Site icon Vistara News

IND vs AUS: ಭಾರತ-ಆಸೀಸ್​ ಪಂದ್ಯಕ್ಕೆ ಕ್ಷಣಗಣನೆ; ಮಳೆ ಕಾಟ ಇದೆಯೇ?; ಇಲ್ಲಿದೆ ಹವಾಮಾನ ವರದಿ

rohit sharma and pat cummins

ಚೆನ್ನೈ: ಆಸ್ಟ್ರೇಲಿಯಾ ಮತ್ತು ಭಾರತ ವಿರುದ್ಧ ಇಂದು, ಚೆನ್ನೈಯಲ್ಲಿ(IND vsAUS) ನಡೆಯುವ ವಿಶ್ವಕಪ್​(icc world cup 2023) ಪಂದ್ಯವನ್ನು ಕಣ್ತುಂಬಿಕೊಳ್ಳಲು ಕಾದು ಕುಳಿತ ಅಭಿಮಾನಿಗಳಿಗೆ ಯಾವುದೇ ನಿರಾಸೆಯಾಗದು. ಈ ಪಂದ್ಯದಕ್ಕೆ ಮಳೆ ಅಡ್ಡಿಪಡಿಸುವ ಯಾವುದೇ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಸಂಪೂರ್ಣವಾಗಿ ಪಂದ್ಯ ನಡೆಯಲಿದೆ.

ಹವಾಮಾನ ವರದಿ

ವೆದರ್‌ಕಾಮ್ ನೀಡಿರುವ ಹವಾಮಾನ ವರದಿಯ ಪ್ರಕಾರ, ಭಾನುವಾರದಂದು ಚೆನ್ನೈನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 27 ಡಿಗ್ರಿ ಸೆಲ್ಸಿಯಸ್ ಇರಲಿದೆ. ಸಣ್ಣ ಮಟ್ಟಿನ ಮೋಡ ಕವಿದ ವಾತಾವರಣ ಇದ್ದರೂ ಮಳೆಯ ಸಾಧ್ಯತೆ ಇಲ್ಲ ಎಂದು ತಿಳಿಸಿದೆ.

ಮೀಸಲು ದಿನ ಇಲ್ಲ

ಒಂದೊಮ್ಮೆ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿ ಫಲಿತಾಂಶ ನಿರ್ಧಾರವಾಗದಿದ್ದರೆ ಮೀಸಲು ದಿನ ಇರುವುದಿಲ್ಲ. ಈಗಾಗಕೇ ಐಸಿಸಿ ಮಳೆ ನಿಯಮವನ್ನು ಪ್ರಕಟಿಸಿದೆ. ಅದರಂತೆ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ.

ಪಿಚ್​ ರಿಪೋರ್ಟ್​

ಚೆನ್ನೈಯ ಐಕಾನಿಕ್ ಎಂ.ಎ ಚಿದಂಬರಂ ಸ್ಟೇಡಿಯಂನ ಪಿಚ್​ ಅನ್ನು ನವೀಕರಿಸಲಾಗಿದೆ. ಮೇಲ್ಮೈಗಳನ್ನು ಕೆಂಪು ಮಣ್ಣಿಗಿಂತ ಹೆಚ್ಚು ಜೇಡಿಮಣ್ಣಿನ ಅಂಶದೊಂದಿಗೆ ಕಪ್ಪು ಮಣ್ಣಿನಿಂದ ನಿರ್ಮಾಣ ಮಾಡಲಾಗಿದೆ. ಆದ್ದರಿಂದ ವೇಗಿಗಳು ಹೆಚ್ಚುವರಿ ಬೌನ್ಸ್​ ನಡೆಸಲು ಸಾಧ್ಯವಿದೆ. ಆದಾಗ್ಯೂ, ಚೆನ್ನೈನಲ್ಲಿ ನಡೆಯುವ ಸ್ಪಿನ್​ ಮೋಡಿಗೇನು ಕೊರತೆಯಾಗದು. ಸ್ಪಿನ್ನರ್‌ಗಳು ಆಟದ ಉದ್ದಕ್ಕೂ ಯೋಗ್ಯವಾದ ತಿರುವು ಪಡೆಯಲಿದ್ದಾರೆ. ಇಲ್ಲಿನ ಮೊದಲ ಇನಿಂಗ್ಸ್​ನ ಎವರೇಜ್ ರನ್​ 247.

