Site icon Vistara News

ind vs pak : ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕ್​ ವಿರುದ್ಧ ಚಾರಿತ್ರಿಕ 228 ರನ್​ ಗೆಲುವು ಸಾಧಿಸಿದ ಭಾರತ

Team India

ಕೊಲೊಂಬೊ: ಮಳೆಯಿಂದ ಬಾಧಿತವಾದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಪರಾಕ್ರಮ ಸಾಧಿಸಿದ ಭಾರತ ತಂಡ ಪಾಕಿಸ್ತಾನ (ind vs pak) ವಿರುದ್ಧದ ಏಷ್ಯಾಕಪ್​ ಸೂಪರ್​-4 (Asia Cup 2023) ಹಂತದ ಪಂದ್ಯದಲ್ಲಿ 228 ರನ್​ಗಳ ಭರ್ಜರಿ ವಿಜಯ ಸಾಧಿಸಿದೆ. ಭಾರತ ತಂಡದ ಪರ ವಿರಾಟ್ ಕೊಹ್ಲಿ ( ಅಜೇಯ 122 ರನ್​), ಕೆ. ಎಲ್​ ರಾಹುಲ್​ (ಅಜೇಯ 111 ರನ್​) ಅವರ ಸ್ಫೋಟಕ ಬ್ಯಾಟಿಂಗ್ ​ ನಡೆಸಿ ಮಿಂಚಿದರೆ. ಸ್ಪಿನ್ನರ್​ ಕುಲ್ದೀಪ್​ ಯಾದವ್​ (25 ರನ್​ಗಳಿಗೆ 5 ವಿಕೆಟ್​​) ಅವರ ಮಾರಕ ದಾಳಿ ನಡೆಸಿ ಬೌಲಿಂಗ್​ನಲ್ಲಿ ಮಿಂಚಿದರು. ಇದು ಭಾರತ ತಂಡಕ್ಕೆ ಏಕದಿನ ಮಾದರಿಯಲ್ಲಿ ಪಾಕಿಸ್ತಾನ ತಂಡದ ವಿರುದ್ದ ಲಭಿಸಿದ ದಾಖಲೆಯ ಅಂತರದ ವಿಜಯವಾಗಿದೆ.

ಇಲ್ಲಿನ ಪ್ರೇಮದಾಸ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋಲು ಮೊದಲು ಬ್ಯಾಟ್​ ಮಾಡಿದ ಭಾರತ ತಂಡ ನಿಗದಿತ 50 ಓವರ್​ಗಳಲ್ಲಿ 356 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಪಾಕಿಸ್ತಾನ 32 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 128 ರನ್​ ಬಾರಿಸಿತು. ಹ್ಯಾರಿಸ್ ರವೂಫ್ ಹಾಗೂ ನಾಸಿಮ್​ ಶಾ ಬ್ಯಾಟಿಂಗ್ ಮಾಡಿದ ಕಾರಣ ಪಾಕಿಸ್ತಾನ ತಂಡ ಆಲ್ಔಟ್​ ಎಂದು ಪರಿಗಣಿಸಿ ಭಾರತಕ್ಕೆ ಜಯ ನೀಡಲಾಯಿತು.

ಈ ಪಂದ್ಯ ಭಾನುವಾರ ಮಧ್ಯಾಹ್ನ ಆರಂಭಗೊಂಡಿತ್ತು. ಆದರೆ, ಭಾರತ ತಂಡದ ಇನಿಂಗ್ಸ್​ ವೇಳೆಯಲ್ಲಿ ಮಳೆ ಸುರಿದು ನಂತರದ ಆಟ ನಡೆಯಲಿಲ್ಲ. ಹೀಗಾಗಿ ಮೀಸಲು ದಿನವಾದ ಸೋಮವಾರಕ್ಕೆ ನಿಗದಿ ಮಾಡಲಾಯಿತು. ಸೋಮವಾರವೂ ಆಗಾಗ ಮಳೆಯ ಅಡಚಣೆ ಉಂಟಾಯಿತು. ಬಿಡುವಿನಲ್ಲಿ ಪಂಧ್ಯ ನಡೆದು ಅಂತಿಮವಾಗಿ ಭಾರತ ತಂಡ ಚಾರಿತ್ರಿಕ ಗೆಲವು ದಾಖಲಿಸಿತು.

