ಕೋಲ್ಕೊತಾ: ಹಾಲಿ ವಿಶ್ವ ಕಪ್ನಲ್ಲಿ (ICC World Cup 2023 ) ಭಾರತ ತಂಡದ ಪಾರಮ್ಯ ಮುಂದವರಿದಿದೆ. ಐತಿಹಾಸಿಕ ಈಡನ್ಗಾರ್ಡನ್ಸ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭರ್ಜರಿ 243 ರನ್ಗಳ ಗೆಲುವು ದಾಖಲಿಸಿದೆ. ಇದು ವಿಶ್ವ ಕಪ್ ಟೂರ್ನಿಯಲ್ಲಿ ಸತತ ಎಂಟನೇ ಗೆಲುವಾಗಿದ್ದು, ಒಟ್ಟು 16 ಅಂಕಗಳನ್ನು ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಮುಂದುವರಿಸಿದೆ. ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್ನಲ್ಲಿ ತನ್ನ ಅಮೋಘ ಪ್ರದರ್ಶನ ಮುಂದುವರಿಸಿದರೆ, ಬೌಲಿಂಗ್ನಲ್ಲಿ ಉರಿ ಚೆಂಡಿನ ದಾಳಿಯನ್ನು ಮತ್ತೊಮ್ಮೆ ಸಂಘಟಿಸಿತು. ಅಜೇಯ ಶತಕ ಬಾರಿಸಿದ ವಿರಾಟ್ ಕೊಹ್ಲಿ (101 ರನ್), ಅರ್ಧ ಶತಕ ಬಾರಿಸಿದ ಶ್ರೇಯಸ್ ಅಯ್ಯರ್ (77 ರನ್) ಹಾಗೂ ಬೌಲಿಂಗ್ನಲ್ಲಿ ಮಿಂಚಿದ ರವೀಂದ್ರ ಜಡೇಜಾ (33 ರನ್ಗಳಿಗೆ 5 ವಿಕೆಟ್) ಭಾರತ ತಂಡದ ಗೆಲುವಿನ ರೂವಾರಿಗಳೆನಿಸಿಕೊಂಡರು.
The Indian juggernaut rolls on in Kolkata 🔥#CWC23 | #INDvSA 📝: https://t.co/5LhBnOZ6r3 pic.twitter.com/x1ktmGFGee
— ICC Cricket World Cup (@cricketworldcup) November 5, 2023
ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 326 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಹರಿಣಗಳ ಪಡೆ 27.1 ಓವರ್ಗಳಲ್ಲಿ 83 ರನ್ ಬಾರಿಸಿ ಸರ್ವಪತನ ಕಂಡಿತು. ಜಡೇಜಾ ಮಾತ್ರವಲ್ಲದೆ, ಮೊಹಮ್ಮದ್ ಸಿರಾಜ್ (18 ರನ್ಗೆ 2 ವಿಕೆಟ್), ಕುಲ್ದೀಪ್ ಯಾದವ್ (7 ರನ್ಗೆ 2 ವಿಕೆಟ್) ಪಡೆದು ಭಾರತಕ್ಕೆ ದೊಡ್ಡ ಅಂತರದ ಗೆಲುವು ತಂದುಕೊಟ್ಟರು. ಅಂದ ಹಾಗೆ ದಕ್ಷಿಣ ಆಫ್ರಿಕಾ ತಂಡ ವಿರಾಟ್ ಕೊಹ್ಲಿ ಒಬ್ಬರೇ ಬಾರಿಸಿದ ರನ್ ಕೂಡ ದಾಖಲು ವಿಫಲಗೊಂಡಿತು. ಜತೆಗೆ ಒಬ್ಬನೇ ಒಬ್ಬ ಆಟಗಾರ 20 ರನ್ ಗಡಿ ದಾಟಲಿಲ್ಲ.
ಭಾರತದ ಬೌಲರ್ಗಳ ಸವಾರಿ
ದೊಡ್ಡ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಭಾರತದ ಬೌಲಿಂಗ್ ದಾಳಿಗೆ ಬೆದರಿತು. ಭಾರತ ತಂಡದ ಬೌಲಿಂಗ್ ವಿಭಾಗವಂತೂ ಮತ್ತೊಂದು ಬಾರಿ ಸಂಪೂರ್ಣವಾಗಿ ಪಾರಮ್ಯ ಮೆರೆಯಿತು. ಎದುರಾಳಿ ತಂಡದ ಬ್ಯಾಟರ್ಗಳ ವಿರುದ್ಧ ಸವಾರಿ ಮಾಡಿತು. ನಾನಾ ತಂಡಗಳ ವಿರುದ್ಧ ಮಿಂಚಿದ್ದ ದಕ್ಷಿಣ ಆಫ್ರಿಕಾದ ಬ್ಯಾಟರ್ಗಳು ಭಾರತದ ಬೌಲರ್ಗಳಿಗೆ ಅಕ್ಷರಶಃ ತಲೆ ಬಾಗಿದರು.
