ಟ್ರಿನಿಡಾಡ್: ವೆಸ್ಟ್ ಇಂಡೀಸ್ ವಿರುದ್ಧ(IND vs WI 1st T20) ಇಂದು(ಗುರುವಾರ) ನಡೆಯುವ ಮೊದಲ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಭಾರತ ತಂಡ ನೂತನ ಮೈಲುಗಲ್ಲೊಂದನ್ನು ನಿರ್ಮಿಸಲಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ(t20 cricket) 200 ಪಂದ್ಯಗಳನ್ನು ಪೂರೈಸಲಿದೆ.(India at 200 in T20) ಜತೆಗೆ ಈ ಸಾಧನೆ ಮಾಡಿದ ಮೊದಲ ತಂಡ ಎಂಬ ಇತಿಹಾಸ ನಿರ್ಮಿಸಲಿದೆ.
2007ರ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಭಾರತ ತಂಡ ಇದುವರೆಗೆ 199 ಟಿ20 ಪಂದ್ಯಗಳನ್ನು ಆಡಿದೆ. ಇದರಲ್ಲಿ 127 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾರತದ ಬಳಿಕ ಅತ್ಯಧಿಕ ಟಿ20 ಪಂದ್ಯವನ್ನಾಡಿದ ದಾಖಲೆ ನ್ಯೂಜಿಲ್ಯಾಂಡ್ ತಂಡದ ಹೆಸರಿನಲ್ಲಿದೆ. ಕಿವೀಸ್ ಪಡೆ 193 ಟಿ20 ಪಂದ್ಯಗಳನ್ನಾಡಿ ದ್ವಿತೀಯ ಸ್ಥಾನದಲ್ಲಿದೆ. 179 ಪಂದ್ಯವಾಡಿದ ಶ್ರೀಲಂಕಾ ಮತ್ತು ವಿಂಡೀಸ್ ಜಂಟಿಯಾಗಿ ಮೂರನೇ ಸ್ಥಾನ ಪಡೆದಿದೆ. ಆದರೆ ಭಾರತ ವಿರುದ್ಧ ಗುರುವಾರ ಕಣಕ್ಕಿಳಿಯುವ ಮೂಲಕ ವಿಂಡೀಸ್ ತಂಡ ಲಂಕಾದ ದಾಖಲೆಯನ್ನು ಹಿಂದಿಕ್ಕಲಿದೆ.
ಇದನ್ನೂ ಓದಿ ICC Wtc Points Table: ದಂಡ ಬಿದ್ದ ಪರಿಣಾಮ ವಿಶ್ವ ಟೆಸ್ಟ್ ಅಂಕಪಟ್ಟಿಯಲ್ಲಿ ಕುಸಿತ ಕಂಡ ಇಂಗ್ಲೆಂಡ್,ಆಸೀಸ್
ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಇದುವರೆಗೆ 8 ಟಿ20 ಸರಣಿಗಳನ್ನಾಡಿವೆ. ಈ ಪೈಕಿ ಭಾರತ 6ರಲ್ಲಿ ಗೆದ್ದಿದ್ದು, 2 ಸರಣಿಯನ್ನು ವಿಂಡೀಸ್ ಗೆದ್ದಿದೆ. ಇತ್ತಂಡಗಳ ನಡುವಿನ ಕೊನೆ 5 ಸರಣಿಗಳಲ್ಲೂ ಭಾರತ ಗೆದ್ದಿದೆ. 2017ರಲ್ಲಿ ಕೊನೆ ಬಾರಿ ವಿಂಡೀಸ್ ಭಾರತ ವಿರುದ್ಧ ಸರಣಿ ಜಯಿಸಿತ್ತು. ಇದೀಗ ಮತ್ತೆ 6 ವರ್ಷಗಳ ಬಳಿಕ ಸರಣಿ ಜಯಿಸಿ ಟೆಸ್ಟ್ ಮತ್ತು ಏಕದಿನ ಸರಣಿ ಸೋಲಿಗೆ ಸೇಡು ತೀರಿಸಲು ವಿಂಡಿಸ್ ಕಾದು ಕುಳಿತಿದೆ.
India will be playing their 200th T20i match tomorrow. pic.twitter.com/qAZINLjLKb
— Mufaddal Vohra (@mufaddal_vohra) August 2, 2023
ಮುಖಾಮುಖಿ
ಉಭಯ ತಂಡಗಳು ಇದುವರೆಗೆ 25 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ(india vs west indies t20 head to head). ಭಾರತ 17 ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದರೆ, ವಿಂಡೀಸ್ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ರದ್ದುಗೊಂಡಿದೆ. ಉಭಯ ತಂಡಗಳು ಮೊದಲು ಟಿ20 ಆಡಿದ್ದು 2009ರಲ್ಲಿ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 7 ವಿಕೆಟ್ಗಳ ಗೆಲುವು ಕಂಡಿತ್ತು. ಭಾರತ ತಂಡ ವಿಂಡೀಸ್ ವಿರುದ್ಧ ಮೊದಲ ಟಿ20 ಪಂದ್ಯ ಗೆದ್ದಿದ್ದು 2011ರಲ್ಲಿ 16 ರನ್ಗಳಿಂದ ಭಾರತ ಗೆಲುವು ಸಾಧಿಸಿತ್ತು.
ಸಂಭಾವ್ಯ ತಂಡ
ಭಾರತ: ಇಶಾನ್ ಕಿಶನ್, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ),ಸಂಜು ಸ್ಯಾಮ್ಸನ್, ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಆರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.
ವೆಸ್ಟ್ ಇಂಡೀಸ್: ರೋವ್ಮನ್ ಪೊವೆಲ್ (ನಾಯಕ), ಕೈಲ್ ಮೇಯರ್ಸ್ (ಉಪ ನಾಯಕ), ರೋಸ್ಟನ್ ಚೇಸ್, ಶಿಮ್ರೋನ್ ಹೆಟ್ಮೇರ್, ಜೇಸನ್ ಹೋಲ್ಡರ್, ಶೈಯ್ ಹೋಪ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ನಿಕೋಲಸ್ ಪೂರನ್, ರೊಮಾರಿಯೋ ಶೆಫರ್ಡ್, ಒಶಾನೆ ಥಾಮಸ್.