Site icon Vistara News

IND vs SL: ಇಂಡೋ-ಲಂಕಾ ಪಂದ್ಯದ ಪಿಚ್​ ರಿಪೋರ್ಟ್​, ಸಂಭಾವ್ಯ ತಂಡಗಳು ಹೀಗಿದೆ

wankhede stadium

ಮುಂಬಯಿ: ಅಜೇಯ ಗೆಲುವಿನ ನಾಗಲೋಟ ಕಾಯ್ದುಕೊಂಡಿರುವ ಭಾರತ ತಂಡ ಗುರುವಾರದ ವಿಶ್ವಕಪ್​ನ 33ನೇ(India vs Sri Lanka, 33rd Match) ಪಂದ್ಯದಲ್ಲಿ ಶ್ರೀಲಂಕಾದ(IND vs SL) ಸವಾಲು ಎದುರಿಸಲಿದೆ. ಇತ್ತಂಡಗಳ ಈ ಕಾದಾಟಕ್ಕೆ ಮುಂಬೈಯ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂ ಅಣಿಯಾಗಿದೆ. ಈ ಪಂದ್ಯವನ್ನೂ ಗೆದ್ದು ಸಮಿಫೈನಲ್​ ಸ್ಥಾನವನ್ನು ಅಧಿಕೃತ ಪಡಿಸಿಕೊಳ್ಳುವುದು ರೋಹಿತ್​ ಪಡೆಯ ಯೋಜನೆಯಾಗಿದೆ. ಈ ಪಂದ್ಯದ ಪಿಚ್​, ಹವಾಮಾನ(pitch and weather report) ಮತ್ತು ಸಂಭಾವ್ಯ ತಂಡದ(Playing XI) ಮಾಹಿತಿ ಇಂತಿದೆ.

ಪಿಚ್​ ರಿಪೋರ್ಟ್

ಮುಂಬೈಯ ವಾಂಖೆಡೆ ಸ್ಟೇಡಿಯಂನ ಪಿಚ್​ ಬ್ಯಾಟಿಂಗ್ ಸ್ನೇಹಿ ಆಗಿದೆ. ಹೀಗಾಗಿ ಈ ಪಂದ್ಯದಲ್ಲಿ ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆ ಅಧಿಕ. ಇಲ್ಲಿ ನಡೆದ ಬಹುತೇಕ ಏಕದಿನ ಪಂದ್ಯಗಳು ಹೈಸ್ಕೋರಿಂಗ್ ಆಗಿದೆ. ಈ ಸ್ಟೇಡಿಯಂನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ದಾಖಲೆ ದಕ್ಷಿಣ ಆಫ್ರಿಕಾ ತಂಡದ ಹೆಸರಿನಲ್ಲಿದೆ. 2015ರಲ್ಲಿ ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 4 ವಿಕೆಟ್​ಗೆ 438 ಬಾರಿಸಿತ್ತು. ಇದಾದ ಬಳಿಕ ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ ವಿರುದ್ಧ 399 ರನ್​ ಬಾರಿಸಿತ್ತು. ಒಟ್ಟಾರೆ ಇದು ಬ್ಯಾಟಿಂಗ್​ ಸ್ನೇಹಿಯಾಗಿದೆ.

ಇದನ್ನೂ ಓದಿ ಸಚಿನ್ ಪ್ರತಿಮೆ ಲೋಕಾರ್ಪಣೆ; ಸ್ಟ್ರೋಕ್‌ ಮಾಡುವ ಭಂಗಿಯೇ ಮನಮೋಹಕ

ಪಂದ್ಯ ನೀರಸವಾಗದಿರಲಿ…

ಒಂದೊಮ್ಮೆ ಭಾರತ ತಂಡ ಮೊದಲು ಬ್ಯಾಟಿಂಗ್​ ನಡೆಸಿದರೆ 350 ರನ್​ಗಳ ಗಡಿ ದಾಟುವ ಸಾಧ್ಯತೆ ಇದೆ. ಏಕೆಂದರೆ ಲಂಕಾ ತಂಡದಲ್ಲಿ ಅನುಭವಿ ಬೌಲರ್​ಗಳಿಲ್ಲ. ಭಾರತದ ತ್ರಿವಳಿ ವೇಗಿಗಳ ಮುಂದೆ ಬ್ಯಾಟ್​ ಬೀಸಲು ಬಲಿಷ್ಠ ತಂಡಗಳ ಆಟಗಾರರೇ ಪರದಾಡಿರುವಾಗ ಲಂಕಾ ಕೂಡ ಇದೇ ಸ್ಥಿತಿ ಎದುರಿಸಿದರೂ ಅಚ್ಚರಿಯಿಲ್ಲ. ಏಷ್ಯಾಕಪ್​ ಫೈನಲ್​ನಲ್ಲಿ ಲಂಕಾ 50ರೊಳಗೆ ಗಂಟು ಮೂಟೆಕಟ್ಟಿ ಸುಲಭವಾಗಿ ಭಾರತಕ್ಕೆ ತುತ್ತಾಗಿತ್ತು. ಇದೇ ರೀತಿ ಈ ಪಂದ್ಯ ನೀರಸವಾಗದಿರಲಿ ಎನ್ನುವುದು ಕ್ರಿಕೆಟ್​ ಅಭಿಮಾನಿಗಳ ಆಶಯ.

