Site icon Vistara News

Ind vs Ned: ನೆದರ್ಲ್ಯಾಂಡ್ಸ್​ ವಿರುದ್ಧ 410 ರನ್​ಗಳ ಬೃಹತ್ ಮೊತ್ತ ಪೇರಿಸಿದ ಭಾರತ

KL Rahul

ಬೆಂಗಳೂರು: ಶ್ರೇಯಸ್​ ಅಯ್ಯರ್ (ಅಜೇಯ 128) ಮತ್ತು ಕೆ. ಎಲ್​ ರಾಹುಲ್ (102) ಅವರ ಶತಕಗಳು ಹಾಗೂ ಶುಭ್​ಮನ್​ ಗಿಲ್ (61)​, ರೋಹಿತ್​ ಶರ್ಮಾ (61) ವಿರಾಟ್​ ಕೊಹ್ಲಿ (51) ಹಾಗೂ ಅವರ ಅರ್ಧ ಶತಕಗಳ ನೆರವು ಪಡೆದ ಭಾರತ ತಂಡ ನೆದರ್ಲ್ಯಾಂಡ್ಸ್ ವಿರುದ್ಧದದ ವಿಶ್ವ ಕಪ್​ ಪಂದ್ಯದಲ್ಲಿ ಭಾರತ ತಂಡ 410 ರನ್​ಗಳ ಬೃಹತ್ ಮೊತ್ತ ಪೇರಿಸಿದೆ. ಬ್ಯಾಟರ್​ಗಳ ಸ್ವರ್ಗ ಎನಿಸಿರುವ ಬೆಂಗಳೂರಿನ ಮೈದಾನದಲ್ಲಿ ಭಾರತೀಯ ಬ್ಯಾಟರ್​ಗಳು ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ರನ್​ಗಳ ಮಳೆಯನ್ನೇ ಸುರಿಸಿದರು. ಹೀಗಾಗಿ ಡಚ್ಚರ ಗೆಲುವಿಗೆ 4111 ರನ್​ಗಳ ಗುರಿ ಎದುರಾಗಿದೆ. ಈ ಮೂಲಕ ಭಾರತ ತಂಡ ವಿಶ್ವ ಕಪ್​ ಇತಿಹಾಸದಲ್ಲಿ ಎರಡನೇ ಬಾರಿಗೆ 400 ರನ್​ಗಳಿಗಿಂತ ಅಧಿಕ ಮೊತ್ತವನ್ನು ಬಾರಿಸಿತು. 2007ರ ವಿಶ್ವ ಕಪ್​ನಲ್ಲಿ ಬರ್ಮುಡಾ ವಿರುದ್ಧ 5 ವಿಕೆಟ್​ 413 ರನ್ ಬಾರಿಸಿತ್ತು.

ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ತನ್ನ ನಿರ್ಧಾರಕ್ಕೆ ಪೂರಕವಾಗಿ ಆಡಿತು. ಆರಂಭದಿಂದಲೂ ಕೊನೇ ತನಕ ರನ್​ಗಳನ್ನು ಗಳಿಸುತ್ತಾ ಬಂದು ಡಚ್ಚರ ಪಡೆಗೆ ದೊಡ್ಡ ಮೊತ್ತದ ಗುರಿಯನ್ನು ಒಡ್ಡಿತು.

