ತಿರುವನಂತಪುರ: ಸರಣಿ ಕ್ಲೀನ್ ಸ್ವೀಪ್ ಗೈಯುವ ಗುರಿಯೊಂದಿಗೆ ಆಡಲಿಳಿದ ಭಾರತ ತಂಡ ಶ್ರೀಲಂಕಾ(IND VS SL) ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ಲಂಕಾ ಮೊದಲು ಬೌಲಿಂಗ್ ನಡೆಸಲಿದೆ.
ಭಾರತ ಈ ಪಂದ್ಯಕ್ಕೆ ಎರಡು ಬದಲಾವಣೆ ಮಾಡಿದೆ. ಹಾರ್ದಿಕ್ ಪಾಂಡ್ಯ ಮತ್ತು ಉಮ್ರಾನ್ ಮುಲಿಕ್ಗೆ ವಿಶ್ರಾಂತಿ ನೀಡಲಾಗಿದೆ. ಅವರ ಸ್ಥಾನಕ್ಕೆ ವಾಷಿಂಗ್ಟನ್ ಸುಂದರ್ ಹಾಗೂ ಸೂರ್ಯಕುಮಾರ್ ಯಾದವ್ ಅವಕಾಶ ಪಡೆದರು. ಲಂಕಾ ತಂಡದಲ್ಲಿಯೂ ಎರಡು ಬದಲಾವಣೆ ಸಂಭವಿಸಿತು. ದುನಿತ್ ವೆಲ್ಲಲಗೆ ಮತ್ತು ಧನಂಜಯ ಡಿ ಸಿಲ್ವ ಬದಲಿಗೆ ಅಶೆನ್ ಬಂಡಾರ, ಜೆಫ್ರಿ ವಾಂಡರ್ಸೆ ಅವಕಾಶ ಪಡೆದರು.
ತಿರುವನಂತಪುರದ ಗ್ರೀನ್ಫೀಲ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಭಾರತ ಭರ್ಜರಿ ಪ್ರದರ್ಶನ ತೋರುವ ಮೂಲಕ ಮುಂದಿನ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಗೆ ಸಿದ್ಧತೆ ನಡೆಸುವ ಯೋಜನೆಯಲ್ಲಿದೆ. ಅತ್ತ ಈಗಾಗಲೇ ಮೊದಲೆರಡು ಪಂದ್ಯಗಳಲ್ಲಿ ಸೋತಿರುವ ಶ್ರೀಲಂಕಾ ಅಂತಿಮ ಪಂದ್ಯದಲ್ಲಾದರೂ ಗೆದ್ದು ವೈಟ್ವಾಶ್ ಮುಖಭಂಗದಿಂದ ಪಾರಾಗುವ ಯೋಜನೆಯಲ್ಲಿದೆ.
ಗ್ರೀನ್ಫೀಲ್ಡ್ ಸ್ಟೇಡಿಯಂನ ಪಿಚ್ ಬೌಲಿಂಗ್ ಸ್ನೇಹಿಯಾಗಿದ್ದು ಇಲ್ಲಿ ಬೌಲರ್ಗಳು ಹಿಡಿತ ಸಾಧಿಸುವ ಸಾಧ್ಯತೆ ಹೆಚ್ಚು. ಜತೆಗೆ ಸ್ಟೇಡಿಯಂನ ಸಮೀಪದಲ್ಲೇ ಸಮುದ್ರವಿರುವ ಕಾರಣ ಗಾಳಿಯ ವೇಗ ಹೆಚ್ಚು ಇರಲಿದೆ. ಆದ್ದರಿಂದ ಬೌಲರ್ಗಳು ಹೆಚ್ಚಿನ ಸ್ವಿಂಗ್ ಮಾಡಬಲ್ಲರು. ಹೀಗಾಗಿ ಬ್ಯಾಟರ್ಗಳು ಎಚ್ಚರಿಕೆಯ ಆಟವಾಡಬೇಕಿದೆ.
ತಂಡಗಳು
ಭಾರತ: ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್, ಕೆ.ಎಲ್. ರಾಹುಲ್, ಕುಲ್ದೀಪ್ ಯಾದವ್ , ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ , ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್.
ಶ್ರೀಲಂಕಾ: ದಸುನ್ ಶನಕ (ನಾಯಕ), ಕುಸಾಲ್ ಮೆಂಡಿಸ್,ಆವಿಷ್ಕಾ ಫೆರ್ನಾಂಡೋ,ನುವಾನಿಡು ಫೆರ್ನಾಂಡೋ, ಚರಿತ್ ಅಸಲಂಕ, ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಕಸುನ್ ರಜಿತ, ಲಹಿರು ಕುಮಾರ, ಅಶೆನ್ ಬಂಡಾರ, ಜೆಫ್ರಿ ವಾಂಡರ್ಸೆ
ಇದನ್ನೂ ಓದಿ | Ravindra Jadeja | ಫಿಟ್ನೆಸ್ಗಾಗಿ ರಣಜಿ ಆಡಲು ಮುಂದಾದ ಆಲ್ರೌಂಡರ್ ರವೀಂದ್ರ ಜಡೇಜಾ!