Yashasvi Jaiswal: ಅರ್ಧಶತಕದ ಮೂಲಕ ಹಲವು ದಾಖಲೆ ಬರೆದ ಯಶಸ್ವಿ ಜೈಸ್ವಾಲ್​ - Vistara News

ಕ್ರಿಕೆಟ್

Yashasvi Jaiswal: ಅರ್ಧಶತಕದ ಮೂಲಕ ಹಲವು ದಾಖಲೆ ಬರೆದ ಯಶಸ್ವಿ ಜೈಸ್ವಾಲ್​

ಭಾರತ ಪರ ಟಿ20 ಕ್ರಿಕೆಟ್​ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಅರ್ಧಶತಕ ಬಾರಿಸಿದ ಸಾಧನೆ ನಾಯಕ ರೋಹಿತ್​ ಶರ್ಮ(Rohit Sharma) ಹೆಸರಿನಲ್ಲಿದೆ.

VISTARANEWS.COM


on

Yashasvi Jaiswal exults after scoring a half-century
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಫ್ಲೋರಿಡಾ: ವೆಸ್ಟ್​ ಇಂಡೀಸ್​ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಪದಾರ್ಪಣೆ ಮಾಡಿ ಕೇವಲ 1 ರನ್​ಗೆ ಸೀಮಿತರಾಗಿದ್ದ ಯಶಸ್ವಿ ಜೈಸ್ವಾಲ್(Yashasvi Jaiswal)​ ತಮ್ಮ ದ್ವಿತೀಯ ಪ್ರಯತ್ನದಲ್ಲಿ ಭರ್ಜರಿ ಬ್ಯಾಟಿಂಗ್​ ನಡೆಸಿ ಗಮನಸೆಳೆದಿದ್ದಾರೆ. ನಾಲ್ಕನೇ ಟಿ20 ಪಂದ್ಯದಲ್ಲಿ(West Indies vs India, 4th T20I) ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿ ಅಜೇಯ ಅರ್ಧಶತಕ ಬಾರಿಸಿ ಭಾರತ ತಂಡದ ಪರ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.

ನಾಲ್ಕನೇ ಅತಿ ಕಿರಿಯ ಆಟಗಾರ

ಬೃಹತ್​ ಮೊತ್ತದ ಚೇಸಿಂಗ್​ ವೇಳೆ ಆರಂಭದಿಂದಲೂ ಜತೆಗಾರ ಶುಭಮನ್​ ಗಿಲ್(Shubman Gill)​ ಅವರೊಂದಿಗೆ ಬಿರುಸಿನ ಬ್ಯಾಟಿಂಗ್​ ನಡೆಸಿ ತಂಡದಕ್ಕೆ ಉತ್ತಮ ಇನಿಂಗ್ಸ್​ ಕಟ್ಟಿದರು. ಅವರು ಅರ್ಧಶತಕ ಬಾರಿಸುತ್ತಿದ್ದಂತೆ ಈ ಸಾಧನೆ ಮಾಡಿದ ನಾಲ್ಕನೇ ಅತಿ ಕಿರಿಯ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾದರು. ಒಟ್ಟು 51 ಎಸೆತ ಎದುರಿಸಿದ ಜೈಸ್ವಾಲ್​ 11 ಬೌಂಡರಿ ಮತ್ತು 3 ಸಿಕ್ಸರ್​ನೊಂದಿಗೆ ಅಜೇಯ 84 ರನ್​ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಸಾಧನೆಗೆ ಪಂದ್ಯಶೇಷ್ಠ ಪ್ರಶಸ್ತಿ ಕೂಡ ಲಭಿಸಿತು.

ರೋಹಿತ್​ ಶರ್ಮ ಮೊದಲಿಗ

ಭಾರತ ಪರ ಟಿ20 ಕ್ರಿಕೆಟ್​ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಅರ್ಧಶತಕ ಬಾರಿಸಿದ ಸಾಧನೆ ನಾಯಕ ರೋಹಿತ್​ ಶರ್ಮ(Rohit Sharma) ಹೆಸರಿನಲ್ಲಿದೆ. ಅವರು 2007ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 20 ವರ್ಷ 143 ದಿನಗಳಲ್ಲಿ ಅಜೇಯ 50 ರನ್​ ಬಾರಿಸಿದ್ದರು. ದ್ವಿತೀಯ ಸ್ಥಾನದಲ್ಲಿ ತಿಲಕ್​ ವರ್ಮಾ(20 ವರ್ಷ 271 ದಿನಗಳು)(Tilak Varma) ಕಾಣಿಸಿಕೊಂಡಿದ್ದಾರೆ. ಅವರು ವಿಂಡೀಸ್​ ಸರಣಿಯ 2ನೇ ಪಂದ್ಯದಲ್ಲಿ ಈ ಮೈಲುಗಲ್ಲು ತಲುಪಿದ್ದರು. ರಿಷಭ್​ ಪಂತ್(21 ವರ್ಷ 38 ದಿನ)​ ಮೂರನೇ ಸ್ಥಾನ ಪಡೆದಿದ್ದಾರೆ. ಅವರು 2018ರಲ್ಲಿ ವಿಂಡೀಸ್​ ವಿರುದ್ಧ 58 ರನ್​ ಬಾರಿಸಿದ್ದರು. ಜೈಸ್ವಾಲ್​ (21 ವರ್ಷ 227 ದಿನಗಳು) ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ ind vs wi : ವೆಸ್ಟ್​ ಇಂಡೀಸ್ ವಿರುದ್ಧ ಭಾರತ ತಂಡಕ್ಕೆ 9 ವಿಕೆಟ್​ ಭರ್ಜರಿ ವಿಜಯ

