IND vs SL: ಲಂಕಾ ವಿರುದ್ಧದ ಏಕದಿನ ಸರಣಿಗೆ ಶ್ರೇಯಸ್ ಅಯ್ಯರ್ ಆಯ್ಕೆ ಸಾಧ್ಯತೆ - Vistara News

ಕ್ರೀಡೆ

IND vs SL: ಲಂಕಾ ವಿರುದ್ಧದ ಏಕದಿನ ಸರಣಿಗೆ ಶ್ರೇಯಸ್ ಅಯ್ಯರ್ ಆಯ್ಕೆ ಸಾಧ್ಯತೆ

IND vs SL: ಅಯ್ಯರ್​ ಸಾರಥ್ಯದಲ್ಲಿ ಈ ಬಾರಿಯ ಐಪಿಎಲ್​ನಲ್ಲಿ ಕೆಕೆಆರ್​ ಪ್ರಶಸ್ತಿ ಗೆದ್ದು ಬೀಗಿತ್ತು. ಈ ಯಶಸ್ಸು ಕೂಡ ಅವರನ್ನು ಮತ್ತೆ ತಂಡ ಸೇರುವಂತೆ ಮಾಡಲಿದೆ.

VISTARANEWS.COM


on

IND vs SL
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ರಣಜಿ ಆಡಲು ನಿರಾಕರಿಸಿ ಅಶಿಸ್ತು ತೋರಿದ ಕಾರಣದಿಂದ ಬಿಸಿಸಿಐ(BCCI) ವಾರ್ಷಿಕ ಗುತ್ತಿಗೆಯಿಂದ ಹೊರಬಿದ್ದಿರುವ ಶ್ರೇಯಸ್ ಅಯ್ಯರ್(Shreyas Iyer) ಅವರು ಶ್ರೀಲಂಕಾ(IND vs SL) ವಿರುದ್ದದ ಏಕದಿನ ಸರಣಿಗೆ ಆಯ್ಕೆಯಾಗಲಿದ್ದಾರೆ ಎಂದು ವರದಿಯಾಗಿದೆ. ಲಂಕಾ ಸರಣಿಗೆ ಇಂದು ಭಾರತ ತಂಡ ಪ್ರಕಟಗೊಳ್ಳುವ ಸಾಧ್ಯತೆ ಇದೆ.

ಶ್ರೇಯಸ್ ಅಯ್ಯರ್ ಇದೇ ವರ್ಷ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯ ವೇಳೆ ಬೆನ್ನು ನೋವಿನ ಗಾಯದಿಂದಾಗಿ ಕೊನೆಯ ಮೂರು ಟೆಸ್ಟ್​​ ಪಂದ್ಯಗಳಿಂದ ಹೊರಗುಳಿದಿದ್ದರು. ಇದಾದ ಬಳಿಕ ಫಿಟ್​ನೆಸ್​ ಕಂಡು ಕೊಳ್ಳುವ ಸಲುವಾಗಿ ಬಿಸಿಸಿಐ ಅಯ್ಯರ್​ಗೆ ದೇಶೀಯ ಕ್ರಿಕೆಟ್​ ಟೂರ್ನಿಯಾದ ರಣಜಿ ಆಡುವಂತೆ ಸಲಹೆ ನೀಡಿತ್ತು. ಆದರೆ, ಅಯ್ಯರ್​ ಇದನ್ನು ಕಡೆಗಣಿಸಿದ್ದರು. ಇದೇ ಕಾರಣಕ್ಕೆ ಬಿಸಿಸಿಐ ಅವರನ್ನು ವಾರ್ಷಿಕ ಗುತ್ತಿಗೆಯಿಂದ ಕೈಬಿಟ್ಟಿತ್ತು. ಅಲ್ಲದೆ ಯಾವುದೇ ಸರಣಿಗೂ ಅವರನ್ನು ಆಯ್ಕೆ ಮಾಡಿರಲಿಲ್ಲ. ಇದೀಗ ಗಂಭೀರ್​ ಅವರ ಮನವಿಯಂತೆ ಅಯ್ಯರ್​ ಮತ್ತೆ ತಂಡ ಸೇರಲಿದ್ದಾರೆ ಎನ್ನಾಗಿದೆ. ಗಂಭೀರ್ ಅವರು ಮೆಂಟರ್ ಆಗಿದ್ದ ಕೆಕೆಆರ್ ತಂಡದಲ್ಲಿ ಶ್ರೇಯಸ್ ಅವರು ನಾಯಕರಾಗಿದ್ದರು ಎನ್ನುವುದು ಗಮನಾರ್ಹ. ಅಯ್ಯರ್​ ಸಾರಥ್ಯದಲ್ಲಿ ಈ ಬಾರಿಯ ಐಪಿಎಲ್​ನಲ್ಲಿ ಕೆಕೆಆರ್​ ಪ್ರಶಸ್ತಿ ಗೆದ್ದು ಬೀಗಿತ್ತು. ಈ ಯಶಸ್ಸು ಕೂಡ ಅವರನ್ನು ಮತ್ತೆ ತಂಡ ಸೇರುವಂತೆ ಮಾಡಲಿದೆ.