ಇನಿಂಗ್ಸ್ ಆರಂಭಿಸಿದ ಭಾರತ ತಂಡದ ಸರಾಗವಾಗಿ ರನ್​ಗಳಿಸಿತು. ಶುಭ್​ಮನ್​ ಗಿಲ್​ (51) ಹಾಗೂ ರೋಹಿತ್ ಶರ್ಮಾ (61) ಮೊದಲ ವಿಕೆಟ್​ಗೆ 100 ರನ್​ಗಳ ಜತೆಯಾಟ ನೀಡಿದರು. 32 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿಸಿದ್ದ ಶುಭ್​ಮನ್ ಗಿಲ್​ ಬೌಂಡರಿ ಲೈನ್​ನಲ್ಲಿ ಎದುರಾಳಿ ತಂಡದ ಬರ್ರೇಸಿ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. ಅವರ ಇನಿಂಗ್ಸ್​​ನಲ್ಲಿ 8 ಫೋರ್​ ಹಾಗೂ 2 ಸಿಕ್ಸರ್​ಗಳಿದ್ದವು/ ಬಳಿಕ ಆಡಲು ಬಂದ ವಿರಾಟ್ ಕೊಹ್ಲಿ ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿ ಬಳಿಕ ರನ್​ ಗಳಿಕೆಗೆ ವೇಗ ಕೊಟ್ಟರು. 5 ಫೋರ್ ಹಾಗೂ 1 ಸಿಕ್ಸರ್​ ಮೂಲಕ ಅವರು ಅರ್ಧ ಶತಕ ಬಾರಿಸಿದರು. ಏತನ್ಮಧ್ಯೆ ಬ್ಯಾಟಿಂಗ್​ನಲ್ಲಿ ಅಬ್ಬರಿಸುತ್ತಿದ್ದ ರೋಹಿತ್ ಶರ್ಮಾ 61 ರನ್​ಗಳಿಗ ಔಟಾದರು. 8 ಫೋರ್​ ಹಾಗೂ 2 ಸಿಕ್ಸರ್ ಅವರು ಬಾರಿಸಿದ್ದರು.

ಬಳಿಕ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್​ ಕೊಹ್ಲಿ ತಂಡ ಗಳಿಕೆಗೆ ವೇಗ ಕೊಟ್ಟರು. ಏನನ್ಮಧ್ಯೆ ಮತ್ತೊಂದು ಶತಕದ ನಿರಿಕ್ಷೆಯಲ್ಲಿದ್ದ ವಿರಾಟ್​ ಕೊಹ್ಲಿ ಎದುರಾಳಿ ತಂಡದ ವ್ಯಾನ್​ಡೆರ್​ ಮರ್ವ್​ ಎಸೆತಕ್ಕೆ ಕ್ಲೀನ್ ಬೌಲ್ಡ್​ ಅಗಿ ನಿರಾಸೆ ಎದುರಿಸಿರು.

ಶ್ರೇಯಸ್​- ರಾಹುಲ್ ಜತೆಯಾಟ

ಭಾರತ ತಂಡ 200 ರನ್​ಗಳಿಗೆ 3ನೇ ವಿಕೆಟ್ ಕಳೆದುಕೊಂಡ ಬಳಿಕ ಭಾರತ ತಂಡ ರನ್ ಗಳಿಕೆ ವೇಗ ಪಡೆಯಿತು. ಶ್ರೇಯಸ್​ ಅಯ್ಯರ್​ ಭರ್ಜರಿ ಜತೆಯಾಟವಾಡಿದರು. ನೆದರ್ಲ್ಯಾಂಡ್ಸ್​ ಬೌಲರ್​ಗಳನ್ನು ಸತತವಾಗಿ ಹಿಮ್ಮೆಟ್ಟಿಸಿದರು. ಆರಂಭದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಆಡಿದ ಹೊರತಾಗಿಯೂ ಕೊನೇ ಹಂತದಲ್ಲಿ ಆ ತಂಡದ ಬೌಲರ್​ಗಳನ್ನು ಸತತವಾಗಿ ದಂಡಿಸಿದರು.

