Site icon Vistara News

IND vs WI T20 | ಟೀಮ್‌ ಇಂಡಿಯಾದ ನಾಯಕ ವಿಶ್ವ ದಾಖಲೆಯ ಒಡೆಯ

IND vs WI T20

ಪೋರ್ಟ್‌ ಆಫ್‌ ಸ್ಪೇನ್‌ : ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ೨೦ ಸರಣಿಯ (IND vs WI T20) ಮೊದಲ ಪಂದ್ಯದಲ್ಲಿ 64 ರನ್ ಬಾರಿಸಿದ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮ ವಿಶ್ವ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ಅವರೀಗ ಟಿ೨೦ ಮಾದರಿಯಲ್ಲಿ ಗರಿಷ್ಠ ರನ್‌ ಬಾರಿಸಿದ ಕ್ರಿಕೆಟಗ ಎನಿಸಿಕೊಂಡಿದ್ದಾರೆ. ಅವರು ನ್ಯೂಜಿಲೆಂಡ್‌ನ ಮಾರ್ಟಿನ್‌ ಗಪ್ಟಿಲ್‌ (೩,೩೯೯ ರನ್‌) ಅವರ ದಾಖಲೆಯನ್ನು ಮುರಿದಿದ್ದಾರೆ.

ಪಂದ್ಯ ಆರಂಭಕ್ಕೆ ಮೊದಲು ರೋಹಿತ್‌ ಅವರಿಗೆ ಈ ದಾಖಲೆಯನ್ನು ಮುರಿಯಲು ೨೧ ರನ್‌ಗಳ ಅಗತ್ಯವಿತ್ತು. ಆದರೆ, ೬೪ ರನ್‌ ಬಾರಿಸಿದ ರೋಹಿತ್‌ ದಾಖಲೆಯನ್ನು ತಮ್ಮೆಸರಿಗೆ ಬರೆಸಿಕೊಂಡರು. ರೋಹಿತ್‌ ೧೨೯ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದು, ಅದರಲ್ಲಿ ನಾಲ್ಕು ಶತಕ ಹಾಗೂ ೨೬ ಅರ್ಧ ಶತಕಗಳು ಸೇರಿಕೊಂಡಿವೆ. ಹೀಗಾಗಿ ಚುಟುಕು ಮಾದರಿಯಲ್ಲಿ ಗರಿಷ್ಠ ಶತಕ ಬಾರಿಸಿದ ಖ್ಯಾತಿಯೂ ಅವರ ಹೆಸರಲ್ಲಿದೆ. ಗಪ್ಟಿಲ್ ಅವರು ೧೧೬ ಪಂದ್ಯಗಳಲ್ಲಿ ೩೩೯೯ ರನ್‌ ಬಾರಿಸಿದ್ದಾರೆ. ಇದರಲ್ಲಿ ೨ ಶತಕ ಹಾಗೂ ೨೦ ಅರ್ಧ ಶತಕ ಸೇರಿಕೊಂಡಿದೆ.

ವಿರಾಟ್‌ ಕೊಹ್ಲಿ ೯೯ ಪಂದ್ಯಗಳಲ್ಲಿ ೩೩೦೮ ಬಾರಿಸುವ ಮೂಲಕ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ, ಅವರು ಶತಕ ಬಾರಿಸಿಲ್ಲ. ಆದರೆ, ೩೦ ಅರ್ಧ ಶತಕಗಳು ಸೇರಿಕೊಂಡಿವೆ.

ಇದನ್ನೂ ಓದಿ : ಕಳಚಿದ ಕೈ ಮೂಳೆಯನ್ನು ಮೈದಾನದಲ್ಲೇ ಮರುಜೋಡಿಸಿದ ರೋಹಿತ್‌ ಶರ್ಮ!

Exit mobile version