ಜತೆಯಾಟದಲ್ಲಿಯೂ ದಾಖಲೆ ಬರೆದ ಗಿಲ್​-ಜೈಸ್ವಾಲ್​

ವಿಂಡೀಸ್​ ಬೌಲರ್​ಗಳ ಬೆವರಿಳಿಸಿದ ಶುಭಮನ್​ ಗಿಲ್​ ಮತ್ತು ಯಶಸ್ವಿ ಜೈಸ್ವಾಲ್​ ಅವರು ತಮ್ಮ ಅಮೋಘ ಜತೆಯಾಟದಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಮೊದಲ ವಿಕೆಟ್​ಗೆ 165 ರನ್​ಗಳಿಸಿ ರೋಹಿತ್​ ಶರ್ಮ ಮತ್ತು ಕೆ.ಎಲ್ ರಾಹುಲ್​ ಅವರ ದಾಖಲೆಯನ್ನು ಸರಿಗಟ್ಟಿದರು. ಈ ಜೋಡಿ 2017ರಲ್ಲಿ ಶ್ರೀಲಂಕಾ ವಿರುದ್ಧ 165 ರನ್​ಗಳ ಜತೆಯಾಟ ನಡೆಸಿತ್ತು. ಅತ್ಯಧಿಕ ಜತೆಯಾಟ ನಡೆಸಿದ ದಾಖಲೆ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್​ ಮತ್ತು ದೀಪಕ್​ ಹೂಡಾ ಜೋಡಿ ಅಗ್ರಸ್ಥಾನ ಪಡೆದಿದೆ. ಈ ಜೋಡಿ ಕಳೆದ ವರ್ಷ(2022) ಐರ್ಲೆಂಡ್​ ವಿರುದ್ಧ 176 ರನ್​ಗಳ ಜತೆಯಾಟ ನನಡೆಸಿತ್ತು.

ಪಂದ್ಯ ಗೆದ್ದ ಭಾರತ

ಈ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ವೆಸ್ಟ್​ ಇಂಡೀಸ್​ ತಂಡ ಶಿಮ್ರಾನ್​ ಹೆಟ್​ಮೇರ್​(61) ಅರ್ಧಶತಕದ ನೆರವಿನಿಂದ 8 ವಿಕೆಟ್​ಗೆ 178 ರನ್​ ಗಳಿಸಿತು, ಬೃಹತ್​ ಮೊತ್ತ ಬೆನ್ನಟ್ಟಿದ ಭಾರತ ಶುಭಮನ್​ ಗಿಲ್​(77) ಮತ್ತು ಜೈಸ್ವಾಲ್​(ಅಜೇಯ 84) ಅವರ ಸೊಗಸಾದ ಇನಿಂಗ್ಸ್​ ನೆರವಿನಿಂದ 17 ಓವರ್​ಗಳಲ್ಲಿ ಕೇವಲ 1 ವಿಕೆಟ್​ಗೆ 179 ರನ್​ ಬಾರಿಸಿ ಗೆಲುವಿನ ನಗೆ ಬೀರಿತು. ಸರಣಿ ನಿರ್ಣಾಯಕ ಪಂದ್ಯ ಇಂದು (ಭಾನುವಾರ) ನಡೆಯಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

T20 World Cup : ಕೊನೆಗೂ ದುರ್ಬಲ ಕೆನಾಡ ತಂಡದ ವಿರುದ್ಧ ಜಯ ಗಳಿಸಿದ ಪಾಕಿಸ್ತಾನ

T20 World Cup : ಮೊದಲು ಬ್ಯಾಟಿಂಗ್‌ ನಡೆಸಿದ ಕೆನಡಾ ತನ್ನ ಪಾಲಿನ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 106 ರನ್‌ ಪೇರಿಸಿತು. ಆ್ಯರೋನ್ ಜಾನ್ಸನ್ ಆಕರ್ಷಕ ಅರ್ಧಶತಕ ಬಾರಿಸಿದರೂ ಉಳಿದವರ ನೆರವು ಸಿಗಲಿಲ್ಲ. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ 17.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 107 ರನ್‌ ಗಳಿಸಿ ಗೆದ್ದಿತು.

VISTARANEWS.COM


on

T20 World Cup
Koo

ಬೆಂಗಳೂರು: ಟಿ20 ವಿಶ್ವ ಕಪ್​ನ ಲೀಗ್ ಹಂತದಲ್ಲಿ ಎ ಗುಂಪಿನಲ್ಲಿರುವ (T20 World Cup) ಅಮೆರಿಕ ಮತ್ತು ಭಾರತ ತಂಡದ ವಿರುದ್ಧ ಸೋತು ಮುಖಭಂಗ ಎದುರಿಸಿದ್ದ ಪಾಕಿಸ್ತಾನ ತಂಡ ಕೊನೆಗೂ ಒಂದು ಗೆಲುವು ತನ್ನದಾಗಿಸಿಕೊಂಡಿದದೆ. ಮಂಗಳವಾರ ನಡೆದ ಕೆನಡಾ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್​ಗಳ ವಿಜಯ ತನ್ನದಾಗಿಸಿಕೊಂಡಿದೆ. ಪಾಕ್ ಪಾಲಿಗೆ ಅಗತ್ಯ ಪಂದ್ಯವಾಗಿತ್ತು. ಇಲ್ಲಿ ಸೋತಿದ್ದರೆ ಗುಂಪು ಹಂತದ ನಿರ್ಗಮನ ನಿರ್ಧಾರವಾಗುತ್ತಿತ್ತು. ಆದರೆ, ದುರ್ಬಲ ತಂಡದ ವಿರುದ್ಧ ಕೊನೆಗೂ ಗೆದ್ದಿದೆ. ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರಿಕೆಟ್‌ ಮೈದಾನದಲ್ಲಿ ನಡೆದ ಮತ್ತೊಂದು ಕಡಿಮೆ ಮೊತ್ತದ ಪಂದ್ಯದಲ್ಲಿ ಬಾಬರ್‌ ಅಜಮ್‌ ಪಡೆಯು 7 ವಿಕೆಟ್‌ಗಳಿಂದ ಗೆದ್ದು ಬೀಗಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಕೆನಡಾ ತನ್ನ ಪಾಲಿನ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 106 ರನ್‌ ಪೇರಿಸಿತು. ಆ್ಯರೋನ್ ಜಾನ್ಸನ್ ಆಕರ್ಷಕ ಅರ್ಧಶತಕ ಬಾರಿಸಿದರೂ ಉಳಿದವರ ನೆರವು ಸಿಗಲಿಲ್ಲ. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ 17.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 107 ರನ್‌ ಗಳಿಸಿ ಗೆದ್ದಿತು.

