ಮುಂಬಯಿ: ಮುಂಬರುವ ಏಷ್ಯಾ ಕಪ್‌ಗೆ (ASIA CUP) ಬಿಸಿಸಿಐ ಹಿರಿಯರ ತಂಡದ ಆಯ್ಕೆ ಸಮಿತಿ 14 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ. ತಂಡದಲ್ಲಿ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಅವಕಾಶ ಪಡೆದುಕೊಂಡಿಲ್ಲ. ಬೆನ್ನು ನೋವಿಗೆ ಒಳಗಾಗಿರುವ ಅವರಿಗೆ ವಿಶ್ರಾಂತಿ ಕಲ್ಪಿಸಲಾಗಿದೆ. ಅಂತೆಯೇ ಪ್ರದರ್ಶನ ವೈಫಲ್ಯ ಕಾಣುತ್ತಿರುವ ಹೊರತಾಗಿಯೂ ವಿರಾಟ್ ಕೊಹ್ಲಿಗೆ ಅವಕಾಶ ನೀಡಲಾಗಿದೆ.
ಕನ್ನಡಿಗ ಕೆ. ಎಲ್. ರಾಹುಲ್ ಗಾಯದ ಸಮಸ್ಯೆ ಹಾಗೂ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ತಂಡಕ್ಕೆ ಮರಳಿದ್ದಾರೆ. ಅಂತೆಯೇ ಅವರ ಉಪನಾಯಕನ ಸ್ಥಾನವನ್ನೂ ಉಳಿಸಿಕೊಳ್ಳಲಾಗಿದೆ.
೧೫ನೇ ಆವೃತ್ತಿಯ ಏಷ್ಯಾ ಕಪ್ ಆಗಸ್ಟ್ ೨೭ರಂದು ಆರಂಭಗೊಂಡು ಸೆಪ್ಟೆಂಬರ್ ೧೧ರವರೆಗೆ ನಡೆಯಲಿದೆ. ಆರು ತಂಡಗಳು ಈ ಪ್ರತಿಷ್ಠಿತ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಏಳು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಭಾರತ, ಈ ಟೂರ್ನಿಯ ಅತ್ಯಂತ ಯಶಸ್ವಿ ತಂಡ. ಕಳೆದ ಆವೃತ್ತಿಯಲ್ಲಿ ಏಕ ದಿನ ಮಾದರಿಯಲ್ಲಿ ಟೂರ್ನಿ ನಡೆದಿತ್ತು. ಈ ಬಾರಿ ಟಿ೨೦ ಕ್ರಿಕೆಟ್ ನಡೆಯಲಿದೆ.
ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ಟೂರ್ನಿ ಆಯೋಜನೆಯ ಆತಿಥ್ಯ ಪಡೆದುಕೊಂಡಿದೆ. ಆದರೆ, ಆ ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಎದುರಾಗಿರುವ ಕಾರಣ ಯುಎಇಗೆ ಸ್ಥಳಾಂತರ ಮಾಡಲಾಗಿದೆ.
ಭಾರತ ತಂಡ ಹೀಗಿದೆ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯಜ್ವೇಂದರ ಯಜ್ವೇಂದ್ರ ಚಹಲ್, ರವಿ ಬಿಷ್ಣೋಯಿ, ಭುವನೇಶ್ವರ್ ಕುಮಾರ್, ಅರ್ಶ್‌ದೀಪ್ ದೀಪ್ ಸಿಂಗ್, ಅವೇಶ್ ಖಾನ್.
ಮೀಸಲು ಆಟಗಾರರು: ಅಕ್ಷರ್ ಪಟೇಲ್, ಶ್ರೇಯರ್ ಅಯ್ಯರ್ ಹಾಗೂ ದೀಪಕ್ ಚಾಹರ್.
ಇದನ್ನೂ ಓದಿ | Asia Cup Cricket | ಬಿಡುವಿಲ್ಲದ ಕ್ರಿಕೆಟ್ ನಡುವೆ ಏಷ್ಯಾ ಕಪ್‌ಗೆ ಸಜ್ಜಾಗುತ್ತಿದೆ ಭಾರತ