ವಿಶ್ವಕಪ್​ ಮುಖಾಮುಖಿ

ಭಾರತ ಮತ್ತು ಶ್ರೀಲಂಕಾ ತಂಡಗಳು ವಿಶ್ವಕಪ್​ನಲ್ಲಿ ತನ್ನದೇ ಆದ ದಾಖಲೆಗಳನ್ನು ಹೊಂದಿದೆ. ಉಭಯ ತಂಡಗಳು ಒಟ್ಟು 9 ಬಾರಿ ವಿಶ್ವಕಪ್​ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇತ್ತಂಡಗಳು ತಲಾ 4 ಪಂದ್ಯಗಳನ್ನು ಗೆದ್ದ ದಾಖಲೆ ಹೋಂದಿದೆ. 1992ರ ವಿಶ್ವಕಪ್​ ಪಂದ್ಯವೊಂದು ಮಳೆಯಿಂದ ರದ್ದುಗೊಂಡಿತ್ತು.

ಇದನ್ನೂ ಓದಿ IND vs SL: ಭಾರತ-ಲಂಕಾ ನಡುವಣ ವಿಶ್ವಕಪ್​ ದಾಖಲೆಯೇ ಅತ್ಯಂತ ರೋಚಕ

ಹವಾಮಾನ ವರದಿ

ಪಂದ್ಯ ನಡೆಯುವ ನವೆಂಬರ್ 2ರಂದು ಮುಂಬಯಿಯಲ್ಲಿ ತಾಪಮಾನವು ಸುಮಾರು 29.3 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ ಮತ್ತು ತೇವಾಂಶವು ಶೇಕಡಾ 53 ರಷ್ಟಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನೆಯಲ್ಲಿ ತಿಳಿಸಿದೆ. ಅಲ್ಲದೆ ಪಂದ್ಯಕ್ಕೆ ಯಾವುದೇ ರೀತಿಉ ಮಳೆಯ ಭೀತಿ ಇಲ್ಲ ಎಂದಿದೆ. ಹೀಗಾಗಿ ಉಭಯ ತಂಡಗಳು ಮಳೆಯ ಚಿಂತೆಯಿಲ್ಲದೆ ಪಂದ್ಯವನ್ನಾಡಬಹುದು.

ಏಕದಿನ ಮುಖಾಮುಖಿ

ಉಭಯ ತಂಡಗಳು ಏಕದಿನ ಕ್ರಿಕೆಟ್​ನಲ್ಲಿ ಇದುವರೆಗೆ ಒಟ್ಟು 167 ಪಂದ್ಯಗಳಲ್ಲಿ ಸೆಣಸಾಡಿವೆ. ಇದರಲ್ಲಿ ಭಾರತ 98 ಪಂದ್ಯಗಳನ್ನು ಗೆದ್ದಿವೆ. ಶ್ರೀಲಂಕಾ 57 ಪಂದ್ಯಗಳಲ್ಲಿ ಗೆಲುವು ಕಂಡಿದೆ. 11 ಪಂದ್ಯಗಳು ಟೈನಲ್ಲಿ ಅಂತ್ಯ ಕಂಡಿದೆ. 1 ಪಂದ್ಯ ರದ್ದು ಗೊಂಡಿದೆ. ಇನ್ನು ತವರಿನಲ್ಲಿ ಭಾರತ 39 ಪಂದ್ಯಗಳನ್ನು ಗೆದ್ದರೆ, ಲಂಕಾ 28 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಸಂಭಾವ್ಯ ತಂಡ

ಶ್ರೀಲಂಕಾ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಏಂಜೆಲೊ ಮ್ಯಾಥ್ಯೂಸ್, ಮಹೀಶ್ ತೀಕ್ಷಣ, ಕಸುನ್ ರಜಿತ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ.

ಭಾರತ: ರೋಹಿತ್ ಶರ್ಮಾ​, ಶುಭಮನ್​ ಗಲ್​, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಸೂರ್ಯಕುಮಾರ್ ಯಾದವ್​, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲ್​ದೀಪ್​ ಯಾದವ್, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್​.

Exit mobile version