ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ(IND vs WI) ಟಿ20 ಸರಣಿಗೆ(West Indies tour) ಆಯ್ಕೆಯಾಗಿದ್ದ ವೇಗಿ ಆವೇಶ್ ಖಾನ್ (Avesh Khan)ಗಾಯದ ಸಮಸ್ಯೆಗೆ ಸಿಲುಕಿದ್ದಾರೆ. ಹೀಗಾಗಿ ಅವರು ಈ ಸರಣಿಯಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಪ್ರಸಕ್ತ ಸಾಲಿನ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ವೇಳೆ ಆವೇಶ್ ಖಾನ್ ಭುಜದ(Avesh Khan injured) ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ವರದಿಯೊಂದರ ಪ್ರಕಾರ ಅವರು ಪಂದ್ಯದ ಎರಡನೇ ದಿನ ಮೈದಾನಕ್ಕೆ ಇಳಿದಿಲ್ಲ ಎಂದು ತಿಳಿದುಬಂದಿದೆ.
ಪ್ರಮುಖ ಬೌಲರ್ಗಳ ಅನುಪಸ್ಥಿತಿಯಲ್ಲಿ ಆಡುವ ನಿರೀಕ್ಷೆಯಲ್ಲಿದ್ದ ಅವರಿಗೆ ಗಾಯದ ಸಮಸ್ಯೆ ಹಿನ್ನಡೆ ಉಂಟುಮಾಡಿದೆ. ಆದರೆ ಬಿಸಿಸಿಐ ಇದುವರೆಗೆ ಆವೇಶ್ ಆಡುವುದರ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಈ ಬಾರಿಯ ಐಪಿಎಲ್ನಲ್ಲಿ ನಿರೀಕ್ಷಿತ ಮಟ್ಟದ ಬೌಲಿಂಗ್ ಪ್ರದರ್ಶನ ತೋರದಿದ್ದರೂ ಅವರಿಗೆ ವಿಂಡೀಸ್ ಸರಣಿಯಲ್ಲಿ ಅವಕಾಶ ನೀಡಲಾಗಿತ್ತು. ಲಕ್ನೋ ಪರ ಆಡಿದ ಅವರು ಎಲ್ಲ ಪಂದ್ಯಗಳಲ್ಲಿಯೂ ಅತ್ಯಂತ ದುಬಾರಿಯಾಗಿ ಕಂಡುಬಂದಿದ್ದರು.
ಈ ಸರಣಿಗೆ ಹೊಸ ಮುಖಗಳಾಗಿ ಮುಂಬೈ ಇಂಡಿಯನ್ಸ್ ಪರ ಉತ್ತಮ ಬ್ಯಾಟಿಂಗ್ ತೋರ್ಪಡಿಸಿದ ಎಡಗೈ ಬ್ಯಾಟರ್ ತಿಲಕ್ ವರ್ಮಾ ಅವರು ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಕರೆಯನ್ನು ಪಡೆದಿದ್ದಾರೆ. ಇವರ ಜತೆಗೆ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಕೂಡ ಆಯ್ಕೆ ಆಗಿದ್ದಾರೆ. ಇವರು ಟೆಸ್ಟ್ ತಂಡದಲ್ಲಿಯೂ ಅವಕಾಶ ಪಡೆದಿದ್ದಾರೆ.
ಇದನ್ನೂ ಓದಿ IPL 2023: ಗೆಲುವಿನ ಆವೇಶದಲ್ಲಿ ನಿಯಮ ಉಲ್ಲಂಘಿಸಿದ ಆವೇಶ್ ಖಾನ್
ಭಾರತ ಟಿ20 ತಂಡ
ಇಶಾನ್ ಕಿಶನ್, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ(ನಾಯಕ), ಅಕ್ಷರ್ ಪಟೇಲ್, ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ರವಿ ಬಿಷ್ಟೋಯಿ, ಆರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್, ಆವೇಶ್ ಖಾನ್, ಮುಖೇಶ್ ಕುಮಾರ್.
ವೇಳಾಪಟ್ಟಿ
ಮೊದಲ ಟಿ20 ಪಂದ್ಯ ಆಗಸ್ಟ್ 3, ಸ್ಥಳ: ಟ್ರಿನಿಡಾಡ್
ದ್ವಿತೀಯ ಟಿ20 ಪಂದ್ಯ ಆಗಸ್ಟ್ 6, ಸ್ಥಳ: ಗಯಾನಾ
ಮೂರನೇ ಟಿ20 ಪಂದ್ಯ ಆಗಸ್ಟ್ 8, ಸ್ಥಳ: ಗಯಾನಾ
ನಾಲ್ಕನೇ ಟಿ20 ಪಂದ್ಯ ಆಗಸ್ಟ್ 12, ಸ್ಥಳ: ಫ್ಲೋರಿಡಾ
5ನೇ ಟಿ20 ಪಂದ್ಯ ಆಗಸ್ಟ್ 13, ಸ್ಥಳ: ಫ್ಲೋರಿಡಾ
ಕೆರಿಬಿಯನ್ ಪ್ರವಾಸದಲ್ಲಿ ಭಾರತ ತಂಡ 2 ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ಏರ್ಪಡಲಿದೆ. ಹೆಚ್ಚುವರಿಯಾಗಿ 2 ಟಿ20 ಪಂದ್ಯಗಳನ್ನು ಅಮೆರಿಕದಲ್ಲಿ ಆಡಲಾಗುವುದು. ಮೊದಲು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಪಂದ್ಯಗಳ ತಾಣ ರೊಸೇಯು (ಜುಲೈ 12-16) ಮತ್ತು ಪೋರ್ಟ್ ಆಫ್ ಸ್ಪೇನ್ (ಜುಲೈ. 20-24). ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್‌ಪಾರ್ಕ್ ಓವಲ್‌ನಲ್ಲಿ ನಡೆಯುವ 100ನೇ ಟೆಸ್ಟ್ ಪಂದ್ಯ ಇದೆಂಬುದು ವಿಂಡೀಸ್ ಕ್ರಿಕೆಟ್ ಪಾಲಿಗೆ ಸಂಭ್ರಮದ ಸಂಗತಿ. ಇದು ಭಾರತದ ಪಾಲಿಗೆ 3ನೇ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತದ ಮೊದಲ ಸರಣಿಯಾಗಲಿದೆ.