Site icon Vistara News

ind vs ned : ಭಾರತ ತಂಡಕ್ಕೆ ನೆದರ್ಲ್ಯಾಂಡ್ಸ್ ವಿರುದ್ಧ 160 ರನ್​ ಭರ್ಜರಿ ಜಯ

Team india won

ಬೆಂಗಳೂರು: ವಿಶ್ವ ಕಪ್​ನ ಲೀಗ್ ಹಂತದ ತನ್ನ ಕೊನೇ ಪಂದ್ಯದಲ್ಲಿ ಭಾರತ ತಂಡ ನೆದರ್ಲ್ಯಾಂಡ್ಸ್ (ind vs ned) ವಿರುದ್ಧ 160 ರನ್​ಗಳಿಂದ ಜಯಗಳಿಸಿದೆ. ಈ ಮೂಲಕ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಹಾಲಿ ವಿಶ್ವ ಕಪ್​ನ (ICC World Cup 2023) ಲೀಗ್​ ಹಂತದ 9 ಪಂದ್ಯಗಳಲ್ಲಿ ಎಲ್ಲವನ್ನೂ ಗೆದ್ದು 18 ಅಂಕಗಳೊಂದಿಗೆ ಸೆಮಿ ಫೈನಲ್​ಗೆ ಪ್ರವೇಶ ಪಡೆಯಿತು. ಭಾರತ ತಂಡ ಒಂದೇ ವಿಶ್ವ ಕಪ್ ಆವೃತ್ತಿಯಲ್ಲಿ ಸತತ 9 ಗೆಲುವು ಪಡೆಯುತ್ತಿರುವುದು ಇದೇ ಮೊದಲಾಗಿರುವ ಕಾರಣ ಅದು ಕೂಡ ದಾಖಲೆಯಾಯಿತು. ಹಿಂದೆ ಧೋನಿ ನಾಯಕತ್ವದಲ್ಲಿ ಭಾರತ ತಂಡ 8 ಗೆಲುವು ಕಂಡಿತ್ತು. ಉತ್ಸಾಹದಲ್ಲಿರುವ ಭಾರತ ಬಳಗ ಬುಧವಾರ (ನವೆಂಬರ್​ 15) ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಂಕಪಟ್ಟಿಯ ನಾಲ್ಕನೇ ಸ್ಥಾನಿ ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದೆ.

ಶ್ರೇಯಸ್​ ಅಯ್ಯರ್ (ಅಜೇಯ 128) ಮತ್ತು ಕೆ. ಎಲ್​ ರಾಹುಲ್ (102) ಅವರ ಶತಕಗಳು ಹಾಗೂ ಶುಭ್​ಮನ್​ ಗಿಲ್ (61)​, ರೋಹಿತ್​ ಶರ್ಮಾ (61) ವಿರಾಟ್​ ಕೊಹ್ಲಿ (51) ಹಾಗೂ ಅವರ ಅರ್ಧ ಶತಕಗಳು ಭಾರತ ತಂಡದ ಗೆಲುವಿಗೆ ನೆರವಾಯಿತು. ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಭಾರತ ತಂಡದ ಪರ 9 ಆಟಗಾರರು ಬೌಲಿಂಗ್ ಮಾಡಿದರು. ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್​, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರೆ, ಕೊಹ್ಲಿ ಮತ್ತು ರೋಹಿತ್​ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ತನ್ನ ನಿರ್ಧಾರಕ್ಕೆ ಪೂರಕವಾಗಿ ಆಡಿತು. ಆರಂಭದಿಂದಲೂ ಕೊನೇ ತನಕ ರನ್​ಗಳನ್ನು ಗಳಿಸುತ್ತಾ ನಿಗದಿತ 50 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 40 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಸ್ಕಾಟ್ ಎಡ್ವರ್ಡ್ ನೇತೃತ್ವದ ಡಚ್ಚರ ಪಡೆ 47. 5 ಓವರ್​ಗಳಲ್ಲಿ 250 ರನ್​ಗಳಿಗೆ ಆಲ್​ಔಟ್ ಆಗಿ ಸೋಲೊಪ್ಪಿಕೊಂಡಿತು.