ಹೆದರಿಕೊಂಡೇ ಆಡಿದ ಪಾಕಿಸ್ತಾನ ತಂಡದ ಪರ ಆರಂಭಿಕ ಬ್ಯಾಟರ್​ ಸೈಮ್‌ ಅಯೂಬ್‌ 6 ರನ್‌ ಗಳಿಸಿ ಔಟಾದರು. ಈ ವೇಳೆ ಒಂದಾದ ಮೊಹಮ್ಮದ್‌ ರಿಜ್ವಾನ್‌ ಹಾಗೂ ಬಾಬರ್‌ ಅಜಮ್ ಅರ್ಧಶತಕದ ಜೊತೆಯಾಟವಾಡಿದರು. 33 ರನ್‌ ಗಳಿಸಿದ ಪಾಕ್‌ ನಾಯಕ ಔಟಾದರು. ಜವಾಬ್ದಾರಿಯುತವಾಗಿ ಆಡಿದ ರಿಜ್ವಾನ್ ಆಕರ್ಷಕ ಅರ್ಧಶತಕ ಸಿಡಿಸಿ ಗೆಲ್ಲಿಸಿದರು ಗೆಲುವಿಗೆ 3 ರನ್‌ ಅಗತ್ಯವಿದ್ದಾಗ ದೊಡ್ಡ ಹೊಡೆತಕ್ಕೆ ಕೈಹಾಕಿದ ಫಕರ್‌ ಜಮಾನ್‌ 4(6) ತನ್ನ ವಿಕೆಟ್ ಒಪ್ಪಿಸಿದರು.

ಕೆನಡಾದ ನಿಧಾನಗತಿಯ ಆಟ

ಮೊದಲು ಬ್ಯಾಟಿಂಗ್‌ ನಡೆಸಿದ ಕೆನಡಾ ದೊಡ್ಡ ಮೊತ್ತ ಪೇರಿಸಲು ಯತ್ನಿಸಲಿಲ್ಲ. ಆದಾಗ್ಯೂ ಬೌಲಿಂಗ್​ಗೆ ಪೂರಕ ಪಿಚ್‌ನಲ್ಲಿ ಪಾಕಿಸ್ತಾನದ ಘಟಾನುಘಟಿ ಬೌಲರ್‌ಗಳನ್ನು ಎದುರಿಸಿದ ಆ್ಯರೋನ್ ಜಾನ್ಸನ್ 44 ಎಸೆತಗಳಲ್ಲಿ 52 ರನ್ ಗಳಿಸಿ ಮಿಂಚಿದರು. ಇದರಲ್ಲಿ ನಾಲ್ಕು ಸ್ಫೋಟಕ ಸಿಕ್ಸರ್ ಹಾಗೂ 4 ಬೌಂಡರಿಗಳವೆ . ಆರಂಭಿಕರಾಗಿ ಕಣಕ್ಕಿಳಿದ ಜಾನ್ಸನ್, ಆರನೆಯವರಾಗಿ ಔಟಾದರು.

ಸಾದ್ ಬಿನ್ ಜಾಫರ್ 10 ರನ್‌ ಗಳಿಸಿದರೆ, ಕಲೀಮ್ ಸನಾ 13 ರನ್‌ ಗಳಿಸುವ ಮೂಲಕ ತಂಡದ ಮೊತ್ತವನ್ನು 100 ರನ್ ಗಡಿ ದಾಟಿಸಿದರು. ಆರಂಭಿಕ ಆಟಗಾರ ನವನೀತ್‌ (4). ಪರ್ಗತ್ ಸಿಂಗ್ ಗಳಿಕೆ 2 ರನ್​. ನಿಕೋಲಸ್ ಕಿರ್ಟನ್ (1) ಔಟಾಗುವುದರೊಂದಿಗೆ ಜಾನ್ಸನ್ ಮೇಲೆ ಒತ್ತಡವನ್ನು ಹೆಚ್ಚಿಸಿತು.

ಹ್ಯಾರಿಸ್ ರವೂಫ್​ ಎಸೆದ ಇನಿಂಗ್ಸ್​​ 10ನೇ ಓವರ್‌ನಲ್ಲಿ ಶ್ರೇಯಸ್ ಮೊವ್ವಾ (2) ಹಾಗೂ ರವೀಂದರ್ಪಾಲ್ ಸಿಂಗ್ (0) ವಿಕೆಟ್ ಒಪ್ಪಿಸಿದರು. ಇದು ಹ್ಯಾರಿಸ್‌ ರೌಫ್‌ ಅವರ ಟಿ20 ಸ್ವರೂಪದಲ್ಲಿ 100 ವಿಕೆಟ್. ಮೊಹಮ್ಮದ್ ಅಮೀರ್ 13 ರನ್‌ ಬಿಟ್ಟುಕೊಟ್ಟು 2 ವಿಕೆಟ್‌ ಪಡೆದರೆ, ಹ್ಯಾರಿಸ್ ರೌಫ್ 26ಕ್ಕೆ 2 ಹಾಗೂ ಶಾಹೀನ್ ಶಾ ಅಫ್ರಿದಿ 21ಕ್ಕೆ 1 ವಿಕೆಟ್‌ ಪಡೆದರು.

Continue Reading

ಕ್ರೀಡೆ

MS Dhoni Fan: ಪ್ಯಾರಿಸ್​ನಲ್ಲಿ ಧೋನಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅಭಿಮಾನಿ

MS Dhoni Fan: ಧೋನಿ(MS Dhoni) ಯಾವಾಗಲೂ ತಮ್ಮ ವ್ಯಕ್ತಿತ್ವದಿಂದ ಅವರ ಅಭಿಮಾನಿಗಳ ಹೃದಯವನ್ನು ಗೆಲ್ಲುತ್ತಾರೆ. ಹೀಗಾಗಿ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು(MS Dhoni Fan) ಹೊಂದಿದ್ದಾರೆ.