ಹಾಲಿ ಆವೃತ್ತಿಯಲ್ಲಿ ಇಲ್ಲಿವರೆಗೆ ಆಡಿದ ಏಳು ಪಂದ್ಯಗಳಲ್ಲಿ 4 ಶತಕ ಬಾರಿಸಿದ್ದ ಕ್ವಿಂಟನ್ ಡಿ ಕಾಕ್ 5 ರನ್ ಗೆ ಔಟಾದರು. ಅವರು ಸಿರಾಜ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ 11 ರನ್ ಮಾಡಿದ ಮರಳಿದರು. ಅವರು 19 ಎಸೆತಗಳನ್ನು ಎದುರಿಸಿದ್ದರು. ರವೀಂದ್ರ ಜಡೇಜಾ ಅವರ ಮಾರಕ ಸ್ಪಿನ್ಗೆ ಅವರು ಕ್ಲೀನ್ ಬೌಲ್ಡ್ ಆದರು.
𝙁𝙄𝙁𝙀𝙍 in Kolkata for Ravindra Jadeja 😎
— BCCI (@BCCI) November 5, 2023
He's been terrific with the ball for #TeamIndia 👏👏#CWC23 | #MenInBlue | #INDvSA pic.twitter.com/HxvPKgmNYb
ವೇಗಿ ಮೊಹಮ್ಮದ್ ಶಮಿ ಅಪಾಯಕಾರಿ ಬ್ಯಾಟರ್ ಏಡೆನ್ ಮಾರ್ಕ್ರಮ್ ಅವರನ್ನು ಔಟ್ ಮಾಡಿದರು. ಅವರು 9 ರನ್ ಬಾರಿಸಿ ಪೆವಿಲಿಯನ್ಗೆ ಮರಳಿದರು. ಹೀಗಾಗಿ 1ರಿಂದ 10 ಓವರ್ಗಳ ಮೊದಲ ಪವರ್ ಪ್ಲೇನಲ್ಲಿ ದ. ಆಫ್ರಿಕಾ 35 ರನ್ ಬಾರಿಸಿತು. ಸ್ಪಿನ್ನರ್ ರವೀಂದ್ರ ಜಡೇಜಾ ಅವರ ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಅವರನ್ನು ವಾಪಸ್ ಕಳುಹಿಸಿದರು. ಜತೆಗೆ ಅವರು ರಬಾಡ ಮತ್ತು ಕೇಶವ್ ಮಹಾರಾಜ್ ಅವರನ್ನೂ ಔಟ್ ಮಾಡಿದರು. ಈ ಮೂಲಕ ಅವರು ಐದು ವಿಕೆಟ್ ಸಾಧನೆ ಮಾಡಿದರು. ಆರಂಭದಿಂದ ಕೊನೇ ತನಕ ಸತತವಾಗಿ ವಿಕೆಟ್ ಉರುಳಿತು.
ಭಾರತದ ಭರ್ಜರಿ ಬ್ಯಾಟಿಂಗ್
ಮೊದಲು ಬ್ಯಾಟ್ ಮಾಡಿದ ಭಾರತ ಉತ್ತಮ ಆರಂಭವನ್ನು ಪಡೆಯಿತು. 5.5 ಓವರ್ಗಳಲ್ಲಿ 62 ರನ್ ಬಾರಿಸಿತು. ರೋಹಿತ್ ಶರ್ಮಾ 24 ಎಸೆತಗಳಲ್ಲಿ 2 ಸಿಕ್ಸರ್ ಹಾಗಊ 6 ಫೋರ್ಗಳ ಸಮೇತ 40 ರನ್ ಬಾರಿಸಿದರು. ಆದರೆ ರಬಾಡ ಎಸೆತಕ್ಕೆ ಬವುಮಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅದಾದ ಬಳಿಕ ಶುಭಮನ್ ಗಿಲ್ ಎದುರಾಳಿ ತಂಡದ ಸ್ಪಿನ್ನರ್ ಕೇಶವ್ ಮಹಾರಾಜ್ ಚಾಣಾಕ್ಷ ಎಸೆತಕ್ಕೆ ಬೌಲ್ಡ್ ಆದರು. ಈ ವೇಳೆ ಭಾರತ ತಂಡ 10. 3 ಓವರ್ಗಳಲ್ಲಿ 93 ರನ್ಗೆ 3 ವಿಕೆಟ್ ಕಳೆದುಕೊಂಡಿತು.
ಕೊಹ್ಲಿ- ಶ್ರೆಯಸ್ ಶತಕದ ಜತೆಯಾಟ
ಎರಡನೇ ವಿಕೆಟ್ ಪತನಗೊಂಡ ತಕ್ಷಣ ಜೋಪನವಾಗಿ ಆಡಲು ಅಡಲು ಆರಂಭಿಸಿದ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ನಿಧಾನಕ್ಕೆ ಇನಿಂಗ್ಸ್ ಕಟ್ಟಿದರು. ಮೊದಲಿಗೆ ವಿಕೆಟ್ ಉರುಳುದಂತೆ ನೋಡಿಕೊಂಡ ಅವರು ನಂತರ ಅವರಿಬ್ಬರು ನಿಧಾನವಾಗಿ ರನ್ ಕದಿಯಲು ಆರಂಭಿಸಿದರು. ಈ ಜೋಡಿ ಮೂರನೇ ವಿಕೆಟ್ಗೆ 134 ರನ್ ಬಾರಿಸಿತು. ಆದರೆ, ವೇಗದಲ್ಲಿ ರನ್ ಗಳಿಸಲು ಮುಂದಾದ ಅಯ್ಯರ್ 77 ರನ್ ಬಾರಿಸಿ ಎನ್ಗಿಡಿ ಎಸೆತಕ್ಕೆ ಕ್ಯಾಚ್ ನೀಡಿ ಔಟಾದರು.