ಬಿಸಿಸಿಐ ಕೇಂದ್ರ ಗುತ್ತಿಗೆಯಿಂದ ಕೈಬಿಟ್ಟಾಗದ ಪ್ರತಿಕ್ರಿಯೆ ನೀಡಿದ್ದ ಅಯ್ಯರ್​, ಏಕ ದಿನ ವಿಶ್ವಕಪ್​ನಲ್ಲಿ ಅದ್ಭುತವಾಗಿ ಆಡಿದ್ದೆ. ಅದರ ನಂತರ ವಿರಾಮ ತೆಗೆದುಕೊಳ್ಳಲು ಬಯಸಿದ್ದೆ. ನನ್ನ ಫಿಟ್ನೆಸ್​ಗಾಗಿ ಕೆಲಸ ಮಾಡಲು ಮತ್ತು ಕೆಲವು ವಿಚಾರಗಳ ಬಗ್ಗೆ ಚೈತನ್ಯ ಪಡೆಯಲು ಬಯಸಿದ್ದೆ. ಸಂವಹನದ ಕೊರತೆಯಿಂದಾಗಿ, ಕೆಲವು ನಿರ್ಧಾರಗಳು ನನ್ನ ಪರವಾಗಿ ಆಗಲಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ IND vs SL: ಶ್ರೀಲಂಕಾ ಪ್ರವಾಸಕ್ಕೆ ಇಂದು ಭಾರತ ತಂಡ ಪ್ರಕಟ ಸಾಧ್ಯತೆ: ಯಾರಿಗೆಲ್ಲ ಸಿಗಲಿದೆ ಅವಕಾಶ?

“ಕ್ರಿಕೆಟ್​ ಬ್ಯಾಟ್ ನನಗೆ ಸೇರಿದ್ದು. ಉತ್ತಮ ಪ್ರದರ್ಶನ ನೀಡುವುದು ಮತ್ತು ಟ್ರೋಫಿಗಳನ್ನು ಗೆಲ್ಲುವುದು ನನ್ನ ಮೇಲಿನ ಜವಾಬ್ದಾರಿ ಎಂದು ನಾನು ಅರಿತುಕೊಂಡೆ. ಐಪಿಎಲ್ ಗೆದ್ದ ನಂತರ ಹಿಂದೆ ನಡೆದಿರುವ ಘಟನೆಗಳಿಗೆ ಸೂಕ್ತ ಉತ್ತರ ಎಂದು ನಾನು ನಿರ್ಧರಿಸಿದೆ. ಅದೃಷ್ಟವಶಾತ್ ಎಲ್ಲವೂ ಪೂರಕವಾಗಿ ನಡೆಯಿತು. ನಡೆದಿರುವ ಎಲ್ಲ ಘಟನೆಗಳಿಗೆ ನಾನು ಅಭಾರಿಯಾಗಿದ್ದೇನೆ” ಎಂದು ಶ್ರೇಯಸ್​ ಹೇಳಿದ್ದರು.

ಏಕದಿನಕ್ಕೆ ರಾಹುಲ್​ ನಾಯಕ

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ರೋಹಿತ್‌ ಶರ್ಮ ಅಲಭ್ಯರಾಗಲಿರುವ ಕಾರಣ, ಕೆ.ಎಲ್​ ರಾಹುಲ್ ಅವರನ್ನು ಹಂಗಾಮಿ ನಾಯಕರನ್ನಾಗಿ ನೇಮಿಸಲು ಬಿಸಿಸಿಐ ನಿರ್ಧರಿಸಿದೆ. 027ರ ಏಕದಿನ ವಿಶ್ವಕಪ್‌ ಗಮನದಲ್ಲಿಟ್ಟುಕೊಂಡು ಹೊಸ ನಾಯಕನನ್ನು ಬೆಳೆಸಲು ಪ್ರಧಾನ ಕೋಚ್‌ ಗೌತಮ್‌ ಗಂಭೀರ್‌ ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ರಾಹುಲ್​ಗೆ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Dhammika Niroshana: ಶ್ರೀಲಂಕಾದ ಮಾಜಿ ಕ್ರಿಕೆಟಿಗನನ್ನು ಗುಂಡಿಕ್ಕಿ ಕೊಲೆಗೈದ ಅಪರಿಚಿತ ವ್ಯಕ್ತಿ

Dhammika Niroshana: ಸ್ಥಳೀಯ ಪೊಲೀಸರ ಮಾಹಿತಿ ಪ್ರಕಾರ, ನಿರೋಶನಾ ತಮ್ಮ ನಿವಾಸದಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಇದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

VISTARANEWS.COM


on

Dhammika Niroshana
Koo

ಕೊಲಂಬೊ: ಶ್ರೀಲಂಕಾ ತಂಡದ ಮಾಜಿ ಆಟಗಾರ, ಅಂಡರ್​-19 ತಂಡದ ನಾಯಕನಾಗಿದ್ದ ಧಮ್ಮಿಕಾ ನಿರೋಶನಾ(Dhammika Niroshana) (41) ಅವರನ್ನು ಮಂಗಳವಾರ ತಡರಾತ್ರಿ (ಜುಲೈ 16) ಅವರ ನಿವಾಸದಲ್ಲಿಯೇ ಗುಂಡಿಕ್ಕಿ ಕೊಲೆಗೈದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸ್ಥಳೀಯ ಪೊಲೀಸರ ಮಾಹಿತಿ ಪ್ರಕಾರ, ನಿರೋಶನಾ ತಮ್ಮ ನಿವಾಸದಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಇದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ತಲೆಮರೆಸಿಕೊಂಡಿರುವ ಶಂಕಿತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಕೊಲೆಗೆ ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಗಾಲೆ ಜಿಲ್ಲೆಯ ಸಣ್ಣ ಪಟ್ಟಣವಾದ ಅಂಬಲಂಗೋಡದಲ್ಲಿರುವ ನಿವಾಸದಲ್ಲಿ ಅವರ ಹತ್ಯೆ ಮಾಡಲಾಗಿದೆ.

