ಮುಂಬಯಿ: ಭಾರತ ಕ್ರಿಕೆಟ್ ತಂಡ ಹಳೆ ಸೋಲಿಗೆ ಸೇಡು ತೀರಿಸಿಕೊಂಡಿದೆ. ವಿಶ್ವ ಕಪ್ 2023ರ ಸೆಮಿ ಫೈನಲ್ನಲ್ಲಿ ನ್ಯೂಜಿಲ್ಯಾಂಡ್ (IND vs NZ ) ತಂಡವನ್ನು 70 ರನ್ಗಳಿಂದ ಸೋಲಿಸಿ ಫೈನಲ್ಗೇರಿದೆ. ಈ ಮೂಲಕ 2019ರ ವಿಶ್ವ ಕಪ್ನ ಸೆಮಿ ಫೈನಲ್ ಪಂದ್ಯದ ಸೋಲಿಗೆ ಪ್ರತಿಕಾರ ತೀರಿಸಿದೆ. ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದ್ದ ಬಿಗ್ ಸ್ಕೋರ್ ಮ್ಯಾಚ್ನಲ್ಲಿ ಭಾರತ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ತಂಡ ನಾಲ್ಕನೇ ಬಾರಿ ಏಕ ದಿನ ವಿಶ್ವ ಕಪ್ನ ಫೈನಲ್ಗೇರಿದೆ. ಈ ಹಿಂದೆ ಮೂರು ಬಾರಿ ಫೈನಲ್ಗೇರಿದ್ದು ಅದರಲ್ಲಿ ಎರಡು ಬಾರಿ ಚಾಂಪಿಯನ್ಪಟ್ಟ ಅಲಂಕರಿಸಿದೆ. ಪ್ರಶಸ್ತಿಗಳು 1983 ಹಾಗೂ 2011ರಲ್ಲಿ ಲಭಿಸಿದ್ದರೆ, 2003ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
India overcame a spirited New Zealand display to enter their fourth ICC Men's Cricket World Cup final 👊#CWC23 | #INDvNZ 📝: https://t.co/hSNFnaofwV pic.twitter.com/3G0SMCFQF1
— ICC Cricket World Cup (@cricketworldcup) November 15, 2023
ಈ ಸೋಲಿನೊಂದಿಗೆ ನ್ಯೂಜಿಲ್ಯಾಂಡ್ ತಂಡ ತಂಡ ಮತ್ತೊಂದು ಬಾರಿ ಸೆಮಿಫೈನಲ್ನಲ್ಲಿ ಸೋಲು ಅನುಭವಿಸಿತು. ವಿಶ್ವ ಕಪ್ ಇತಿಹಾಸದಲ್ಲಿ ಗರಿಷ್ಠ 9ನೇ ಬಾರಿ ಸೆಮಿಫೈನಲ್ಗೇರಿದ್ದ ನ್ಯೂಜಿಲ್ಯಾಂಡ್ ತಂಡ ಒಂದೇ ಒಂದು ಟ್ರೋಫಿ ಗೆಲ್ಲುವುದಕ್ಕೆ ಸಾಧ್ಯವಾಗದಿರುವುದು ವಿಪರ್ಯಾಸ. ಆದರೆ, ಭಾರತ ತಂಡ ಇದೇ ಮೊದಲ ಬಾರಿಗೆ ಐಸಿಸಿ ನಾಕೌಟ್ ಹಂತದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಗೆಲುವು ಸಾಧಿಸಿತು.
1983 ➡️ 2011 ➡️ 2023❓
— ICC Cricket World Cup (@cricketworldcup) November 15, 2023
India are into the #CWC23 Final 🎉 pic.twitter.com/tlETCbQqLo
ವಿರಾಟ್ ಕೊಹ್ಲಿಯ (117) ವಿಶ್ವ ದಾಖಲೆಯ ಶತಕ ಹಾಗೂ ಶ್ರೇಯಸ್ ಅಯ್ಯರ್ (105) ಅವರ ಅಮೋಘ ಶತಕ ಹಾಗೂ ಮೊಹಮ್ಮದ್ ಶಮಿಯ (57 ರನ್ಗಳಿಗೆ 7 ವಿಕೆಟ್) ಮತ್ತೊಂದು ಐದು ವಿಕೆಟ್ಗಳ ಸಾಧನೆಯಿಂದಾಗಿ ಭಾರತ ತಂಡ ಗೆಲುವು ಸಾಧಿಸಿತು. ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ (80) ಕೂಡ ಭಾರತ ತಂಡಕ್ಕೆ ಬೃಹತ್ ಮೊತ್ತ ಪೇರಿಸಲು ನೆರವಾದರು.
ವಾಖೆಂಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 397 ರನ್ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ ತಂಡ 48.5 ಓವರ್ಗಳ ಮುಕ್ತಾಯಗೊಂಡಾಗ 327 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಅಂದ ಹಾಗೆ ಭಾರತ ತಂಡ ಹಾಲಿ ವಿಶ್ವ ಕಪ್ನಲ್ಲಿ ಯಾವುದೇ ತಂಡಕ್ಕೆ 50 ಓವರ್ಗಳನ್ನು ಪೂರ್ತಿಯಾಗಿ ಆಡಲು ಬಿಡಲಿಲ್ಲ. ಇದು ಕೂಡ ಭಾರತ ತಂಡದ ಪಾಲಿಗೆ ದಾಖಲೆಯಾಗಿದೆ.
What a SUPERB SEMI-showdown, kept us all on the edge of our seats!!!
— Anurag Thakur (@ianuragthakur) November 15, 2023
Congratulations Team Bharat for sealing the semis in an absolute rollercoaster of a match against the Kiwis! You didn't just score the highest run in knockout matches, you delivered a knockout punch, sealing… pic.twitter.com/IEFLhiwbDz
ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ಹಣಾಹಣಿಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದಕ್ಕೆ ಪೂರಕವಾಗಿ ಬ್ಯಾಟ್ ಮಾಡಿದ ತಂಡದ ಬ್ಯಾಟರ್ಗಳು ಟೂರ್ನಿಯ ಪ್ರಮುಖ ಪಂದ್ಯವೊಂದರಲ್ಲಿ ಬೃಹತ್ ಮೊತ್ತ ಪೇರಿಸಲು ನೆರವಾದರು.
ಶಮಿಯ 7 ವಿಕೆಟ್ ಸಾಧನೆಗೆ ಸಿಕ್ಕ ಫಲ
A scintillating seven-wicket haul from Mohammed Shami bowled India into the finals of the #CWC23 🔥
— ICC Cricket World Cup (@cricketworldcup) November 15, 2023
He wins the @aramco #POTM for his effort.#INDvNZ pic.twitter.com/EtPYcjJENJ
ದೊಡ್ಡ ಮೊತ್ತವನ್ನು ಪೇರಿಸಲು ಹೊರಟ ನ್ಯೂಜಿಲ್ಯಾಂಡ್ ತಂಡಕ್ಕೆ ನಿಜವಾಗಿಯೂ ಕಾಡಿದ್ದು ಮೊಹಮ್ಮದ್ ಶಮಿ. 9.5 ಓವರ್ಗಳನ್ನು ಎಸೆದ ಶಮಿ 57 ರನ್ ನೀಡಿ 7 ವಿಕೆಟ್ ಪಡೆಯುವ ಮೂಲಕ ಭಾರತದ ಗೆಲುವಿಗೆ ಕಾರಣರಾದರು. ನ್ಯೂಜಿಲ್ಯಾಂಡ್ ಪರ ಡ್ಯಾರಿಲ್ ಮಿಚೆಲ್ 134 ರನ್ ಬಾರಿಸಿ ಮಿಂಚಿದರು. ಕೇನ್ ವಿಲಿಯಮ್ಸನ್ 69 ರನ್ ಬಾರಿಸಿದರು. ಇವರಿಬ್ಬರೂ 181 ರನ್ಗಳ ಜತೆಯಾಟವಾಡಿದರು. ಈ ವೇಳೆ ಭಾರತಕ್ಕೆ ಆತಂಕ ಎದುರಾಯಿತು. ಆದರೆ, ಶಮಿ ಅವರಿಬ್ಬರನ್ನೂ ಔಟ್ ಮಾಡುವ ಮೂಲಕ ಭಾರತಕ್ಕೆ ನೆಮ್ಮದಿ ತಂದರು. ನ್ಯೂಜಿಲ್ಯಾಂಡ್ ತಂಡದ ಗ್ಲೆನ್ ಫಿಲಿಫ್ಸ್ 41 ರನ್ ಬಾರಿಸಿದರು. ಉಳಿದವರಿಗೆ ದೊಡ್ಡ ಮೊತ್ತಕ್ಕೆ ಸವಾಲಾಗಲು ಸಾಧ್ಯವಾಗಲಿಲ್ಲ.
