ್ಲಿ 22 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಉಭಯ ತಂಡಗಳು ತಲಾ 11 ಪಂದ್ಯಗಳಲ್ಲಿ ಗೆದ್ದು ಸಮಾನವಾದ ದಾಖಲೆ ಹೊಂದಿದೆ. ಒಂದು ಸೋಲು ಈ ಬಾರಿಯ ಸೂಪರ್​ ಫೋರ್​ ಪಂದ್ಯದಲ್ಲಿ ದಾಖಲಾಗಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಎರಡು ತಂಡಗಳು ಬಲಿಷ್ಠವಾಗಿದೆ. ಹೀಗಾಗಿ ಫೈನಲ್​ ಪಂದ್ಯವನ್ನು ಹೈವೋಲ್ಟೇಜ್​ ಎಂದು ನಿರೀಕ್ಷೆ ಮಾಡಬಹುದು.

8ನೇ ಬಾರಿ ಫೈನಲ್​ ಮುಖಾಮುಖಿ

ಕಳೆದ 15 ಆವೃತ್ತಿಯ ಇತಿಹಾಸದಲ್ಲಿ(Asia Cup history) ಭಾರತ ತಂಡವೇ ಪಾರುಪತ್ಯ ಸಾಧಿಸಿದೆ. ಒಟ್ಟು 7 ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಶ್ರೀಲಂಕಾ 6 ಬಾರಿ ಗೆದ್ದಿದೆ. ಉಭಯ ತಂಡಗಳು ಏಷ್ಯಾಕಪ್​ ಇತಿಹಾಸದಲ್ಲಿ ಒಟ್ಟು 7 ಬಾರಿ ಫೈನಲ್​ ಮುಖಾಮುಖಿಯಾಗಿವೆ. ಭಾರತ 4 ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದರೆ. ಶ್ರೀಲಂಕಾ 3 ಬಾರಿ ಗೆದ್ದು ಬೀಗಿದೆ. ಇದು 8ನೇ ಮುಖಾಮುಖಿ. ಭಾರತ ಚೊಚ್ಚಲ ಏಷ್ಯಾಕಪ್​ ಗೆದ್ದಿದ್ದು ಕೂಡ ಲಂಕಾ ವಿರುದ್ಧವೇ. ಯುಎಇಯಲ್ಲಿ ನಡೆದ 1984ರ ಈ ಫೈನಲ್​ನಲ್ಲಿ ಭಾರತ ಸುನೀಲ್‌ ಗಾವಸ್ಕರ್‌ ನಾಯಕತ್ವದಲ್ಲಿ ಕಪ್​ ಗೆದ್ದಿತ್ತು.

ಭಾರತದ ಹ್ಯಾಟ್ರಿಕ್​ ಸಾಧನೆ

ಭಾರತ ಏಷ್ಯಾ ಕಪ್‌ನಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ ಏಕೈಕ ತಂಡ. 1988, 1990-91 ಮತ್ತು 1995ರಲ್ಲಿ ಸತತ 3 ವರ್ಷ ಭಾರತ ಪ್ರಶಸ್ತಿಯನ್ನೆತ್ತಿತ್ತು. ಮೂರೂ ಫೈನಲ್‌ಗ‌ಳಲ್ಲಿ ಶ್ರೀಲಂಕಾವನ್ನೇ ಮಣಿಸಿದ್ದು ವಿಶೇಷ. 1995ರಲ್ಲಿ ಶಾರ್ಜಾದಲ್ಲಿ ನಡೆದ 5ನೇ ಆವೃತ್ತಿಯ ಏಷ್ಯಾ ಕಪ್‌ನಲ್ಲಿ ಭಾರತ, ಪಾಕಿಸ್ಥಾನ ಮತ್ತು ಶ್ರೀಲಂಕಾ ತಂಡಗಳು ರೌಂಡ್‌ ರಾಬಿನ್‌ ಲೀಗ್‌ನಲ್ಲಿ ಏಕರೀತಿಯ ಪ್ರದರ್ಶನ ನೀಡಿ ಸಮಾನ ಅಂಕ ಗಳಿಸಿದವು. ರನ್‌ರೇಟ್‌ನಲ್ಲಿ ಮುಂದಿದ್ದ ಭಾರತ-ಶ್ರೀಲಂಕಾ ಫೈನಲ್‌ ತಲುಪಿದವು. ಭಾರತ ಕಪ್‌ ಎತ್ತಿತು.

ಇದನ್ನೂ ಓದಿ Ravindra Jadeja : ಏಕ ದಿನ ಕ್ರಿಕೆಟ್​ ಮಾದರಿಯಲ್ಲಿ ಹೊಸ ದಾಖಲೆ ಬರೆದ ರವೀಂದ್ರ ಜಡೇಜಾ

ಭಾರತಕ್ಕೆ 11ನೇ ಫೈನಲ್​

ಭಾರತ ಇದುವರೆಗೆ 10 ಸಲ ಫೈನಲ್‌ಗೆ ಲಗ್ಗೆಯಿಟ್ಟು ಅತ್ಯಧಿಕ 7 ಸಲ ಪ್ರಶಸ್ತಿಯನ್ನೆತ್ತಿದೆ. ಈ ಬಾರಿಯೂ ಭಾರತ ಕಪ್​ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಭಾರತ ಹೊರತುಪಡಿಸಿದರೆ ಏಷ್ಯಾ ಕಪ್‌ ಇತಿಹಾಸದ ಮತ್ತೊಂದು ಯಶಸ್ವಿ ತಂಡವೆಂದರೆ ಶ್ರೀಲಂಕಾ. ಅದು ಅತ್ಯಧಿಕ 12 ಸಲ ಫೈನಲ್‌ಗೆ ಲಗ್ಗೆ ಇರಿಸಿ 6 ಸಲ ಪ್ರಶಸ್ತಿ ಎತ್ತಿದೆ. ಕಳೆದ ವರ್ಷ ಪಾಕಿಸ್ತಾನ ತಂಡವನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಈ ಬಾರಿಯೂ ಕಪ್​ ಗೆದ್ದಿತೇ ಎನ್ನುವುದು ಭಾನುವಾರದ ಕೌತುಕ.

ಭಾರತದ ಫೈನಲ್​ ಸಾಧನೆ

1984 ಚಾಂಪಿಯನ್​, 1988 ಚಾಂಪಿಯನ್, 1991 ಚಾಂಪಿಯನ್, 1995 ಚಾಂಪಿಯನ್, 2010 ಚಾಂಪಿಯನ್, 2016 ಚಾಂಪಿಯನ್, 2018 ಚಾಂಪಿಯನ್, 1986 ಪಾಲ್ಗೊಂಡಿಲ್ಲ, 1997 ರನ್ನರ್ಸ್ ಅಪ್, 2000 3ನೇ ಸ್ಥಾನ, 2004 ರನ್ನರ್ಸ್ ಅಪ್, 2008 ರನ್ನರ್ಸ್ ಅಪ್, 2012 3ನೇ ಸ್ಥಾನ, 2014 3ನೇ ಸ್ಥಾನ

Exit mobile version