VISTARANEWS.COM


on

MS Dhoni
Koo

ಪ್ಯಾರಿಸ್​: ಟೀಮ್​ ಇಂಡಿಯಾದ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್​ ಧೋನಿ(MS dhoni) ಅವರು ತಮ್ಮ ಕುಟುಂಬದ ಜತೆ ಪ್ಯಾರಿಸ್​ ಪ್ರವಾಸದಲ್ಲಿದ್ದಾರೆ. ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾ ತಮ್ಮ ಪ್ರವಾಸವನ್ನು ಎಂಜಾಯ್​ ಮಾಡುತ್ತಿದ್ದಾರೆ. ಕಳೆದ ವಾರ ಧೋನಿ ಅವರ ಪತ್ನಿ ಸಾಕ್ಷಿ ಅವರು ಪ್ರವಾಸದ ಫೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೀಗ ಅಭಿಮಾನಿಯೊಬ್ಬ(MS dhoni Fan) ಧೋನಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾನೆ. ಈ ಫೋಟೊ ವೈರಲ್ ಆಗಿದೆ.

ಧೋನಿ ಅವರು ಪ್ಯಾರಿಸ್​ನ ಪ್ರವಾಸಿ ಸ್ಥಳವೊಂದಕ್ಕೆ ಭೇಟಿ ನೀಡಿದ ಸಂದರ್ಭ ಅವರ ಅಭಿಮಾನಿಯೊಬ್ಬ ಧೋನಿ ಅವರ ಕಾಲಿಗೆ ಬಿದ್ದಿದ್ದಾನೆ. ಈ ವೇಳೆ ಧೋನಿ ಆತನಿಗೆ ಆಶೀರ್ವಾದ ಮಾಡಿದ್ದಾರೆ. ಈ ಫೋಟೊವನ್ನು ಕಂಡ ಧೋನಿ ಅಭಿಮಾನಿಗಳು ನೀವು ಜಿಜವಾಗಿಯೂ ಅದೃಷ್ಟಶಾಲಿ ಎಂದು ಕಮೆಂಟ್‌ ಮಾಡಿದ್ದಾರೆ.

ಧೋನಿ(MS Dhoni) ಯಾವಾಗಲೂ ತಮ್ಮ ವ್ಯಕ್ತಿತ್ವದಿಂದ ಅವರ ಅಭಿಮಾನಿಗಳ ಹೃದಯವನ್ನು ಗೆಲ್ಲುತ್ತಾರೆ. ಹೀಗಾಗಿ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು(MS Dhoni Fan) ಹೊಂದಿದ್ದಾರೆ. ಅವರ ಭೇಟಿಗಾಗಿ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾದು ಕುಳಿತಿರುತ್ತಾರೆ. ಕೆಲ ಅಭಿಮಾನಿಗಳು ಧೋನಿಯನ್ನು ಭೇಟಿಯಾಗಿ ಅವರಿಗೆ ವಿಶೇಷ ಉಡುಗೊರೆಯನ್ನು ನೀಡುತ್ತಾರೆ. 

ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಕೆಳವು ವರ್ಷಗಳಾಗಿವೆ. ಕೇವಲ ಐಪಿಎಲ್​ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಈ ಆವೃತ್ತಿಯಲ್ಲಿ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲಿದ್ದಾರೆ ಎನ್ನಲಾಗಿತ್ತು. ಆದರೆ ಧೋನಿ ಇದುವರೆಗೆ ತಮ್ಮ ನಿವೃತ್ತಿ ಪ್ರಕಟಿಸಿಲ್ಲ. ಮುಂದಿನ ಬಾರಿಯೂ ಅವರು ಆಡಲಿದ್ದಾರೆ ಎಂದು ಫ್ರಾಂಚೈಸಿ ಮೂಲಗಳು ಮಾಹಿತಿ ನೀಡಿದೆ.

ಇದನ್ನೂ ಓದಿ MS Dhoni’s last-ball Heroics: ಧೋನಿ ಮಿಂಚಿನ ವೇಗದ ರನೌಟ್​; ಭಾರತಕ್ಕೆ 1 ರನ್‌ ರೋಚಕ ಜಯ; ಇದು ಮರೆಯಲಾಗದ ನೆನಪು

ಭಾರತ ಸುತ್ತುವ ಆಸೆ ಇದೆ

ಕಳೆದ ವರ್ಷ ಸಂದರ್ಶನವೊಂದರಲ್ಲಿ ಅಭಿಮಾನಿಯೊಬ್ಬರು ಪ್ರವಾಸದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ವೇಳೆ, “ಪ್ರಮಾಣಿಕವಾಗಿ ಹೇಳಬೇಕೆಂದರೆ ನಾನು ಹೆಚ್ಚು ಪ್ರಯಾಣ ಮಾಡಿದ್ದೇನೆ. ಆದರೆ, ಅದು ಪ್ರವಾಸವಲ್ಲ. ನನ್ನ ಕ್ರಿಕೆಟ್ ಆಡುವ ಸಮಯದಲ್ಲಿ ಮಾಡಿದ ಪ್ರಯಾಣ. ಕ್ರಿಕೆಟ್​ ಸರಣಿಗಾಗಿ ನಾನು ಹಲವು ದೇಶಕ್ಕೆ ಭೇಟಿ ನೀಡಿದ್ದೇನೆ. ಆದರೆ ಅಲ್ಲಿರುವ ಯಾವುದೇ ಪ್ರವಾಸಿ ತಾಣಗಳಿಗೆ ಹೋಗಿಲ್ಲ. ಕ್ರಿಕೆಟ್​ ಆಡಿದ ಬಳಿಕ ನೇರವಾಗಿ ಭಾರತಕ್ಕೆ ಬರುತ್ತಿದೆ. ನನ್ನ ಪತ್ನಿಗೆ ಟ್ರಾವೆಲ್​ ಎಂದರೆ ಬಲು ಇಷ್ಟ. ಕ್ರಿಕೆಟ್​ ನಿವೃತ್ತಿ ಬಳಿಕ ನಾನು ಖಂಡಿತಾ ಪ್ರವಾಸ ಮಾಡುವ ಎಲ್ಲ ಯೋಜನೆಗಳನ್ನು ಈಗಾಗಲೇ ರೂಪಿಸಿದ್ದೇನೆ. ಭಾರತವೇ ನನ್ನ ಮೊದಲ ಆಯ್ಕೆ ಮತ್ತು ಆದ್ಯತೆ ಎಂದು ಧೋನಿ ಹೇಳಿದ್ದರು. “ಭಾರತದಲ್ಲಿ ಹಲವು ಸುಂದರ ತಾಣಗಳಿವೆ. ನಾನು ನನ್ನ ಮೊದಲ ಪ್ರವಾಸವನ್ನು ನಮ್ಮ ದೇಶದಲ್ಲೇ ಮಾಡಿ ಇಲ್ಲಿನ ಪ್ರವಾಸೋದ್ಯಮಕ್ಕೆ ಬೆಂಬಲ ಸೂಚಿಸುತ್ತೇನೆ” ಎಂದು ಧೋನಿ ಅಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