ಕೊಹ್ಲಿ, ರಾಹುಲ್ ದಾಖಲೆಯ ಜತೆಯಾಟ

ಭಾರತ ತಂಡದ ಭಾನುವಾರ ಪಂದ್ಯ ಸ್ಥಗಿತಗೊಳ್ಳುವ ಮೊದಲು 24.1 ಓವರ್​ಗಳಲ್ಲಿ 147 ರನ್ ಬಾರಿಸಿತ್ತು. ಅಲ್ಲಿಂದ ಬ್ಯಾಟಿಂಗ್ ಆರಂಭಿಸಿದ ರಾಹುಲ್ ಹಾಗೂ ವಿರಾಟ್​ ಪಾಕಿಸ್ತಾನ ತಂಡದ ಪ್ರತಿಯೊಬ್ಬ ಬೌಲರ್​ಗಳನ್ನು ದಂಡಿಸುತ್ತಾ ರನ್​ ಗಳಿಸಿದರು. ಕೊನೇ ತನಕ ಆಡಿದ ಈ ಇಬ್ಬರೂ ಆಟಗಾರರು ಅಜೇಯರಾಗಿ ಉಳಿದು ದೊಡ್ಡ ಮೊತ್ತದ ಸ್ಕೋರ್ ಬಾರಿಸಲು ನೆರವಾದರು. ಇವರಿಬ್ಬರೂ ಏಕ ದಿನ ಏಷ್ಯಾ ಕಪ್​ನಲ್ಲಿ ಗರಿಷ್ಠ ಮೊತ್ತದ (223 ರನ್​) ಜತೆಯಾಟ ನೀಡಿದ ದಾಖಲೆಯನ್ನೂ ಮಾಡಿದರು.

ಭಾರತ ತಂಡ 25.5 ಓವರ್​ಗಳಲ್ಲಿ 209 ರನ್​ಗಳನ್ನು ಬಾರಿಸುವ ಮೂಲಕ ಪಾಕಿಸ್ತಾನ ತಂಡಕ್ಕೆ ದೊಡ್ಡ ಮೊತ್ತದ ಸವಾಲು ಒಡ್ಡಿತು. ಭಾರತದ ಇನಿಂಗ್ಸ್​​ನಲ್ಲಿ ಒಟ್ಟು 37 ಫೋರ್​ಗಳು ಹಾಗೂ 9 ಸಿಕ್ಸರ್​ಗಳು ಸೇರಿಕೊಂಡಿದ್ದವು. ಅದರಲ್ಲೂ ಅದರಲ್ಲಿ ವಿರಾಟ್ ಕೊಹ್ಲಿ 3 ಸಿಕ್ಸರ್ ಬಾರಿಸಿದರೆ, ರಾಹುಲ್ 2 ಸಿಕ್ಸರ್​ ಬಾರಿಸಿದರು. ರೋಹಿತ್ ಶರ್ಮಾ 4 ಸಿಕ್ಸರ್​ಗಳನ್ನು ಬಾರಿಸಿದ್ದರು.

ಇದನ್ನೂ ಓದಿ : KL Rahul : ಪತಿ ರಾಹುಲ್​ಗೆ ಭಾವನಾತ್ಮಕ ಸಂದೇಶ ಬರೆದ ಅಥಿಯಾ ಶೆಟ್ಟಿ

ವಿರಾಟ್ ಕೊಹ್ಲಿ ಕೆಎಲ್ ರಾಹುಲ್ ತಮ್ಮ ಬ್ಯಾಟ್ ಮೂಲಕ ಪಾಕ್ ವಿರುದ್ಧ ಅಬ್ಬರಿಸಿದರು ಹಿಂದಿನ ಭಾರತ ಮತ್ತು ಪಾಕ್ ನಡುವಿನ ಪಂದ್ಯದಲ್ಲಿ ಶಾಹೀನ್ ಅಫ್ರಿದಿ ವಿರುದ್ಧ ಎಡವಿದ ನಂತರ, ಕೊಹ್ಲಿ ತಮ್ಮ ಸಂಯಮವನ್ನು ಉಳಿಸಿಕೊಂಡರಲ್ಲದೆ ತಮ್ಮ 47 ನೇ ಏಕದಿನ ಶತಕವನ್ನು ಗಳಿಸಿದರು. ಕೊಹ್ಲಿ ತಮ್ಮ 77 ನೇ ಅಂತಾರಾಷ್ಟ್ರೀಯ ಶತಕ ಮತ್ತು ಕೊಲಂಬೊದಲ್ಲಿ ಸತತ 4 ನೇ ಶತಕವನ್ನು ಗಳಿಸಿದರು.

