Site icon Vistara News

India Womens Cricket Team : ಮೊದಲ ಟಿ20ಯಲ್ಲಿ ಭಾರತಕ್ಕೆ 7 ವಿಕೆಟ್​ ಸುಲಭ ಜಯ

Indian Women Cricket team

ಮೀರ್​ಪುರ: ಬಾಂಗ್ಲಾದೇಶ ಪ್ರವಾಸದಲ್ಲಿರುವ ಭಾರತೀಯ ಮಹಿಳೆಯರ ಕ್ರಿಕೆಟ್​ ತಂಡ (India Womens Cricket Team) ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಹಣಾಹಣಿಯಲ್ಲಿ 7 ವಿಕೆಟ್​ ನಿರಾಯಸ ವಿಜಯ ದಾಖಲಿಸಿದೆ. ಈ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಅರ್ಧ ಶತಕ (54 ರನ್​) ಬಾರಿಸಿದ ನಾಯಕಿ ಹರ್ಮನ್​ಪ್ರೀತ್​ ಕೌರ್​ ಗೆಲುವಿನ ರೂವಾರಿ ಎನಿಸಿಕೊಂಡರು. ಸ್ಮೃತಿ ಮಂಧಾನಾ (38) ಕೂಡ ಗೆಲುವಿಗೆ ಕೊಡುಗೆ ಕೊಟ್ಟರು.

ಇಲ್ಲಿನ ಶೇರ್ ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್​ ಟಾಸ್​ ಗೆದ್ದರು. ಅದರಂತೆಯೇ ಮೊದಲು ಬ್ಯಾಟ್​ ಮಾಡಿದ ಬಾಂಗ್ಲಾದೇಶ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 114 ರನ್ ಬಾರಿಸಿದರು. ಪ್ರತಿಯಾಗಿ ಬ್ಯಾಟ್​ ಮಾಡಿದ ಭಾರತ ಮಹಿಳೆಯರ ಬಳಗ 16.2 ಓವರ್​ಗಳಲ್ಲಿ 3 ವಿಕೆಟ್​ ನಷ್ಟಮಾಡಿಕೊಂಡು 118 ರನ್ ಬಾರಿಸಿ ಗೆಲುವು ಸಾಧಿಸಿತು.

ಸಾಧಾರಣ ಗುರಿಯನ್ನು ಬೆನ್ನಟ್ಟಲು ಹೊರಟ ಭಾರತ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಆರಂಭಿಕ ಬ್ಯಾಟರ್​ ಶಫಾಲಿ ವರ್ಮಾ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಎದುರಿಸಿದರು. ಆದರೆ, ಸ್ಮೃತಿ ಮಂಧಾನಾ ಬಾಂಗ್ಲಾ ಬೌಲರ್​ಗಳಿಗೆ ಪ್ರತಿರೋಧ ಒಡ್ಡಲು ಆರಂಭಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಜೆಮಿಮಾ ರೋಡ್ರಿಗಸ್​ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಉಳಿಯಲಿಲ್ಲ. 11 ರನ್​ಗೆ ಔಟಾಗಿ ಪೆವಿಲಿಯನ್​ಗೆ ಸಾಗಿದರು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ : ವಿಶ್ವಕಪ್​ಗೆ ವೆಸ್ಟ್‌ ಇಂಡೀಸ್‌ ತಂಡ ಅರ್ಹತೆಯನ್ನೇ ಪಡೆಯದಿರುವುದು ಕ್ರಿಕೆಟ್‌ ದುರಂತ

ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡಲು ಬಂದ ನಾಯಕ ಹರ್ಮನ್​ಪ್ರೀತ್ ಕೌರ್​ ಜವಾಬ್ದಾರಿಯುತ ಅಟ ಪ್ರದರ್ಶಿಸಿದರು. 35 ಎಸೆತಗಳನ್ನು ಎದುರಿಸಿದ ಅವರು 6 ಫೋರ್​ ಹಾಗೂ 2 ಸಿಕ್ಸರ್​ಗಳ ನೆರವಿನಿಂದ 54 ರನ್​ ಬಾರಿಗೆ ಗೆಲುವು ತಂದುಕೊಟ್ಟರು. ಅವರ ಅಜೇಯ ಇನಿಂಗ್ಸ್​ನಿಂದಾಗಿ ಭಾರತಕ್ಕೆ ಸುಲಭ ಜಯ ಲಭಿಸಿತು. ಯಸ್ತಿಕಅ ಭಾಟಿಯಾ 9 ರನ್​ ಗಳಿಸಿದರು.

ಭಾರತದ ಬಿಗು ದಾಳಿ

ಮೊದಲು ಬ್ಯಾಟ್​ ಮಾಡಿದ್ದ ಬಾಂಗ್ಲಾದೇಶ ತಂಡನ್ನು ಕಟ್ಟಿ ಹಾಕಲು ಕೌರ್​ ಬಳಗ ಸಫಲವಾಯಿತು. ಐದು ವಿಕೆಟ್​ಗಳನ್ನು ಮಾತ್ರ ಗಳಿಸಲು ಸಫಲವಾದ ಹೊರತಾಗಿಯೂ ಹೆಚ್ಚು ರನ್​ ಬಾರಿಸದಂತೆ ನೋಡಿಕೊಂಡರು. ಆರಂಭಿಕ ಬ್ಯಾಟರ್ ಶತಿ ರಾಣಿ 22 ರನ್ ಬಾರಿಸಿದರೆ, ಶಮಿಮಾ ಸುಲ್ತಾನಾ 17 ರನ್ ಬಾರಿಸಿದರು. ಶೊಭಮಾ ಮೊಸ್ಟ್ರಿ 23 ರನ್​, ಶೊರ್ನಾ ಅಖ್ತರ್ 28 ರನ್ ಪೇರಿಸುವ ಮೂಲಕ ತಂಡದ ಪಾಲಿಗೆ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ರಿತು ಮೋನಿ 11 ರನ್​​ಗಳನ್ನು ಗಳಿಸಿದರು.

ಇತ್ತಂಡಗಳ ನಡುವಿನ ಎರಡನೇ ಪಂದ್ಯ ಜೂನ್​ 11ರಂದು ಮೀರ್​ಪುರದಲ್ಲಿಯೇ ನಡೆಯಲಿದೆ.

Exit mobile version