Site icon Vistara News

ICC World Cup 2023 : 9 ಪಂದ್ಯಗಳನ್ನೂ ಗೆದ್ದು ಹೊಸ ದಾಖಲೆ ಬರೆದ ಭಾರತ ತಂಡ

Team indian in world cup

ಬೆಂಗಳೂರು: ನೆದರ್ಲ್ಯಾಂಡ್ಸ್ ವಿರುದ್ಧ 160 ರನ್​ಗಳ ಜಯದೊಂದಿಗೆ, ರೋಹಿತ್ ಶರ್ಮಾ ನೇತೃತ್ವದ ಭಾರತವು ಸೆಮಿ ಫೈನಲ್ಸ್ ತಲುಪಿದೆ. ಈ ಮೂಲಕ ವಿಶ್ವ ಕಪ್ ಆವೃತ್ತಿಯೊಂದರ ರೌಂಡ್-ರಾಬಿನ್ ಸ್ವರೂಪದಲ್ಲಿ ಅಜೇಯವಾಗಿ ಸೆಮಿ ಫೈನಲ್ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.. 2023 ರ ವಿಶ್ವಕಪ್​ನಲ್ಲಿ (ICC World Cup 2023) ಪಾಲಿಗೂ ತಂಡವೊಂದು ದಾಖಲಿಸಿದ ವಿಜಯ ದಾಖಲೆಯಾಯಿತು. ಶ್ರೀಲಂಕಾ (1996) ಮತ್ತು ಆಸ್ಟ್ರೇಲಿಯಾ (2003) ತಂಡಗಳು ಸತತ ಎಂಟು ಏಕದಿನ ವಿಶ್ವಕಪ್ ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿತ್ತು. ಇದೀಗ ತನ್ನೇದೇ ಆತಿಥ್ಯದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಹೊಸ ದಾಖಲೆ ಬರೆಯಿತು. ಹಿಂದೆ ಧೋನಿ ನಾಯಕತ್ವದಲ್ಲಿ ಭಾರತ ತಂಡ 8 ಗೆಲುವು ಕಂಡಿತ್ತು.

ಪ್ರಸ್ತುತ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಅವರ ಅಸಾಧಾರಣ ಪ್ರದರ್ಶನವು ಭಾರತ ಕ್ರಿಕೆಟ್​ ತಂಡ ನಿರ್ಭೀತ ಮತ್ತು ಅಜೇಯ ಪ್ರದರ್ಶನವನ್ನು ಬಿಂಬಿಸಿದೆ. ಈ ಪ್ರಾಬಲ್ಯವು ವರ್ಷದ ಆರಂಭದಲ್ಲಿ ಏಷ್ಯಾ ಕಪ್​ನೊಂದಿಗೆ ಆರಂಭಗೊಂಡಿತ್ತು ಹಾಗೂ ಐದು ವರ್ಷಗಳ ಟ್ರೋಫಿ ಬರವನ್ನು ಕೊನೆಗೊಳಿತ್ತು. ಈ ಗೆಲುವುಗಳ ಮೂಲ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಅಸಾಧಾರಣ ಶಕ್ತಿಯಾಗಿ ಬೆಳೆಸಿತು.

ನೆದರ್ಲ್ಯಾಂಡ್ಸ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಭಾರತದ ಬ್ಯಾಟರ್​ಗಳು ಈ ಗೆಲುವಿಗೆ ಕೊಡುಗೆ ಕೊಟ್ಟರು. ಕ್ರೀಸ್​​ಗೆ ಬಂದ ಎಲ್ಲಾ ಐದು ಬ್ಯಾಟರ್​ಗಳು ಕನಿಷ್ಠ ಅರ್ಧ ಶತಕವನ್ನು ಗಳಿಸಿದರು. ಬೌಲರ್​ಗಳಿಗೆ ಡಿಫೆಂಡ್ ಮಾಡಲು ಸಾಕಷ್ಟು ರನ್​ಗಳನ್ನು ಹೊಂದಿಸಿದ್ದರು. ಮೊಹಮ್ಮದ್ ಸಿರಾಜ್ ಆರಂಭಿಕ ವಿಕೆಟ್ ಪಡೆದರೂ ವೇಗಿಗಳು ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ದೊಡ್ಡ ಗುರಿ ಇದ್ದ ಕಾರಣವೇ ಗೆಲುವು ಸಾಧ್ಯವಾಯಿತು.