ಬೆಂಗಳೂರಿನಲ್ಲಿ ರನ್​ ಮಳೆ

ಬ್ಯಾಟರ್​ಗಳ ಸ್ವರ್ಗ ಎನಿಸಿರುವ ಬೆಂಗಳೂರಿನ ಮೈದಾನದಲ್ಲಿ ಭಾರತೀಯ ಬ್ಯಾಟರ್​ಗಳು ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ರನ್​ಗಳ ಮಳೆಯನ್ನೇ ಸುರಿಸಿದರು. ಹೀಗಾಗಿ ಡಚ್ಚರ ಗೆಲುವಿಗೆ 411 ರನ್​ಗಳ ಗುರಿ ಎದುರಾಗಿತ್ತು. ಈ ಮೂಲಕ ಭಾರತ ತಂಡ ವಿಶ್ವ ಕಪ್​ ಇತಿಹಾಸದಲ್ಲಿ ಎರಡನೇ ಬಾರಿಗೆ 400 ರನ್​ಗಳಿಗಿಂತ ಅಧಿಕ ಮೊತ್ತವನ್ನು ಬಾರಿಸಿತು. 2007ರ ವಿಶ್ವ ಕಪ್​ನಲ್ಲಿ ಬರ್ಮುಡಾ ವಿರುದ್ಧ 5 ವಿಕೆಟ್​ 413 ರನ್ ಬಾರಿಸಿತ್ತು.

ಇನಿಂಗ್ಸ್ ಆರಂಭಿಸಿದ ಭಾರತ ತಂಡದ ಸರಾಗವಾಗಿ ರನ್​ಗಳಿಸಿತು. ಶುಭ್​ಮನ್​ ಗಿಲ್​ (51) ಹಾಗೂ ರೋಹಿತ್ ಶರ್ಮಾ (61) ಮೊದಲ ವಿಕೆಟ್​ಗೆ 100 ರನ್​ಗಳ ಜತೆಯಾಟ ನೀಡಿದರು. 32 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿಸಿದ್ದ ಶುಭ್​ಮನ್ ಗಿಲ್​ ಬೌಂಡರಿ ಲೈನ್​ನಲ್ಲಿ ಎದುರಾಳಿ ತಂಡದ ಬರ್ರೇಸಿ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. ಅವರ ಇನಿಂಗ್ಸ್​​ನಲ್ಲಿ 8 ಫೋರ್​ ಹಾಗೂ 2 ಸಿಕ್ಸರ್​ಗಳಿದ್ದವು/ ಬಳಿಕ ಆಡಲು ಬಂದ ವಿರಾಟ್ ಕೊಹ್ಲಿ ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿ ಬಳಿಕ ರನ್​ ಗಳಿಕೆಗೆ ವೇಗ ಕೊಟ್ಟರು. 5 ಫೋರ್ ಹಾಗೂ 1 ಸಿಕ್ಸರ್​ ಮೂಲಕ ಅವರು ಅರ್ಧ ಶತಕ ಬಾರಿಸಿದರು. ಏತನ್ಮಧ್ಯೆ ಬ್ಯಾಟಿಂಗ್​ನಲ್ಲಿ ಅಬ್ಬರಿಸುತ್ತಿದ್ದ ರೋಹಿತ್ ಶರ್ಮಾ 61 ರನ್​ಗಳಿಗ ಔಟಾದರು. 8 ಫೋರ್​ ಹಾಗೂ 2 ಸಿಕ್ಸರ್ ಅವರು ಬಾರಿಸಿದ್ದರು.

ಈ ಸುದ್ದಿಯನ್ನೂ ಓದಿ: KL Rahul : ನೆದರ್ಲ್ಯಾಂಡ್ಸ್ ವಿರುದ್ಧ ಶತಕ ಬಾರಿಸಿ ನೂತನ ಸಾಧನೆ ಮಾಡಿದ ಕೆ.ಎಲ್ ರಾಹುಲ್​

ಬಳಿಕ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್​ ಕೊಹ್ಲಿ ತಂಡ ಗಳಿಕೆಗೆ ವೇಗ ಕೊಟ್ಟರು. ಏನನ್ಮಧ್ಯೆ ಮತ್ತೊಂದು ಶತಕದ ನಿರಿಕ್ಷೆಯಲ್ಲಿದ್ದ ವಿರಾಟ್​ ಕೊಹ್ಲಿ ಎದುರಾಳಿ ತಂಡದ ವ್ಯಾನ್​ಡೆರ್​ ಮರ್ವ್​ ಎಸೆತಕ್ಕೆ ಕ್ಲೀನ್ ಬೌಲ್ಡ್​ ಅಗಿ ನಿರಾಸೆ ಎದುರಿಸಿರು.

ಶ್ರೇಯಸ್​- ರಾಹುಲ್ ಜತೆಯಾಟ

ಭಾರತ ತಂಡ 200 ರನ್​ಗಳಿಗೆ 3ನೇ ವಿಕೆಟ್ ಕಳೆದುಕೊಂಡ ಬಳಿಕ ಭಾರತ ತಂಡ ರನ್ ಗಳಿಕೆ ವೇಗ ಪಡೆಯಿತು. ಶ್ರೇಯಸ್​ ಅಯ್ಯರ್​ ಭರ್ಜರಿ ಜತೆಯಾಟವಾಡಿದರು. ನೆದರ್ಲ್ಯಾಂಡ್ಸ್​ ಬೌಲರ್​ಗಳನ್ನು ಸತತವಾಗಿ ಹಿಮ್ಮೆಟ್ಟಿಸಿದರು. ಆರಂಭದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಆಡಿದ ಹೊರತಾಗಿಯೂ ಕೊನೇ ಹಂತದಲ್ಲಿ ಆ ತಂಡದ ಬೌಲರ್​ಗಳನ್ನು ಸತತವಾಗಿ ದಂಡಿಸಿದರು.