ಭಾರತದ ಭರ್ಜರಿ ಆರಂಭ
ಇನಿಂಗ್ಸ್ ಆರಂಭಿಸಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಎಂದಿನಂತೆ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು 29 ಎಸೆತಗಳಲ್ಲಿ 47 ರನ್ ಬಾರಿಸಿ ಮಿಂಚಿದರು. ಅವರ ಇನಿಂಗ್ಸ್ನಲ್ಲಿ 4 ಫೊರ್ ಹಾಗೂ 4 ಸಿಕ್ಸರ್ಗಳಿದ್ದವು. ಅವರಿಗೆ ಉತ್ತಮವಾಗಿ ಸಾಥ್ ಕೊಟ್ಟ ಯುವ ಬ್ಯಾಟರ್ ಶುಭ್ಮನ್ ಗಿಲ್ ಭಾರತ ತಂಡಕ್ಕೆ ವಿಶ್ವಾಸ ಮೂಡಿಸಿದರು. ಅವರಿಬ್ಬರು ಮೊದಲ ವಿಕೆಟ್ಗೆ 71 ರನ್ ಬಾರಿಸಿದರು. ಆದರೆ ಸೌಥಿ ಎಸೆತಕ್ಕೆ ವಿಲಿಯಮ್ಸನ್ಗೆ ಕ್ಯಾಚ್ ನೀಡಿದ ರೋಹಿತ್ ಔಟಾದರು.
ಕೊಹ್ಲಿಯ ಉತ್ತಮ ಬ್ಯಾಟಿಂಗ್
ರೋಹಿತ್ ಔಟಾಗುತ್ತಿದ್ದಂತೆ ಆಡಲ ಇಳಿದ ವಿರಾಟ್ ಕೊಹ್ಲಿ ಅತ್ಯುತ್ತಮವಾಗಿ ಬ್ಯಾಟ್ ಬೀಸಿದರು. ಆರಂಭದಲ್ಲಿ ಸಾವಧಾನದಿಂದ ಬ್ಯಾಟ್ ಮಾಡಿದ ಅವರು ಎಂದಿನಂತೆಯೇ ರನ್ ಗಳಿಕೆಗೆ ವೇಗ ತಂದದು. ಅವರಿಗೆ ಶುಭ್ಮನ್ ಗಿಲ್ ಕೂಡ ಸಾಥ್ ಕೊಟ್ಟರು. ಆದರೆ, ಮುಂಬಯಿಯ ಉರಿ ಬಿಸಿಲು ತಾಳಲಾರದೆ ಶುಭ್ಮನ್ ಗಿಲ್ ಅಸ್ವಸ್ಥರಾದರು. ಹೀಗಾಗಿ 79 ರನ್ ಬಾರಿಸಿ ಅವರು ಪೆವಿಲಿಯನ್ ಹಾದಿ ಹಿಡಿದರು. ಆ ಬಳಿಕ ಶ್ರೇಯಸ್ ಅಯ್ಯರ್ ಕಣಕ್ಕೆ ಇಳಿದರು. ಶ್ರೇಯಸ್ ಮತ್ತು ಕೊಹ್ಲಿ ನ್ಯೂಜಿಲ್ಯಾಂಡ್ ಬೌಲರ್ಗಳನ್ನು ಬೆಂಡೆತ್ತಿದರು.
