ನವ ದೆಹಲಿ: ನಾಯಕ ರೋಹಿತ್ ಶರ್ಮ (131) ಅವರ ದಾಖಲೆಯ ಶತಕ ಹಾಗೂ ವಿರಾಟ್ ಕೊಹ್ಲಿಯ (55) ಅಜೇಯ ಅಜೇಯ ಅರ್ಧ ಶತಕದ ನೆರವಿನಿಂದ ಮಿಂಚಿದ ಭಾರತ ತಂಡ ವಿಶ್ವ ಕಪ್ನ ತನ್ನ ಎರಡನೇ ಪಂದ್ಯದಲ್ಲಿ ಅಪಘಾನಿಸ್ತಾನ (IND vs AFG) ವಿರುದ್ಧ 8 ವಿಕೆಟ್ಗಳ ಸುಲಭ ವಿಜಯ ದಾಖಲಿಸಿದೆ. ಇದು ಹಾಲಿ ವಿಶ್ವ ಕಪ್ನಲ್ಲಿ ಭಾರತ ತಂಡಕ್ಕೆ ಲಭಿಸಿದ ಸತತ ಎರಡನೇ ವಿಜಯವಾಗಿದೆ. ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಬಳಗ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ ಗೆಲುವು ಕಂಡಿತ್ತು.
India march to their second successive win off the back of a dominant display in Delhi 💪#CWC23 #INDvAFG pic.twitter.com/Z0gyJC8r5f
— ICC Cricket World Cup (@cricketworldcup) October 11, 2023
ಇಲ್ಲಿನ ಅರುಣ್ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಅಫಘಾನಿಸ್ತಾನ ತಂಡ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗೆ 272 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ ಇನ್ನೂ 90 ಎಸೆತಗಳು ಬಾರಿ ಇರುವಂತೆಯೇ 2 ವಿಕೆಟ್ ನಷ್ಟಕ್ಕೆ 273 ರನ್ ಬಾರಿಸಿ ಗೆಲುವು ಸಾಧಿಸಿತು. ಬೌಲಿಂಗ್ ವೇಳೆ 39 ರನ್ಗಳಿಗೆ 4 ವಿಕೆಟ್ ಉರುಳಿಸಿದ ಜಸ್ಪ್ರಿತ್ ಬುಮ್ರಾ ಕೂಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಲು ಹೊರಟ ಭಾರತ ತಂಡದ ಪರ ರೋಹಿತ್ ಶರ್ಮಾ ಅಕ್ಷರಶಃ ಸ್ಫೋಟಿಸಿದರು. ಅವರು ಆರಂಭದಿಂದಲೇ ಸಿಕ್ಸರ್ ಬೌಂಡರಿಗಳನ್ನು ಬಾರಿಸುವ ಮೂಲಕ ಡೆಲ್ಲಿ ಪ್ರೇಕ್ಷಕರಿಗೆ ಬ್ಯಾಟಿಂಗ್ ರಸದೌತಣ ಉಣಬಡಿಸಿದರು. ಏಳು ಫೋರ್ ಹಾಗೂ 2 ಸಿಕ್ಸರ್ಗಳ ಸಮೇತ 30 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದ ಅವರು ಬಳಿಕವೂ ತಮ್ಮ ರನ್ ಗಳಿಕೆ ವೇಗವನ್ನು ತಗ್ಗಿಸಲಿಲ್ಲ. ಬಳಿಕ 33 ಎಸೆತಗಳನ್ನು ಬಳಸಿಕೊಂಡ ಅವರು ಶತಕ ಬಾರಿಸಿದರು. ಅವರ ಶತಕದಲ್ಲಿ 12 ಫೋರ್ ಹಾಗೂ 4 ಸಿಕ್ಸರ್ಗಳಿದ್ದವು.
