ಫ್ಲೋರಿಡಾ: ನಾಲ್ಕನೇ ಟಿ20 ಪಂದ್ಯವನ್ನು 9 ವಿಕೆಟ್ಗಳ ಅಂತರದಿಂದ ಗೆದ್ದ ಭಾರತ ಸರಣಿಯನ್ನು 2-2 ಸಮಬಲದ ಸಾಧಿಸಿದೆ. ಇದೀಗ ಇಂದು (ಭಾನುವಾರ) ನಡೆಯುವ ಅಂತಿಮ ಪಂದ್ಯದಲ್ಲಿ ಗೆದ್ದು ಸರಣಿ ಜಯ ಸಾಧಿಸಿವುದು ಹಾರ್ದಿಕ್ ಪಡೆಯ ಯೋಜನೆಯಾಗಿದೆ. ಅತ್ತ ವಿಂಡೀಸ್(West Indies vs India, 5th T20) ಕೂಡ ಈ ಪಂದ್ಯವನ್ನು ಹೇಗಾದರು ಗೆದ್ದು ಟೆಸ್ಟ್ ಮತ್ತು ಏಕದಿನ ಸರಣಿ ಸೋಲಿಗೆ ಸೇಡು ತೀರಿಸಲು ಕಾದು ಕುಳಿತಿದೆ. ಒಟ್ಟಾರೆ ಇತ್ತಂಡಗಳ ಈ ಹೋರಾಟ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿರುವ ಸಾಧ್ಯತೆ ಇದೆ. ಈ ಪಂದ್ಯದ ಪಿಚ್ ರಿಪೋರ್ಟ್(pitch report) ಮತ್ತು ಸಂಭಾವ್ಯ ತಂಡಗಳ ಮಾಹಿತಿ ಇಂತಿದೆ.
ಪಿಚ್ ರಿಪೋರ್ಟ್
ಯುಎಸ್‌ಎಯ ಫ್ಲೋರಿಡಾದ(Florida) ಲೌಡರ್‌ಹಿಲ್(Lauderhill Cricket Stadium) ಪಿಚ್ ಹೆಚ್ಚಾಗಿ ಮೊದಲು ಬ್ಯಾಟಿಂಗ್ ನಡೆಸಿದ ತಂಡಕ್ಕೆ ನೆರವು ನೀಡುತ್ತಿತ್ತು. ಇಲ್ಲಿ ಇದುವರೆಗೆ 14 ಟಿ20 ಪಂದ್ಯಗಳು ನಡೆದಿವೆ ಇದರಲ್ಲಿ 11 ಬಾರಿ ಮೊದಲು ಬ್ಯಾಟಿಂಗ್ ನಡೆಸಿದ ತಂಡ ಜಯ ಸಾಧಿಸಿತ್ತು. ಆದರೆ ಭಾರತ ತಂಡ ಈ ಅಂಕಿ ಅಂಶವನ್ನು ಮೀರಿ ನಿಂತಿತ್ತು. ಹೀಗಾಗಿ ಟಾಸ್ ಗೆದ್ದ ತಂಡ ಚೇಸಿಂಗ್ ನಡೆಸುವ ಸಾಧ್ಯತೆ ಅಧಿಕವಾಗಿದೆ. ವೇಗದ ಬೌಲಿಂಗ್ಗೆ ಹೆಚ್ಚಿನ ನೆರವು ನೀಡಲಿದೆ. ಇದಕ್ಕೆ ಕಳೆದ ಪಂದ್ಯವೇ ಉತ್ತಮ ಸಾಕ್ಷಿ ಸ್ಪಿನ್ ಬೌಲರ್ಗಳು ಸರಿಯಾಗಿ ದಂಡಿಸಿಕೊಂಡಿದ್ದರು. ಅಕ್ಷರ್ ಪಟೇಲ್ 4 ಓವರ್ಗೆ 39 ರನ್ ಬಿಟ್ಟಿಕೊಟ್ಟಿದ್ದರು. ಉರುಳಿಸಿದ್ದು ಕೇವಲ ಒಂದು ವಿಕೆಟ್ ಮಾತ್ರ.
ಮಳೆ ಸಾಧ್ಯತೆ ಕಡಿಮೆ
ಶನಿವಾರ ನಡೆದ ಪಂದ್ಯಕ್ಕೆ ಮಳೆ ಕಾಡ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಇದು ಠುಸ್ ಪಟಾಕಿ ಎಂಬಂತೆ ಮಳೆಯ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ. ಅಂತಿಮ ಪಂದ್ಯಕ್ಕೆ ಮಳೆ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಪಂದ್ಯ ನಡೆಯುವುದರಲ್ಲಿ ಅನುಮಾನವಿಲ್ಲ. ಈ ಪಂದ್ಯ ಭಾರತೀಯ ಕಾಲಮಾನ ರಾತ್ರಿ 8ಕ್ಕೆ ಆರಂಭಗೊಳ್ಳಲಿದೆ. ಒಂದೊಮ್ಮೆ ಮಳೆ ಬಂದು ಪಂದ್ಯ ನಡೆಯದೇ ಹೋದರೆ ಉಭಯ ತಂಡಗಳ ಸರಣಿ ಗೆಲುವಿನ ಯೋಜನೆಗೆ ಹಿನ್ನಡೆಯಾಗಲಿದೆ. ಈಗಾಗಲೇ 2-2 ಸಮಬಲಗೊಂಡಿರುವ ಕಾರಣ ಸರಣಿಯನ್ನು ಡ್ರಾ ಎಂದು ಘೋಷಿಸಲಾಗುತ್ತದೆ.
ಇದನ್ನೂ ಓದಿ Yashasvi Jaiswal: ಅರ್ಧಶತಕದ ಮೂಲಕ ಹಲವು ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಸಂಭಾವ್ಯ ತಂಡ
ವೆಸ್ಟ್ ಇಂಡೀಸ್: ರೋವ್ಮನ್ ಪೊವೆಲ್ (ನಾಯಕ), ಕೈಲ್ ಮೇಯರ್ಸ್ (ಉಪ ನಾಯಕ), ರೋಸ್ಟನ್ ಚೇಸ್, ಶಿಮ್ರೋನ್ ಹೆಟ್ಮೇರ್, ಜೇಸನ್ ಹೋಲ್ಡರ್, ಶೈಯ್ ಹೋಪ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ನಿಕೋಲಸ್ ಪೂರನ್, ರೊಮಾರಿಯೋ ಶೆಫರ್ಡ್, ಒಶಾನೆ ಥಾಮಸ್.
ಭಾರತ: ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ),ಅಕ್ಷರ್ ಪಟೇಲ್, ತಿಲಕ್ ವರ್ಮ ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಆರ್ಶ್ದೀಪ್ ಸಿಂಗ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್