ಬಲಗೈ ಮಧ್ಯಮ ವೇಗದ ಬೌಲರ್ ಆಗಿದ್ದ ನಿರೋಶನಾ 2001 ಮತ್ತು 2004 ರ ನಡುವೆ ಗಾಲೆ ಕ್ರಿಕೆಟ್ ಕ್ಲಬ್​ಗಾಗಿ 12 ಪ್ರಥಮ ದರ್ಜೆ ಪಂದ್ಯಗಳು ಮತ್ತು 8 ಲಿಸ್ಟ್ ‘ಎ’ ಪಂದ್ಯಗಳನ್ನು ಆಡಿದ್ದಾರೆ. ಪ್ರಥಮ ದರ್ಜೆಯಲ್ಲಿ 19, ಲಿಸ್ಟ್ ‘ಎ’ ಪಂದ್ಯಗಳಲ್ಲಿ 5 ವಿಕೆಟ್​ ಕಿತ್ತ ಸಾಧನೆ ಮಾಡಿದ್ದಾರೆ. ಶ್ರೀಲಂಕಾ ಅಂಡರ್-19 ತಂಡದ ನಾಯಕನಾಗಿ ಎರಡು ವರ್ಷಗಳ ಕಾಲ ಟೆಸ್ಟ್ ಮತ್ತು ಏಕದಿನ ತಂಡವನ್ನು ಮುನ್ನಡೆಸಿದ್ದರು.

Continue Reading

ಕ್ರೀಡೆ

The Olympic Games: 72ರ ಇಳಿ ವಯಸ್ಸಿನಲ್ಲೂ ಒಲಿಂಪಿಕ್ಸ್​ ಪದಕ ಗೆದ್ದಿದ್ದ ಶೂಟರ್‌; ಯಾರಿವರು?

The Olympic Games: ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳುವ ಹಿರಿಯ ಅಥ್ಲೀಟ್ ಯಾರೆಂದರೆ, ಕಾರ್ಲ್ ಹೆಸ್ಟರ್. ಇಂಗ್ಲೆಂಡ್​ನ ಈಕ್ವೆಸ್ಟ್ರಿಯನ್‌ ಆಗಿರುವ ಅವರಿಗೆ 57 ವರ್ಷ. ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಜಯಿಸಿದ್ದರು.

VISTARANEWS.COM


on

The Olympic Games
Koo

ಬೆಂಗಳೂರು: ಕ್ರೀಡಾಭಿಮಾನಿಗಳು ಕಾದು ಕುಳಿತಿರುವ ಪ್ಯಾರಿಸ್​ ಒಲಿಂಪಿಕ್ಸ್(Paris Olympics 2024)​ ಕ್ರೀಡಾಕೂಟ ಆರಂಭಕ್ಕೆ ಇನ್ನು ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಉಳಿದಿವೆ. ಈಗಾಗಲೇ ಒಲಿಂಪಿಕ್ಸ್(The Olympic Games)​ ಕುರಿತ ಹಲವು ಸಾರಸ್ಯಕರ ಸಂಗತಿಗಳ ಕಿರಿ ಅವಲೋಕನ ಮಾಡಲಾಗಿದೆ. ಇದೀಗ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಅತ್ಯಂತ ಹಿರಿಯ ಆ್ಯತ್ಲೀಟ್‌ ಯಾರು?, ಅವರ ಸಾಧನೆ ಏನು? ಎಂಬ ವರದಿ ಇಲ್ಲಿದೆ.

ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಅತ್ಯಂತ ಹಿರಿಯ ಆ್ಯತ್ಲೀಟ್‌ ಎಂಬ ಹೆಗ್ಗಳಿಕೆ ಸ್ವೀಡನ್‌ನ ಶೂಟರ್‌ ಆಸ್ಕರ್‌ ಸ್ವಾನ್‌ ಹೆಸರಿನಲ್ಲಿದೆ. 1920ರಲ್ಲಿ(1920 Summer Olympics) ಆಂಟ್ವರ್ಪ್​ನಲ್ಲಿ(Antwerp 1920) ನಡೆದಿದ ಟೂರ್ನಿಯ ಶೂಟಿಂಗ್‌ನಲ್ಲಿ ಸ್ಪರ್ಧಿಸಿದಾಗ ಅವರಿಗೆ 72 ವರ್ಷ 281 ದಿನವಾಗಿತ್ತು. ಅಚ್ಚರಿ ಎಂದರೆ ಇಳಿ ವಯಸ್ಸಿನಲ್ಲೂ ಆಸ್ಕರ್‌ ಸ್ವಾನ್‌(Oscar Swahn) ಇಲ್ಲಿ ಬೆಳ್ಳಿ ಪದಕ ಗೆದ್ದು ಬೀಗಿದ್ದರು. ಜತೆಗೆ ಒಲಿಂಪಿಕ್ಸ್‌ ಇತಿಹಾಸದಲ್ಲಿ ಪದಕ ಗೆದ್ದ ಹಿರಿಯ ಕ್ರೀಡಾಪಟು ಎನ್ನುವ ಐತಿಹಾಸಿಕ ಸಾಧನೆ ಮಾಡಿದ್ದರು. ಒಟ್ಟಾರೆಯಾಗಿ ಇವರು ಒಲಿಂಪಿಕ್ಸ್ ವೃತ್ತಿ ಜೀವನದಲ್ಲಿ 6​ ಪದಕ ಜಯಿಸಿದ್ದಾರೆ. ಇದರಲ್ಲಿ 3 ಚಿನ್ನದ ಪದಕ ಒಳಗೊಂಡಿದೆ.


ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಹಿರಿಯ ಮಹಿಳಾ ಆ್ಯತ್ಲೀಟ್‌ ಇಂಗ್ಲೆಂಡ್‌ನ‌ ಹಿಲ್ಡಾ ಲೊರ್ನಾ ಜಾನ್‌ಸ್ಟನ್‌. 1972ರ ಮ್ಯೂನಿಚ್‌ ಗೇಮ್ಸ್​ನಲ್ಲಿ ಜಾನ್‌ಸ್ಟನ್‌ 70ರ ವಯಸ್ಸಿನಲ್ಲಿ ಈಕ್ವೆಸ್ಟ್ರಿಯನ್‌ನಲ್ಲಿ ಪಾಲ್ಗೊಂಡಿದ್ದರು. ಅಮೆರಿಕದ ಲಿಡ ಪೇಟನ್‌ ಎಲಿಜಾ 1904ರಲ್ಲಿ 63ನೇ ವಯಸ್ಸಿನಲ್ಲಿ ಆರ್ಚರಿಯಲ್ಲಿ ಚಿನ್ನ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಹಿರಿಯ ಮಹಿಳಾ ಕ್ರೀಡಾಪಟು ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ Olympics On Television: ಒಲಿಂಪಿಕ್ಸ್​ ಕ್ರೀಡಾಕೂಟ ಮೊದಲ ಬಾರಿಗೆ ಟಿವಿಯಲ್ಲಿ ಪ್ರಸಾರ ಕಂಡಿದ್ದು ಯಾವಾಗ?

ಈ ಬಾರಿಯ ಹಿರಿಯ ಆ್ಯತ್ಲೀಟ್‌ ಯಾರು?


ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳುವ ಹಿರಿಯ ಆ್ಯತ್ಲೀಟ್‌ ಯಾರೆಂದರೆ, ಕಾರ್ಲ್ ಹೆಸ್ಟರ್. ಇಂಗ್ಲೆಂಡ್​ನ ಈಕ್ವೆಸ್ಟ್ರಿಯನ್‌ ಆಗಿರುವ ಅವರಿಗೆ 57 ವರ್ಷ. ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಜಯಿಸಿದ್ದರು. ಈ ಬಾರಿಯೂ ಪದಕ ಗೆಲ್ಲುವು ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನ ಸ್ಪರ್ಧಾ ಪಟ್ಟಿಯಲ್ಲಿರುವ ಕ್ರೀಡೆಗಳು ಯಾವುವು? ಇವುಗಳಲ್ಲಿ ಅತ್ಯಂತ ಪ್ರಾಚೀನ ಕ್ರೀಡೆಗಳು ಯಾವುದೆಲ್ಲ?

ಒಲಿಂಪಿಕ್ಸ್‌ 5 ರಿಂಗ್​ಗಳ ಮಹತ್ವವೇನು?

5 ಖಂಡಗಳನ್ನು ಪ್ರತಿನಿಧಿಸುವ 5 ರಿಂಗ್‌ಗಳುಳ್ಳ ಒಲಿಂಪಿಕ್ಸ್‌ ಧ್ವಜವನ್ನು 1913ರಲ್ಲಿ ಆಧುನಿಕ ಒಲಿಂಪಿಕ್ಸ್‌ ಪಿತಾಮಹ ಫ್ರಾನ್ಸ್‌ನ ಪಿಯರ್‌ ಡಿ ಕೌಬರ್ಟಿನ್‌ ವಿನ್ಯಾಸಗೊಳಿಸಿದರು. ಈ ಬಾರಿಯ ಒಲಿಂಪಿಕ್ಸ್​ ಕೂಡ ಫ್ರಾನ್ಸ್​ನಲ್ಲಿಯೇ ನಡೆಯುತ್ತಿರುವುದು ವಿಶೇಷ. ಈ ಒಲಿಂಪಿಕ್ಸ್‌ ಧ್ವಜ 1920ರ ಬೆಲ್ಜಿಯಂನ ಅಂಟ್ವೆರ್ಪ್​ನಲ್ಲಿ ಮೊದಲ ಬಾರಿ ಅಧಿಕೃತವಾಗಿ ಹಾರಾಡಿಸಲಾಯಿತು. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಪ್ರತಿ ದೇಶದ ರಾಷ್ಟ್ರಧ್ವಜವೂ ಈ ರಿಂಗ್‌ಗಳ ಒಂದಾದರೂ ಬಣ್ಣವನ್ನು ಒಳಗೊಂಡಿರುವುದು ಈ ರಿಂಗ್​ನ ವಿಶೇಷತೆ.

