Site icon Vistara News

India vs Sri Lanka Final: ಸಿರಾಜ್​ ಘಾತಕ ಬೌಲಿಂಗ್​ ದಾಳಿಗೆ ಲಾಗ ಹಾಕಿದ ಲಂಕಾ ಆಟಗಾರರು

The smile of a champion - Mohammed Siraj picked up five wickets in a ten-ball period

ಕೊಲಂಬೊ: ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾಕಪ್(India vs Sri Lanka Final) 2023 ಫೈನಲ್‌ನಲ್ಲಿ ಭಾರತದ ವೇಗಿ ಮೊಹಮ್ಮದ್ ಸಿರಾಜ್(Mohammed Siraj) ಶ್ರೀಲಂಕಾ ವಿರುದ್ಧ ಘಾತಕ ಐದು ಎಸೆತಗಳ ಅಂತರದಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ದಾಖಲೆ ಬರೆದಿದ್ದಾರೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಶ್ರೀಲಂಕಾಗೆ ಮೊದಲ ಓವರ್​ನಲ್ಲಿಯೇ ಜಸ್​ಪ್ರೀತ್​ ಬುಮ್ರಾ ಆಘಾತವಿಕ್ಕಿದರು. ಕುಸಲ್​ ಪೆರೆರಾ ಖಾತೆ ತೆಗೆಯುವ ಮುನ್ನವೇ ಪೆವಿಲಿಯನ್​ಗೆ ಅಟ್ಟಿದರು. ಮುಂದಿನದ್ದು ಸಿರಾಜ್​ ಅವರ ದರ್ಬಾರ್​. ಒಂದೇ ಓವರ್​ನಲ್ಲಿ 4 ವಿಕೆಟ್​ ಕೆಡವಿದರು. ಇಲ್ಲಿಗೆ ಸುಮ್ಮನಾಗದ ಅವರು ಮುಂದಿನ ಓವರ್​ನಲ್ಲಿಯೂ ಒಂದು ವಿಕೆಟ್​ ಕಿತ್ತು ಮಿಂಚಿದರು. ಸಿರಾಜ್ ಅವರ ಬೆಂಕಿ ಎಸೆತಕ್ಕೆ ಯಾವ ರೀತಿ ಬ್ಯಾಟ್​ ಬೀಸಬೇಕೆಂದೇ ಲಂಕಾ ಆಟಗಾರರಿಗೆ ತಿಳಿಯದೇ ಹೋಯಿತು.

ಸಿರಾಜ್ ಮೊದಲು ಪಾತುಮ್ ನಿಸ್ಸಾಂಕಾ ಅವರ ವಿಕೆಟ್ ಕಿತ್ತರು. ಬಳಿಕ​ ಚರಿತ ಅಸಲಂಕಾ, ಸದೀರ ಸಮರವಿಕ್ರಮ ಮತ್ತು ಧನಂಜಯ ಡಿ ಸಿಲ್ವಾ ಅವರ ವಿಕೆಟ್‌ಗಳನ್ನು ಕಿತ್ತರು. ಶ್ರೀಲಂಕಾ ನಾಲ್ಕು ಓವರ್‌ಗಳಲ್ಲಿ 12 ರನ್​ಗೆ ಐದು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಘಾತಕ ಬೌಲಿಂಗ್​ ನಡೆಸಿದ ಸಿರಾಜ್​ ಕೇವಲ 16 ಎಸೆತಗಳಲ್ಲಿ ಐದು ವಿಕೆಟ್​ ಉರುಳಿಸಿ ಚಾಮಿಂಡ ವಾಸ್​ ಅವರ ದಾಖಲೆಯನ್ನು ಮೀರಿ ನಿಂತರು. ಇದಲ್ಲದೆ ತಂಡದ 10 ಓವರ್​ಗೂ ಮುನ್ನ 5 ವಿಕೆಟ್​ ಕಿತ್ತ ಮೊದಲ ಭಾರತೀಯ ಬೌಲರ್​ ಎನಿಸಿಕೊಂಡರು. ಇದಕ್ಕೂ ಮುನ್ನ ಜಾವಗಲ್​ ಶ್ರೀನಾಥ್​ ಅವರು 2003 ರಲ್ಲಿ 4 ವಿಕೆಟ್​ ಕಿತ್ತದ್ದು ಭಾರತೀಯ ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಸಿರಾಜ್​ ಮುರಿದಿದ್ದಾರೆ.

