Site icon Vistara News

ind vs wi : ಭಾರತ- ವೆಸ್ಟ್​ ಇಂಡೀಸ್ ಮೂರನೇ ಟಿ20 ಪಂದ್ಯ ನಡೆಯುವ ಪಿಚ್ ಹೇಗಿದೆ?

IND VS WI

ಗಯಾನ: ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಆಗಸ್ಟ್ 8ರಂದು ನಡೆಯಲಿರುವ ಐದು ಪಂದ್ಯಗಳ ಟಿ 20 ಐ ಸರಣಿಯಲ್ಲಿ ಭಾರತ ಮೂರನೇ ಬಾರಿಗೆ ವೆಸ್ಟ್ ಇಂಡೀಸ್ (ind vs wi) ತಂಡವನ್ನು ಎದುರಿಸಲಿದೆ. ಮೊದಲ ಎರಡು ಟಿ20 ಪಂದ್ಯಗಳಲ್ಲಿ ಸತತ ಎರಡು ಸೋಲುಗಳ ಹಿನ್ನೆಲೆಯಲ್ಲಿ ಭಾರತಕ್ಕೆ ಈ ಗೆಲುವು ಅನಿವಾರ್ಯ 150 ರನ್​ಗಳ ಗುರಿ ಬೆನ್ನಟ್ಟುವಲ್ಲಿ ವಿಫಲವಾದ ಭಾರತ, 152 ರನ್​​ಗಳನ್ನು ಡಿಫೆಂಡ್ ಮಾಡದೇ ಇರುವುದು ಎರಡು ಪಂದ್ಯಗಳಲ್ಲಿ ಭಾರತದ ಎರಡು ಸೋಲಿಗೆ ಕಾರಣ. ತಿಲಕ್ ವರ್ಮಾ ತಮ್ಮ ಚೊಚ್ಚಲ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ, ಅವರು ಇಲ್ಲಿಯವರೆಗೆ ಎರಡು ಪಂದ್ಯಗಳಲ್ಲಿ 90 ರನ್ ಗಳಿಸಿದ್ದಾರೆ ಮತ್ತು 142.86 ಸರಾಸರಿಯಲ್ಲಿ ಬ್ಯಾಟ್​ ಮಾಡಿದ್ದಾರೆ.

ಅವರು ಎರಡನೇ ಪಂದ್ಯದಲ್ಲಿ ತಮ್ಮ ಚೊಚ್ಚಲ ಅರ್ಧಶತಕವನ್ನು ಬಾರಿಸಿದರು, 41 ಎಸೆತಗಳಲ್ಲಿ ಆರು ಬೌಂಡರಿಗಳನ್ನು ಒಳಗೊಂಡಂತೆ 51 ರನ್ ಗಳಿಸಿದರು. ಬೌಲಿಂಗ್ ವಿಭಾಗದಲ್ಲಿ, ಚಹಲ್ ಮತ್ತು ಹಾರ್ದಿಕ್ ಪಾಂಡ್ಯ ಇಬ್ಬರೂ ಎರಡು ಪಂದ್ಯಗಳಲ್ಲಿ ತಲಾ 4 ವಿಕೆಟ್​ಗಳನ್ನು ಗಳಿಸಿದ್ದಾರೆ ಮತ್ತು ಮುಂಬರುವ ಪಂದ್ಯಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಅಪರೂಪದ ಸರಣಿ ಸೋಲನ್ನು ತಪ್ಪಿಸಲು ಭಾರತವು ಗೆಲುವಿನ ಹಾದಿಯಲ್ಲಿ ಪುಟಿದೇಳಲು ಪ್ರಯತ್ನಿಸುತ್ತದೆ.

ಇದನ್ನೂ ಓದಿ : ind vs wi : ಅಪಾಯದಲ್ಲಿದೆ ಭಾರತದ ಸರಣಿ ಗೆಲುವಿನ ದಾಖಲೆ

ನಿಕೋಲಸ್ ಪೂರನ್ ಅವರ ಮಾಸ್ಟರ್ ಕ್ಲಾಸ್ ಆಟದ ಕಾರಣ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಶಕ್ತಿ ಬಂದಿದೆ . ಇದರೊಂದಿಗೆ ಎರಡನೇ ಟಿ20 ಪಂದ್ಯವನ್ನು ಗೆದ್ದು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಪೂರನ್ ಎರಡು ಪಂದ್ಯಗಳಲ್ಲಿ 108 ರನ್ ಗಳಿಸಿದ್ದು, ಎರಡನೇ ಪಂದ್ಯದಲ್ಲಿ ಕೇವಲ 40 ಎಸೆತಗಳಲ್ಲಿ 67 ರನ್ ಗಳಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ರೊಮಾರಿಯೊ ಶೆಫರ್ಡ್ 4 ವಿಕೆಟ್ ಪಡೆದರೆ, ಅಕೆಲ್ ಹುಸೇನ್ 5.75ರ ಸರಾಸರಿಯಲ್ಲಿ 3 ವಿಕೆಟ್ ಪಡೆದಿದ್ದಾಋಎ. ಸರಣಿಯನ್ನು ಗೆಲ್ಲುವ ಸಲುವಾಗಿ ವೆಸ್ಟ್ ಇಂಡೀಸ್ ತಮ್ಮ ಗೆಲುವಿನ ವೇಗವನ್ನು ಮುಂದುವರಿಸಲು ಎದುರು ನೋಡುತ್ತಿದೆ.

ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಉಭಯ ತಂಡಗಳು 27 ಬಾರಿ ಮುಖಾಮುಖಿಯಾಗಿದ್ದು, ಟೀಮ್ ಇಂಡಿಯಾ 17 ಗೆಲುವುಗಳೊಂದಿಗೆ ಅಗ್ರಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ 9 ಗೆಲುವುಗಳನ್ನು ಸಾಧಿಸಿದೆ. ವೆಸ್ಟ್ ಇಂಡೀಸ್​ ಉಭಯ ತಂಡಗಳು 9 ಬಾರಿ ಮುಖಾಮುಖಿಯಾಗಿದ್ದು, ವೆಸ್ಟ್ ಇಂಡೀಸ್ 5 ಪಂದ್ಯಗಳನ್ನು ಗೆದ್ದರೆ, ಭಾರತ ಉಳಿದ 4 ಪಂದ್ಯಗಳನ್ನು ಗೆದ್ದಿದೆ.

ಪಿಚ್​ ಪರಿಸ್ಥಿತಿ ಹೇಗಿದೆ?

ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಟಿ20 ಪಂದ್ಯಕ್ಕೆ ಮೈದಾನದಲ್ಲಿ ಸ್ಕೋರ್ ಮಾಡುವುದು ಕಷ್ಟಕರವಾಗಿತ್ತು. ಸ್ಪಿನ್ನರ್​ಗಳು ವಿಶೇಷವಾಗಿ ಮಿಂಚಿದರು. ಅದೇ ಪಿಚ್ ಬಳಸಿದರೆ, ರನ್ ಗಳಿಸುವುದು ಕಠಿಣವಾಗಬಹುದು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡುವುದು ಉತ್ತಮ ಆಯ್ಕೆ. ಗಯಾನದಲ್ಲಿ ಎರಡನೇ ಪಂದ್ಯದ ವೇಳೆ ಮಳೆ ಬರಲಿಲ್ಲ. ಮೂರನೇ ಪಂದ್ಯಕ್ಕೂ ಬಿಡುವು ಸಿಗುವ ಸಾಧ್ಯತೆಗಳಿವೆ.

ಸಂಭಾವ್ಯ ತಂಡಗಳು

ಭಾರತ: ಶುಬ್ಮನ್ ಗಿಲ್, ಇಶಾನ್ ಕಿಶನ್ , ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಚಹಲ್, ಅರ್ಶ್​ದೀಪ್​ ಸಿಂಗ್, ಮುಖೇಶ್ ಕುಮಾರ್.

ವೆಸ್ಟ್​ ಇಂಡೀಸ್​: ಕೈಲ್ ಮೇಯರ್ಸ್, ಬ್ರೆಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್, ನಿಕೋಲಸ್ ಪೂರನ್​, ಶಿಮ್ರಾನ್ ಹೆಟ್ಮಾಯರ್​, ರೋವ್ಮನ್ ಪೊವೆಲ್, ಜೇಸನ್ ಹೋಲ್ಡರ್, ರೊಮಾರಿಯೊ ಶೆಫರ್ಡ್, ಅಕೇಲ್ ಹೋಸಿನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್.

ಮುಖಾಮುಖಿ ದಾಖಲೆ

ಆಡಿದ ಪಂದ್ಯಗಳು – 27

ವೆಸ್ಟ್ ಇಂಡೀಸ್ ಗೆಲುವು – 9

ಭಾರತ ಗೆಲುವು – 17

ಫಲಿತಾಂಶವಿಲ್ಲ – 1

ನೇರ ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್ ವಿವರಗಳು

ಪಂದ್ಯ ಸಮಯ: ರಾತ್ರಿ 08:00 ಗಂಟೆಗೆ

ನೇರ ಪ್ರಸಾರ: ಡಿಡಿ ಸ್ಪೋರ್ಟ್ಸ್

ಲೈವ್ ಸ್ಟ್ರೀಮಿಂಗ್: ಜಿಯೋ ಸಿನೆಮಾ ಮತ್ತು ಫ್ಯಾನ್ಕೋಡ್

Exit mobile version