ವೈವಿಧ್ಯಮಯ ಭಾಷೆ, ಸಂಸ್ಕೃತಿ, ಹವಾಮಾನ, ಆರ್ಥಿಕತೆ, ಆಹಾರ ಪದ್ಧತಿ ಮತ್ತು ಮೈಬಣ್ಣದ ಜನರೆಲ್ಲ ಒಂದಾಗಿ ಸೇರುವ ವಿಶ್ವದ ಅತಿದೊಡ್ಡ ವೇದಿಕೆ ಒಲಿಂಪಿಕ್ಸ್ ಕ್ರೀಡಾಕೂಟವಾಗಿದೆ. ಹಲವು ವೈವಿಧ್ಯಗಳ ನಡುವೆಯೂ ಒಲಿಂಪಿಕ್ಸ್ ಏಕತೆಯನ್ನು ಸಾರುವುದು ಈ ಕ್ರೀಡಾಕೂಟದ ವಿಶೇಷತೆ.

Continue Reading

ಕ್ರೀಡೆ

Suryakumar Yadav: ಹಾರ್ದಿಕ್​ ಕೈಬಿಟ್ಟು ಸೂರ್ಯಕುಮಾರ್​ಗೆ ಟಿ20 ನಾಯಕತ್ವ ನೀಡಲು ಬಿಸಿಸಿಐ ಮುಂದಾಗಿದ್ದೇಕೆ?

Suryakumar Yadav: ಸೂರ್ಯಕುಮಾರ್‌ ಯಾದವ್‌ ಹೆಗಲಿಗೆ ನಾಯಕತ್ವ ನೀಡಲು ಬಿಸಿಸಿಐ ಅಧಿಕಾರಿಗಳು ಒಮ್ಮತದ ಒಪ್ಪಿಗೆ ನೀಡಿದ್ದು, ನೂತನ ಕೋಚ್​ ಗೌತಮ್​ ಗಂಭೀರ್​ ಕೂಡ ಸಮ್ಮತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾರ್ದಿಕ್‌ರನ್ನು ನಾಯಕನನ್ನಾಗಿ ನೇಮಿಸಲು ಗಂಭೀರ್‌ಗೂ ಮನಸಿಲ್ಲ ಎಂದು ಹೇಳಲಾಗುತ್ತಿದೆ.

VISTARANEWS.COM


on

Suryakumar Yadav
Koo

ಮುಂಬಯಿ: ರೋಹಿತ್‌ ಶರ್ಮ ಅವರು ಟಿ20 ಕ್ರಿಕೆಟ್​ಗೆ ನಿವೃತ್ತಿ ಹೇಳಿದ ಕಾರಣ ಭಾರತ ಟಿ20(T20I captain) ತಂಡಕ್ಕೆ ನೂತನ ನಾಯಕ ಆಯ್ಕೆಯಾಗಬೇಕಿದೆ. ಕಳೆದ ಒಂದು ವರ್ಷಗಳಿಂದ ರೋಹಿತ್​ ಬಳಿಕ ಹಾರ್ದಿಕ್‌ ಪಾಂಡ್ಯರನ್ನೇ(Hardik Pandya) ಭವಿಷ್ಯದ ನಾಯಕ ಎಂದು ಬಿಂಬಿಸಲಾಗಿತ್ತು. ಆದರೆ, ಇದೀಗ ಬಿಸಿಸಿಐ(BCCI) ಪಾಂಡ್ಯಗೆ ನಾಯಕತ್ವ ನೀಡಲು ಹಿಂದೇಟು ಹಾಕಿದ್ದು, ಸೂರ್ಯಕುಮಾರ್​ ಯಾದವ್​ಗೆ(Suryakumar Yadav) ನಾಯಕತ್ವ ನೀಡಲು ಮುಂದಾಗಿದೆ ಎಂದು ವರದಿಯಾಗಿದೆ.