Continue Reading

ಕ್ರೀಡೆ

RSA vs BAN: ಬಾಂಗ್ಲಾ ಸೋಲಿಗೆ ಐಸಿಸಿ ಹೊಸ ನಿಯಮವೇ ಕಾರಣ; ಬೌಂಡರಿ ದಾಖಲಾದರೂ ರನ್​ ನೀಡಲಿಲ್ಲವೇಕೆ?

RSA vs BAN: ಹೊಸ ನಿಯಮಗಳ ಪ್ರಕಾರ, ಅಂಪೈರ್ ಔಟ್ ನೀಡಿದಾಗ ಬಾಲ್ ಡೆಡ್ ಎಂದು ಪರಿಗಣಿಸಲ್ಪಡುತ್ತದೆ. ಹೀಗಾಗಿ ಈ ರನ್​ ಬಾಂಗ್ಲಾ ತಂಡಕ್ಕೆ ಸಿಗಲಿಲ್ಲ. ಒಂದೊಮ್ಮೆ ಈ ರನ್​ ಸಿಗುತ್ತಿದ್ದರೆ ಬಾಂಗ್ಲಾ ಗೆಲುವು ಸಾಧಿಸುತ್ತಿತ್ತು. ಏಕೆಂದರೆ ಬಾಂಗ್ಲಾ ಸೋತಿದ್ದು ಕೂಡ 4 ರನ್​ ಅಂತರದಿಂದ

VISTARANEWS.COM


on

RSA vs BAN
Koo

ನ್ಯೂಯಾರ್ಕ್​: ಸೋಮವಾರ ರಾತ್ರಿ ನಡೆದ ಟಿ20 ವಿಶ್ವಕಪ್(T20 World Cup 2024)​ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ದಕ್ಷಿಣ ಆಫ್ರಿಕಾ(RSA vs BAN) ವಿರುದ್ಧ 4 ರನ್​ಗಳ ವಿರೋಚಿತ ಸೋಲು ಕಂಡಿತ್ತು. ಬಾಂಗ್ಲಾ ತಂಡದ ಸೋಲಿಗೆ ಐಸಿಸಿಯ ಹೊಸ ನಿಯಮವೇ(Major DRS Controversy) ಕಾರಣ ಎಂಬ ಆರೋಪ ಕೇಳಿಬಂದಿದೆ.

ಹೌದು, ಈ ಪಂದ್ಯದಲ್ಲಿ ಅಂಪೈರ್‌ ತೆಗೆದುಕೊಂಡು ತಪ್ಪು ನಿರ್ಧಾರ(ICC Rule Exposed) ಮತ್ತು ವಿವಾದಾತ್ಮಕ ಡಿಆರ್‌ಎಸ್‌ ನಿಯಮದಿಂದಾಗಿ ಬಾಂಗ್ಲಾದೇಶ ಸೋಲು ಕಂಡಿದೆ ಎಂದು ಬಾಂಗ್ಲಾ ಆಟಗಾರರು ಸೇರಿ ಅನೇಕ ಮಾಜಿ ಕ್ರಿಕೆಟಿಗರು ಕೂಡ ಚರ್ಚೆ ನಡೆಸುತ್ತಿದ್ದಾರೆ. ಚೇಸಿಂಗ್​ ನಡೆಸುತ್ತಿದ್ದ ಬಾಂಗ್ಲಾದೇಶಕ್ಕೆ ಪಂದ್ಯ ಗೆಲ್ಲಲು 24 ಎಸೆತಗಳಲ್ಲಿ 27 ರನ್ ಗಳಿಸಬೇಕಿತ್ತು. 4 ವಿಕೆಟ್​ ಕೂಡ ಕೈಯಲ್ಲಿತ್ತು. ಅನುಭವಿ ಮಹಮ್ಮದುಲ್ಲಾ ಮತ್ತು ತೌಹೀದ್ ಹೃದಯ ಕ್ರೀಸ್​ನಲ್ಲಿದ್ದರು.

17ನೇ ಓವರ್‌ನಲ್ಲಿ ದಕ್ಷಿಣ ಆಫ್ರಿಕಾದ ಬೌಲರ್ ಒಟ್ನೀಲ್ ಬಾರ್ಟ್‌ಮನ್ ಅವರ ಎರಡನೇ ಎಸೆತದಲ್ಲಿ ಮಹಮ್ಮದುಲ್ಲಾ ಫ್ಲಿಕ್ ಶಾಟ್ ಹೊಡೆಯುವು ಪ್ರಯತ್ನದಲ್ಲಿ ವಿಫಲರಾದರು. ಆದರೆ, ಚೆಂಡು ಅವರ ಪ್ಯಾಡ್‌ಗೆ ತಾಗಿ ಬೌಂಡರಿ ದಾಖಲಾಯಿತು. ಚೆಂಡು ಪ್ಯಾಡ್​ಗೆ ತಾಗಿದ ಕಾರಣ ದಕ್ಷಿಣ ಆಫ್ರಿಕಾ ಬ್ಯಾಟರ್​ಗಳು ಎಲ್​ಬಿಡಬ್ಲ್ಯುಗೆ ಮನವಿ ಮಾಡಿದರು. ಅಂಪೈರ್​ ಔಟ್​ ನೀಡಿದರು. ಈ ವೇಳೆ ಮಹಮ್ಮದುಲ್ಲಾ ರಿವ್ಯೂ ಪಡೆದರು. ಫೀಲ್ಡ್​ ಅಂಪೈರ್​ ಈ ತೀರ್ಪನ್ನು ಮೂರನೇ ಅಂಪೈರ್​ಗೆ ನೀಡಿದರು. ಮೂರನೇ ಅಂಪೈರ್​ ಇದನ್ನು ಪರೀಕ್ಷಿಸುವ ವೇಳೆ ಚೆಂಡು ಇಂಪ್ಯಾಕ್ಟ್​ ಲೈನ್​ನಲ್ಲಿ ಇದ್ದರೂ ವಿಕೆಟ್ ಮಿಸ್ಸಿಂಗ್​ ಇರುವುದು ಕಂಡು ಬಂತು. ಹೀಗಾಗಿ ನಾಟೌಟ್​ ನಿರ್ಧಾರ ಪ್ರಕಟಿಸಿದರು. ಆದರೆ, ಲೆಗ್​ ಬೈ ಆಗಿ ಬಂದ ಬೌಂಡರಿ ರನ್​ ಮಾತ್ರ ಬಾಂಗ್ಲಾ ತಂಡಕ್ಕೆ ನೀಡಲಿಲ್ಲ. ಇದು ಈಗ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ RSA vs BAN: ಹ್ಯಾಟ್ರಿಕ್​ ಗೆಲುವು ಸಾಧಿಸಿ ಸೂಪರ್​-8 ಹಂತಕ್ಕೆ ಲಗ್ಗೆಯಿಟ್ಟ ದಕ್ಷಿಣ ಆಫ್ರಿಕಾ

