Site icon Vistara News

IND vs SL: ‘ಲಂಕಾ ದಹನ’ ಮಾಡಿ ಸೆಮಿಫೈನಲ್​ ಪ್ರವೇಶಿಸಲಿ ಟೀಮ್​ ಇಂಡಿಯಾ

Virat Kohli and Shubman Gill share a light moment during India's practice session

ಮುಂಬಯಿ: ದುರ್ಬಲ ಶ್ರೀಲಂಕಾ(India vs Sri Lanka) ತಂಡವನ್ನು ಬಗ್ಗುಬಡಿಯಲು ಸಿದ್ಧತೆ ನಡೆಸಿರುವ ರೋಹಿತ್​ ಶರ್ಮ ಪಡೆ, ಮುಂಬಯಿಯ ವಾಂಖೆಡೆ ಸ್ಟೇಡಿಯಂನಲ್ಲಿ(Wankhede Stadium, Mumbai) ತನ್ನ ಸಾಮರ್ಥ್ಯ ತೋರಲು ಕಾತರವಾಗಿದೆ. ನಾಯಕ ರೋಹಿತ್​ ಅವರಿಗೆ ಇದು ತವರಿನ ಪಂದ್ಯವಾದ್ದರಿಂದ ಅವರು ಸಿಡಿಯುವ ನಿರೀಕ್ಷೆ ಇದೆ.

ಉಭಯ ತಂಡಗಳು ತಲಾ ಆರು ಪಂದ್ಯಗಳನ್ನು ಆಡಿದ್ದು, ಭಾರತ 12 ಅಂಕದೊಂದಿಗೆ ಸದ್ಯ ಅಗ್ರಸ್ಥಾನದಲ್ಲಿದೆ. ಒಂದೊಮ್ಮೆ ಕಿವೀಸ್​ ವಿರುದ್ಧ ದಕ್ಷಿಣ ಆಫ್ರಿಕಾ ಗೆದ್ದರೆ ರನ್​ ರೇಟ್​ ಆಧಾರದಲ್ಲಿ ಅಗ್ರಸ್ಥಾನಕ್ಕೇರಲಿದೆ. ಆಗ ಭಾರತ ದ್ವಿತೀಯ ಸ್ಥಾನಕ್ಕೆ ಕುಸಿಯಲಿದೆ. ಆದರೆ ಗುರುವಾರ ಲಂಕಾ ವಿರುದ್ಧ ಗೆದ್ದರೆ ನೇರವಾಗಿ ಸೆಮಿಫೈನಲ್​ ಪ್ರವೇಶಿಸಲಿದೆ.

ಇದನ್ನೂ ಓದಿ IND vs SL: ಭಾರತ-ಲಂಕಾ ನಡುವಣ ವಿಶ್ವಕಪ್​ ದಾಖಲೆಯೇ ಅತ್ಯಂತ ರೋಚಕ

ಲಂಕಾ ಸಾಮಾನ್ಯ ತಂಡ

ಲಂಕಾ ತಂಡ ಭಾರತಕ್ಕೆ ಹೋಲಿಸಿದರೆ ಸಾಮಾನ್ಯ ತಂಡವಾಗಿದೆ. ಆಲ್‌ರೌಂಡರ್‌ ಏಂಜೆಲೋ ಮ್ಯಾಥ್ಯೂಸ್‌ ಹೊರತುಪಡಿಸಿ ಉಳಿದವರು ಬಹುತೇಕ ಹೊಸಮುಖಗಳೇ. ಅಷ್ಟಾಗಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಇವರಿಗಿಲ್ಲ. ಹೀಗಾಗಿ ಏಂಜೆಲೋ ಮ್ಯಾಥ್ಯೂಸ್‌ ಅವರೇ ಮುಂದೆ ನಿಂತು ಯುವ ಆಟಗಾರರಿಗೆ ಸಲಹೆ ನೀಡಬೇಕಿದೆ.

ಇದೇ ಮೈದಾನದಲ್ಲಿ ಫೈನಲ್​ ಮುಖಾಮುಖಿ

2011ರ ವಿಶ್ವಕಪ್​ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಇದೇ ಮೈದಾನದಲ್ಲಿ ಮುಖಾಮುಖಿಯಾಗಿತ್ತು. ಹೀಗಾಗಿ ಈ ಸೋಲಿಗೆ ಲಂಕಾ ಇದೀಗ 12 ವರ್ಷಗಳ ಬಳಿಕ ಸೇಡು ತಿರಿಸಿಕೊಂಡೀತೇ? ಎನ್ನುವುದು ಪಂದ್ಯದ ಕುತೂಹಲ. ಜತೆಗೆ ಏಷ್ಯಾಕಪ್​ ಫೈನಲ್​ ಸೋಲಿಗೂ ಲಂಕಾ ಇಲ್ಲಿ ಸೇಡು ತೀರಿಸುವ ಪಣತೊಟ್ಟಿದೆ. ಆದರೆ ಸದ್ಯದ ಭಾರತ ತಂಡದ ಪ್ರದರ್ಶನ ನೋಡುವಾಗ ಕಷ್ಟ ಎನ್ನುವಂತಿದ್ದರೂ ಕ್ರಿಕೆಟ್​ನಲ್ಲಿ ಏನು ಬೇಕಾದರೂ ಸಂಭವಿಸಬಹುದು ಎಂಬ ಮಾತನ್ನು ಕೂಡ ಇಲ್ಲ ನೆನಪಿಸಿಕೊಳ್ಳಬೇಕು.