ಶ್ರೇಯಸ್ ಅಯ್ಯರ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರೆ ವಿರಾಟ್ ಕೊಹ್ಲಿ ಇನಿಂಗ್ಸ್ ಕಟ್ಟಲು ಆರಂಭಿಸಿದರು. ಅಂತಿಮವಾಗಿ ವಿರಾಟ್ ಕೊಹ್ಲಿ ಏಕ ದಿನ ಕ್ರಿಕೆಟ್ ಇತಿಹಾಸದದಲ್ಲಿ ಅತ್ಯಧಿಕ ಶತಕ (50) ಬಾರಿಸಿದ ಆಟಗಾರ ಎಂಬ ಖ್ಯಾತಿ ತಮ್ಮದಾಗಿಸಿಕೊಂಡರು. ಮುಂಬಯಿಯ ರಣ ಬಿಸಿಲಿಗೆ ಮೈಯೊಡ್ಡಿ ಆಡಿದ ವಿರಾಟ್ ವಿಕೆಟ್ಗಳ ಮಧ್ಯೆ ನಿರಂತರ ಓಡುತ್ತಾ ರನ್ ಗಳಿಸಿದರು. ಅವರು 106 ಎಸೆತಕ್ಕೆ ಶತಕ ಬಾರಿಸಿ 113 ಎಸೆತಕ್ಕೆ 117 ರನ್ ಪೇರಿಸಿ ಔಟಾದರು. ಅವರ ಇನಿಂಗ್ಸ್ನಲ್ಲಿ 9 ಫೋರ್ ಹಾಗೂ 2 ಸಿಕ್ಸರ್ಗಳಿದ್ದವು.
ಶ್ರೇಯಸ್ ಅಯ್ಯರ್ ಅಬ್ಬರದ ಶತಕ
ಹಿಂದಿನ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಶತಕ ಬಾರಿಸಿ ಮಿಂಚಿದ್ದ ಶ್ರೇಯಸ್ ಅಯ್ಯರ್ ಈ ಪಂದ್ಯದಲ್ಲೂ ಅಬ್ಬರದಿಂದ ಬ್ಯಾಟ್ ಮಾಡಿದರು. ಈ ಬಾರಿ 67 ಎಸೆತಗಳಲ್ಲಿ ಶತಕ ಬಾರಿಸಿದ ಅಯ್ಯರ್ 70 ಎಸೆತಕ್ಕೆ 105 ರನ್ ಬಾರಿಸಿ ಔಟಾದರು. ಅವರ ಇನಿಂಗ್ಸ್ನಲ್ಲಿ 8 ಸಿಕ್ಸರ್ ಮತ್ತು 4 ಫೋರ್ಗಳಿದ್ದವು. ಕೊಹ್ಲಿ ಹಾಗೂ ಶ್ರೇಯಸ್ ಬ್ಯಾಟಿಂಗ್ನಿಂದಾಗಿ ಭಾರತ ದೊಡ್ಡ ಮೊತ್ತ ಪೇರಿಸಿತು.
ಅಂತಿಮವಾಗಿ ಕೆ. ಎಲ್ ರಾಹುಲ್ 20 ಎಸೆತಗಳಲ್ಲಿ 39 ರನ್ ಬಾರಿಸಿ ಭಾರತ ತಂಡದ ಮೊತ್ತ 400 ಸನಿಹ ಬೆಳೆಯುವಂತೆ ನೋಡಿಕೊಂಡರು. ಸೂರ್ಯಕುಮಾರ್ ಯಾದವ್ 1ರನ್‌ಗೆ ಔಟಾದ ಬಳಿಕ ಆಡಲು ಬಂದ ಶುಭ್ಮನ್ ಗಿಲ್ ತಮ್ಮ ಮೊತ್ತವನ್ನು 80ಕ್ಕೆ ಏರಿಸಿದರು.
ನ್ಯೂಜಿಲ್ಯಾಂಡ್ ಪರ ಟಿಮ್ ಸೌಥಿ 3 ವಿಕೆಟ್ ಪಡೆದರೆ ಬೌಲ್ಟ್ 1 ವಿಕೆಟ್ ಪಡೆದರು.