Site icon Vistara News

IND vs WI: ವಿಶಿಷ್ಟ ರೀತಿಯ ಕಠಿಣ ಅಭ್ಯಾಸ ನಡೆಸಿದ ಟೀಮ್​ ಇಂಡಿಯಾ ಆಟಗಾರರು; ವಿಡಿಯೊ ವೈರಲ್​

Team India

ರೊಸೇಯೂ (ಡೊಮಿನಿಕಾ): ಆತಿಥೇಯ ವೆಸ್ಟ್​ ಇಂಡೀಸ್ (IND vs WI)ವಿರುದ್ಧದ ಮಹತ್ವದ ಸರಣಿಗೆ ಪ್ರವಾಸಿ ಭಾರತ ತಂಡ ಸಜ್ಜಾಗುತ್ತಿದೆ. ಉಭಯ ತಂಡಗಳ ನಡುವೆ ಬುಧವಾರ ಇಲ್ಲಿ ಮೊದಲ ಟೆಸ್ಟ್‌ ಆರಂಭವಾಗಲಿದೆ. ಈ ಪಂದ್ಯಕ್ಕೆ ಭಾರತೀಯ ಆಟಗಾರರು ವಿಶಿಷ್ಟ ಶೈಲಿಯ ಅಭ್ಯಾಸ ನಡೆಸಿದ್ದಾರೆ.

ಭಾರತೀಯ ಆಟಗಾರರು ತ್ರಿಕೋನಾಕಾರದ ಫ್ಲೈಯಿಂಗ್ ಡಿಸ್ಕ್ ಎಸೆದು ಒಂದೇ ಕೈಯಲ್ಲಿ ಹಿಡಿಯುವ ಮೂಲಕ ಫೀಲ್ಡಿಂಗ್​ ಅಭ್ಯಾಸ ನಡೆಸಿದ್ದಾರೆ. “ಒಂದು ಅತ್ಯುತ್ತಮವಾದ ಫೀಲ್ಡಿಂಗ್ ಡ್ರಿಲ್. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ಗೆ ಮುಂಚಿತವಾಗಿ ಭಾರತ ತಂಡ ತಮ್ಮ ಫೀಲ್ಡಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿದೆ”ಎಂದು ಬಿಸಿಸಿಐ(BCCI) ಆಟಗಾರರು ಅಭ್ಯಾಸ ನಡೆಸುವ ವಿಡಿಯೊವನ್ನು ಹಂಚಿಕೊಂಡು ಈ ಶಿರ್ಷಿಕೆ ಬರೆದಿದೆ.

ವಿರಾಟ್​ ಕೊಹ್ಲಿ(virat kohli), ಶುಭಮನ್​ ಗಿಲ್(shubman gill)​, ಇಶಾನ್​ ಕಿಶನ್(ishan kishan)​ ಸೇರಿ ಹಲವರು ಫ್ಲೈಯಿಂಗ್ ಡಿಸ್ಕ್ ಎಸೆದು ಅಭ್ಯಾಸ ನಡೆಸುತ್ತಿರುವ ವಿಡಿಯೊ ವೈರಲ್(viral video)​ ಆಗಿದೆ.

ಕೆರಿಬಿಯನ್​ ಪ್ರವಾಸದಲ್ಲಿ ಭಾರತ ತಂಡ 2 ಟೆಸ್ಟ್‌, 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ಏರ್ಪಡಲಿದೆ. ಹೆಚ್ಚುವರಿಯಾಗಿ 2 ಟಿ20 ಪಂದ್ಯಗಳನ್ನು ಅಮೆರಿಕದಲ್ಲಿ ಆಡಲಾಗುವುದು. ಮೊದಲು 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಪಂದ್ಯಗಳ ತಾಣ ರೊಸೇಯು (ಜುಲೈ 12-16) ಮತ್ತು ಪೋರ್ಟ್‌ ಆಫ್ ಸ್ಪೇನ್‌ (ಜುಲೈ. 20-24). ಪೋರ್ಟ್‌ ಆಫ್ ಸ್ಪೇನ್‌ನ ಕ್ವೀನ್ಸ್‌ಪಾರ್ಕ್‌ ಓವಲ್‌ನಲ್ಲಿ ನಡೆಯುವ 100ನೇ ಟೆಸ್ಟ್‌ ಪಂದ್ಯ ಇದೆಂಬುದು ವಿಂಡೀಸ್‌ ಕ್ರಿಕೆಟ್‌ ಪಾಲಿಗೆ ಸಂಭ್ರಮದ ಸಂಗತಿ. ಇದು ಭಾರತದ ಪಾಲಿಗೆ 3ನೇ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಆವೃತ್ತದ ಮೊದಲ ಸರಣಿಯಾಗಲಿದೆ.

