ರೊಸೇಯೂ (ಡೊಮಿನಿಕಾ): ವೆಸ್ಟ್ ಇಂಡೀಸ್(IND vs WI) ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹಲವು ದಾಖಲೆಗಳ ಮೇಲೆ ಕಣ್ಣಿಟ್ಟಿರುವ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(virat kohli) ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದಾರೆ. ಇದಕ್ಕೆ ಕಾರಣ ಅವರು 80 ಎಸೆತಗಳನ್ನು ಎದುರಿಸಿದ ಬಳಿಕ ಬಾರಿಸಿದ ಮೊದಲ ಬೌಂಡರಿ(virat kohli boundary).
ಮೊದಲ ದಿನದಾಟದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಮೂಲಕ ಭಾರತಕ್ಕೆ ದಿಟ್ಟ ಆರಂಭ ಒದಗಿಸಿದ್ದ ರೋಹಿತ್-ಜೈಸ್ವಾಲ್ ಕ್ರಮವಾಗಿ 30 ಮತ್ತು 40 ರನ್ಗಳಿಂದ 2ನೇ ದಿನ ಇನಿಂಗ್ಸ್ ಮುಂದುವರಿಸಿದರು. ದ್ವಿತೀಯ ದಿನದಾಟದಲ್ಲಿ ತಾಳ್ಮೆಯುತ ಬ್ಯಾಟಿಂಗ್ ನಡೆಸಿದ ಈ ಜೋಡಿ ಶತಕ ಬಾರಿಸಿ ಸಂಭ್ರಮಿಸಿತು. ಜತೆಗೆ ಮೊದಲ ವಿಕೆಟ್ಗೆ 229 ರನ್ಗಳ ಜತೆಯಾಟ ನಡೆಸಿತು. ಉಭಯ ಆಟಗಾರರ ಶತಕದ ಆಟದ ನೆರವಿನಿಂದ ಭಾರತ 2 ವಿಕೆಟ್ನಷ್ಟಕ್ಕೆ 312 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದೆ.
ಶುಭಮನ್ ಗಿಲ್ ಅವರು ವಿಕೆಟ್ ಪತನದ ಬಳಿಕ ಬ್ಯಾಟಿಂಗ್ ನಡೆಸಲು ಬಂದ ವಿರಾಟ್ ಕೊಹ್ಲಿ ತಾಳ್ಮೆಯುವ ಬ್ಯಾಟಿಂಗ್ಗೆ ಒತ್ತು ನೀಡಿದರು. ಹೀಗಾಗಿ ಒಂದು,ಎರಡು ರನ್ಗಳನಷ್ಟೇ ಗಳಿಸುತ್ತಾ ಸಾಗಿದರು. 80 ಎಸೆತ ಎದುರಿಸಿದ ವೇಳೆ ಅವರು ಮೊದಲ ಬೌಂಡರಿ ಬಾರಿಸಿದರು. ಸಾಮಾನ್ಯವಾಗಿ ಕೊಹ್ಲಿ ಇಷ್ಟು ನಿಧಾನಗತಿಯಲ್ಲಿ ಆಡುವುದಿಲ್ಲ. 80 ಎಸೆತದ ಬಳಿಕ ಬೌಂಡರಿ ಬಾರಿಸಿದ ವೇಳೆ ಕೊಹ್ಲಿ ಕ್ರಿಕೆಟ್ನಲ್ಲಿ ಮೊದಲ ಬೌಂಡರಿ ಬಾರಿಸಿದ ರೀತಿಯಲ್ಲಿ ಸಂಭ್ರಮಿಸಿದ್ದಾರೆ. ಈ ವಿಡಿಯೊ ವೈರಲ್(viral video) ಆಗಿದೆ.
ಇದನ್ನೂ ಓದಿ Virat Kohli : ಕೊಹ್ಲಿಗೆ ಎಲ್ಲೇ ಹೋದರೂ ಅಭಿಮಾನಿಗಳು; ವಿಂಡೀಸ್ನಲ್ಲೂ ಮುತ್ತಿಗೆ ಹಾಕಿದ ಫ್ಯಾನ್ಸ್
Virat Kohli celebrating his first boundary of the innings.
— Johns. (@CricCrazyJohns) July 14, 2023
What a fantastic character.pic.twitter.com/f0DLJ8No4f
ಸದ್ಯ 96 ಎಸೆತ ಎದುರಿಸಿ 36 ರನ್ ಗಳಿಸಿರುವ ಕೊಹ್ಲಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮತ್ತೊಂದು ತುದಿಯಲ್ಲಿ ಜೈಸ್ವಾಲ್ 143 ರನ್ ಗಳಿಸಿದ್ದಾರೆ. ಅರ್ಧಶತಕದ ಜತೆಯಾಟ ನಡೆಸಿರುವ ಈ ಜೋಡಿ ಮೂರನೇ ದಿನವಾದ ಶುಕ್ರವಾರ ಈ ಮೊತ್ತವನ್ನು ಹೆಚ್ಚಿಸುವ ವಿಶ್ವಾಸದಲ್ಲಿದ್ದಾರೆ.
ರಿಚರ್ಡ್ಸ್ ದಾಖಲೆ ಮುರಿಯುವ ಸನಿಹದಲ್ಲಿ ಕೊಹ್ಲಿ
ಕೊಹ್ಲಿ ಅವರು ಇನ್ನು 26 ರನ್ ಬಾರಿಸಿದರೆ ವಿವ್ ರಿಚರ್ಡ್ಸ್ ಅವರ ದಾಖಲೆಯೊಂದು ಪತನಗೊಳ್ಳಲಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ರಿಚರ್ಡ್ಸ್ ಅವರ ರನ್ನನ್ನು ಹಿಂದಿಕ್ಕಲಿದ್ದಾರೆ. ರಿಚರ್ಡ್ಸ್ ಟೆಸ್ಟ್ನಲ್ಲಿ 8540 ರನ್ ಗಳಿಸಿದ್ದಾರೆ. ಸದ್ಯ ವಿರಾಟ್ ಅವರು 8515* ರನ್ ಬಾರಿಸಿದ್ದಾರೆ. ಇನ್ನು 26 ರನ್ ಬಾರಿಸಿದರೆ ಕೊಹ್ಲಿ ಈ ರೇಸ್ನಲ್ಲಿ ಮುಂದೆ ಸಾಗಲಿದ್ದಾರೆ. ಅವರು 36 ರನ್ ಗಳಿಸುವುದಕ್ಕೂ ಮುನ್ನ ಈ ದಾಖಲೆ ಮುರಿಯಲು 62 ರನ್ಗಳ ಅವಶ್ಯಕತೆ ಇತ್ತು. ಸದ್ಯ 36 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆ ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್(Sachin Tendulkar) ಹೆಸರಿನಲ್ಲಿದೆ. ಸಚಿನ್ 15921 ರನ್ ಗಳಿಸಿದ್ದಾರೆ.