ಪೋರ್ಟ್ ಆಫ್ ಸ್ಪೇನ್: ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ನಲ್ಲಿ ಪೆವಿಲಿಯನ್ ಪರೇಡ್ ನಡೆಸಿ 150ರ ಗಡಿ ದಾಟಲು ವಿಫಲವಾಗಿದ್ದ ವಿಂಡೀಸ್ ಬ್ಯಾಟರ್‌ಗಳು 2ನೇ ಟೆಸ್ಟ್‌ನಲ್ಲಿ(IND vs WI) ತಿರುಗಿ ಬಿದ್ದಿದ್ದಾರೆ. ಭಾರತದ 438 ರನ್‌ಗೆ ಉತ್ತರವಾಗಿ ಮೂರನೇ ದಿನದಾಟದಂತ್ಯದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 229 ರನ್ ಬಾರಿಸಿ ಪ್ರತಿ ಹೋರಾಟ ನಡೆಸುತ್ತಿದೆ. ಸದ್ಯ ಭಾರತದ ಮೊತ್ತವನ್ನು ಮೀರಿಸಲು ವಿಂಡೀಸ್ಗೆ ಇನ್ನು 209 ರನ್‌ಗಳ ಅಗತ್ಯವಿದೆ. ಮೂರನೇ ದಿನದಾಟದಲ್ಲಿ ಉಪನಾಯಕ ಅಜಿಂಕ್ಯ ರಹಾನೆ ಹಿಡಿದ ಕ್ಯಾಚ್(Ajinkya Rahane Catch)ನ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರ(viral video) ಆಗಿದೆ.
ಸ್ಲಿಪ್ನಲ್ಲಿ ನಿಂತಿದ್ದ ಅಜಿಂಕ್ಯ ರಹಾನೆ ಕಣ್ಣು ಮಿಟುಕಿಸುವಷ್ಟರಲ್ಲಿ ಒಂದೇ ಕೈಯಲ್ಲಿ ಕ್ಯಾಚ್ ಹಿಡಿದಿದ್ದು ಎಲ್ಲರನ್ನೂ ದಂಗಾಗಿಸಿದರು. ರವೀಂದ್ರ ಜಡೇಜಾ ಅವರ ಓವರನ್ನ ಮೂರನೇ ಎಸೆತದಲ್ಲಿ ಈ ಘಟನೆ ಸಂಭವಿಸಿದೆ. ಜಡೇಜಾ ಎಸೆತಕ್ಕೆ ಜರ್ಮೈನ್ ಬ್ಲಾಕ್ವುಡ್ ಡಿಫೆನ್ಸ್ ಮಾಡಲು ಯತ್ನಿಸಿದರು. ಆದರೆ ಚೆಂಡು ಬ್ಯಾಟ್ನ ಸೈಡ್ಗೆ ಬಡಿದು ಹಿಂದೆ ಸಾಗಿತು. ಫಸ್ಟ್ ಸ್ಲಿಪ್ನಲ್ಲಿದ್ದ ರಹಾನೆ ಜಿಂಕೆಯಂತೆ ಜಿಗಿದು ಈ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು. ರಹಾನೆ ಹಿಡಿದ ಕ್ಯಾಚ್ನ ವಿಡಿಯೊವನ್ನು ಹಂಚಿಕೊಮಡಿರುವ ಅನೇಕ ನೆಟ್ಟಿಗರು. ಅಬ್ಬಾ… ಕ್ವಿಕ್ ಸ್ಟಾರ್ಟ್, ಕ್ರಿಕೆಟ್ ಇತಿಹಾಸದಲ್ಲೇ ಇದು ಅಜಿಂಕ್ಯ ಹಿಡಿದ ಅದ್ಭುತ ಕ್ಯಾಚ್ ಎಂದು ಹೇಳಿದ್ದಾರೆ.
ಇದನ್ನೂ ಓದಿ INDvsWI: ಟೆಸ್ಟ್ ತಂಡಕ್ಕೆ ಅಜಿಂಕ್ಯ ರಹಾನೆ ನಾಯಕ; ರೋಹಿತ್ಗೆ ಕೊಕ್ ಸಾಧ್ಯತೆ
Good sharp catch from Rahane 👏👏👏 pic.twitter.com/NNA1D0e7Bo
— Raja 🇮🇳 (@Raja15975) July 22, 2023
ವಿಂಡೀಸ್ ಒಂದು ವಿಕೆಟಿಗೆ 86 ರನ್ ಮಾಡಿದಲ್ಲಿಂದ ಶನಿವಾರದ ಆಟ ಮುಂದುವರಿಸಿತ್ತು. ನಾಯಕ ಕ್ರೆಗ್ ಬ್ರಾತ್‌ವೇಟ್ (73) ಮತ್ತು ಕರ್ಕ್ ಮೆಕೆಂಝಿ(35) ಉತ್ತಮ ಆಟಗಾಡುವ ಮೂಲಕ ತಂಡಕ್ಕೆ ಆಸರೆಯಾದರು. 10.4 ಓವರ್ ಆಟ ಮುಗಿದ ಕೂಡಲೇ ಮಳೆ ಸುರಿದ ಕಾರಣ 1 ಗಂಟೆಗೂ ಹೆಚ್ಚು ಕಾಲ ಆಟ ಸ್ಥಗಿತಗೊಂಡಿತು. ಹೀಗಾಗಿ ನಿಗದಿತ ಸಮಯಕ್ಕೂ ಮೊದಲೇ ಅಂಪೈರ್‌ಗಳು ಭೋಜನ ವಿರಾಮ ಘೋಷಿಸಿದರು. ಕರ್ಕ್ ಮೆಕೆಂಝಿ ವಿಕೆಟ್ ಕಿತ್ತ ಮುಕೇಶ್ ಕುಮಾರ್ ಚೊಚ್ಚಲ ಪಂದ್ಯದಲ್ಲಿ ವಿಕೆಟ್ ಖಾತೆ ತೆರೆದರು. ಕ್ರೇಗ್ ಬ್ರಾಥ್‌ವೇಟ್ ವಿಕೆಟ್ ಅಶ್ವಿನ್ ಪಲಾಯಿತು.
ರಹಾನೆ ಫಿಲ್ಡಿಂಗ್ನಲ್ಲಿ ಮಿಂಚಿದರೂ ಬ್ಯಾಡಿಂಗ್ನಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಎರಡೂ ಇನಿಂಗ್ಸ್ನಲ್ಲಿ ಭಾರತ ತಂಡಕ್ಕೆ ಆಸೆಯಾಗಿದ್ದ ಅವರ ಮೇಲೆ ಈ ಪಂದ್ಯದಲ್ಲಿಯೂ ಹೆಚ್ಚಿನ ನಿರೀಕ್ಷೆ ಮಾಡಲಾಗಿತ್ತು. ಆದರೆ ಈ ನಿರೀಕ್ಷೆ ಹುಸಿಯಾಗಿದೆ. ದ್ವಿತೀಯ ಇನಿಂಗ್ಸ್ನಲ್ಲಾದರೂ ಉತ್ತಮ ಪ್ರದರ್ಶನ ತೋರಲಿದ್ದಾರಾ ಎಂದು ಕಾದು ನೋಡಬೇಕಿದೆ.