ಮುಂಬಯಿ: ಜುಲೈ 6 ರಿಂದ ಆರಂಭಗೊಳ್ಳಲಿರುವ ಜಿಂಬಾಬ್ವೆ (IND vs ZIM) ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಈಗಾಗಲೇ ಭಾರತ ತಂಡ ಪ್ರಕಟಗೊಂಡಿದೆ. ಶುಭಮನ್ ಗಿಲ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಅಂತಿಮ ಕ್ಷಣದಲ್ಲಿ ಬಿಸಿಸಿಐ ತಂಡದಲ್ಲಿ ಮೂರು ಬದಲಾವಣೆ ಮಾಡಿದೆ.
ಚಂಡಮಾರುತದಿಂದ ಬಾರ್ಬಡೋಸ್‌ನಲ್ಲಿ ಸಿಲುಕಿರುವ ಟಿ20 ವಿಶ್ವಕಪ್ ತಂಡದ ಭಾಗವಾಗಿದ್ದ, ಸಂಜು ಸ್ಯಾಮ್ಸನ್, ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಬದಲಿಗೆ ಸಾಯಿ ಸುದರ್ಶನ್(Sai Sudharsan), ಜಿತೇಶ್ ಶರ್ಮಾ(Jitesh Sharma) ಮತ್ತು ಹರ್ಷಿತ್ ರಾಣಾ(Harshit Rana) ಅವರನ್ನು ಮೊದಲ ಎರಡು ಪಂದ್ಯಗಳಿಗಾಗಿ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಪರಿಷ್ಕೃತ ತಂಡವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಎಕ್ಸ್ನಲ್ಲಿ ಪ್ರಕಟಿಸಿದೆ.
ಹರ್ಷಿತ್ ರಾಣಾ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮೊನಚಾದ ಬೌಲಿಂಗ್ ಮೂಲಕ ಒಟ್ಟು 19 ವಿಕೆಟ್ ಕಿತ್ತು ಮಿಂಚಿದ್ದರು. ಮಾಯಾಂಕ್ ಅಗರ್ವಾಲ್ ವಿಕೆಟ್ ಕಿತ್ತು ದುರ್ವರ್ತನೆ ತೋರಿದ ಕಾರಣಕ್ಕೆ ದಂಡ ಮತ್ತು ಒಂದು ಪಂದ್ಯದ ನಿಷೇಧ ಶಿಕ್ಷೆ ಕೂಡ ಎದುರಿಸಿದ್ದರು.
ಮೊದಲ 2 ಪಂದ್ಯಕ್ಕೆ ಪರಿಷ್ಕೃತ ತಂಡ
ಶುಭಮನ್ ಗಿಲ್ (ನಾಯಕ), ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಧ್ರುವ್ ಜುರೆಲ್ (ವೀಕಿ), ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ, ಸಾಯಿ ಸುದರ್ಶನ್, ಜಿತೇಶ್ ಶರ್ಮಾ (ವೀಕಿ) , ಹರ್ಷಿತ್ ರಾಣಾ.
ಇದನ್ನೂ ಓದಿ Team India : ಜಿಂಬಾಬ್ವೆ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟ, ಶುಭ್ಮನ್ ಗಿಲ್ಗೆ ನಾಯಕತ್ವ
5 ಪಂದ್ಯಗಳ ಟಿ20 ಸರಣಿ ಇದಾಗಿದ್ದು, ಅಭಿಷೇಕ್ ಶರ್ಮಾ, ನಿತೀಶ್ ರೆಡ್ಡಿ, ರಿಯಾನ್ ಪರಾಗ್ 2024 ರ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಫಲಿತಾಂಶವಾಗಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲಿ ಪಂದ್ಯಗಳನ್ನಾಡಲಿದ್ದಾರೆ. ಪರಾಗ್ ಅಸ್ಸಾಂ ನಿಂದ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಮೊದಲ ಕ್ರೀಡಾಪಟುವಾಗಿದ್ದಾರೆ.
ವೇಳಾಪಟ್ಟಿ: ಭಾರತದ ಜಿಂಬಾಬ್ವೆ ಪ್ರವಾಸ
1ನೇ ಟಿ20: ಜುಲೈ 6, ಹರಾರೆ, ಸಂಜೆ 4.30
2ನೇ ಟಿ20: ಜುಲೈ 7, ಹರಾರೆ, ಸಂಜೆ 4.30
3ನೇ T20: ಜುಲೈ 10, ಹರಾರೆ, ಸಂಜೆ 4.30
4ನೇ T20: ಜುಲೈ 13, ಹರಾರೆ, ಸಂಜೆ 4.30
5 ನೇ T20: ಜುಲೈ 14, ಹರಾರೆ, ಸಂಜೆ 4.30