Site icon Vistara News

Asian Kabaddi Championships : ಕಬಡ್ಡಿಯಲ್ಲಿ ನಮ್ದೇ ಹವಾ! ಮತ್ತೊಂದು ಟ್ರೋಫಿ ಗೆದ್ದ ಭಾರತ ತಂಡ

Indian Kabaddi Team

ನವ ದೆಹಲಿ: ಭಾರತ ಕಬಡ್ಡಿ ತಂಡ ಶುಕ್ರವಾರ ನಡೆದ ಏಷ್ಯನ್ ಚಾಂಪಿಯನ್ ಶಿಪ್ (Asian Kabaddi Championships) ಫೈನಲ್ ಪಂದ್ಯದಲ್ಲಿ ಇರಾನ್ ತಂಡವನ್ನು 42-32 ಅಂಕಗಳಿಂದ ಮಣಿಸಿ ಪ್ರಶಸ್ತಿಯನ್ನು ಉಳಿಸಿಕೊಂಡಿದೆ. ಇದು ಕಾಂಟಿನೆಂಟಲ್ ಚಾಂಪಿಯನ್ ಶಿಪ್​​ನಲ್ಲಿ ಭಾರತದ ಎಂಟನೇ ಪ್ರಶಸ್ತಿಯಾಗಿದೆ. ಈ ಮೂಲಕ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿರುವ ತಂಡ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ.

ಪಂದ್ಯದಲ್ಲಿ ಇರಾನ್ ತಂಡ ಆಕ್ರಮಣಕಾರಿಯಾಗಿ ಪ್ರಾರಂಭಿಸಿತು. ಆದರೆ ಭಾರತೀಯ ಆಟಗಾರರು ತಮ್ಮ ಕಾರ್ಯಗಳನ್ನು ಉತ್ತಮವಾಗಿ ನಿರ್ವಹಿಸಿದರು. ನಾಯಕ ಪವನ್ ಶೆಹ್ರಾವತ್ ಎರಡು ಟಚ್ ಪಾಯಿಂಟ್ ಗಳೊಂದಿಗೆ ಮೊದಲ ಆಲ್ ಔಟ್ ಮಾಡಿ ಸಹಾಯ ಮಾಡಿದರು. ಈ ಮೂಲಕ ಅವರು ತಂಡಕ್ಕೆ 10-4 ಮುನ್ನಡೆ ನೀಡಿದರು. ಇದಾದ ಬಳಿ ಭಾರತ ತಂಡ ಇರಾನ್​ ಆಟಗಾರರ ಮೇಲೆ ಒತ್ತಡ ಹೇರುತ್ತಲೇ ಇತ್ತು. ಮತ್ತೊಂದು ಆಲ್ ಔಟ್ ಮಾಡುವ ಮೂಲಕ ಮೊದಲಾರ್ಧದಲ್ಲಿ 23-11 ಅಂಕಗಳ ಮುನ್ನಡೆ ಸಾಧಿಸಿತ್ತು.

ಇರಾನಿನ ಆಲ್ ರೌಂಡರ್ ಮುಹಮ್ಮದ್ರೆಜಾ ಚಿಯಾನೆ ಭಾರತ ತಂಡಕ್ಕೆ ಪ್ರತಿರೋಧ ಒಡ್ಡಿತು. ಆದರೆ ಮತ್ತೊಂದು ಆಲ್ ಔಟ್ ಬಿಟ್ಟುಕೊಟ್ಟು 14-33 ರಿಂದ ಹಿನ್ನಡೆ ಅನುಭವಿಸಿತು. ಬಳಿಕ ಭಾರತ ತಂಡವು ತಮ್ಮ ಹಿಡಿತವನ್ನು ಕಾಯ್ದುಕೊಂಡಿತು. ಆದರೂ ಕೊನೇ ಹಂತದಲ್ಲಿ ಅಂಕಗಳನ್ನು ಗಳಿಸಿದ ಇರಾನ್​ ತಂಡ ದೊಡ್ಡ ಅಂತರದ ಸೋಲಿನಿಂದ ತಪ್ಪಿಸಿಕೊಂಡಿತು.

ಇದನ್ನೂ ಓದಿ: Bike accident : ರಾಜ್ಯಮಟ್ಟದ ಯುವ ಕಬಡ್ಡಿ ಆಟಗಾರ ಎನ್‌. ಸತೀಶ್‌ ಅಪಘಾತದಲ್ಲಿ ಮೃತ್ಯು, ಆಟ ಮುಗಿಸಿ ತೆರಳುತ್ತಿದ್ದಾಗ ದುರಂತ

ಇರಾನ್ ವಿರುದ್ಧದ ಅಂತಿಮ ಪಂದ್ಯದಲ್ಲಿ 42-32 ಸ್ಕೋರ್ ಗಳಿಸುವ ಮೂಲಕ ಟೀಮ್ ಇಂಡಿಯಾ ಏಷ್ಯನ್ ಕಬಡ್ಡಿ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಉಳಿಸಿಕೊಂಡಿದೆ! ಇಡೀ ತಂಡಕ್ಕೆ ಅಭಿನಂದನೆಗಳು. ಉತ್ತಮವಾಗಿ ಆಡಿದ ಹುಡುಗರು” ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ ಟ್ವೀಟ್ ಮಾಡಿದೆ.

Exit mobile version