ಇದನ್ನೂ ಓದಿ ICC World Cup 2023 : ಡೆಲ್ಲಿಯಲ್ಲಿ ಬ್ಯಾಟಿಂಗ್ ಸಂಭ್ರಮ, ದಕ್ಷಿಣ ಆಫ್ರಿಕಾ ತಂಡಕ್ಕೆಲಂಕಾ ವಿರುದ್ಧ 102 ರನ್ ಜಯ

ವಿಶ್ವಕಪ್​ ಮುಖಾಮುಖಿ

ಭಾರತ ಮತ್ತು ಆಸೀಸ್​ ತಂಡಗಳು 12 ಆವೃತ್ತಿಯ ವಿಶ್ವಕಪ್​ ಮಹಾ ಸಮರದಲ್ಲಿ ಇದುವರೆಗೆ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಒಂದು ಬಾರಿ ಫೈನಲ್​ನಲ್ಲಿ ಸೆಣಸಾಡಿವೆ. ಇದು 2003ರ ವಿಶ್ವಕಪ್​ ಟೂರ್ನಿ. ಫೈನಲ್​ನಲ್ಲಿ ಭಾರತ ಸೋಲು ಕಂಡು 2ನೇ ಬಾರಿ ಕಪ್​ ಗೆಲ್ಲುವ ಅವಕಾಶದಿಂದ ವಂಚಿತವಾಗಿತ್ತು. 12 ಪಂದ್ಯಗಳ ಪೈಕಿ ಭಾರತ 4 ಪಂದ್ಯಗಳಲ್ಲಿ ಗೆದ್ದರೆ, ಆಸ್ಟ್ರೇಲಿಯಾ 8 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

ಭಾರತ-ಆಸ್ಟ್ರೇಲಿಯಾ ವಿಶ್ವಕಪ್​ ಪಂದ್ಯಗಳ ಮಾಹಿತಿ

ವರ್ಷಸ್ಥಳಫಲಿತಾಂಶಪಂದ್ಯಶ್ರೇಷ್ಠ
1983ನಾಟಿಂಗ್‌ಹ್ಯಾಮ್‌ಆಸ್ಟ್ರೇಲಿಯಾಕ್ಕೆ 162 ರನ್‌ ಜಯಟ್ರೆವರ್‌ ಚಾಪೆಲ್‌
1983ಚೆಲ್ಮ್ಸ್ ಫೋರ್ಡ್ಭಾರತಕ್ಕೆ 118 ರನ್‌ ಜಯರೋಜರ್‌ ಬಿನ್ನಿ
1987ಚೆನ್ನೈಆಸ್ಟ್ರೇಲಿಯಾಕ್ಕೆ 1ರನ್​ ಗೆಲುವುಜೆಫ್‌ ಮಾರ್ಷ್‌
1987ನವದೆಹಲಿಭಾರತಕ್ಕೆ 56 ರನ್‌ ಜಯಎಂ. ಅಜರುದ್ದೀನ್‌
1992ಬ್ರಿಸ್ಬೇನ್‌ಆಸ್ಟ್ರೇಲಿಯಾಕ್ಕೆ 1 ರನ್‌ ಜಯಡೀನ್‌ ಜೋನ್ಸ್​
1996ಮುಂಬಯಿಆಸ್ಟ್ರೇಲಿಯಾಕ್ಕೆ 16 ರನ್​ ಜಯಮಾರ್ಕ್‌ ವೋ
1999ಓವಲ್‌ಆಸ್ಟ್ರೇಲಿಯಾಕ್ಕೆ 77 ರನ್‌ ಜಯಗ್ಲೆನ್‌ ಮೆಕ್‌ಗ್ರಾತ್‌
2003ಸೆಂಚುರಿಯನ್‌ಆಸ್ಟ್ರೇಲಿಯಾಕ್ಕೆ 9 ವಿಕೆಟ್‌ ಜಯಜಾಸನ್‌ ಗಿಲೆಸ್ಪಿ
2003ಜೊಹಾನ್ಸ್​ಬರ್ಗ್ಆಸ್ಟ್ರೇಲಿಯಾಕ್ಕೆ 125 ರನ್‌ ಜಯರಿಕಿ ಪಾಂಟಿಂಗ್‌
2011ಅಹ್ಮದಾಬಾದ್‌ಭಾರತಕ್ಕೆ 5 ವಿಕೆಟ್‌ ಜಯಯುವರಾಜ್‌ ಸಿಂಗ್‌
2015ಸಿಡ್ನಿಆಸ್ಟ್ರೇಲಿಯಾಕ್ಕೆ 95 ರನ್‌ ಜಯಸ್ಟೀವನ್‌ ಸ್ಮಿತ್‌
2019ಓವಲ್​ಭಾರತಕ್ಕೆ 36 ರನ್ಶಿಖರ್​ ಧವನ್

1987ರ ವಿಶ್ವಕಪ್​ನಲ್ಲಿ ಚೆನ್ನೈಯಲ್ಲಿ ನಡೆದ ಅತ್ಯಂತ ರೋಚಕವಾದ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತ ವಿರುದ್ಧ ಕೇವಲ ಒಂದು ರನ್​ಗಳಿಂದ ಗೆಲುವು ಸಾಧಿಸಿತ್ತು. ಜೆಫ್‌ ಮಾರ್ಷ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಈ ಬಾರಿಯೂ ಭಾರತ ತನ್ನ ಮೊದಲ ಪಂದ್ಯವನ್ನು ಚೆನ್ನೈಯಲ್ಲೇ ಆಸೀಸ್​ ವಿರುದ್ಧ ಆಡಲಿದೆ. 87ರ ಸೋಲಿಗೆ ಭಾರತ ಸೇಡು ತೀರಿಸೀತೇ ಎನ್ನುವುದು ಪಂದ್ಯದ ಕೌತುಕ.

Exit mobile version