Site icon Vistara News

INDvsWI 2023 : ವಿಂಡೀಸ್ ಪ್ರವಾಸದಲ್ಲಿನ ಪಂದ್ಯಗಳು ಮರು ಆಯೋಜನೆ?

india tour tor west indies

#image_title

ಮುಂಬಯಿ: ಭಾರತದ ವೆಸ್ಟ್ ಇಂಡೀಸ್ ಪ್ರವಾಸವು ವೇಳಾಪಟ್ಟಿ (INDvsWI 2023) ಗೊಂದಲದಲ್ಲಿದೆ. ಜುಲೈ 12ರಂದು ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ಆತಿಥೇಯರನ್ನು ಎದುರಿಸಲು ಸಜ್ಜಾಗಿದೆ. ಆದರೆ ವೆಸ್ಟ್​ ಇಂಡೀಸ್ ತಂಡ ಸಜ್ಜಗೊಂಡಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಟೆಸ್ಟ್ ಪಂದ್ಯಗಳ ಮರು ಆಯೋಜನೆಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ವೆಸ್ಟ್ ಇಂಡೀಸ್ ಜುಲೈ 9ರವರೆಗೆ ಐಸಿಸಿ ವಿಶ್ವಕಪ್ 2023ರ ಅರ್ಹತಾ ಪಂದ್ಯಗಳಲ್ಲಿ ಭಾಗಿಯಾಗಲಿದೆ. ಅದು ಜಿಂಬಾಬ್ವೆಯ ಹರಾರೆಯಲ್ಲಿ ನಡೆಯಲಿದೆ. ಆ ಪಂದ್ಯ ಮುಗಿದ ಬಳಿಕ ರೋಸೌಗೆ ಎರಡು ದಿನಗಳ ಪ್ರಯಾಣದೊಂದಿಗೆ ಬಂದು ನೇರವಾಗಿ ಟೆಸ್ಟ್​ ಪಂದ್ಯದಲ್ಲಿ ಆಡುವುದು ಕಷ್ಟ ಎಂದು ಹೇಳುತ್ತಿದೆ. ಹೀಗಾಗಿ ಮರು ನಿಗದಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.

ಜುಲೈ 9 ರಂದು ಜಿಂಬಾಬ್ವೆಯಲ್ಲಿ ವಿಶ್ವ ಕಪ್ ಅರ್ಹತಾ ಪಂದ್ಯಗಳು ಪೂರ್ಣಗೊಂಡ ಮೂರೇ ದಿನಗಳ ನಂತರ, ಕೆರಿಬಿಯನ್ ತಂಡವು ಜುಲೈ 12ರಿಂದ ಡೊಮಿನಿಕಾದಲ್ಲಿ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಭಾರತವನ್ನು ಎದುರಿಸಲಿದೆ. ಹರಾರೆಯಿಂದ ಕೆರಿಬಿಯನ್ ದ್ವೀಪದ ರಾಜಧಾನಿ ನಗರವಾದ ರೋಸೌಗೆ ಪ್ರಯಾಣಿಸುವ ವ್ಯವಸ್ಥೆಯೇ ವೇಳಾಪಟ್ಟಿಗೆ ಸಮಸ್ಯೆಯೊಡ್ಡಿದೆ. ಸಾಮಾನ್ಯವಾಗಿ ಅಂತಾರರಾಷ್ಟ್ರೀಯ ಪ್ರಯಾಣವು ಸುಮಾರು ಎರಡು ದಿನಗಳನ್ನು ತೆಗೆದುಕೊಳ್ಳುತ್ತದೆ. ತಕ್ಷಣವೇ ಟೆಸ್ಟ್​ ಪಂದ್ಯಕ್ಕೆ ಸಜ್ಜಾಗುವುದು ಕಷ್ಟ ಎನ್ನಲಾಗಿದೆ.

