ಹಾಂಕಾಂಗ್: ಜಾಗತಿಕ ಕ್ರಿಕೆಟ್‌ನಲ್ಲಿ ಭಾರತದ ಮಹಿಳೆಯರು ಕೂಡ ಪುರುಷರಿಗಿಂತ ಕಡಿಮೆ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ವುಮೆನ್ಸ್ ಎಮರ್ಜಿಂಗ್ ಏಷ್ಯಾ ಕಪ್ ಟಿ-20 ಫೈನಲ್ (Women’s Emerging Asia Cup 2023) ಪಂದ್ಯದಲ್ಲಿ ಭಾರತದ 23 ವರ್ಷದ ಮಹಿಳೆಯರ ಎ ತಂಡವು ಬಾಂಗ್ಲಾದೇಶವನ್ನು 31 ರನ್‌ಗಳ ಅಂತರದಲ್ಲಿ ಬಗ್ಗುಬಡಿಯುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಹಾಂಕಾಂಗ್‌ನ ಮಾಂಕಾಕ್‌ನಲ್ಲಿರುವ ಮಿಷನ್ ರೋಡ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 127 ರನ್ ಗಳಿಸಲಷ್ಟೇ ಶಕ್ತವಾಯಿತು. ದಿನೇಶ್ ವೃಂದಾ (36) ಹಾಗೂ ಕನ್ನಿಕಾ ಅಹುಜಾ (30) ಅವರನ್ನು ಹೊರತುಪಡಿಸಿದರೆ ಯಾವೊಬ್ಬ ಆಟಗಾರ್ತಿಯೂ ಅಬ್ಬರದ ಆಟವಾಡದ ಕಾರಣ ಭಾರತ ತಂಡವು 127 ರನ್ ಗಳಿಸಿತು. ಆದರೆ, ಭಾರತದ ವನಿತೆಯರ ಬೌಲಿಂಗ್ ದಾಳಿಗೆ ಸಿಲುಕಿದ ಬಾಂಗ್ಲಾದೇಶ ತಂಡವು 19.2 ಓವರ್‌ಗಳಲ್ಲಿ 96 ರನ್ ಗಳಿಸಿ ಸರ್ವಪತನ ಕಂಡಿತು.
ಗೆದ್ದು ಬೀಗಿದ ವನಿತೆಯರು
𝙏𝙝𝙖𝙩 𝙒𝙞𝙣𝙣𝙞𝙣𝙜 𝙁𝙚𝙚𝙡𝙞𝙣𝙜! 👏 👏
— BCCI Women (@BCCIWomen) June 21, 2023
Dominant performance from India 'A' as they beat Bangladesh 'A' to clinch the #WomensEmergingTeamsAsiaCup title 🏆
📸 Asian Cricket Council
Scorecard ▶️ https://t.co/KYgPENCXvr#ACC pic.twitter.com/oMvtvylw9k
ಶ್ರೇಯಾಂಕಾ, ಮನ್ನತ್ ಮಾರಕ ಬೌಲಿಂಗ್ ದಾಳಿ
ಭಾರತದ ಮಹಿಳೆಯರ ತಂಡವು ಅಬ್ಬರದ ಬ್ಯಾಟಿಂಗ್ ಮಾಡಿ ಬೃಹತ್ ಮೊತ್ತ ಪೇರಿಸದಿದ್ದರೂ ಮಾರಕ ಬೌಲಿಂಗ್ ಮಾಡಿತು. ಅದರಲ್ಲೂ, ಶ್ರೇಯಾಂಕಾ ಪಾಟೀಲ್ (13ಕ್ಕೆ 4) ಹಾಗೂ ಮನ್ನತ್ ಕಶ್ಯಪ್ (20ಕ್ಕೆ 3) ದಾಳಿಗೆ ನಲುಗಿದ ಬಾಂಗ್ಲಾದೇಶ ತಂಡವು 100 ರನ್ ಗಡಿ ಕೂಡ ದಾಟಲು ಆಗಲಿಲ್ಲ.
ಇದನ್ನೂ ಓದಿ: Ashes 2023 : ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ 2 ವಿಕೆಟ್ ವಿರೋಚಿತ ವಿಜಯ
ಬಾಂಗ್ಲಾದೇಶದ ಪರ ನಹಿದಾ ಅಕ್ತರ್ (17), ಶೋಭಾನಾ ಮೋಸ್ತರಿ (16) ಹಾಗೂ ಶಾಥಿ ರಾಣಿ (13) ಹೊರತುಪಡಿಸಿ ಯಾವೊಬ್ಬ ಆಟಗಾರ್ತಿಯೂ ಎರಡಂಕಿ ದಾಟದ ಕಾರಣ ಬಾಂಗ್ಲಾದೇಶ ತಂಡವು ಸೋಲೊಪ್ಪಿಕೊಳ್ಳಬೇಕಾಯಿತು. ಕನ್ನಿಕಾ ಅಹುಜಾ ಪ್ಲೇಯರ್ ಆಫ್ ದಿ ಮ್ಯಾಚ್ ಎನಿಸಿದರೆ, ಶ್ರೇಯಾಂಕಾ ಪಾಟೀಲ್ ಪ್ಲೇಯರ್ ಆಫ್ ದಿ ಸಿರೀಸ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಗೆಲುವು ಸಾಧಿಸಿ ಮಹಿಳೆಯರ ಎ ತಂಡಕ್ಕೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೇರಿ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.