Site icon Vistara News

IND vs SL: ಲಂಕಾ ವಿರುದ್ಧದ ಏಕದಿನ ಸರಣಿಗೆ ಶ್ರೇಯಸ್ ಅಯ್ಯರ್ ಆಯ್ಕೆ ಸಾಧ್ಯತೆ

IND vs SL

IND vs SL: Will Shreyas Iyer return for India's tour of Sri Lanka?

ಮುಂಬಯಿ: ರಣಜಿ ಆಡಲು ನಿರಾಕರಿಸಿ ಅಶಿಸ್ತು ತೋರಿದ ಕಾರಣದಿಂದ ಬಿಸಿಸಿಐ(BCCI) ವಾರ್ಷಿಕ ಗುತ್ತಿಗೆಯಿಂದ ಹೊರಬಿದ್ದಿರುವ ಶ್ರೇಯಸ್ ಅಯ್ಯರ್(Shreyas Iyer) ಅವರು ಶ್ರೀಲಂಕಾ(IND vs SL) ವಿರುದ್ದದ ಏಕದಿನ ಸರಣಿಗೆ ಆಯ್ಕೆಯಾಗಲಿದ್ದಾರೆ ಎಂದು ವರದಿಯಾಗಿದೆ. ಲಂಕಾ ಸರಣಿಗೆ ಇಂದು ಭಾರತ ತಂಡ ಪ್ರಕಟಗೊಳ್ಳುವ ಸಾಧ್ಯತೆ ಇದೆ.

ಶ್ರೇಯಸ್ ಅಯ್ಯರ್ ಇದೇ ವರ್ಷ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯ ವೇಳೆ ಬೆನ್ನು ನೋವಿನ ಗಾಯದಿಂದಾಗಿ ಕೊನೆಯ ಮೂರು ಟೆಸ್ಟ್​​ ಪಂದ್ಯಗಳಿಂದ ಹೊರಗುಳಿದಿದ್ದರು. ಇದಾದ ಬಳಿಕ ಫಿಟ್​ನೆಸ್​ ಕಂಡು ಕೊಳ್ಳುವ ಸಲುವಾಗಿ ಬಿಸಿಸಿಐ ಅಯ್ಯರ್​ಗೆ ದೇಶೀಯ ಕ್ರಿಕೆಟ್​ ಟೂರ್ನಿಯಾದ ರಣಜಿ ಆಡುವಂತೆ ಸಲಹೆ ನೀಡಿತ್ತು. ಆದರೆ, ಅಯ್ಯರ್​ ಇದನ್ನು ಕಡೆಗಣಿಸಿದ್ದರು. ಇದೇ ಕಾರಣಕ್ಕೆ ಬಿಸಿಸಿಐ ಅವರನ್ನು ವಾರ್ಷಿಕ ಗುತ್ತಿಗೆಯಿಂದ ಕೈಬಿಟ್ಟಿತ್ತು. ಅಲ್ಲದೆ ಯಾವುದೇ ಸರಣಿಗೂ ಅವರನ್ನು ಆಯ್ಕೆ ಮಾಡಿರಲಿಲ್ಲ. ಇದೀಗ ಗಂಭೀರ್​ ಅವರ ಮನವಿಯಂತೆ ಅಯ್ಯರ್​ ಮತ್ತೆ ತಂಡ ಸೇರಲಿದ್ದಾರೆ ಎನ್ನಾಗಿದೆ. ಗಂಭೀರ್ ಅವರು ಮೆಂಟರ್ ಆಗಿದ್ದ ಕೆಕೆಆರ್ ತಂಡದಲ್ಲಿ ಶ್ರೇಯಸ್ ಅವರು ನಾಯಕರಾಗಿದ್ದರು ಎನ್ನುವುದು ಗಮನಾರ್ಹ. ಅಯ್ಯರ್​ ಸಾರಥ್ಯದಲ್ಲಿ ಈ ಬಾರಿಯ ಐಪಿಎಲ್​ನಲ್ಲಿ ಕೆಕೆಆರ್​ ಪ್ರಶಸ್ತಿ ಗೆದ್ದು ಬೀಗಿತ್ತು. ಈ ಯಶಸ್ಸು ಕೂಡ ಅವರನ್ನು ಮತ್ತೆ ತಂಡ ಸೇರುವಂತೆ ಮಾಡಲಿದೆ.