ಇದನ್ನೂ ಓದಿ: Virat Kohli : ವಿರಾಟ್ ಕೊಹ್ಲಿಗೆ ವಿಶೇಷ ರೀತಿಯಲ್ಲಿ ಶುಭಾಶಯ ಹೇಳಿದ ಸಚಿನ್ ತೆಂಡೂಲ್ಕರ್
ಶ್ರೇಯಸ್ ವಿಕೆಟ್ ಪತನದ ಹೊರತಾಗಿಯೂ ಕೊಹ್ಲಿ ರನ್ ಪ್ರತಿರೋಧ ಒಡುತ್ತಲೇ ಆಡಿದರು. ಆದರೆ, ಐದನೆಯವರಾಗಿ ಆಡಲು ಬಂದ ಕೆ. ಎಲ್ ರಾಹುಲ್ 8 ರನ್ಗೆ ಆಟ ಮುಗಿಸಿದರು. ಬಳಿಕ ಬಂದ ಸೂರ್ಯಕುಮಾರ್ ಯಾದವ್ 14 ಎಸೆತಕ್ಕೆ 22 ರನ್ ಬಾರಿಸಿ ಅಬ್ಬರಿಸುವ ಸೂಚನೆ ನೀಡಿದರೂ ಕ್ವಿಂಟನ್ ಡಿ ಕಾಕ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು. ಕೊನೆಯಲ್ಲಿ ಬಂದ ಜಡೇಜಾ ತಂಡದ ಮೊತ್ತ 300 ರ ಗಡಿ ದಾಟುವಂತೆ ನೋಡಿಕೊಳ್ಳುವ ಜತೆಗೆ ಎದುರಾಳಿ ತಂಡಕ್ಕೆ ದೊಡ್ಡ ಮೊತ್ತದ ಗುರಿ ಒಡ್ಡಲು ನೆರವಾದರು.
ಜನ್ಮ ದಿನದಂದು ಅವಿಸ್ಮರಣೀಯ ದಾಖಲೆ ಬರೆದ ಕೊಹ್ಲಿ
ವಿಶ್ವ ಕ್ರಿಕೆಟ್ನ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat kohli) ಅವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಏಕದಿನ ದಿನ ಕ್ರಿಕೆಟ್ನಲ್ಲಿ ಬಾರಿಸಿರುವ 49 ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಈಡನ್ ಗಾರ್ಡನ್ಸ್ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧ ದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ತಮ್ಮ 35ನೇ ವರ್ಷದ ಜನುದಿನದಿಂದೇ ಅವರು ಈ ಸಾಧನೆ ಮಾಡಿರುವುದು ವಿಶೇಷ ಹಾಗೂ ಅವರ ಪಾಲಿಗೆ ಸ್ಮರಣೀಯ.
ಐತಿಹಾಸಿಕ ಕೋಲ್ಕೊತಾದ ಈಡನ್ ಗಾರ್ಡನ್ಸ್ನ ಸ್ಟೇಡಿಯಮ್ನಲ್ಲಿ ಅವರು ಸಾಧನೆ ಮಾಡಿರುವುದು ಭಾರತ ಕ್ರಿಕೆಟ್ ಕ್ಷೇತ್ರದ ಪಾಲಿಗೆ ಇನ್ನೂ ವಿಶೇಷ. ವಿರಾಟ್ ಕೊಹ್ಲಿ ಈಗ 79 ಅಂತಾರಾಷ್ಟ್ರಿಯ ಶತಕದ ಸರದಾರ. ಅವರು ಖಾತೆಯಲ್ಲೀಗ 79 ಶತಕಗಳಿವೆ. ಅದರಲ್ಲಿ 29 ಶತಕ ಟೆಸ್ಟ್ ಕ್ರಿಕೆಟ್ನಲ್ಲಾದರೆ ಒಂದು ಶತಕ ಟಿ20 ಕ್ರಿಕೆಟ್ನಲ್ಲಾಗಿದೆ. ಗರಿಷ್ಠ ಶತಕಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ 100 ಶತಕಗಳನ್ನು ಬಾರಿಸಿ ಅಗ್ರ ಸ್ಥಾನದಲ್ಲಿದ್ದಾರೆ. ಕೊಹ್ಲಿ ಅವರಿಗಿಂತ 21 ಶತಕಗಳಿಂದ ಹಿಂದಿದ್ದಾರೆ.