ಹೊಸ ನಿಯಮಗಳ ಪ್ರಕಾರ, ಅಂಪೈರ್ ಔಟ್ ನೀಡಿದಾಗ ಬಾಲ್ ಡೆಡ್ ಎಂದು ಪರಿಗಣಿಸಲ್ಪಡುತ್ತದೆ. ಹೀಗಾಗಿ ಈ ರನ್​ ಬಾಂಗ್ಲಾ ತಂಡಕ್ಕೆ ಸಿಗಲಿಲ್ಲ. ಒಂದೊಮ್ಮೆ ಈ ರನ್​ ಸಿಗುತ್ತಿದ್ದರೆ ಬಾಂಗ್ಲಾ ಗೆಲುವು ಸಾಧಿಸುತ್ತಿತ್ತು. ಏಕೆಂದರೆ ಬಾಂಗ್ಲಾ ಸೋತಿದ್ದು ಕೂಡ 4 ರನ್​ ಅಂತರದಿಂದ. ಈ ನ್ಯೂನತೆಯ ಬಗ್ಗೆ ಅನೇಕ ಕ್ರಿಕೆಟ್‌ ತಜ್ಞರು ಭಾರತ ಮಾಜಿ ಆಟಗಾರ ವಾಸಿಂ ಜಾಫರ್​ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಇಲ್ಲಿನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ದಕ್ಷಿಣ ಆಫ್ರಿಕಾ 6 ವಿಕೆಟ್​ಗೆ 113 ರನ್​ ಬಾರಿಸಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ ಒಂದು ಹಂತದ ವರೆಗೆ ಉತ್ತಮವಾಗಿ ಆಡಿ ಆ ಬಳಿಕ ಕುಸಿತ ಕಂಡು 7 ವಿಕೆಟ್​ಗೆ 109 ರನ್​ ಮಾತ್ರ ಗಳಿಸಿ ಸೋಲು ಕಂಡಿತು. 46 ರನ್​ ಬಾರಿಸಿದ ದಕ್ಷಿಣ ಆಫ್ರಿಕಾದ ಹೆನ್ರಿಚ್​ ಕ್ಲಾಸೆನ್​ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Continue Reading

ಕ್ರೀಡೆ

IND vs USA: ಅಪಾಯಕಾರಿ ಅಮೆರಿಕ ಸವಾಲಿಗೆ ಸಡ್ಡು ಹೊಡೆದೀತೇ ಟೀಮ್​ ಇಂಡಿಯಾ?

IND vs USA: ಸಂಪೂರ್ಣ ಬೌಲಿಂಗ್​ ಟ್ರ್ಯಾಕ್ ಆಗಿರುವ ನಸ್ಸೌ ಪಿಚ್​ನಲ್ಲಿ ಬ್ಯಾಟಿಂಗ್​ ನಡೆಸುವುದು ಅಷ್ಟು ಸುಲಭವಲ್ಲ. 100 ರನ್​ ಬಾರಿಸಿದರೂ ಇದನ್ನು ತಡೆದು ನಿಲ್ಲಿಸುವ ಸಾಮರ್ಥ್ಯ ಬೌಲರ್​ಗಳಿಗಿದೆ. ಪಿಚ್​ನಲ್ಲಿ ಬಿರುಕು ಇರುವ ಕಾರಣ ಚೆಂಡಿನ ಚಲನೆ ಯಾವ ರೀತಿ ಇರುತ್ತದೆ ಎನ್ನುವುದನ್ನು ಅರಿತುಕೊಳ್ಳುವಲ್ಲಿ ಬ್ಯಾಟರ್​ಗಳು ವಿಫಲರಾಗುತ್ತಿದ್ದಾರೆ.

VISTARANEWS.COM


on

IND vs USA
Koo

ನ್ಯೂಯಾರ್ಕ್​: ಪ್ರಸಕ್ತ ಸಾಗುತ್ತಿರುವ ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ಲೀಗ್​ ಹಂತದ ಪಂದ್ಯದಲ್ಲಿ ಸತತ 2 ಪಂದ್ಯಗಳನ್ನು ಗೆದ್ದು ಅಜೇಯ ಓಟ ಕಾಯ್ದುಕೊಂಡಿರುವ ಭಾರತ ಮತ್ತು ಅಮೆರಿಕ(IND vs USA) ನಾಳೆ ನಡೆಯುವ ಪಂದ್ಯದಲ್ಲಿ ಕಣಕ್ಕಿಳಿಯಲಿವೆ. ಇತ್ತಂಡಗಳ ನಡುವಣ ಮೊದಲ ಕ್ರಿಕೆಟ್​ ಮುಖಾಮುಖಿ ಇದಾಗಿದೆ.