ಪಂದ್ಯದಲ್ಲಿ ಏನಾಯಿತು?

ವಿಶ್ವ ಕಪ್​ನ ಲೀಗ್ ಹಂತದ ತನ್ನ ಕೊನೇ ಪಂದ್ಯದಲ್ಲಿ ಭಾರತ ತಂಡ ನೆದರ್ಲ್ಯಾಂಡ್ಸ್ (ind vs ned) ವಿರುದ್ಧ 160 ರನ್​ಗಳಿಂದ ಜಯಗಳಿಸಿತು ಈ ಮೂಲಕ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಹಾಲಿ ವಿಶ್ವ ಕಪ್​ನ (ICC World Cup 2023) ಲೀಗ್​ ಹಂತದ 9 ಪಂದ್ಯಗಳಲ್ಲಿ ಎಲ್ಲವನ್ನೂ ಗೆದ್ದು 18 ಅಂಕಗಳೊಂದಿಗೆ ಸೆಮಿ ಫೈನಲ್​ಗೆ ಪ್ರವೇಶ ಪಡೆಯಿತು. ಉತ್ಸಾಹದಲ್ಲಿರುವ ಭಾರತ ಬಳಗ ಬುಧವಾರ (ನವೆಂಬರ್​ 15) ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಂಕಪಟ್ಟಿಯ ನಾಲ್ಕನೇ ಸ್ಥಾನಿ ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದೆ.

ಈ ಸುದ್ದಿಯನ್ನೂ ಓದಿ : Virat kohli : ಅಭಿಮಾನಿಗಳ ಬೇಡಿಕೆಯಂತೆ ಬೌಲಿಂಗ್ ಮಾಡಿ ವಿಕೆಟ್​ ಪಡೆದ ವಿರಾಟ್!

ಶ್ರೇಯಸ್​ ಅಯ್ಯರ್ (ಅಜೇಯ 128) ಮತ್ತು ಕೆ. ಎಲ್​ ರಾಹುಲ್ (102) ಅವರ ಶತಕಗಳು ಹಾಗೂ ಶುಭ್​ಮನ್​ ಗಿಲ್ (61)​, ರೋಹಿತ್​ ಶರ್ಮಾ (61) ವಿರಾಟ್​ ಕೊಹ್ಲಿ (51) ಹಾಗೂ ಅವರ ಅರ್ಧ ಶತಕಗಳು ಭಾರತ ತಂಡದ ಗೆಲುವಿಗೆ ನೆರವಾಯಿತು. ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಭಾರತ ತಂಡದ ಪರ 9 ಆಟಗಾರರು ಬೌಲಿಂಗ್ ಮಾಡಿದರು. ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್​, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರೆ, ಕೊಹ್ಲಿ ಮತ್ತು ರೋಹಿತ್​ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ತನ್ನ ನಿರ್ಧಾರಕ್ಕೆ ಪೂರಕವಾಗಿ ಆಡಿತು. ಆರಂಭದಿಂದಲೂ ಕೊನೇ ತನಕ ರನ್​ಗಳನ್ನು ಗಳಿಸುತ್ತಾ ನಿಗದಿತ 50 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 40 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಸ್ಕಾಟ್ ಎಡ್ವರ್ಡ್ ನೇತೃತ್ವದ ಡಚ್ಚರ ಪಡೆ 47. 5 ಓವರ್​ಗಳಲ್ಲಿ 250 ರನ್​ಗಳಿಗೆ ಆಲ್​ಔಟ್ ಆಗಿ ಸೋಲೊಪ್ಪಿಕೊಂಡಿತು

Exit mobile version