ಇದನ್ನೂ ಓದಿ ind vs wi : ವೆಸ್ಟ್​ ಇಂಡೀಸ್ ತಲುಪಿದ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಕೊಹ್ಲಿ ಆಗಮನ ಯಾವಾಗ?

ಅಭ್ಯಾಸದ ವೇಳೆ ಜೈಸ್ವಾಲ್​ ಅವರು ರೋಹಿತ್​ ಜತೆ ಇನಿಂಗ್ಸ್​ ಆರಂಭಿಸಿದ್ದನ್ನು ಗಮನಿಸುವಾಗ ಈ ಹಿಂದೆ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದ ಶುಭಮನ್​ ಗಿಲ್​(shubman gill) ಅವರು ಈ ಸರಣಿಯಲ್ಲಿ ರೋಹಿತ್​ ಜತೆ ಭಾರತದ ಇನಿಂಗ್ಸ್​ ಆರಂಭಿಸುವುದು ಅನುಮಾನ ಎನ್ನಲಾಗಿದೆ. ಅವರು ಚೇತೇಶ್ವರ್​ ಪೂಜಾರ ಅವರಿಂದ ತೆರವುಗೊಂಡ ದ್ವಿತೀಯ ಸ್ಥಾನದಲ್ಲಿ ಬ್ಯಾಟ್​ ಬೀಸುವ ಸಾಧ್ಯತೆ ದಟ್ಟವಾಗಿದೆ.

ಈಗಾಗಲೇ ಬಿಸಿಸಿಐ ಕೂಡ ಓರ್ವ ಉತ್ತಮ ಎಡಗೈ ಆರಂಭಿಕ ಆಟಗಾರನ ಹುಡುಕಾಟದಲ್ಲಿತ್ತು. ಇದೀಗ ಈ ಸ್ಥಾನಕ್ಕೆ ಯುವ ಆಟಗಾರ ಜೈಸ್ವಾಲ್ ಅವರನ್ನು ಆಯ್ಕೆ ಮಾಡಿ ಅವರನ್ನು ಟೀಮ್​ ಇಂಡಿಯಾದಲ್ಲಿ ಬೆಳೆಸಲು ಬಿಸಿಸಿಐ ಮುಂದಾಗಿದೆ. ಇದೇ ಕಾರಣಕ್ಕೆ ಅವರನ್ನು ರೋಹಿತ್​ ಜತೆ ಅಭ್ಯಾಸ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿಸಿದಂತೆ ತೋರುತ್ತಿದೆ. ಕಳೆದ ಕೆಲವು ಸರಣಿಗಳಲ್ಲಿ ಬ್ಯಾಟಿಂಗ್​ ವೈಫಲ್ಯ ಕಂಡಿದ್ದ ರೋಹಿತ್​ ಕೂಡ ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಬ್ಯಾಟಿಂಗ್​ ಫಾರ್ಮ್​ಗೆ ಮರಳಿರುವ ಸೂಚನೆ ನೀಡಿದ್ದಾರೆ.

ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉ.ನಾ), ಕೆಎಸ್ ಭರತ್ (ವಿ.ಕೀ), ಇಶಾನ್ ಕಿಶನ್ (ವಿ.ಕೀ), ಆರ್ ಅಶ್ವಿನ್, ಆರ್ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್, ನವದೀಪ್ ಸೈನಿ.

Exit mobile version