Site icon Vistara News

ICC World Cup 2023 : ಭಾರತಕ್ಕೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ, ಉಳಿದ ತಂಡಗಳ ಸ್ಥಾನವೇನು?

Team india Cricket

ಬೆಂಗಳೂರು: ವಿಶ್ವ ಕಪ್​ನ 21ನೇ ಪಂದ್ಯದಲ್ಲಿ (ICC World Cup 2023) ಆತಿಥೇಯ ಭಾರತ ತಂಡ ನ್ಯೂಜಿಲ್ಯಾಂಡ್​ ತಂಡವನ್ನುಸ ಸೋಲಿಸಿದ ಬಳಿಕ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿ ಬದಲಾವಣೆ ಉಂಟಾಗಿದೆ. ಮೊದಲ ಸ್ಥಾನದಲ್ಲಿದ್ದ ಕಿವೀಸ್ ಬಳಗವನ್ನು ಹಿಂದಿಕ್ಕಿದ ರೋಹಿತ್ ಶರ್ಮಾ ಬಳಗ ಮೊದಲ ಸ್ಥಾನ ಪಡೆದುಕೊಂಡಿದೆ.

ನ್ಯೂಜಿಲ್ಯಾಂಡ್​ ವಿರುದ್ಧ ಧರ್ಮಶಾಲಾದಲ್ಲಿ ನಡೆದ ಪಂದ್ಯದ ಗೆಲುವಿನ ಬಳಿಕ ಭಾರತ ತಂಡ ಹಾಲಿ ವಿಶ್ವ ಕಪ್​ನಲ್ಲಿ ಸತತ ಐದನೇ ವಿಜಯ ದಾಖಲಿಸಿದಂತಾಗಿದೆ. ಐದರಲ್ಲಿ ಐದನ್ನೂ ಗೆದ್ದಿರುವ ಟೀಮ್ ಇಂಡಿಯಾ ಒಟ್ಟು 10 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದೆ. ನ್ಯೂಜಿಲ್ಯಾಂಡ್​ ತಂಡ ಆಡಿರುವ 5ರಲ್ಲಿ ಒಂದು ಸೋಲು, ನಾಲ್ಕು ಗೆಲುವಿನೊಂದಿಗೆ 8 ಅಂಕಪಡೆದು ಎರಡನೇ ಸ್ಥಾನದಲ್ಲಿದೆ. ಆದರೆ ನ್ಯೂಜಿಲ್ಯಾಂಡ್​ (1.481) ತಂಡದ ನೆಟ್​ ರನ್​ರೇಟ್​ ಭಾರತಕ್ಕಿಂತ (1.353) ಹೆಚ್ಚಿದೆ.

ಶನಿವಾರ ನಡೆದ 20ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಭರ್ಜರಿಯಾಗಿ ಸೋಲಿಸಿದ ದಕ್ಷಿಣ ಆಫ್ರಿಕಾ ತಂಡ ನಾಲ್ಕರಲ್ಲಿ ಒಂದು ಪಂದ್ಯವನ್ನು ಸೋತಿರುವ ಕಾರಣ 6 ಅಂಕಗಳನ್ನು ಮಾತ್ರ ಗಳಿಸಿದೆ. ಹೀಗಾಗಿ ಅದು ಮೂರನೇ ಸ್ಥಾನದಲ್ಲಿದೆ. ಪಂದ್ಯಕ್ಕೆ ಮೊದಲೂ ತೆಂಬಾ ಬವುಮಾ ತಂಡ ಅದೇ ಸ್ಥಾನದಲ್ಲಿತ್ತು. ಆದರೆ, ಗೆಲುವಿನ ಅಂತದ ದೊಡ್ಡದಿದ್ದ ಕಾರಣ ನೆಟ್​ರನ್​ರೇಟ್​ನಲ್ಲಿ ದೊಡ್ಡ ಮಟ್ಟದ ಸಂಪಾದನೆ ಮಾಡಿದೆ. ಈಗ ದಕ್ಷಿಣ ಆಫ್ರಿಕಾ ತಂಡ ಅಂಕಪಟ್ಟಿಯಲ್ಲಿ ಎಲ್ಲ ತಂಡಗಳಿಗಿಂತ ಗರಿಷ್ಠ 2.212 ನೆಟ್​ರನ್​ ರೇಟ್​ ಹೊಂದಿದೆ.