ವೆಸ್​​ ಇಂಡೀಸ್​ ಕ್ರಿಕೆಟ್​ ಸಂಸ್ಥೆ ಸೀಮಿತ ಓವರ್​ಗಳ ಪಂದ್ಯಗಳು ಮತ್ತು ಟೆಸ್ಟ್ ಕ್ರಿಕೆಟ್​ಗೆ ವಿಭಿನ್ನ ತಂಡಗಳನ್ನು ಆಡಿಸುತ್ತಿದೆ. ಆದರೆ ಈ ಬಾರಿ ಅದನ್ನು ನಿಭಾಯಿಸುವುದು ಅಷ್ಟೊಂದು ಸುಲಭವಲ್ಲ. ವಿಶ್ವ ಕಪ್​ ಅರ್ಹತಾ ಪಂದ್ಯಗಳಿಗಾಗಿ ಜಿಂಬಾಬ್ವೆಯಲ್ಲಿರುವ ಜೇಸನ್ ಹೋಲ್ಡರ್, ಕೈಲ್ ಮೇಯರ್ಸ್, ರಾಸ್ಟನ್ ಚೇಸ್ ಮತ್ತು ಅಲ್ಜಾರಿ ಜೋಸೆಫ್ ಎರಡೂ ಮಾದರಿಯ ತಂಡಗಳಲ್ಲಿ ಸ್ಥಾನ ಪಡೆಯುತ್ತಾರೆ. ಜೂನ್ 18 ರಂದು ಯುನೈಟೆಡ್ ಸ್ಟೇಟ್ಸ್ ವಿರುದ್ಧ ವೆಸ್ಟ್ ಇಂಡೀಸ್ 39 ರನ್​​ಗಳ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಈ ನಾಲ್ವರು ಆಡಿದ್ದರು.

ಇದನ್ನೂ ಓದಿ : World Cup 2023 : ಪಾಕ್​​ ತಂಡದ ಮನವಿಯನ್ನು ಸಾರಾಸಗಟ ತಿರಸ್ಕರಿಸಿದ ಬಿಸಿಸಿಐ, ಐಸಿಸಿ!

ವಿಶ್ವ ಕಪ್​ ಅರ್ಹತಾ ಸುತ್ತಿನ ಫೈನಲ್ ಪಂದ್ಯ ಅರ್ಥಹೀನವಾಗಿದೆ, ಆದ್ದರಿಂದ ನಮ್ಮ ಟೆಸ್ಟ್ ಆಟಗಾರರು ಅದರಲ್ಲಿ ಬಗವಹಿಸುವುದಿಲ್ಲ. ಅದಕ್ಕಿಂತ ಮೊದಲು ನಾವು ಫೈನಲ್ ತಲುಪುತ್ತೇವೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಎಂಬುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೂನ್ 27ಕ್ಕೆ ವಿಶ್ವ ಕಪ್​ ವೇಳಾಪಟ್ಟಿ ಪ್ರಕಟ

ದಿನ ಕಳೆದಂತೆ ಐಸಿಸಿ ವಿಶ್ವಕಪ್ ವೇಳಾಪಟ್ಟಿ (World Cup 2023) ಬಿಡುಗಡೆಗಾಗಿ ಕಾಯುವಿಕೆ ಹೆಚ್ಚಾಗುತ್ತದೆ. ವಿಶ್ವದ ಕ್ರಿಕೆಟ್​ ಅಭಿಮಾನಿಗಳ ಕೌತುಕವೂ ಹೆಚ್ಚಾಗುತ್ತಿದೆ. ನಮ್ಮ ನೆಚ್ಚಿನ ತಂಡಗಳ ಪಂದ್ಯ ಯಾವೆಲ್ಲ ದಿನಗಳು ಇವೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಅವರು ಕಾಯುತ್ತಿದ್ದಾರೆ. ಆದರೆ, ನಾನಾ ತಾಂತ್ರಿಕ ಕಾರಣಗಳಿಂದ ವೇಳಾಪಟ್ಟಿ ಬಿಡುಗಡೆ ಆಗುತ್ತಿಲ್ಲ. ಇಂದು, ನಾಳೆ ಎನ್ನುತ್ತಲೇ ದಿನ ಮುಂದಕ್ಕೆ ಹೋಗುತ್ತಿದೆ. ಇತ್ತೀಚಿನ ಬೆಳವಣಿಗೆಗಳು ಮತ್ತು ವರದಿಗಳ ಪ್ರಕಾರ, ಐಸಿಸಿ 2023 ರ ವಿಶ್ವಕಪ್ ವೇಳಾಪಟ್ಟಿಯನ್ನು ಜೂನ್ 27 ರಂದು ಬಿಡುಗಡೆ ಮಾಡಲಿದೆ. ಅಂದಿನಿಂದ ವಿಶ್ವಕಪ್ ಆರಂಭವಾಗಲಿರುವ ಅಕ್ಟೋಬರ್5ಕ್ಕೆ ಕೇವಲ 100 ದಿನಗಳು ಬಾಕಿ ಉಳಿದಿವೆ. ಹೀಗಾಗಿ ಅಷ್ಟೊಂದು ಸಮಯವಕಾಶ ಇಟ್ಟುಕೊಂಡು ವೇಳಾಪಟ್ಟಿ ಘೋಷಣೆ ಮಾಡಲು ಸಿದ್ಧತೆ ನಡೆಸಿಕೊಂಡಿದೆ.