ಏಷ್ಯಾಕಪ್​ನಲ್ಲಿ ದಾಖಲೆ

ಏಷ್ಯಾ ಕಪ್​ನ ಏಕದಿನ ಮಾದರಿಯಲ್ಲಿ ಅತಿ ಕಡಿಮೆ ರನ್​ ನೀಡಿ 6 ವಿಕೆಟ್ ಪಡೆದ ಲಂಕಾದ ಅಜಂತ ಮೆಂಡೀಸ್​ ಅವರ ದಾಖಲೆಯನ್ನು ಸಿರಾಜ್​ ಸರಿಗಟ್ಟಿದರು. ಮೆಂಡೀಸ್​ 2008ರಲ್ಲಿ 13 ರನ್​ಗೆ 6 ವಿಕೆಟ್​ ಕಡೆವಿದ್ದರು. ಇದು ಈವರೆಗಿನ ಏಷ್ಯಾಕಪ್​ ದಾಖಲೆಯಾಗಿತ್ತು. ಈಗ ಈ ದಾಖಲೆಯನ್ನು ಸಿರಾಜ್​ ಸರಿಗಟ್ಟಿದ್ದಾರೆ. ಸಿರಾಜ್​ ಕೂಡ 13 ರನ್​ಗೆ 6 ಕಿತ್ತರು.

ಇದನ್ನೂ ಓದಿ India vs Sri Lanka Final: ರಾತ್ರಿ ಕೊಲಂಬೊ ತಲುಪಿದ ಸುಂದರ್​; ಮಧ್ಯಾಹ್ನ ಫೈನಲ್ ಪಂದ್ಯಕ್ಕೆ ಹಾಜರ್​​

ಬಾಂಗ್ಲಾದೇಶ ವಿರುದ್ಧದ ಅಂತಿಮ ಸೂಪರ್​​ 4 ಪಂದ್ಯದಲ್ಲಿ ಗಾಯಕೊಂಡು ಏಷ್ಯಾಕಪ್(Asia Cup 2023)​ ಟೂರ್ನಿಯಿಂದ ಹೊರಬಿದ್ದ ಅಕ್ಷರ್​ ಪಟೇಲ್(Axar Patel)​ ಸ್ಥಾನಕ್ಕೆ ವಾಷಿಂಗ್ಟನ್​ ಸುಂದರ್​ ಅವರು ಆಯ್ಕೆಯಾಗಿದ್ದರು. ಅಚ್ಚರಿ ಎಂದರೆ ಅವರು ಲಂಕಾಗೆ ತಲುಪಿದ್ದೇ ನಿನ್ನೆ ರಾತ್ರಿ. ಆದರೆ ಮಧ್ಯಾಹ್ನ ಫೈನಲ್​ ಪಂದ್ಯದಲ್ಲಿ(India vs Sri Lanka Final)ಆಡುವ ಅವಕಾಶವನ್ನು ಪಡೆದರು.

ನಿರೀಕ್ಷೆಯಂತೆ ಭಾರತ ಪಂದ್ಯಕ್ಕೆ 6 ಬದಲಾವಣೆ ಮಾಡಿತು. ಬಾಂಗ್ಲಾದೇಶ ವಿರುದ್ಧದ ಔಪಚಾರಿಕ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ವಿರಾಟ್​ ಕೊಹ್ಲಿ, ಉಪನಾಯಕ ಹಾರ್ದಿಕ್​ ಪಾಂಡ್ಯ, ವೇಗಿಗಳಾದ ಜಸ್​ಪ್ರೀತ್​ ಬುಮ್ರಾ, ಮೊಮ್ಮದ್​ ಸಿರಾಜ್​ ಮತ್ತು ಸ್ಪಿನ್ನರ್​ ಕುಲ್​ದೀಪ್​ ಯಾದವ್​ ಮತ್ತೆ ತಂಡ ಸೇರಿಕೊಂಡಿದ್ದಾರೆ. ಹೀಗಾಗಿ ಇವರ ಸ್ಥಾನದಲ್ಲಿ ಆಡಿದ್ದ ಆಟಗಾರರು ಈ ಪಂದ್ಯದಿಂದ ಹೊರಗುಳಿದರು. ಅಕ್ಷರ್​ ಬದಲು ವಾಷಿಂಗ್ಟನ್​ ಸುಂದರ್​ ಆಡಲಿಳಿದರು.

Exit mobile version