ಇದನ್ನೂ ಓದಿ : Rohit Sharma : ಸಿಕ್ಸರ್ ಬಾರಿಸುವುದರಲ್ಲಿ ಹೊಸ ದಾಖಲೆ ಬರೆದ ರೋಹಿತ್ ಶರ್ಮಾ
IND vs NZ: ವಿಶ್ವಕಪ್​ನಲ್ಲಿ ಅನಿಲ್‌ ಕುಂಬ್ಳೆ ದಾಖಲೆ ಮುರಿದ ಮೊಹಮ್ಮದ್​ ಶಮಿ

ಇನ್ನು ಹೀನಾಯವಾಗಿ ಸೋತಿರುವ ಇಂಗ್ಲೆಂಡ್​ ತಂಡ 6ನೇ ಸ್ಥಾನದಿಂದ 9ನೇ ಸ್ಥಾನಕ್ಕೆ ಕುಸಿದಿದಿದೆ. ಈ ತಂಡ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ನೆದರ್ಲಾಂಡ್ಸ್​ ತಂಡಕ್ಕಿಂತಲೂ ಕೆಳಗಿದೆ. ಇಂಗ್ಲೆಂಡ್ ಈಗ ಆಡಿರುವ ನಾಲ್ಕು ಪಂದ್ಯಗಳಲ್ಲಿ ಏಕೈಕ ವಿಜಯ ಸಾಧಿಸಿದೆ. ಕೇವಲ 2 ಅಂಕ ಹಾಗೂ 2.212 ನೆಟ್​ ರನ್​ರೇಟ್​ ಹೊಂದಿದೆ.

19ನೇ ಪಂದ್ಯದಲ್ಲಿ ಗೆದ್ದಿರುವ ಲಂಕಾ ಬಳಗ ಎರಡು ಸ್ಥಾನ ಮೇಲಕ್ಕೇರಿದೆ. ಪಂದ್ಯಕ್ಕೆ ಮೊದಲು ಅದು 10ನೇ ಸ್ಥಾನದಲ್ಲಿತ್ತು. ಈಗ ಲಂಕಾ ಬಳಗ ಆಡಿರುವ 4ರಲ್ಲಿ ಒಂದು ವಿಜಯ ಸಾಧಿಸಿದ್ದು 2 ಅಂಕಗಳು ಹಾಗೂ -1.048 ನೆಟ್​ರನ್​ರೇಟ್​ ಪಡೆದುಕೊಂಡಿದೆ. ಏರುವಿಕೆ ಪ್ರಕ್ರಿಯೆಯಲ್ಲಿ ಈ ತಂಡ ಇಂಗ್ಲೆಂಡ್​ ಹಾಗೂ ಅಫಘಾನಿಸ್ತಾನ ತಂಡವನ್ನು ಕೆಳಕ್ಕೆ ತಳ್ಳಿದೆ. ಇನ್ನು ಲಂಕಾ ವಿರುದ್ಧ ಸೋತಿರುವ ಹೊರತಾಗಿಯೂ ನೆದರ್ಲ್ಯಾಂಡ್ಸ್​ ತಂಡ ಆರನೇ ಸ್ಥಾನಕ್ಕೆ ಏರಿದೆ. ಪಂದ್ಯಕ್ಕೆ ಮೊದಲು ಅದು ಏಳರಲ್ಲಿತ್ತು. ಆದರೆ, ಉಳಿದ ತಂಡಗಳ ಕಳಪೆ ಪ್ರದರ್ಶನ ಡಚ್ಚರ ಪ್ರಗತಿಗೆ ಕಾರಣವಾಯಿತು.

ತಂಡಪಂದ್ಯಗೆಲುವುಸೋಲುಅಂಕನೆಟ್​ ರನ್​ರೇಟ್​
ಭಾರತ550101.353
ನ್ಯೂಜಿಲ್ಯಾಂಡ್​ 54181.481
ದಕ್ಷಿಣ ಆಫ್ರಿಕಾ43162.212
ಆಸ್ಟ್ರೇಲಿಯಾ4224-0.193
ಪಾಕಿಸ್ತಾನ4224-0.456
ಬಾಂಗ್ಲಾದೇಶ 4132-0.784
ನೆದರ್ಲ್ಯಾಂಡ್ಸ್​​4132-0.790
ಶ್ರೀಲಂಕಾ4132-1.048
ಇಂಗ್ಲೆಂಡ್​4132-1.248
ಅಫಘಾನಿಸ್ತಾನ4132-1.250

ಭಾರತ ತಂಡಕ್ಕೆ ಇನ್ನು ಒಂದು ವಾರಗಳ ವಿಶ್ರಾಂತಿ ಲಭಿಸಿದೆ. ಅಕ್ಟೋಬರ್​ 29ರಂದು ಉತ್ತರ ಪ್ರದೇಶದ ಲಖನೌನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

Exit mobile version