ಬಿಸಿಸಿಐ ಮತ್ತು ಪಿಸಿಬಿ ನಡುವೆ ನಡೆಯುತ್ತಿರುವ ಒಳಜಗಳದ ಕಾರಣಕ್ಕೆ ವಿಶ್ವ ಕಪ್ ವೇಳಾಪಟ್ಟಿ ಬಿಡುಗಡೆಗೆ ಸಂಬಂಧಿಸಿದ ನಾಟಕೀಯ ತಿರುವುಗಳು ಅಭಿಮಾನಿಗಳನ್ನು ಕೆರಳಿಸುತ್ತಿದೆ. ಪ್ರತಿ ಸ್ಪರ್ಧಿ ರಾಷ್ಟ್ರಗಳ ಎರಡು ಉನ್ನತ ಕ್ರಿಕೆಟ್ ಸಂಸ್ಥೆಗಳು ಪರಸ್ಪರರ ಜಿದ್ದಿಗೆ ಬಿದ್ದಿವೆ. ಐಸಿಸಿ ಕಳುಹಿಸಿರುವ ಕರಡು ವೇಳಾಪಟ್ಟಿಗೆ ಪಿಸಿಬಿ ಇನ್ನೂ ಅನುಮೋದನೆ ನೀಡಿಲ್ಲ. ಹೀಗಾಗಿ ವೇಳಾಪಟ್ಟಿ ಬಿಡುಗಡೆಗೆ ಅಡಚಣೆ ಉಂಟಾಗುತ್ತಿದೆ. ಬಿಸಿಸಿಐ ಕೂಡ ತನ್ನ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದೆ.

ವಿಶ್ವ ಕಪ್ ವೇಳಾಪಟ್ಟಿಗೆ ನಾವು ನಮ್ಮ ಪಾಡಿಗೆ ಅನುಮೋದನೆ ನೀಡುವುದು ಕಷ್ಟ. ಯಾಕೆಂದರೆ ಅಲ್ಲಿಗೆ ನಮ್ಮ ತಂಡ ಪ್ರಯಾಣ ಮಾಡುವ ವಿಚಾರವನ್ನು ನಮ್ಮ ಸರಕಾರ ತೀರ್ಮಾನ ಮಾಡಬೇಕು ನಾವು ಐಸಿಸಿಗೆ ಪತ್ರ ಬರೆದಿದ್ದೇವೆ ಭಾರತದ ವಿಷಯಕ್ಕೆ ಬಂದಾಗ ನಮ್ಮಲ್ಲಿಗೆ ಬರುವ ವಿಷಯವನ್ನು ಅಲ್ಲಿನ ಸರಕಾರ ನಿರ್ಧಾರ ಮಾಡುತ್ತದೆ ಎಂದಾದರೆ ನಮ್ಮ ಸರಕಾರವೂ ನಿರ್ಧಾರ ಮಾಡಬೇಕಾಗುತ್ತದೆ ಎಂದು ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಜಾಮ್ ಸೇಥಿ ಪತ್ರ ಬರೆದಿದ್ದಾರೆ.

Exit mobile version