ಕೊಹ್ಲಿ ಕೊಲಂಬೊದಲ್ಲಿ ಮೋಡ ಕವಿದ ವಾತಾವರಣದಲ್ಲಿ ತಮ್ಮ ಬ್ಯಾಟಿಂಗ್ ಮಾಸ್ಟರ್ ಕ್ಲಾಸ್ ಅನ್ನು ಪ್ರದರ್ಶಿಸಿದರು. ಕೊಹ್ಲಿ ತಮ್ಮ ಅರ್ಧಶತಕವನ್ನು ತಲುಪಲು ಕೇವಲ 55 ಎಸೆತಗಳನ್ನು ತೆಗೆದುಕೊಂಡರು ಮತ್ತು ನಂತರ ಸಿಕ್ಸರ್ ಮತ್ತು ಬೌಂಡರಿ ಹೊಡೆಯಲು ಶುರು ಮಾಡಿ ದಾಖಲೆಗಳನ್ನು ಸೃಷ್ಟಿಸಿದರು. ಕೊಹ್ಲಿ 84 ಎಸೆತಗಳು, 6 ಬೌಂಡರಿಗಳು ಮತ್ತು 2 ಸಿಕ್ಸರ್ಗಳನ್ನು ಬಾರಿಸಿ ಮೂರು ಅಂಕಿಯ ಗಡಿಯನ್ನು ತಲುಪಿದರು.

ಏಕ ದಿನ ಮಾದರಿಯಲ್ಲಿ ಅತಿ ವೇಗದ 8000, 9000, 10000, 11000, 12000 ಮತ್ತು 13,000 ರನ್ ಗಳಿಸಿದ ಬ್ಯಾಟರ್​ ಎಂಬ ದಾಖಲೆಯೂ ಕೊಹ್ಲಿ ಪಾಲಾಯಿತು.

ರಾಹುಲ್ ಗ್ರ್ಯಾಂಡ್ ಎಂಟ್ರಿ

ಗಾಯದ ಸಮಸ್ಯೆಯಿಂದಾಗಿತಿಂಗಳಾನುಗಟ್ಟಲೆ ಮೈದಾನದಿಂದ ದೂರ ಉಳಿದಿದ್ದ ರಾಹುಲ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. 106 ಎಸೆತಗಳಲ್ಲಿ 111 ರನ್ ಬಾರಿಸಿದ ಅವರು ಮರು ಆಗಮನದಲ್ಲೇ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.

ಕುಲ್ದೀಪ್ ಉರಿಚೆಂಡಿನ ದಾಳಿ

ಭಾರತದ ದೊಡ್ಡ ಮೊತ್ತದ ಗುರಿಯನ್ನು ಬೆನ್ನೆಟ್ಟಲು ಆರಂಭಿಸಿದ ಪಾಕಿಸ್ತಾನ ತಂಡ ಆರಂಭದಿಂದಲೇ ಸಂಕಷ್ಟಕ್ಕೆ ಬಿತ್ತು. 17 ರನ್​ಗಳಿಗೆ ಮೊದಲ ವಿಕೆಟ್​ ಕಳೆದುಕೊಂಡ ಪಾಕ್​ ನಂತರದಲ್ಲಿ ಸತತವಾಗಿ ವಿಕೆಟ್​ಗಳನ್ನು ಕಳೆದುಕೊಂಡಿತು. ನಾಯಕ ಬಾಬರ್​ ಅಜಮ್​ 10 ರನ್​ಗೆ ಔಟಾದರೆ, ಮೊಹಮ್ಮದ್ ರಿಜ್ವಾನ್​ 2 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು. ಆರಂಭಿಕ ಬ್ಯಾಟರ್​ ಫಖರ್​ ಜಮಾನ್ 27 ರನ್​ಗೆ ಔಟಾದರು. ಅಘಾ ಸಲ್ಮಾನ್ 23 ರನ್ ಬಾರಿಸಿದರೆ ಇಫ್ತಿಕಾರ್ ಅಹಮದ್​ ಕೂಡ 23 ರನ್​ಗೆ ಆಟ ಕೊನೆಗೊಳಿಸಿದರು. ಉರಿಚೆಂಡಿನ ದಾಳಿ ನಡೆಸಿದ ಕುಲ್ದೀಪ್​ ಯಾದವ್​ 8 ಓವರ್​ಗಳಲ್ಲಿ 25 ರನ್​ ನೀಡಿ ಐದು ವಿಕೆಟ್ ಪಡೆದು ಪಂದ್ಯವನ್ನು ಸ್ಮರಣೀಯ ಮಾಡಿಕೊಂಡರು.

Exit mobile version