ಸವಾಲು ಸುಲಭದಲ್ಲ


ಅಮೆರಿಕ ತಂಡ ಕ್ರಿಕೆಟ್​ ಶಿಶು ಆಗಿದ್ದರೂ ಕೂಡ ತಂಡದಲ್ಲಿ ಆಡುವ ಆಟಗಾರರಿಗೆ ಕ್ರಿಕೆಟ್​ ಹೊಸದಲ್ಲ. ಎಲ್ಲರು ಅನುಭವಿ ಆಟಗಾರರು. ಈ ತಂಡದ ವಿಶೇಷವೆಂದರೆ ಭಾರತ, ಪಾಕಿಸ್ತಾನ, ನ್ಯೂಜಿಲ್ಯಾಂಡ್​, ಕೆನಡಾ ಸೇರಿ ಹಲವು ದೇಶಗಳ ಕ್ರಿಕೆಟಿಗರು ಈ ತಂಡದಲ್ಲಿ ಕಾಣಿಸಿಕೊಂಡಿರುವುದು. ಬಹುಪಾಲು ಭಾರತೀಯ ಆಟಗಾರರೇ ನೆಚ್ಚಿಕೊಂಡಿದ್ದಾರೆ. ಕನ್ನಡಿಗ ನಾಸ್ತುಷ್‌ ಕೆಂಜಿಗೆ, 2010ರಲ್ಲಿ ಭಾರತ ಪರ 19 ವಿಶ್ವಕಪ್​ ಆಡಿದ್ದ ಎಡಗೈ ವೇಗದ ಬೌಲರ್ ಸೌರಭ್ ನೇತ್ರವಲ್ಕರ್, ನಾಯಕ ಮೊನಾಂಕ್ ಪಟೇಲ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ.

ವಿಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾದ ಆರನ್ ಜೋನ್ಸ್ ಕೂಡ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ಭಾರತ ಯಾವುದೇ ಕಾರಣಕ್ಕೂ ಎದುರಾಳಿಗಳನ್ನು ಕಡೆಗಣಿಸುವಂತಿಲ್ಲ. ಈಗಾಗಲೇ ಪಾಕಿಸ್ತಾನಕ್ಕೂ ಅಮೆರಿಕ ನೀರು ಕುಡಿಸಿದೆ. ಹೀಗಾಗಿ ಅತಿಯಾದ ಆತ್ಮವಿಶ್ವಾಸದಿಂದ ಈ ಸವಾಲನ್ನು ಹಗುರವಾಗಿ ಕಂಡೆರೆ ಭಾರತಕ್ಕೂ ಸೋಲು ಕಟ್ಟಿಟ್ಟ ಬುತ್ತಿ! ಎನ್ನಲಡ್ಡಿಯಿಲ್ಲ.

ಗೆದ್ದರೆ ಸೂಪರ್​-8 ಪ್ರವೇಶ


ಉಭಯ ತಂಡಗಳ ಪೈಕಿ ಯಾರೇ ಗೆದ್ದರೂ ಕೂಡ ‘ಎ’ ವಿಭಾಗದಿಂದ ಮೊದಲ ತಂಡವಾಗಿ ಸೂಪರ್​-8 ಹಂತಕ್ಕೆ ಪ್ರವೇಶ ಪಡೆಯಲಿದ್ದಾರೆ. ಈಗಾಗಲೇ ‘ಡಿ’ ವಿಭಾಗದಿಂದ ದಕ್ಷಿಣ ಆಫ್ರಿಕಾ ಸೂಪರ್​-8 ಹಂತಕ್ಕೆ ಪ್ರವೇಶ ಪಡೆದಿದೆ. ಒಂದು ಗ್ರೂಪ್​ನಿಂದ ಕೇವಲ 2 ತಂಡಗಳು ಮಾತ್ರ ಈ ಹಂತಕ್ಕೇರುತ್ತದೆ.

ಇದನ್ನೂ ಓದಿ IND vs PAK: ಟ್ರ್ಯಾಕ್ಟರ್ ಮಾರಿ ಭಾರತ-ಪಾಕ್​ ಪಂದ್ಯ ವೀಕ್ಷಿಸಿ ಕಣ್ಣೀರು ಹಾಕಿದ ಅಭಿಮಾನಿ

ಮಳೆ ಭೀತಿ


ಭಾನುವಾರ ಇಲ್ಲೇ ನಡೆದಿದ್ದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಇದೀಗ ನಾಳೆ ನಡೆಯುವ ಪಂದ್ಯಕ್ಕೂ ಮಳೆ ಕಾಟ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಕ್ಯುವೆದರ್‌ನ ಮುನ್ಸೂಚನೆಯ ಪ್ರಕಾರ ಅಮೆರಿಕದ ಕಾಲಮಾನದ ಪ್ರಕಾರ ಮಧ್ಯಾಹ್ನದ ವೇಳೆ ಶೇ. 40 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಭಾರತದಲ್ಲಿ ಈ ಪಂದ್ಯ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತದೆ. ಮಳೆಯಿಂದ ಪಂದ್ಯ ರದ್ದುಗೊಂಡರೆ ಉಭಯ ತಂಡಗಳಿಗೂ ತಲಾ 1 ಅಂಕ ನೀಡಲಾಗುತ್ತದೆ. ಏಕೆಂದರೆ ಲೀಗ್​ ಪಂದ್ಯಗಳಿಗೆ ಮೀಸಲು ದಿನ ಇಲ್ಲ. ಒಂದೊಮ್ಮೆ ಭಾರತ ಮತ್ತು ಅಮೆರಿಕ ಪಂದ್ಯ ಮಳೆಯಿಂದ ರದ್ದಾದರೆ ಪಾಕಿಸ್ತಾನ ಲೀಗ್​ನಿಂದ ಹೊರಬೀಳಲಿದೆ. ಈಗಾಗಲೇ 4 ಅಂಕಗಳಿಸಿರುವ ಭಾರತ ಮತ್ತು ಅಮೆರಿಕಗೆ ಈ ಒಂದು ಅಂಕದಿಂದ ಒಟ್ಟು ಅಂಕ 5 ಆಗಲಿದೆ. ಪಾಕ್​ ಮುಂದಿನ 2 ಪಂದ್ಯಗಳನ್ನು ಗೆದ್ದರೂ ಕೂಡ 4 ಅಂಕ ಮಾತ್ರ ಆಗಲಿದೆ. ಹೀಗಾಗಿ ಪಾಕ್​ ಹೊರಬೀಳಲಿದೆ.