ಇದನ್ನೂ ಓದಿ IND vs SL: ಇಂಡೋ-ಲಂಕಾ ಪಂದ್ಯದ ಪಿಚ್​ ರಿಪೋರ್ಟ್​, ಸಂಭಾವ್ಯ ತಂಡಗಳು ಹೀಗಿದೆ

ಬದಲಾವಣೆ ಕಷ್ಟ

ಪಾದದ ಗಾಯಕ್ಕೆ ತುತ್ತಾದ ಹಾರ್ದಿಕ್ ಪಾಂಡ್ಯ ಅವರು ಟೀಮ್​ ಇಂಡಿಯಾ ಸೇರಿದ್ದರೂ ಈ ಪಂದ್ಯದಲ್ಲಿ ಆಡುವುದು ಅನುಮಾನ. ಹೀಗಾಗಿ ಸೂರ್ಯಕುಮಾರ್​ ಯಾದವ್​ ಅವರು ಆಡುವುದು ಖಚಿತ. ಕಳೆದ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಸೂರ್ಯ 49 ರನ್​ ಬಾರಿಸಿ ತಂಡಕ್ಕೆ ಆಸರೆಯಾಗಿದ್ದರು. ಹೀಗಾಗಿ ತಂಡದಲ್ಲಿ ಯಾವುದೇ ಬದಲಾವಣೆ ಕಷ್ಟ ಸಾಧ್ಯ. ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಈ ಪಂದ್ಯದಲ್ಲಿಯೂ ಆಡಲಿಳಿಯಬಹುದು. ಸೂರ್ಯಕುಮಾರ್​ಗೂ ಇದು ತವರಿನ ಪಂದ್ಯವಾಗಿದೆ. ಹೀಗಾಗಿ ಅವರು ಕೂಡ ಸಿಡಿಯುವ ಸಾಧ್ಯತೆ ಅಧಿಕವಾಗಿದೆ.

ಘಾತಕ ಬೌಲಿಂಗ್​ ದಾಳಿ ನಡೆಸಿ ವಿಕೆಟ್​ಗಳ ಭೇಟೆಯಾಡುತ್ತಿರುವ ಅನುಭವಿ ಮೊಹಮ್ಮದ್​ ಶಮಿ ಮತ್ತು ಜಸ್​ಪ್ರೀತ್​ ಬುಮ್ರಾ ಮೇಲೆ ಈ ಪಂದ್ಯದಲ್ಲಿಯೂ ತಮಡ ಹೆಚಚಿನ ನಿರೀಕ್ಷೆ ಇರಿಸಿದೆ. ಆದರೆ ಈ ಹಿಂದೆ ವಿಕೆಟ್​ ಟೇಕರ್​ ಆಗಿದ್ದ ಮೊಹಮ್ಮದ್​ ಸಿರಾಜ್​ ಅವರು ಈಗ ವಿಕೆಟ್​ ಕೀಳುವಲ್ಲಿ ವಿಫಲರಾಗುತ್ತಿದ್ದಾರೆ. ಜತೆಗೆ ರನ್​ ಕೂಡ ಬಿಟ್ಟುಕೊಡುತ್ತಿದ್ದಾರೆ. ಹೀಗಾಗಿ ಅವರು ತಮ್ಮ ಎಸೆತಗಳಿಗೆ ಕೊಂಚ ಸಾಣೆ ಹಿಡಿಯುವ ಅಗತ್ಯವಿದೆ.

ಮಳೆಯ ಭೀತಿ ಇಲ್ಲ

ಪಂದ್ಯ ನಡೆಯುವ ನವೆಂಬರ್ 2ರಂದು ಮುಂಬಯಿಯಲ್ಲಿ ತಾಪಮಾನವು ಸುಮಾರು 29.3 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ ಮತ್ತು ತೇವಾಂಶವು ಶೇಕಡಾ 53 ರಷ್ಟಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನೆಯಲ್ಲಿ ತಿಳಿಸಿದೆ. ಅಲ್ಲದೆ ಪಂದ್ಯಕ್ಕೆ ಯಾವುದೇ ರೀತಿಉ ಮಳೆಯ ಭೀತಿ ಇಲ್ಲ ಎಂದಿದೆ. ಹೀಗಾಗಿ ಉಭಯ ತಂಡಗಳು ಮಳೆಯ ಚಿಂತೆಯಿಲ್ಲದೆ ಪಂದ್ಯವನ್ನಾಡಬಹುದು.

ಸಂಭಾವ್ಯ ತಂಡ

ಭಾರತ: ರೋಹಿತ್ ಶರ್ಮಾ​, ಶುಭಮನ್​ ಗಲ್​, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಸೂರ್ಯಕುಮಾರ್ ಯಾದವ್​, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲ್​ದೀಪ್​ ಯಾದವ್, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್​.

ಶ್ರೀಲಂಕಾ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಏಂಜೆಲೊ ಮ್ಯಾಥ್ಯೂಸ್, ಮಹೀಶ್ ತೀಕ್ಷಣ, ಕಸುನ್ ರಜಿತ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ.

Exit mobile version