ಹೌದು, ಪಾಂಡ್ಯ ಅವರಿಗೆ ನಾಯಕತ್ವ ನೀಡದಿರಲು ಪ್ರಮುಖ ಕಾರಣ ಅವರ ಫಿಟ್ನೆಸ್‌ ಸಮಸ್ಯೆ. ಪಾಂಡ್ಯ ತಮ್ಮ 8 ವರ್ಷಗಳ ಕ್ರಿಕೆಟ್​ ವೃತ್ತಿಬದುಕಿನಲ್ಲಿ ಹಲವು ಬಾರಿ ಗಾಯದ ಸಮಸ್ಯೆಗೆ ತುತ್ತಾಗಿ ತಂಡದಿಂದ ಹೊರಗುಳಿದಿದ್ದರು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಪದೇಪದೆ ಗಾಯಕ್ಕೆ ತುತ್ತಾಗುವ ಕಾರಣ ಪಾಂಡ್ಯ ನೇಮಕಕ್ಕೆ ಬಿಸಿಸಿಐನ ಕೆಲ ಪ್ರಮುಖ ಅಧಿಕಾರಿಗಳು ಹಾಗೂ ಆಯ್ಕೆ ಸಮಿತಿಯ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸೂರ್ಯಕುಮಾರ್‌ ಯಾದವ್‌ ಹೆಗಲಿಗೆ ನಾಯಕತ್ವ ನೀಡಲು ಬಿಸಿಸಿಐ ಅಧಿಕಾರಿಗಳು ಒಮ್ಮತದ ಒಪ್ಪಿಗೆ ನೀಡಿದ್ದು, ನೂತನ ಕೋಚ್​ ಗೌತಮ್​ ಗಂಭೀರ್​ ಕೂಡ ಸಮ್ಮತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾರ್ದಿಕ್‌ರನ್ನು ನಾಯಕನನ್ನಾಗಿ ನೇಮಿಸಲು ಗಂಭೀರ್‌ಗೂ ಮನಸಿಲ್ಲ ಎಂದು ಹೇಳಲಾಗುತ್ತಿದೆ.

ಸೂರ್ಯಕುಮಾರ್‌ ಯಾದವ್​ ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿ ಸರಣಿ ಗೆದ್ದಿದ್ದರು. ಸೂರ್ಯಕುಮಾರ್ ಯಾದವ್ ಕಾರ್ಯವೈಖರಿ ಬಗ್ಗೆಯೂ ಬಿಸಿಸಿಐ ಹಾಗೂ ಆಯ್ಕೆ ಸಮಿತಿಗೆ ಸಮಾಧಾನವಿದ್ದು, ಅವರನ್ನೇ ನಾಯಕನನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಶ್ರೀಲಂಕಾ ವಿರುದ್ಧದ ಸರಣಿಗೂ ಮುನ್ನ ಮುಂದಿನ ಟಿ20 ತಂಡದ ನಾಯಕ ಯಾರೆಂಬುದು ಖಚಿತಗೊಳ್ಳಲಿದೆ.

ಇದನ್ನೂ ಓದಿ KL Rahul: ಮುಂದಿನ ವರ್ಷ ಆರ್​ಸಿಬಿ ಪರ ಆಡಲಿದ್ದಾರೆ ಕೆ.ಎಲ್​ ರಾಹುಲ್​; ಪೋಸ್ಟರ್ ವೈರಲ್

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ರೋಹಿತ್‌ ಶರ್ಮ ಅಲಭ್ಯರಾಗಲಿರುವ ಕಾರಣ, ಕೆ.ಎಲ್​ ರಾಹುಲ್ ಅವರನ್ನು ಹಂಗಾಮಿ ನಾಯಕರನ್ನಾಗಿ ನೇಮಿಸಲು ಬಿಸಿಸಿಐ ನಿರ್ಧರಿಸಿದೆ. 027ರ ಏಕದಿನ ವಿಶ್ವಕಪ್‌ ಗಮನದಲ್ಲಿಟ್ಟುಕೊಂಡು ಹೊಸ ನಾಯಕನನ್ನು ಬೆಳೆಸಲು ಪ್ರಧಾನ ಕೋಚ್‌ ಗೌತಮ್‌ ಗಂಭೀರ್‌ ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ರಾಹುಲ್​ಗೆ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ. ಗಂಭೀರ್ ಅವರು ಮೆಂಟರ್ ಆಗಿದ್ದ ಲಕ್ನೋ ತಂಡದಲ್ಲಿ ರಾಹುಲ್​ ಅವರು ನಾಯಕರಾಗಿದ್ದರು ಎನ್ನುವುದು ಗಮನಾರ್ಹ.

Continue Reading

ಕ್ರೀಡೆ

Ravindra Jadeja: ವಿಶ್ವಕಪ್​ ಟ್ರೋಫಿಯೊಂದಿಗೆ ತಾಯಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಜಡೇಜಾ

Ravindra Jadeja: ಜಡೇಜಾ 17 ವರ್ಷ ಇರುವಾಗ ಅವರ ತಾಯಿ 2005 ರಲ್ಲಿ ನಿಧನರಾಗಿದ್ದರು. ತಾಯಿಯ ನಿಧನದ ವೇಳೆ ಜಡೇಜಾ ಭಾರತ U19 ತಂಡದ ಭಾಗವಾಗಿದ್ದರು

VISTARANEWS.COM


on

Ravindra Jadeja
Koo

ಅಹಮದಾಬಾದ್​: ಭಾರತ ತಂಡದ ಸ್ಟಾರ್​ ಆಲ್‌ರೌಂಡರ್ ರವೀಂದ್ರ ಜಡೇಜಾ(Ravindra Jadeja) ಅವರು ತಮ್ಮ ತಾಯಿಗೆ ವಿಶೇಷವಾಗಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇತ್ತೀಚೆಗೆ ಗೆದ್ದ ಟಿ20 ವಿಶ್ವಕಪ್ 2024ರ ಟ್ರೋಫಿಯೊಂದಿಗೆ ತಾಯಿಯ ಜತೆ ನಿಂತಿರುವ ಪೆನ್ಸಿಲ್​ ಆರ್ಟ್​ ರೇಖಾಚಿತ್ರವನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ತಾಯಿಯನ್ನು ಸ್ಮರಿಸಿದ್ದಾರೆ.