ಪಿಚ್​ ರಿಪೋರ್ಟ್​


ಸಂಪೂರ್ಣ ಬೌಲಿಂಗ್​ ಟ್ರ್ಯಾಕ್ ಆಗಿರುವ ನಸ್ಸೌ ಪಿಚ್​ನಲ್ಲಿ ಬ್ಯಾಟಿಂಗ್​ ನಡೆಸುವುದು ಅಷ್ಟು ಸುಲಭವಲ್ಲ. 100 ರನ್​ ಬಾರಿಸಿದರೂ ಇದನ್ನು ತಡೆದು ನಿಲ್ಲಿಸುವ ಸಾಮರ್ಥ್ಯ ಬೌಲರ್​ಗಳಿಗಿದೆ. ಪಿಚ್​ನಲ್ಲಿ ಬಿರುಕು ಇರುವ ಕಾರಣ ಚೆಂಡಿನ ಚಲನೆ ಯಾವ ರೀತಿ ಇರುತ್ತದೆ ಎನ್ನುವುದನ್ನು ಅರಿತುಕೊಳ್ಳುವಲ್ಲಿ ಬ್ಯಾಟರ್​ಗಳು ವಿಫಲರಾಗುತ್ತಿದ್ದಾರೆ. ಇದುವರೆಗೂ ಇಲ್ಲಿ ನಡೆದ ಪಂದ್ಯದಲ್ಲಿ 120 ರನ್​ಗಳ ಗಡಿ ದಾಟಿಲ್ಲ.

ಸಂಭಾವ್ಯ ತಂಡ


ಅಮೆರಿಕ:
ಸ್ಟೀವನ್ ಟೇಲರ್, ಮೊನಾಂಕ್ ಪಟೇಲ್ (ನಾಯಕ), ಆಂಡ್ರೀಸ್ ಗೌಸ್, ಆರನ್ ಜೋನ್ಸ್, ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಜಸ್ದೀಪ್ ಸಿಂಗ್, ನಾಸ್ತುಷ್‌ ಕೆಂಜಿಗೆ, ಸೌರಭ್ ನೇತ್ರವಲ್ಕರ್, ಅಲಿ ಖಾನ್.

ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

Continue Reading
Advertisement
T20 World Cup
ಪ್ರಮುಖ ಸುದ್ದಿ4 hours ago

T20 World Cup : ಕೊನೆಗೂ ದುರ್ಬಲ ಕೆನಾಡ ತಂಡದ ವಿರುದ್ಧ ಜಯ ಗಳಿಸಿದ ಪಾಕಿಸ್ತಾನ

Lt. General Upendra Dwivedi
ಪ್ರಮುಖ ಸುದ್ದಿ4 hours ago

Lt. General Upendra Dwivedi : ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ನೇಮಕ

Terrorist Killed
ಪ್ರಮುಖ ಸುದ್ದಿ5 hours ago

Terrorist Killed : ಜಮ್ಮು ಕಾಶ್ಮೀರದಲ್ಲಿ ಉಗ್ರನೊಬ್ಬನ್ನು ಹೊಡೆದುರುಳಿಸಿದ ಭದ್ರತಾ ಪಡೆ

Joe Biden
ಪ್ರಮುಖ ಸುದ್ದಿ5 hours ago

Joe Biden : ಬಂದೂಕು ಪ್ರಕರಣದಲ್ಲಿ ಅಮೆರಿಕ ಅಧ್ಯಕ್ಷ ಜೊ ಬೈಡೆನ್ ಪುತ್ರ ತಪ್ಪಿತಸ್ಥ; ಕಾದಿದೆ 25 ವರ್ಷ ಜೈಲು ಶಿಕ್ಷೆ

Pavithra Gowda
ಕರ್ನಾಟಕ6 hours ago

Pavithra Gowda: ಬಂಧನದ ಭಯವಿಲ್ಲದೇ ನಗುತ್ತಾ ಸಾಂತ್ವನ ಕೇಂದ್ರಕ್ಕೆ ಹೋದ ಪವಿತ್ರಾ ಗೌಡ!

Priyanka Gandhi:
ಪ್ರಮುಖ ಸುದ್ದಿ6 hours ago

Priyanka Gandhi : ವಾರಾಣಸಿಯಲ್ಲಿ ಪ್ರಿಯಾಂಕ ಸ್ಪರ್ಧಿಸಿದ್ದರೆ ಮೋದಿ ಸೋಲುತ್ತಿದ್ದರು; ರಾಹುಲ್​ ಗಾಂಧಿ

CM Siddaramaiah
ಕರ್ನಾಟಕ6 hours ago

CM Siddaramaiah: ಗಣಿಗಳ ಹರಾಜು ಪ್ರಕ್ರಿಯೆ ಕೂಡಲೇ ಕೈಗೆತ್ತಿಕೊಳ್ಳಲು ಸಿಎಂ ಸೂಚನೆ

Modi Ka Parivar
ಪ್ರಮುಖ ಸುದ್ದಿ7 hours ago

Modi Ka Parivar : ಸೋಶಿಯಲ್​ ಮೀಡಿಯಾ ಹ್ಯಾಂಡಲ್​​ಗಳಿಂದ ‘ಮೋದಿ ಕಾ ಪರಿವಾರ್​’ ತೆಗೆಯಲು ಸೂಚನೆ

Rajeev Taranath
ಕರ್ನಾಟಕ7 hours ago

Rajeev Taranath: ಖ್ಯಾತ ಸರೋದ್‌ ವಾದಕ ರಾಜೀವ್ ತಾರಾನಾಥ್ ಇನ್ನಿಲ್ಲ

Aishwarya Arjun
ಪ್ರಮುಖ ಸುದ್ದಿ7 hours ago

Aishwarya Arjun : ಚೆನ್ನೈನಲ್ಲಿ ವಿವಾಹವಾದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅರ್ಜುನ್​; ಇಲ್ಲಿವೆ ಚಿತ್ರಗಳು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ10 hours ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ11 hours ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ13 hours ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ14 hours ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ16 hours ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ4 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ4 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