ಈ ಸುದ್ದಿಗಳನ್ನೂ ಓದಿ
Rohit Sharma : ಒಂದು ಪಂದ್ಯದಲ್ಲಿ ನಾಲ್ಕು ದಾಖಲೆ ಸೃಷ್ಟಿಸಿದ ರೋಹಿತ್ ಶರ್ಮಾ
Virat vs Navin : ಮೈದಾನದಲ್ಲೇ ರಾಜಿ ಮಾಡಿಕೊಂಡ ಕೊಹ್ಲಿ- ನವಿನ್ ಉಲ್ ಹಕ್
ಧೋನಿ ಮಾಡಿದ್ರೆ ತಪ್ಪು, ರಿಜ್ವಾನ್ ಉಗ್ರರಿಗೆ ಬೆಂಬಲ ಕೊಟ್ರೆ ಸರಿ; ಐಸಿಸಿ ವಿರುದ್ಧ ನೆಟ್ಟಿಗರು ಗರಂ
ಶತಕ ಬಾರಿಸುವ ಜತೆಗೆ ರೋಹಿತ್ ಶರ್ಮಾ 554 ಅಂತಾರಾಷ್ಟ್ರೀಯ ಸಿಕ್ಸರ್ಗಳನ್ನು ಬಾರಿಸುವ ಮೂಲಕ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರು. ಅದೇ ರೀತಿ 7ನೇ ವಿಶ್ವ ಕಪ್ ಶತಕ ಬಾರಿಸಿ ಗರಿಷ್ಠ ಶತಕ ಬಾರಿಸಿದ ದಾಖಲೆ ಮುರಿದರು. ಅವರು ಸಚಿನ್ ತೆಂಡೂಲ್ಕರ್ ಅವರನ್ನು ಈ ಹಾದಿಯಲ್ಲಿ ಹಿಂದಿಕ್ಕಿದರು. ಅದೇ ರೀತಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಡೇವಿಡ್ ಅವರ ಜತೆಗೆ 19 ಇನಿಂಗ್ಸ್ಗಳಲ್ಲಿ ವಿಶ್ವ ಕಪ್ 1000 ರನ್ ಬಾರಿಸಿದ ದಾಖಲೆ ಮಾಡಿದರು.
Built for the big stage! 👑🥹#PlayBold #INDvAFG #TeamIndia pic.twitter.com/19dee7yYKe
— Royal Challengers Bangalore (@RCBTweets) October 11, 2023
ಇಶಾನ್ ಸಾಥ್
ಭಾರತ ತಂಡದ ಮತ್ತೊಬ್ಬ ಆರಂಭಿಕ ಬ್ಯಾಟರ್ ಇಶಾನ್ ಕಿಶನ್ ರೋಹಿತ್ಗೆ ಉತ್ತಮ ಬೆಂಬಲ ಕೊಟ್ಟರು. ಆದರೆ 47 ಎಸೆತಗಳಲ್ಲಿ 47 ರನ್ ಬಾರಿಸಿದ ಅವರು 3 ರನ್ಗಳ ಅಂತರದಿಂದ ಅರ್ಧ ಶತಕದ ಅವಕಾಶ ಕಳೆಕೊಂಡರು. ಬಳಿಕ ಬಂದ ವಿರಾಟ್ ಕೊಹ್ಲಿ ಸಮಾಧಾನ ಚಿತ್ತರಾಗಿ ಆಡಿ ಅರ್ಧ ಶತಕ ಬಾರಿಸಿದರು. ಅಲ್ಲದೆ, ವಿನ್ನಿಂಗ್ ಫೋರ್ ಬಾರಿಸುವ ಮೂಲಕ ಸ್ಥಳೀಯ ಅಭಿಮಾನಿಗಳಿಗೆ ಖುಷಿ ಕೊಟ್ಟರು. ಶ್ರೇಯಸ್ ಅಯ್ಯರ್ 25 ರನ್ ಬಾರಿಸಿದರು. ರಶೀದ್ ಖಾನ್ ಭಾರತದ ಎರಡು ವಿಕೆಟ್ಗಳನ್ನು ತಮ್ಮದಾಗಿಸಿಕೊಂಡರು.