ಶ್ರೇಯಸ್​ ಅಯ್ಯರ್​ 82 ಎಸೆತಕ್ಕೆ ತಮ್ಮ ಶತಕವನ್ನು ಬಾರಿಸಿ ಮಿಂಚಿದರು. ಅವರಿಗೆ ಅದು ಏಕ ದಿನ ಕ್ರಿಕೆಟ್​ ಮಾದರಿಯಲ್ಲಿ ನಾಲ್ಕನೇ ಶತಕವಾಗಿದೆ. ಶ್ರೇಯಸ್​ ಇನಿಂಗ್ಸ್​ನಲ್ಲಿ 10 ಫೋರ್​ ಹಾಗೂ 5 ಸಿಕ್ಸರ್​ಗಳು ಸೇರಿಕೊಂಡಿದ್ದವು. ಅವರ ಕೊನೇ ತನಕ ಉಳಿದ 128 ರನ್​ ಬಾರಿಸಿದರು. ಕೊನೇ ಹಂತದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಕೆ. ಎಲ್​ ರಾಹುಲ್​ 62 ಎಸೆತಗಳಿಗೆ ಶತಕ ಬಾರಿಸಿದರು. ಇದು ವಿಶ್ವ ಕಪ್​ನಲ್ಲಿ ಭಾರತ ತಂಡದ ಪರವಾಗಿ ಅತಿ ವೇಗದ ಶತಕವಾಗಿದೆ. ಅವರು 11 ಫೋರ್ ಹಾಗೂ 4 ಸಿಕ್ಸರ್ ನೆರವಿನಿಂದ ತಮ್ಮ ಶತಕ ಬಾರಿಸಿದರು. ಈ ಜೋಡಿ ನಾಲ್ಕನೇ ವಿಕೆಟ್​ಗೆ 208 ರನ್​ಗಳನ್ನು ಬಾರಿಸಿದರು.

ನೆದರ್ಲ್ಯಾಂಡ್ಸ್​ಗೆ ನಿಲುಕದಷ್ಟು ದೊಡ್ಡ ಮೊತ್ತ

ಭಾರತ ಪೇರಿಸಿದ್ದ ಬೃಹತ್ ಮೊತ್ತವನ್ನು ದಾಟುವುದು ನೆದರ್ಲ್ಯಾಂಡ್ಸ್ ತಂಡಕ್ಕೆ ಸುಲಭ ಸವಾಲು ಆಗಿರಲಿಲ್ಲ. ಆದಾಗ್ಯೂ ಬ್ಯಾಟಿಂಗ್​ಗೆ ನೆಚ್ಚಿನ ಪಿಚ್ ಆಗಿದ್ದ ಕಾರಣ ಗೆಲುವಿಗೆ ಪ್ರಯತ್ನ ಮಾಡಿತು. ಆದರೆ, 411 ರನ್ ಬಾರಿಸುವ ಹಾದಿಯಲ್ಲಿ ಸತತವಾಗಿ ವಿಕೆಟ್​ ಕಳೆದುಕೊಂಡಿತು. ತೇಜಾ ನಿಡಮನ್ನೂರ್​ 54 ರನ್ ಬಾರಿಸಿ ಆ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಸೈಬ್ರಾಂಡ್​ 45 ರನ್ ಬಾರಿಸಿದರೆ, ಮ್ಯಾಕ್ಸ್ ಡಿ ಓಡ್​ 30, ಕಾಲಿನ ಅಕರ್ಮಾನ್​ 35, ರನ್​ಗಳ ಕೊಡುಗೆ ಕೊಟ್ಟರು ಭಾರತ ತಂಡ ಪ್ರಭಾವಿ ಬೌಲಿಂಗ್ ಆಯ್ಕೆಯನ್ನು ಹೊಂದಿದ್ದ ಹೊರತಾಗಿಯೂ ನೆದರ್ಲ್ಯಾಂಡ್ಸ್ ಆಟಗಾರರು ಸುಲಭವಾಗಿ ಬಿಟ್ಟು ಕೊಡದೇ 48 ಓವರ್​ಗಳ ತನಕ ಆಡಿದರು.

Exit mobile version