ಜಡೇಜಾ 17 ವರ್ಷ ಇರುವಾಗ ಅವರ ತಾಯಿ 2005 ರಲ್ಲಿ ನಿಧನರಾಗಿದ್ದರು. ತಾಯಿಯ ನಿಧನದ ವೇಳೆ ಜಡೇಜಾ ಭಾರತ U19 ತಂಡದ ಭಾಗವಾಗಿದ್ದರು. ಜಡೇಜಾ ತಮ್ಮ ಇನ್​ಸ್ಟಾಗ್ರಾ ಖಾತೆಯಲ್ಲಿ ಹೃದಯಸ್ಪರ್ಶಿ ಪೋಸ್ಟ್ ಮೂಲಕ ತಮ್ಮ ತಾಯಿಯನ್ನು ನೆನಪಿಸಿಕೊಂಡಿದ್ದಾರೆ. “ನಾನು ಮೈದಾನದಲ್ಲಿ ಏನು ಮಾಡುತ್ತಿದ್ದರೂ ಅದು ನಿನಗಾಗಿ ಮಾತ್ರ” ಎಂದು ಬರೆದಿದ್ದಾರೆ.

ಜೂನ್​ 29ರಂದು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳಿಂದ ಜಯ ಸಾಧಿಸಿ ಎರಡನೇ ಬಾರಿ ಟಿ20 ವಿಶ್ವಕಪ್ ಟ್ರೋಫಿಯನ್ನು ಪ್ರಶಸ್ತಿ ಮುಡಿಗೇರಿಸಿಕೊಂಡ ಮರುದಿನ ಜಡೇಜಾ ಟಿ 20 ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಣೆ ಮಾಡಿದ್ದರು.

ಇದನ್ನೂ ಓದಿ Ravindra Jadeja : ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಆಲ್​ರೌಂಡರ್​ ರವೀಂದ್ರ ಜಡೇಜಾ ವಿದಾಯ

“ಧನ್ಯವಾದ ತುಂಬಿದ ಹೃದಯದಿಂದ ನಾನು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳುತ್ತೇನೆ. ಹೆಮ್ಮೆಯಿಂದ ಓಡುವ ದೃಢವಾದ ಕುದುರೆಯಂತೆ, ನಾನು ಯಾವಾಗಲೂ ನನ್ನ ದೇಶಕ್ಕಾಗಿ ನನ್ನ ಅತ್ಯುತ್ತಮವಾದದ್ದನ್ನು ನೀಡಿದ್ದೇನೆ ಮತ್ತು ಇತರ ಸ್ವರೂಪಗಳಲ್ಲಿ ಅದನ್ನು ಮುಂದುವರಿಸುತ್ತೇನೆ. ಟಿ 20 ವಿಶ್ವಕಪ್ ಗೆಲ್ಲುವ ನನ್ನ ಕನಸು ನನಸಾಯಿತು. ನೆನಪುಗಳು, ಹರ್ಷೋದ್ಗಾರಗಳು ಮತ್ತು ಅಚಲವಾದ ಬೆಂಬಲಕ್ಕಾಗಿ ಧನ್ಯವಾದಗಳು” ಎಂದು ಹೇಳುವ ಮೂಲಕ ನಿವೃತ್ತಿ ಪ್ರಕಟಿಸಿದ್ದರು.

ಸ್ಪಿನ್-ಬೌಲಿಂಗ್ ಆಲ್ರೌಂಡರ್ ಎಂಎಸ್ ಧೋನಿ ನಾಯಕತ್ವದಲ್ಲಿ ತಂಡಕ್ಕೆ ಕಾಲಿಟ್ಟಿದ್ದರು. ಅಲ್ಲಿಂದ ಸಾಕಷ್ಟು ಸಾಧನೆ ಮಾಡಿದ್ದಾರೆ. ಆದರೆ ಇತ್ತೀಚೆಗೆ ಮುಕ್ತಾಯಗೊಂಡ ಪಂದ್ಯಾವಳಿಯಲ್ಲಿ ಅವರು ಹೆಚ್ಚು ಪ್ರಭಾವಶಾಲಿ ಪ್ರದರ್ಶನ ನೀಡಿರಲಿಲ್ಲ. 2009ರಲ್ಲಿ ಶ್ರೀಲಂಕಾ ವಿರುದ್ಧ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಅವರು 74 ಪಂದ್ಯಗಳನ್ನು ಆಡಿದ್ದು, 515 ರನ್ ಹಾಗೂ 54 ವಿಕೆಟ್ ಪಡೆದಿದ್ದಾರೆ.