ಅಫಘಾನಿಸ್ತಾನ ಉತ್ತಮ ಮೊತ್ತ
ಇನಿಂಗ್ಸ್ ಆರಂಭಿಸಿದ ಅಘಘಾನಿಸ್ತಾನ ತಂಡ ದೊಡ್ಡ ಮೊತ್ತದ ಗುರಿಯೊಂದಿಗೆ ಆಡಿತು. ಆರಂಭಿಕರಾದ ರಹ್ಮನುಲ್ಲಾ ಗುರ್ಬಜ್ (21) ಹಾಗೂ ಇಬ್ರಾಹಿಂ ಜದ್ರಾನ್ (22) ರನ್ ಬಾರಿಸಿತು. ಆದರೆ, ಈ ಜೋಡಿ 31 ರನ್ ಗಳಿಸಿದಾದ ಬುಮ್ರಾ ಜದ್ರಾನ್ ವಿಕೆಟ್ ಉರುಳಿಸಿದರು. ಬಳಿಕ ಬಂದ ರಹ್ಮತ್ ಶಾ ಶಾರ್ದುಲ್ ಠಾಕೂರ್ ಅವರಿಗೆ ಎಲ್ಬಿಡಬ್ಲ್ಯೂ ಔಟ್ ಆದರು. ಇದೇ ವೇಳೆ ಶಾರ್ದೂಲ್ ಠಾಕೂರ್ ಬೌಂಡರಿ ಬಳಿ ಹಿಡಿದ ಅದ್ಭುತ ಕ್ಯಾಚ್ಗೆ ಗುರ್ಬಜ್ ಔಟಾದರು. 63 ರನ್ಗೆ ಮೂರು ವಿಕೆಟ್ ಕಳೆದುಕೊಂಡ ಅಫಘಾನಿಸ್ತಾನ ತಂಡ ಹಿನ್ನಡೆ ಅನುಭವಿಸಿತು.
ಹಶ್ಮತುಲ್ಲಾ, ಅಜ್ಮತುಲ್ಲಾ ಶತಕದ ಜತೆಯಾಟ
ಹಿನ್ನಡೆಗೆ ಒಳಗಾದ ಅಪಘಾನಿಸ್ತಾನ ತಂಡವನ್ನು ನಾಯಕ ಹಶ್ಮತುಲ್ಲಾ ಶಾಹಿದಿ (80) ಹಾಗೂ ಅಜ್ಮತುಲ್ಲಾ ಒಮರ್ಜೈ (63) ಕಾಪಾಡಿದರು. ಅವರಿಬ್ಬರೂ ಅರ್ಧ ಶತಕಗಳನ್ನು ಬಾರಿಸಿದರಲ್ಲದೆ, ನಾಲ್ಕನೇ ವಿಕೆಟ್ಗೆ 121 ರನ್ಗಳ ಜತೆಯಾಟವಾಡಿದರು. ಆದರೆ, ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಒಮರ್ಜೈ ಅವರನ್ನು ಹಾರ್ದಿಕ್ ಪಾಂಡ್ಯ ಬೌಲ್ಡ್ ಮಾಡಿದರು. ಹಶ್ಮತುಲ್ಲಾ ಕುಲ್ದೀಪ್ ಎಸೆತಕ್ಕೆ ಎಲ್ಬಿಡಬ್ಲ್ಯು ಔಟಾದರು. ಮೊಹಮ್ಮದ್ ನಬಿ 19 ರನ್ ಬಾರಿಸಿದರೆ, ರಶೀದ್ ಖಾನ್ 16 ರನ್ ಗಳಿಸಿದರು. ಮುಜೀಬ್ ಉರ್ ರಹಮಾನ್ 10 ರನ್ ಕೊಡುಗೆ ಕೊಟ್ಟರು.
ಹಾರ್ದಿಕ್ ಪಾಂಡ್ಯ ಭಾರತ ಪರವಾಗಿ 2 ವಿಕೆಟ್ ಉರುಳಿಸಿದರೆ, ಕುಲ್ದೀಪ್ ಯಾದವ್ ಹಾಗೂ ಶಾರ್ದೂಲ್ ಠಾಕೂರ್ ತಲಾ 1 ವಿಕೆಟ್ ಉರುಳಿಸಿದರು. ಆದರೆ, ಮೊಹಮ್ಮದ್ ಸಿರಾಜ್ 9 ಓವರ್ಗಳ ಸ್ಪೆಲ್ನಲ್ಲಿ ಯಾವುದೇ ವಿಕೆಟ್ ಪಡೆಯದೇ 70 ರನ್ ನೀಡಿದ್ದು ತಂಡದ ಪಾಲಿಗೆ ದುಬಾರಿ ಎನಿಸಿತು. ಅವರನ್ನು ಕ್ರಿಕೆಟ್ ಪ್ರೇಮಿಗಳು ಟ್ರೋಲ್ ಮಾಡಿದರು.