Site icon Vistara News

CWG- 2022 | ಎಂಟರ ಘಟ್ಟಕ್ಕೆ ಎಂಟ್ರಿ ಪಡೆದ ನಿಖತ್‌ ಜರೀನ್‌

CWG- 2022

ಬರ್ಮಿಂಗ್‌ಹಮ್‌: ವಿಶ್ವ ಚಾಂಪಿಯನ್‌ ಮಹಿಳಾ ಬಾಕ್ಸರ್‌ ನಿಖತ್‌ ಜರೀನ್‌ ಬರ್ಮಿಂಗ್ಹಮ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ (CWG- 2022) ಕ್ವಾರ್ಟರ್‌ ಫೈನಲ್ಸ್‌ ಹಂತಕ್ಕೇರಿದ್ದಾರೆ. ೫೦ ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಅವರು ಮೊಜಾಂಬಿಕ್ ದೇಶದ ಹೆಲೆನಾ ಬೆಗಾವೊ ವಿರುದ್ಧ ಸರ್ವಾನುಮತ ವಿಜಯ ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ.

೧೬ನೇ ಸುತ್ತಿನಲ್ಲಿ ಸ್ಪರ್ಧೆಗೆ ಇಳಿದಿದ್ದ ಮೊದಲ ಎರಡು ಸುತ್ತಿನಲ್ಲಿ ಎದುರಾಳಿಗೆ ಸತತವಾಗಿ ಪಂಚ್‌ ಕೊಡುತ್ತಾ ಸಂಪೂರ್ಣವಾಗಿ ಸವಾರಿ ಮಾಡಿದರು. ಹೀಗಾಗಿ ಮೂರನೇ ಸುತ್ತ ಫೈಟ್‌ ನಡೆಸದೇ ತೀರ್ಪುಗಾರರು ನಿಖತ್‌ ಪರ ಸರ್ವಾನುಮತದ ಫಲಿತಾಂಶ ಕೊಟ್ಟರು. ಅವರು ಮುಂದಿನ ಸುತ್ತಿನಲ್ಲಿ ವೇಲ್ಸ್‌ ದೇಶದ ಹೆಲೆನ್‌ ಜೋನ್ಸ್‌ ವಿರುದ್ಧ ಆಡಬೇಕಾಗಿದೆ.

Exit mobile version