ಬಿಸಿಸಿಐ ಕೇಂದ್ರ ಗುತ್ತಿಗೆಯಿಂದ ಕೈಬಿಟ್ಟಾಗದ ಪ್ರತಿಕ್ರಿಯೆ ನೀಡಿದ್ದ ಅಯ್ಯರ್​, ಏಕ ದಿನ ವಿಶ್ವಕಪ್​ನಲ್ಲಿ ಅದ್ಭುತವಾಗಿ ಆಡಿದ್ದೆ. ಅದರ ನಂತರ ವಿರಾಮ ತೆಗೆದುಕೊಳ್ಳಲು ಬಯಸಿದ್ದೆ. ನನ್ನ ಫಿಟ್ನೆಸ್​ಗಾಗಿ ಕೆಲಸ ಮಾಡಲು ಮತ್ತು ಕೆಲವು ವಿಚಾರಗಳ ಬಗ್ಗೆ ಚೈತನ್ಯ ಪಡೆಯಲು ಬಯಸಿದ್ದೆ. ಸಂವಹನದ ಕೊರತೆಯಿಂದಾಗಿ, ಕೆಲವು ನಿರ್ಧಾರಗಳು ನನ್ನ ಪರವಾಗಿ ಆಗಲಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ IND vs SL: ಶ್ರೀಲಂಕಾ ಪ್ರವಾಸಕ್ಕೆ ಇಂದು ಭಾರತ ತಂಡ ಪ್ರಕಟ ಸಾಧ್ಯತೆ: ಯಾರಿಗೆಲ್ಲ ಸಿಗಲಿದೆ ಅವಕಾಶ?

“ಕ್ರಿಕೆಟ್​ ಬ್ಯಾಟ್ ನನಗೆ ಸೇರಿದ್ದು. ಉತ್ತಮ ಪ್ರದರ್ಶನ ನೀಡುವುದು ಮತ್ತು ಟ್ರೋಫಿಗಳನ್ನು ಗೆಲ್ಲುವುದು ನನ್ನ ಮೇಲಿನ ಜವಾಬ್ದಾರಿ ಎಂದು ನಾನು ಅರಿತುಕೊಂಡೆ. ಐಪಿಎಲ್ ಗೆದ್ದ ನಂತರ ಹಿಂದೆ ನಡೆದಿರುವ ಘಟನೆಗಳಿಗೆ ಸೂಕ್ತ ಉತ್ತರ ಎಂದು ನಾನು ನಿರ್ಧರಿಸಿದೆ. ಅದೃಷ್ಟವಶಾತ್ ಎಲ್ಲವೂ ಪೂರಕವಾಗಿ ನಡೆಯಿತು. ನಡೆದಿರುವ ಎಲ್ಲ ಘಟನೆಗಳಿಗೆ ನಾನು ಅಭಾರಿಯಾಗಿದ್ದೇನೆ” ಎಂದು ಶ್ರೇಯಸ್​ ಹೇಳಿದ್ದರು.

ಏಕದಿನಕ್ಕೆ ರಾಹುಲ್​ ನಾಯಕ

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ರೋಹಿತ್‌ ಶರ್ಮ ಅಲಭ್ಯರಾಗಲಿರುವ ಕಾರಣ, ಕೆ.ಎಲ್​ ರಾಹುಲ್ ಅವರನ್ನು ಹಂಗಾಮಿ ನಾಯಕರನ್ನಾಗಿ ನೇಮಿಸಲು ಬಿಸಿಸಿಐ ನಿರ್ಧರಿಸಿದೆ. 027ರ ಏಕದಿನ ವಿಶ್ವಕಪ್‌ ಗಮನದಲ್ಲಿಟ್ಟುಕೊಂಡು ಹೊಸ ನಾಯಕನನ್ನು ಬೆಳೆಸಲು ಪ್ರಧಾನ ಕೋಚ್‌ ಗೌತಮ್‌ ಗಂಭೀರ್‌ ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ರಾಹುಲ್​ಗೆ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ.

Exit mobile version