ಜಡೇಜಾ ಅವರ ಅತ್ಯಂತ ಗಮನಾರ್ಹ ಲಕ್ಷಣವೆಂದರೆ ಅವರ ಫೀಲ್ಡಿಂಗ್. ಸುರೇಶ್ ರೈನಾ ಮತ್ತು ಯುವರಾಜ್ ಸಿಂಗ್ ಅವರಂತಹ ಆಟಗಾರರನ್ನು ನಾವು ಹೊಂದಿದ್ದ ಸಮಯದಲ್ಲಿ ಸೌರಾಷ್ಟ್ರದ ಆಟಗಾರ ತಮ್ಮ ವೃತ್ತಿಜೀವನದುದ್ದಕ್ಕೂ ಅನೇಕ ಸಂದರ್ಭಗಳಲ್ಲಿ ಉತ್ತಮ ಫೀಲ್ಡಿಂಗ್ ಮಾಡಿದ್ದಾರೆ. ಅವರು ಎದುರಾಳಿ ತಂಡಕ್ಕೆ 20 ರನ್​ಗಳನ್ನು ಫೀಲ್ಡಿಂಗ್​ನಲ್ಲಿ ಬಿಟ್ಟುಕೊಡುತ್ತಿರಲಿಲ್ಲ. ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರರು ನಿಯೋಜಿತ ಆಲ್​ರೌಂಡರ್​ಗಳಾಗಿ ತಂಡ ಸೇರಿಕೊಂಡಿದ್ದಾರೆ. ಹೀಗಾಗಿ ಜಡೇಜಾ ಈಗ ಏಕದಿನ ಮತ್ತು ಟೆಸ್ಟ್ ಸ್ವರೂಪಗಳತ್ತ ಗಮನ ಹರಿಸಿದ್ದಾರೆ.

Continue Reading
Advertisement
Dhammika Niroshana
ಕ್ರೀಡೆ1 min ago

Dhammika Niroshana: ಶ್ರೀಲಂಕಾದ ಮಾಜಿ ಕ್ರಿಕೆಟಿಗನನ್ನು ಗುಂಡಿಕ್ಕಿ ಕೊಲೆಗೈದ ಅಪರಿಚಿತ ವ್ಯಕ್ತಿ

Urfi Javed Steps Out Drunk For Third Time In A Month
ವೈರಲ್ ನ್ಯೂಸ್38 mins ago

Urfi Javed: ಮತ್ತೆ ಕುಡಿದು ತೇಲಾಡಿದ ಉರ್ಫಿ ಜಾವೇದ್; ವಿಡಿಯೊ ವೈರಲ್‌!

NMMS scholarship
ಕರ್ನಾಟಕ1 hour ago

NMMS Scholarship: ಎನ್‌ಎಂಎಂಎಸ್‌ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ; ಕೊನೆಯ ದಿನಾಂಕ ಯಾವಾಗ, ಅರ್ಜಿ ಸಲ್ಲಿಕೆ ಹೇಗೆ?

The Olympic Games
ಕ್ರೀಡೆ1 hour ago

The Olympic Games: 72ರ ಇಳಿ ವಯಸ್ಸಿನಲ್ಲೂ ಒಲಿಂಪಿಕ್ಸ್​ ಪದಕ ಗೆದ್ದಿದ್ದ ಶೂಟರ್‌; ಯಾರಿವರು?

jobs for kannadigas cm siddaramaiah
ಪ್ರಮುಖ ಸುದ್ದಿ1 hour ago

CM Siddaramaiah: ಖಾಸಗಿ ಕೈಗಾರಿಕೆಗಳ ಶೇ.100 ಉದ್ಯೋಗ ಕನ್ನಡಿಗರಿಗೆ: ಸಿದ್ದರಾಮಯ್ಯ ಕ್ಯಾಬಿನೆಟ್‌ ನಿರ್ಣಯ

Valmiki Corporation Scam
ಕರ್ನಾಟಕ1 hour ago

Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಮಾಜಿ ಸಚಿವ ನಾಗೇಂದ್ರ ಪತ್ನಿಯನ್ನು ವಶಕ್ಕೆ ಪಡೆದ ಇಡಿ

Niveditha Gowda new reels with brother
ಸ್ಯಾಂಡಲ್ ವುಡ್2 hours ago

Niveditha Gowda: ನಾನೇನು ಬಾತ್‌ರೂಮ್‌ ಸಿಂಗರ್‌ ಅಲ್ಲ! ಚಂದನ್‌ ಶೆಟ್ಟಿಗೆ ಟಾಂಗ್‌ ಕೊಟ್ರಾ ನಿವೇದಿತಾ ಗೌಡ?

Gold Rate Today
ಚಿನ್ನದ ದರ2 hours ago

Gold Rate Today: ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ; ಇಂದಿನ ದರ ಇಷ್ಟಿದೆ

IND vs SL
ಕ್ರೀಡೆ2 hours ago

IND vs SL: ಲಂಕಾ ವಿರುದ್ಧದ ಏಕದಿನ ಸರಣಿಗೆ ಶ್ರೇಯಸ್ ಅಯ್ಯರ್ ಆಯ್ಕೆ ಸಾಧ್ಯತೆ

gt world mall 2
ಪ್ರಮುಖ ಸುದ್ದಿ2 hours ago

GT World Mall: ಅನ್ನದಾತನಿಗೆ ಅವಮಾನ ಮಾಡಿದ ಜಿಟಿ ಮಾಲ್‌ ಮುಂದೆ ಪಂಚೆ ಉಟ್ಟು ಪ್ರತಿಭಟನೆ, ಕ್ಷಮೆ ಕೇಳಿದ ಮಾಲೀಕ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ2 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ2 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ2 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ3 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ3 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ3 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ4 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