ಶ್ರೇಯಸ್​ ಅಯ್ಯರ್​ 82 ಎಸೆತಕ್ಕೆ ತಮ್ಮ ಶತಕವನ್ನು ಬಾರಿಸಿ ಮಿಂಚಿದರು. ಅವರಿಗೆ ಅದು ಏಕ ದಿನ ಕ್ರಿಕೆಟ್​ ಮಾದರಿಯಲ್ಲಿ ನಾಲ್ಕನೇ ಶತಕವಾಗಿದೆ. ಶ್ರೇಯಸ್​ ಇನಿಂಗ್ಸ್​ನಲ್ಲಿ 10 ಫೋರ್​ ಹಾಗೂ 5 ಸಿಕ್ಸರ್​ಗಳು ಸೇರಿಕೊಂಡಿದ್ದವು. ಅವರ ಕೊನೇ ತನಕ ಉಳಿದ 128 ರನ್​ ಬಾರಿಸಿದರು. ಕೊನೇ ಹಂತದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಕೆ. ಎಲ್​ ರಾಹುಲ್​ 62 ಎಸೆತಗಳಿಗೆ ಶತಕ ಬಾರಿಸಿದರು. ಇದು ವಿಶ್ವ ಕಪ್​ನಲ್ಲಿ ಭಾರತ ತಂಡದ ಪರವಾಗಿ ಅತಿ ವೇಗದ ಶತಕವಾಗಿದೆ. ಅವರು 11 ಫೋರ್ ಹಾಗೂ 4 ಸಿಕ್ಸರ್ ನೆರವಿನಿಂದ ತಮ್ಮ ಶತಕ ಬಾರಿಸಿದರು. ಈ ಜೋಡಿ ನಾಲ್ಕನೇ ವಿಕೆಟ್​ಗೆ 208 ರನ್​ಗಳನ್ನು ಬಾರಿಸಿದರು.

ಇದನ್ನೂ ಓದಿ: Virat Kohli : ಗೊತ್ತಿಲ್ಲದೇ ಹೇಳಿಕೆ ಕೊಟ್ಟೆ; ಕೊಹ್ಲಿಯ ಕ್ಷಮೆ ಕೋರಿದ ಲಂಕಾ ನಾಯಕ

ಏಕದಿನ ವಿಶ್ವಕಪ್ ನಲ್ಲಿ ತಂಡಗಳ ಗರಿಷ್ಠ ಮೊತ್ತ

428/5 – ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ, ದೆಹಲಿ 2023
417/6 – ಆಸ್ಟ್ರೇಲಿಯಾ ವಿರುದ್ಧ ಅಫಘಾನಿಸ್ತಾನ ಪರ್ತ್ 2015
413/5 – ಭಾರತ ವಿರುದ್ಧ ಬರ್ಮುಡಾ , ಪೋರ್ಟ್ ಆಫ್ ಸ್ಪೇನ್ 2007
411/4 – ದಕ್ಷಿಣ ಆಫ್ರಿಕಾ ವಿರುದ್ಧ ಐರ್ಲೆಂಡ್​ , ಕ್ಯಾನ್ಬೆರಾ 2015
410/4 – ಭಾರತ ವಿರುದ್ಧ ನೆದರ್ಲ್ಯಾಂಡ್ಸ್​ , ಬೆಂಗಳೂರು, ನ. 12, 2023

ವಿಶ್ವಕಪ್ ನಲ್ಲಿ ಭಾರತದ ಆಟಗಾರರ ವೇಗದ ಶತಕ (ಎಸೆತಗಳ ಪ್ರಕಾ )

62 – ಕೆಎಲ್ ರಾಹುಲ್ ವಿರುದ್ಧ ನೆದರ್ಲ್ಯಾಂಡ್ಸ್​ , ನ. 12, 2023
63 – ರೋಹಿತ್ ಶರ್ಮಾ ವಿರುದ್ಧ ಆಫ್ಘನ್​ 2023
81 – ವೀರೇಂದ್ರ ಸೆಹ್ವಾಗ್ ವಿರುದ್ಧ ಬಿಇಆರ್, 2007
83 – ವಿರಾಟ್ ಕೊಹ್ಲಿ ವಿರುದ್ಧ ಬ್ಯಾನ್, 2011

Exit mobile version